Site icon Vistara News

Pralhad Joshi: ಹಿಂದೂಗಳು ಅಲ್ಪಸಂಖ್ಯಾತರಾದ ದಿನ ಭಾರತ ಜಾತ್ಯತೀತವಾಗಿ ಉಳಿಯದು; ಪ್ರಲ್ಹಾದ್‌ ಜೋಶಿ ಆತಂಕ

Surya Ghar Long Term Free Power scheme 1 3 crore registration says Minister Pralhad Joshi

ನವದೆಹಲಿ: ಹಿಂದೂಗಳು ಬಹುಸಂಖ್ಯಾತರಾಗಿ ಇರುವುದರಿಂದಲೇ ಭಾರತ ಜಾತ್ಯತೀತ ರಾಷ್ಟ್ರವಾಗಿದೆ ಎಂಬ ಕಟು ಸತ್ಯವನ್ನು ಸಿಎಂ ಸಿದ್ದರಾಮಯ್ಯ ಮೊದಲು ಅರ್ಥ ಮಾಡಿಕೊಳ್ಳಲಿ ಎಂದು ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ (Pralhad Joshi) ತಿಳಿಸಿದ್ದಾರೆ.

“ಭಾರತ ಹಿಂದೂ ರಾಷ್ಟ್ರವಲ್ಲ” ಎಂಬ ಅಮರ್ತ್ಯ ಸೇನ್ ಹೇಳಿಕೆ ಸಮರ್ಥಿಸಿದ ಸಿಎಂ ಸಿದ್ದರಾಮಯ್ಯ ಅವರ ನಡೆಗೆ ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ಆಕ್ಷೇಪಿಸಿದ್ದು, ನವದೆಹಲಿಯಲ್ಲಿ ಶುಕ್ರವಾರ ಈ ಕುರಿತು ಪ್ರತಿಕ್ರಿಯಿಸಿದರು.

ಇದನ್ನೂ ಓದಿ: R Ashok: ವಾಲ್ಮೀಕಿ ನಿಗಮ ಹಗರಣದಲ್ಲಿ ಸಿದ್ದರಾಮಯ್ಯ ರಾಜೀನಾಮೆ ನೀಡುವವರೆಗೂ ಹೋರಾಟ; ಆರ್‌. ಅಶೋಕ್‌

ಹಿಂದೂಗಳು ಅಲ್ಪಸಂಖ್ಯಾತರಾದ ದಿನ ಭಾರತ ಜಾತ್ಯಾತೀತ ರಾಷ್ಟ್ರವಾಗಿ ಉಳಿಯಲು ಸಾಧ್ಯವಿಲ್ಲ ಎಂದು ಸಚಿವ ಪ್ರಲ್ಹಾದ್‌ ಜೋಶಿ ಎಚ್ಚರಿಸಿದ್ದಾರೆ.

ಇದನ್ನೂ ಓದಿ: Team India : ಟೆಸ್ಟ್​​ ಕ್ರಿಕೆಟ್​ನ ಒಂದೇ ದಿನದಲ್ಲಿ ಗರಿಷ್ಠ ರನ್​; ದಾಖಲೆ ಬರೆದ ಭಾರತ ತಂಡ

ಭಾರತ ಹಿಂದೂ ರಾಷ್ಟ್ರವಲ್ಲ ಎಂಬ ನೋಬೆಲ್ ಪ್ರಶಸ್ತಿ ಪುರಸ್ಕೃತ ಅಮರ್ತ್ಯ ಸೇನ್ ಹೇಳಿಕೆ ಸರಿಯಿದೆ. ತಾವೂ ಅದನ್ನು ಮೊದಲಿನಿಂದಲೂ ಪ್ರತಿಪಾದಿಸುತ್ತಾ ಬಂದಿದ್ದೇವೆ ಎಂಬ ಸಿಎಂ ಸಿದ್ದರಾಮಯ್ಯ ಅವರ ಹೇಳಿಕೆಯನ್ನು ಸಚಿವ ಪ್ರಲ್ಹಾದ್‌ ಜೋಶಿ ತೀವ್ರವಾಗಿ ಖಂಡಿಸಿದ್ದಾರೆ.

Exit mobile version