Site icon Vistara News

Instagram love story | ಇನ್‌ಸ್ಟಾಗ್ರಾಮ್‌ನಲ್ಲಿ ಪ್ಯಾರ್‌ಗೆ ಆಗ್ಬುಟ್ಟೈತೆ; ಕುಷ್ಟಗಿಯಿಂದ ಕಾಣೆಯಾದವಳು ಹೈದರಾಬಾದ್‌ನಲ್ಲಿ ಪ್ರತ್ಯಕ್ಷ

Instagram love story

ಕೊಪ್ಪಳ: ಸೋಷಿಯಲ್‌ ಮೀಡಿಯಾದಲ್ಲಿ ಪ್ರೀತಿ, ಪ್ರೇಮ, ಪ್ರಣಯ ಹೊಸತಲ್ಲ. ಹೀಗೆ ಇನ್‌ಸ್ಟಾಗ್ರಾಮ್‌ನಲ್ಲಿ (Instagram love story) ಶುರುವಾದ ಪ್ರೇಮವು ಈಗ ಪೊಲೀಸ್‌ ಠಾಣೆಯ ಮೆಟ್ಟಿಲೇರಿದೆ. ಇಲ್ಲಿನ ಕುಷ್ಟಗಿ ಪಟ್ಟಣದ ಯುವತಿಯೊಬ್ಬಳು ಕಾಣೆಯಾಗಿದ್ದಾಳೆ ಎಂದು ಪೋಷಕರು ದೂರು ನೀಡಿದ್ದರು.

ದೂರು ದಾಖಲಿಸಿಕೊಂಡ ಪೊಲೀಸರು ಯುವತಿಯ ಹುಡುಕಾಟ ನಡೆಸಲು ಮುಂದಾಗಿದ್ದು, ಈ ವೇಳೆ ಹೈದರಾಬಾದ್‌ನಲ್ಲಿ ಇರುವುದು ತಿಳಿದುಬಂದಿದೆ. ವಿಚಾರಣೆ ನಡೆಸಿದಾಗ ಇನ್‌ಸ್ಟಾಗ್ರಾಮ್‌ ಲವ್‌ ಸ್ಟೋರಿಯೊಂದು ತೆರೆದುಕೊಂಡಿದೆ.

ಇನ್‌ಸ್ಟಾಗ್ರಾಮ್‌ ಮೂಲಕ ಪರಿಚಯವಾದ ಹೈದರಾಬಾದ್‌ ಮೂಲದ ಯುವಕನ ಮೇಲೆ ಕೊಪ್ಪಳ ಜಿಲ್ಲೆಯ ಕುಷ್ಟಗಿ ಪಟ್ಟಣದ ಯುವತಿಗೆ ಪ್ರೀತಿ ಆಗಿದ್ದು, ಆ ಯುವಕನೊಂದಿಗೆ ವಿವಾಹವೂ ಆಗಿದೆ. ಯುವತಿಯ ಪೋಷಕರು ಯುವತಿ ಕಾಣೆಯಾದ ಕುರಿತು ನೀಡಿದ ದೂರಿನ ಹಿನ್ನೆಲೆಯಲ್ಲಿ ಕುಷ್ಟಗಿ ಪೊಲೀಸರು ಜೋಡಿಯನ್ನು ಪತ್ತೆ ಮಾಡಿ ಕುಷ್ಟಗಿಗೆ ಕರೆತಂದು ವಿಚಾರಣೆ ನಡೆಸಿದ್ದಾರೆ.

ಕುಷ್ಟಗಿ ಪಟ್ಟಣದ ಇಂದಿರಾ ನಗರದ ನಿವಾಸಿಯಾಗಿರುವ ಬಿಎಸ್ಸಿ ಓದುತ್ತಿದ್ದ ಯುವತಿಗೆ ಹೈದರಾಬಾದ್‌ ಮೂಲದ ಕಾರ್ಪೆಂಟರ್ ಡಿಸೈನರ್ ಶೇಖ ವಾಹಿದ್ ಎಂಬ ಯುವಕ ಇನ್‌ಸ್ಟಾಗ್ರಾಮ್‌ನಲ್ಲಿ ಪರಿಚಯವಾಗಿದೆ. ಈ ಪರಿಚಯ ಬಳಿಕ ಪ್ರೀತಿಗೆ ತಿರುಗಿದೆ. ಇದೇ ಡಿ.16ರಂದು ಯುವತಿ ಮನೆಯಿಂದ ನಾಪತ್ತೆಯಾಗಿದ್ದಾಳೆ. ಅದೇ ದಿನ ಸಂಜೆ ಯುವತಿಯ ತಂದೆ ಮಗಳು ಕಾಣೆಯಾಗಿರುವ ಬಗ್ಗೆ ಸ್ಥಳೀಯ ಪೊಲೀಸ ಠಾಣೆಗೆ ದೂರು ಸಲ್ಲಿಸಿದ್ದರು.

ದೂರಿನ ಹಿನ್ನೆಲೆಯಲ್ಲಿ ಕುಷ್ಟಗಿ ಪೊಲೀಸರು ಹೈದರಾಬಾದ್‌ನಲ್ಲಿ ಪತ್ತೆ ಹಚ್ಚಿ ಶನಿವಾರ ಠಾಣೆಗೆ ಕರೆ ತಂದಿದ್ದಾರೆ. ಇಬ್ಬರು ಸಹ ವಯಸ್ಕರಾಗಿದ್ದು ಶೇಖವಾಹಿದ್ ಪ್ರೀತಿಸಿ ಮದುವೆಯಾಗಿದ್ದೇನೆ.‌ ಬಲವಂತದಿಂದ ಮದುವೆಯಾಗಿಲ್ಲ ಎಂದು ಯುವತಿ ಪೊಲೀಸರಿಗೆ ತಿಳಿಸಿದ್ದಾಳೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ | Video| ಮುಂಬಯಿ ಮೂಲದ ಪೋರ್ನ್​ಸ್ಟಾರ್​​​ಳಿಂದ ಬ್ಲಾಕ್​​ಮೇಲ್​; ಪತ್ನಿ-ತಾಯಿಯೊಂದಿಗೆ ವಿಷ ಕುಡಿದ ಬಟ್ಟೆ ವ್ಯಾಪಾರಿ

Exit mobile version