ವಿಜಯಪುರ : ಹಳೆಯ ದ್ವೇಷದ ಹಿನ್ನೆಲೆ ದಾಯಾದಿ ಸಹೋದರರ ಮಧ್ಯೆ ಜಗಳ ಆಗಿ ಪರಸ್ಪರ ಕಲ್ಲು ತೂರಾಟ ಆದ ಘಟನೆ ತಿಕೋಟ ಪಟ್ಟಣದ ಶಾಂತಿ ನಗರದಲ್ಲಿ ಸೋಮವಾರ ನಡೆದಿದೆ. ಘಟನೆಯಲ್ಲಿ ಆರು ಜನರಿಗೆ ಗಾಯಗಳಾಗಿದ್ದು, ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ. ಯಮನಪ್ಪ ಮಲಕನಾಳ ಹಾಗೂ ಅರ್ಜುನ ಮಲಕನಾಳ ಕುಟುಂಬದ ಮಧ್ಯೆ ಇದ್ದ ಹಳೇ ದ್ವೇಷವೇ ಘಟನೆಗೆ ಕಾರಣ ಎಂದು ತಿಳಿಯಲ್ಪಟ್ಟಿದೆ. ಅರ್ಜುನ ಮಲಕನಾಳ, ಶೇಖರ್ ಮಲಕನಾಳ ಸೇರಿ ಹಲವು ಜನರಿಂದ ಕಲ್ಲು ತೂರಾಟ ಆರೋಪಗಳು ಕೇಳಲ್ಪಟ್ಟಿದೆ.
ಇದನ್ನೂ ಓದಿ | ಮುಸ್ಲಿಂ ಯುವತಿಯ ಜತೆ ಮದುವೆ: ಹಿಂದೂ ಯುವಕನ ಕೊಲೆ
ಯಮನಪ್ಪನ ಮನೆ ಬಳಿಯಿದ್ದ ದುರ್ಗಾದೇವಿ ಪೂಜೆಗೆ ದಾಯಾದಿ ಸಹೋದರರು ಬಂದಿದ್ದರು. ಇದೇ ವೇಳೆ ಕ್ಷುಲ್ಲಕ ಕಾರಣಕ್ಕೆ ಇಬ್ಬರ ನಡುವೆ ಜಗಳ ಆರಂಭವಾಗಿದೆ. ಮಾತಿಗೆ ಮಾತು ಬೆಳೆದು ಎರಡೂ ಕಡೆಯವರು ಕಲ್ಲು ತೂರಾಟ ಮಾಡಲು ಪ್ರಾರಂಭಿಸಿದ್ದಾರೆ. ಕಲ್ಲು ತೂರಾಟದಲ್ಲಿ ಎರಡೂ ಕಡೆಯವರ ತಲೆ, ಕೈಕಾಲುಗಳಿಗೆ ಗಾಯವಾಗಿದೆ.
ಸ್ಥಳದಲ್ಲಿ ಕೆಲಕಾಲ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು. ಯಮನಪ್ಪ ಮಲಕನ್ನವರ ಪತ್ನಿ ಶೋಭಾ ಪುತ್ರಿ ಜ್ಯೋತಿ, ಸುರೇಖಾ ಪುತ್ರ ಸಾಬು ಸೇರಿ ಒಟ್ಟು ಆರು ಜನರಿಗೆ ಗಾಯಗಳಾಗಿವೆ. ತಿಕೋಟಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಕಲ್ಲು ತೂರಾಟವಾಗಿ ಗಲಾಟೆಯಾದರೂ ಇನ್ನೂ ಪರಸ್ಪರ ಯಾರೂ ದೂರು ದಾಖಲು ಮಾಡಿಲ್ಲ.
ಇದನ್ನೂ ಓದಿ | ಹುಬ್ಬಳ್ಳಿ ಗಲಭೆ | AIMIM ಕಾರ್ಪೊರೇಟರ್ ಪತಿ ಸೇರಿ 85 ಜನರ ಬಂಧನ: ಪೂರ್ವನಿಯೋಜಿತ ಶಂಕೆ