ಬೆಳಗಾವಿ: ಇಲ್ಲಿನ ಖಾನಾಪುರ ತಾಲೂಕಿನ ನಾವಗಾ ಗ್ರಾಮದಲ್ಲಿ ಅಮಾನವೀಯ ಘಟನೆಯೊಂದು ಬೆಳಕಿಗೆ ಬಂದಿದೆ. ಕಾಡಿನಲ್ಲಿ 90 ವರ್ಷದ ವೃದ್ಧೆಯನ್ನು ಸಂಬಂಧಿಕರು ಬಿಟ್ಟು ಹೋಗಿದ್ದು, ನಾಗರಿಕ ಸಮಾಜವೇ ತಲೆತಗ್ಗಿಸುವಂತಾಗಿದೆ.
ಮೈಕೊರೆಯುವ ಚಳಿಯಲ್ಲಿ ಅನ್ನ ನೀರಿಲ್ಲದೇ ವೃದ್ಧೆ ನಾಲ್ಕೈದು ದಿನ ಕಾಡಿನಲ್ಲೇ ಕಳೆದಿದ್ದಾರೆ. ಕಾಡಿನಲ್ಲಿ ನರಳಾಡುತ್ತಿದ್ದ ವೃದ್ಧೆಯನ್ನು ರುಮೇವಾಡಿಯ ರೈತ ರಾಜು ಘಾಡಿ ಎಂಬುವವರು ರಕ್ಷಿಸಿದ್ದಾರೆ. ಬಳಿಕ ನೀರು ಕುಡಿಸಿ ಉಪಚರಿಸುವ ಮೂಲಕ ಮಾನವೀಯತೆ ಮೆರೆದಿರುವ ರಾಜು, ತಮ್ಮ ಟ್ರ್ಯಾಕ್ಟರ್‌ನಲ್ಲೇ ಅಜ್ಜಿಯನ್ನು ಹತ್ತಿರದ ಡಾಬಾಗೆ ಕರೆದೊಯ್ದಿದ್ದಾರೆ.
ಆಸ್ಪತ್ರೆಗೆ ರವಾನೆ
ಊಟೋಪಚಾರದ ಬಳಿಕ ಡಾಬಾ ಮಾಲೀಕ ಅನಂತ ಜುಂಜವಾಡಕರ ಎಂಬುವವರು ವೃದ್ಧೆಯನ್ನು ಆ್ಯಂಬುಲೆನ್ಸ್ ಮೂಲಕ ತಾಲೂಕಾಸ್ಪತ್ರೆಗೆ ರವಾನಿಸಿದ್ದಾರೆ. ಕ್ರಿಮಿಕೀಟಗಳಿಂದ ವೃದ್ಧೆಗೆ ಗಾಯಗಳಾಗಿದ್ದು, ಅದೃಷ್ಟವಶಾತ್ ವನ್ಯಪ್ರಾಣಿಗಳ ದಾಳಿಯಿಂದ ಬಚಾವ್ ಆಗಿದ್ದಾರೆ.
ಇದನ್ನೂ ಓದಿ: KR Market Flyover : ಕೆ.ಆರ್. ಮಾರ್ಕೆಟ್‌ನಲ್ಲಿ ಹಣ ಎಸೆದ ಅರುಣ್ ಪೊಲೀಸ್ ವಶಕ್ಕೆ, ಅಜ್ಞಾತ ಸ್ಥಳದಲ್ಲಿ ವಿಚಾರಣೆ
ವೃದ್ಧೆಯನ್ನು ಬಿಟ್ಟು ಹೋದ ಸ್ಥಳದಲ್ಲಿ 3 ಸಾವಿರ ನಗದು ಪತ್ತೆ ಆಗಿದೆ. ವೃದ್ಧೆಯ ವಿಳಾಸವಾಗಲೀ ಲಭ್ಯವಾಗಿಲ್ಲ, ಮುಧೋಳ ಮೂಲದವರು ಎಂದಷ್ಟೇ ವೈದ್ಯರ ಮುಂದೆ ವೃದ್ಧೆ ಹೇಳಿಕೊಂಡಿದ್ದಾರೆ.