ಬೆಂಗಳೂರು: ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ (Disproportionate Assets) ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ವಿರುದ್ಧ ಸಿಬಿಐ ತನಿಖೆಗೆ ನೀಡಿದ್ದ ಮಧ್ಯಂತರ ತಡೆಯನ್ನು ಇನ್ನೂ ಒಂದು ವಾರದ ಕಾಲ ವಿಸ್ತರಿಸಲಾಗಿದೆ.
ಸಿಬಿಐ ಎಫ್ಐಆರ್ ರದ್ದು ಕೋರಿ ಡಿ.ಕೆ.ಶಿವಕುಮಾರ್ ಪರ ವಕೀಲರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಶುಕ್ರವಾರ ಹೈಕೋರ್ಟ್ ಏಕಸದಸ್ಯ ಪೀಠದಲ್ಲಿ ನಡೆಯಿತು. ಫೆ.10ರಂದು ಪ್ರಕರಣದ ವಿಚಾರಣೆ ವೇಳೆ ಫೆ.24ರವರೆಗೆ ಸಿಬಿಐ ತನಿಖೆಗೆ ಮಧ್ಯಂತರ ತಡೆ ನೀಡಿ ಹೈಕೋರ್ಟ್ ಆದೇಶ ನೀಡಿತ್ತು. ಇದೀಗ ಮತ್ತೆ ಒಂದು ವಾರದ ಕಾಲ ತನಿಖೆಗೆ ತಡೆ ನೀಡಲಾಗಿದೆ.
ಸಿಬಿಐ ಪರವಾಗಿ ವಕೀಲ ಪ್ರಸನ್ನ ಕುಮಾರ್ ಹಾಜರಾಗಿದ್ದರು. ಡಿಕೆಶಿ ಪರವಾಗಿ ಹಿರಿಯ ವಕೀಲ ಸಿ.ಎಚ್.ಜಾದವ್ ಉಪಸ್ಥಿತರಿದ್ದರು. ನ್ಯಾ. ಕೆ.ನಟರಾಜನ್ ಅವರಿದ್ದ ಪೀಠದಲ್ಲಿ ಅರ್ಜಿಯ ವಿಚಾರಣೆ ವಿಚಾರಣೆ ನಡೆದಿದ್ದು, ಸಿಬಿಐ ಪರ ವಕೀಲ ಕೋರ್ಟ್‌ಗೆ ಪ್ರಕರಣದ ತನಿಖಾ ಪ್ರಗತಿ ವರದಿ ಸಲ್ಲಿಸಿದೆ.
ಇದನ್ನೂ ಓದಿ | B.S. Yediyurappa: ದೇವೇಗೌಡರಿಂದ ಕಲಿಯುವುದು ಸಾಕಷ್ಟಿದೆ; ಕಾಗೇರಿ ಮತ್ತೆ ಮಂತ್ರಿಯಾಗಬೇಕಿದೆ: ಬಿ.ಎಸ್. ಯಡಿಯೂರಪ್ಪ ವಿದಾಯ ಭಾಷಣ
ಮಧ್ಯಂತರ ತಡೆ ಆದೇಶ ಮಾರ್ಪಾಡು ಮಾಡುವಂತೆ ಸಿಬಿಐ ಮನವಿ ಮಾಡಿದ್ದು, ಈ ಬಗ್ಗೆ ಮುಂದಿನ ವಾರ ವಿಚಾರಣೆ ನಡೆಸುವುದಾಗಿ ನ್ಯಾಯಾಧೀಶರು ತಿಳಿಸಿ, ಮಾರ್ಚ್ 3ಕ್ಕೆ ವಿಚಾರಣೆ ಮುಂದೂಡಿದ್ದಾರೆ.