Site icon Vistara News

Namma Metro: ನಮ್ಮ ಮೆಟ್ರೋದಿಂದ ಕ್ಯೂಆರ್‌ ಗ್ರೂಪ್‌ ಟಿಕೆಟ್‌ ಪರಿಚಯ; ಎಷ್ಟು ಮಂದಿ ಪ್ರಯಾಣಿಸಬಹುದು?

ಬೆಂಗಳೂರು: ಗುಂಪಿನಲ್ಲಿ ಅಥವಾ ಕುಟುಂಬ ಸಮೇತ ಪ್ರಯಾಣಿಸಲು ಅನುಕೂಲವಾಗಲು ನಮ್ಮ ಮೆಟ್ರೋ (Namma Metro) ವಿಶೇಷ ಕ್ಯೂಆರ್‌ ಗ್ರೂಪ್‌ ಟಿಕೆಟ್‌ ವ್ಯವಸ್ಥೆ (Group Ticketing) ಪರಿಚಯಿಸಿದೆ. ನವೆಂಬರ್‌ 16ರಂದು ಈ ಕ್ಯೂಆರ್‌ ಕೋಡ್‌ ಟಿಕೆಟ್‌ ವ್ಯವಸ್ಥೆಗೆ ಚಾಲನೆ ಸಿಗಲಿದ್ದು, ಇದರಿಂದ ಒಮ್ಮೆಲೆ 6 ಜನರು ಪ್ರಯಾಣಿಸಬಹುದಾಗಿದೆ.

ಮೆಟ್ರೋದಲ್ಲಿ (Namma Metro) ಸದ್ಯ ಮೊಬೈಲ್‌ ಆ್ಯಪ್‌ ಮೂಲಕ ಕ್ಯೂ ಆರ್‌ ಕೋಡ್‌ ಸ್ಕ್ಯಾ‌ನ್‌ ಮಾಡಿ ಒಬ್ಬರು ಮಾತ್ರ ಪ್ರಯಾಣಿಸಬಹುದಿತ್ತು. ಇದೀಗ ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್‌ನ (ಬಿಎಂಆರ್‌ಸಿಎಲ್‌) ಹೊಸ ಕ್ಯೂಆರ್‌ ಕೋಡ್‌ ಟಿಕೆಟ್‌ನಿಂದ ಒಂದು ಬಾರಿಗೆ ಆರು ಜನರು ಪ್ರಯಾಣಿಸಬಹುದಾಗಿದೆ. ಈ ಕ್ಯೂಆರ್‌ ಕೋಡ್‌ ಟಿಕೆಟ್‌ಗಳಿಗೆ ಟೋಕನ್‌ ದರಕ್ಕಿಂತ ಶೇ. 5 ರಿಯಾಯಿತಿ ಸಿಗುತ್ತದೆ.

ಕುಟುಂಬ ಸಮೇತ ಅಥವಾ ಸ್ನೇಹಿತರೊಂದಿಗೆ ಪ್ರಯಾಣಿಸುವವರು ಈ ಹೊಸ ಸೌಲಭ್ಯ ಅನುಕೂಲವಾಗಲಿದೆ. ಮೊದಲೇ ಮೊಬೈಲ್‌ ಆ್ಯಪ್‌ಗಳಲ್ಲಿ ಟಿಕೆಟ್‌ ಬುಕ್ಕಿಂಗ್‌ ಮಾಡಿ ನಂತರ ಕ್ಯೂಆರ್‌ ಕೋಡ್‌ ಸ್ಕ್ಯಾನ್‌ ಮಾಡಿ ಪ್ರಯಾಣ ಮಾಡಬಹುದಾಗಿದೆ.

ಹೇಗೆ ಬಳಸಬೇಕು?

ಕ್ಯೂಆರ್‌ ಟಿಕೆಟ್‌ ಸೌಲಭ್ಯ ಬಳಸುವ ಪ್ರಯಾಣಿಕರು, ಪ್ರಯಾಣಿಕರ ಸಂಖ್ಯೆ ಎನ್‌ಕ್ರಿಪ್ಟ್‌ ಮಾಡಿದ ಒಂದು ಕ್ಯೂ ಆರ್‌ ಟಿಕೆಟ್‌ ಸ್ವೀಕರಿಸುತ್ತಾರೆ. ಇದನ್ನು ಗುಂಪಿನ ಪ್ರತಿ ಪ್ರಯಾಣಿಕರ ಪ್ರವೇಶ ಮತ್ತು ನಿರ್ಗಮನದ ವೇಳೆ ಗೇಟ್‌ಗಳಲ್ಲಿ ಸ್ಕ್ಯಾ‌ನ್‌ ಮಾಡಬೇಕಾಗುತ್ತದೆ.

