ಬಳ್ಳಾರಿ: ಮೂಲಭೂತ ಸೌಕರ್ಯ (Infrastructure), ಲಂಚ ಮುಕ್ತ ಜನಪರ ಆಡಳಿತ, ಸುಂದರ ಸ್ವಚ್ಛ ನಗರ (Clean city) ಇವು ನನ್ನ ಆದ್ಯತೆ ಹಾಗೂ ಕನಸುಗಳು ಎಂದು ಬಳ್ಳಾರಿ ನಗರ ಕಾಂಗ್ರೆಸ್ ಅಭ್ಯರ್ಥಿ ನಾರಾ ಭರತ್ ರೆಡ್ಡಿ ಹೇಳಿದರು.
ನಗರದ 34, 37ನೇ ವಾರ್ಡ್‌ಗಳಲ್ಲಿ ಹಾಗೂ ದೇವಿನಗರದ ಪ್ರದೇಶದಲ್ಲಿ ಮನೆ ಮನೆಗೆ ತೆರಳಿ ಮತಯಾಚನೆ ನಡೆಸಿ ಬಳಿಕ ಅವರು ಮಾತನಾಡಿ, ಬಳ್ಳಾರಿ ನಗರದಲ್ಲಿ ಇಷ್ಟು ವರ್ಷಗಳಾದರೂ ಕೂಡ ಸಮರ್ಪಕ ಮೂಲಭೂತ ಸೌಕರ್ಯಗಳು ಇಲ್ಲ. ನಗರವನ್ನು ಸ್ವಚ್ಛ, ಸುಂದರ ನಗರವಾಗಿ ರೂಪಿಸುವುದು ನನ್ನ ಗುರಿ. ಸರ್ಕಾರಿ ಕಚೇರಿಗಳಲ್ಲಿ ಭ್ರಷ್ಟಾಚಾರ ಮಿತಿ ಮೀರಿದೆ. ನಾನು ಶಾಸಕನಾಗಿ ಆಯ್ಕೆಯಾದ ನಂತರ ಭ್ರಷ್ಟಾಚಾರ ಮುಕ್ತ ಆಡಳಿತ ನೀಡುವೆ ಎಂದು ತಿಳಿಸಿದರು.
ಬಳ್ಳಾರಿ ನಗರ ಶಾಂತಿ ಸೌಹಾರ್ದತೆಗೆ ಹೆಸರುವಾಸಿಯಾದ ನಗರ ಹೀಗಾಗಿ ಉತ್ತಮ ಕಾನೂನು ಸುವ್ಯವಸ್ಥೆಗಾಗಿ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡಬೇಕೆಂದು ಮತದಾರರರಲ್ಲಿ ಮನವಿ ಮಾಡಿದರು.
ಇದನ್ನೂ ಓದಿ: Wedding Footwear Fashion: ವೆಡ್ಡಿಂಗ್ ಸೀಸನ್ ಟ್ರೆಂಡ್; ಜಗಮಗಿಸುವ ಶಿಮ್ಮರ್ ಫುಟ್‌ವೇರ್ಸ್
ಈ ಸಂದರ್ಭದಲ್ಲಿ ಪಾಲಿಕೆ ಸದಸ್ಯರಾದ ಕುಬೇರಾ, ಕಾಂಗ್ರೆಸ್ ಮುಖಂಡರಾದ ಮೊಹಮ್ಮದ್, ಪರಶುರಾಮ ಸೇರಿದಂತೆ ಸ್ಥಳೀಯ ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರು ಹಾಜರಿದ್ದರು.