ಬೆಂಗಳೂರು: ಕಳೆದ ೮ ವರ್ಷಗಳಿಂದ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ನಡೆಯುತ್ತಿದೆ. ಇದರಿಂದಾಗಿ ಯೋಗ ಇಂದು ಅಂತಾರಾಷ್ಟ್ತೀಯ ಮಟ್ಟದಲ್ಲಿ ಭಾರಿ ಸುದ್ದಿಯಲ್ಲಿದೆ. ಆದರೆ ವರನಟ ಡಾ. ರಾಜ್‌ಕುಮಾರ್ ಅವರು ೮೦ರ ದಶಕದಲ್ಲೇ ಯೋಗ ಸಾಧನೆ ಮಾಡುತ್ತಿದ್ದರು.
ದಶಕಗಳ ಹಿಂದೆ ಡಾ. ರಾಜ್ ಕುಮಾರ್ ಅವರು ಮಾಡುತ್ತಿದ್ದ ಯೋಗ ಸಾಧನೆಯ ಚಿತ್ರ ಮತ್ತು ವಿಡಿಯೊಗಳು ಈಗಲೂ ಜನಪ್ರಿಯ. ಡಾ. ರಾಜ್ ಅವರ ಅಂದಿನ ಯೋಗಾಭ್ಯಾಸದ ವಿಡಿಯೊಗಳನ್ನು ನೋಡಿ ಈಗಲೂ ಅವರ ಅಭಿಮಾನಿಗಳು ರೋಮಾಂಚನಗೊಳ್ಳುತ್ತಾರೆ. ಭಾರತ ರತ್ನ ಡಾ. ರಾಜ್ ಕುಮಾರ್ ಅವರು ವೃತ್ತಿಯ ಜೊತೆಗೆ ಆರೋಗ್ಯದ ಬಗ್ಗೆಯೂ ಹೆಚ್ಚು ಗಮನ ಹರಿಸುತಿದ್ದರು. ದಿನವೂ ನಿಯಮಿತವಾಗಿ ಯೋಗಾಭ್ಯಾಸ ಮಾಡುತ್ತಿದ್ದರು.
ಅಚ್ಚರಿಯ ಸಂಗತಿ ಎಂದರೆ ಡಾ. ರಾಜ್ ಅವರು ಯೋಗದ ಕಡೆ ಆಕರ್ಷಿತರಾಗಿದ್ದೇ ತಮ್ಮ 49ನೇ ವರ್ಷದಲ್ಲಿ. ರಾಜ್ ಅವರು ಯೋಗವನ್ನು ಎಷ್ಟು ಸಲೀಸಾಗಿ ಮಾಡುತ್ತಿದ್ದರು ಎನ್ನುವುದಕ್ಕೆ “ಕಾಮನಬಿಲ್ಲುʼ ಚಿತ್ರದಲ್ಲಿನ ಆರಂಭಿಕ ದೃಶ್ಯವೇ ಸಾಕ್ಷಿಯಾಗಿವೆ. ಹಾಗೆ ನೋಡಿದರೆ ಡಾ. ರಾಜ್ ಅವರು ನಿಜವಾದ ಫಿಟ್‌ನೆಸ್ ಗುರು. ಈಗಿನ ಯುವ ಪೀಳಿಗೆಗೆ ರಾಜ್‌ಕುಮಾರ್ ಅವರು ನಿಜವಾದ ಯೋಗ ಗುರು.
ಇದನ್ನೂ ಓದಿ: ಮೈಸೂರು ಅರಮನೆ ಅಂಗಳದಲ್ಲಿ ಪ್ರಧಾನಿ ನರೇಂದ್ರ ಮೋದಿ ಹೇಳಿದ 10 ಯೋಗ ಸತ್ಯಗಳು