ಇದನ್ನೂ ಓದಿ | Ration Card : ಹೀಗಿದ್ದರೆ 3.47 ಲಕ್ಷ ಬಿಪಿಎಲ್, ಅಂತ್ಯೋದಯ ಕಾರ್ಡ್ ರದ್ದು? ಸರ್ಕಾರದ ಗ್ಯಾರಂಟಿಗೂ ಕೊಕ್ಕೆ?

ಇದರಿಂದ ಸರತಿ ಸಾಲಿನಲ್ಲಿ ನಿಂತು ಟಿಕೆಟ್ ಖರೀದಿಸಲು ಪರದಾಡುವುದು ತಪ್ಪುತ್ತದೆ. ಪ್ರಯಾಣಿಕರು ಮನೆ, ಕಚೇರಿ ಅಥವಾ ತಾವಿರುವ ಸ್ಥಳದಿಂದ ಮುಂಗಡವಾಗಿ ಮೊಬೈಲ್‌ ಕ್ಯೂಆರ್‌ ಟಿಕೆಟ್‌ ಪಡೆಯಬಹುದು. ಇದರಿಂದ ಸಮಯವೂ ಉಳಿತಾಯವಾಗಲಿದೆ.

ಬೆಂಗಳೂರಿನ 60 ಜಾಗದಲ್ಲಿ ಮಾತ್ರ ಪಟಾಕಿ ಮಾರಾಟಕ್ಕೆ ಅವಕಾಶ

ಬೆಂಗಳೂರು: ಸಾಲು ಸಾಲು ಪಟಾಕಿ ದುರಂತಗಳ ಹಿನ್ನಲೆಯಲ್ಲಿ ಬೆಂಗಳೂರಿನ 60 ಜಾಗದಲ್ಲಿ ಮಾತ್ರ ಪಟಾಕಿ ಮಾರಾಟಕ್ಕೆ ಅವಕಾಶ ನೀಡಲಾಗಿದೆ. ಇದಕ್ಕಾಗಿ ಬಿಬಿಎಂಪಿ, ಪೊಲೀಸ್ ಇಲಾಖೆ, ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ಅಗ್ನಿಶಾಮಕ ದಳ ನಿಯಮ ಈ ಬಾರಿ ಕಟ್ಟುನಿಟ್ಟಿನ ಕ್ರಮ ಕೈಗೊಂಡಿವೆ.

ಪ್ರತಿ ವರ್ಷ ಬೆಂಗಳೂರಿನಲ್ಲಿ ನೂರಾರು ಜಾಗದಲ್ಲಿ ಪಟಾಕಿ ಮಾರಾಟ‌ಕ್ಕೆ ಅವಕಾಶ ನೀಡಲಾಗುತ್ತಿತ್ತು. ಆದರೆ ಈ ಬಾರಿ ಕೇವಲ 60 ಜಾಗದಲ್ಲಿ ಮೈದಾನದಲ್ಲಿ ಮಾತ್ರ ಪಟಾಕಿ ಮಾರಾಟಕ್ಕೆ ಅವಕಾಶ ನೀಡಲಾಗಿದೆ. ಇನ್ನು ದೀಪಾವಳಿ ಸಂದರ್ಭದಲ್ಲಿ ರಾತ್ರಿ 8 ರಿಂದ 10 ಗಂಟೆವರೆಗೂ ಮಾತ್ರ ಪಟಾಕಿ‌ ಸಿಡಿಸಲು ಅವಕಾಶವಿದೆ. ಹಗಲು ಹೊತ್ತಿನಲ್ಲಿ ಪಟಾಕಿ ಸಿಡಿಸುವಂತಿಲ್ಲ. ಹಸಿರು ಪಟಾಕಿ ಹೊರತುಪಡಿಸಿ ಬೇರೆ ಪಟಾಕಿ ಸಿಡಿಸಿದರೆ ಕ್ರಿಮಿನಲ್ ಕೇಸ್ ದಾಖಲಾಗುತ್ತದೆ. ಇದಕ್ಕಾಗಿ ಮಾಲಿನ್ಯ ನಿಯಂತ್ರಣ ಮಂಡಳಿ ಕಾರ್ಯ ಪಡೆಗಳನ್ನು ರಚಿಸಿದೆ.

ಬೆಸ್ಕಾಂ, ಅಗ್ನಿಶಾಮಕ ದಳ, ಸ್ಥಳೀಯ ಪೊಲೀಸ್, ಬಿಬಿಎಂಪಿ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳನ್ನು ಕಾರ್ಯಪಡೆ ಒಳಗೊಂಡಿದ್ದು, ಇವು ಅಕ್ರಮ ದಾಸ್ತಾನು, ಹಸಿರು ಪಟಾಕಿ ಹೊರತುಪಡಿಸಿ ಅನ್ಯಪಟಾಕಿ ಮಳಿಗೆಗಳ ಮೇಲೆ ನಿಗಾ ಇಡಲಿವೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version