Site icon Vistara News

Independence Day 2023 : ವಿಶ್ವ ಗುರು ಆಗುವತ್ತ ಹೆಜ್ಜೆ ಇಡುತ್ತಿದೆ ಅಜೇಯ ಭಾರತ: ಚಕ್ರವರ್ತಿ ಸೂಲಿಬೆಲೆ

chakravarty sulibele in jago bharat at swatantrya shravana

ಬೆಂಗಳೂರು: ಭಾರತ ಹಾಗೂ ದೇಶದ ಪರಿಕಲ್ಪನೆ ಈಗ ಬದಲಾಗಿದೆ. ನಾವೀಗ ವಿಶ್ವ ಗುರು ಆಗುವ ಗುರಿಯನ್ನು ಹೊಂದಿದ್ದೇವೆ. ಆ ನಿಟ್ಟಿನಲ್ಲಿ ನಮ್ಮ ಹೆಜ್ಜೆ ಸಾಗುತ್ತಿದೆ. ಇದೆಲ್ಲದಕ್ಕೂ ನಮ್ಮ ಪರಂಪರೆಯೇ ಮೂಲ ಕಾರಣ ಎಂದು ಯುವಾ ಬ್ರಿಗೇಡ್‌ (Yuva Brigade) ಸಂಸ್ಥಾಪಕ, ಚಿಂತಕ ಚಕ್ರವರ್ತಿ ಸೂಲಿಬೆಲೆ (Chakravarty Sulibele) ಹೇಳಿದರು. ಸ್ವಾತಂತ್ರ್ಯ ಮಹೋತ್ಸವದ (Independence Day 2023) ಈ ಸಂದರ್ಭದಲ್ಲಿ “ವಿಶ್ವಗುರು ಭಾರತ” (Vishwa Guru Bharath) ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಯುವಾ ಬ್ರಿಗೇಡ್‌ (Yuva Brigade) ಮತ್ತು ಸೋದರಿ ನಿವೇದಿತಾ ಪ್ರತಿಷ್ಠಾನದಿಂದ (Sodari Nivedita Pratishthana) ಪ್ರತಿ ವರ್ಷ ಸ್ವಾತಂತ್ರ್ಯೋತ್ಸವ (Independence Day 2023) ಸಂದರ್ಭದಲ್ಲಿ ಆಚರಿಸಿಕೊಂಡು ಬರಲಾಗುತ್ತಿರುವ “ಸ್ವಾತಂತ್ರ್ಯ ಶ್ರಾವಣ” ಕಾರ್ಯಕ್ರಮವನ್ನು ಈ ಬಾರಿ ಬೆಂಗಳೂರಿನ ಎಚ್‌ಎಎಲ್‌ ಸಮೀಪದ ಬಸವನಗರದ ವಿಭೂತಿಪುರ ಮಠದಲ್ಲಿ ಆಗಸ್ಟ್‌ 13ರಿಂದ 15ರವರೆಗೆ ಮೂರು ದಿನ ಆಚರಿಸಲಾಗಿದೆ. ಈ ವೇಳೆ ಚಿಂತಕ ಚಕ್ರವರ್ತಿ ಸೂಲಿಬೆಲೆ ಅವರು “ವಿಶ್ವಗುರು ಭಾರತ” (Vishbaguru Bharata) ಎಂಬ ವಿಷಯದ ಮೇಲೆ ಸಂವಾದ ನಡೆಸಿದ್ದು, ಭಾರತೀಯ ಸಂಸ್ಕೃತಿ, ಪರಂಪರೆ, ಹಿಂದುತ್ವ ಸೇರಿದಂತೆ ಅನೇಕ ವಿಷಯಗಳ ಬಗ್ಗೆ ಮುಕ್ತವಾಗಿ ಚರ್ಚೆ ಮಾಡಿದ್ದಾರೆ.

chakravarty sulibele in jago bharat at swatantrya shravana Independence Day 2023

ಇದನ್ನೂ ಓದಿ: Independence day 2023 : ಸರ್ವರಿಗೂ ನ್ಯಾಯ, ರಾಜ್ಯದ ಅಭ್ಯುದಯ; ಸಿಎಂ ಸಿದ್ದರಾಮಯ್ಯ ಭಾಷಣದ TOP 14 ವಿಶೇಷ

76 ವರ್ಷಗಳ ಹಿಂದೆ ಈ ದಿನ ಸ್ವಾತಂತ್ರ್ಯದ ಬಗ್ಗೆ ಕಳವಳ ಇತ್ತು ಸ್ವಾತಂತ್ರ್ಯ ಸಿಗುತ್ತದೆಯೋ ಇಲ್ಲವೋ? ಎಂಬ ಕಾತರತೆ ಇತ್ತು. ಆದರೆ, ಸುದೀರ್ಘ ಹೋರಾಟದಿಂದ ಆ ಸುಂದರ ಕ್ಷಣವು ನಮ್ಮದಾಯಿತು. ಹೀಗೆ ಸ್ವಾತಂತ್ರ್ಯಕ್ಕೋಸ್ಕರ ಅದೆಷ್ಟೋ ಜನರು ಬಲಿದಾನಗಳನ್ನು ನೀಡಿದ್ದಾರೆ. ಈ ಎಲ್ಲವನ್ನೂ ನೆನೆಯುವುದಕ್ಕೋಸ್ಕರ ಈ “ಜಾಗೋ ಭಾರತ್‌” ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ. “ಜಾಗೋ ಭಾರತ್‌” ಎಂಬ ಕಾರ್ಯಕ್ರಮವನ್ನು ನಾವು ಬಹಳ ಹಿಂದೆಯೇ ಮಾಡುತ್ತಾ ಬಂದಿದ್ದೆವು. ಆಗ ಈ “ಜಾಗೋ ಭಾರತ್‌” ಶೀರ್ಷಿಕೆಗೆ ಉಪ ಶೀರ್ಷಿಕೆ ಏನಿತ್ತೆಂದರೆ, “ಮಲಗಿದ್ದು ಸಾಕು ನಾವಿನ್ನು ಏಳೋಣ” ಎಂದು ಬರೆಯಲಾಗಿತ್ತು. ಅದಾದ ಬಳಿಕ ನಾವು ಎದ್ದಿದ್ದೇವೆ. ಹೀಗಾಗಿ 2014ರ ನಂತರ ನಾವು ಬದಲಾವಣೆಯನ್ನು ನೋಡುತ್ತಿದ್ದೇವೆ. ಅನೇಕ ಬದಲಾವಣೆಯನ್ನೂ ಕಂಡಿದ್ದೇವೆ. ಈಗ ನಮ್ಮೀ ಬೇಸ್‌ಲೈನ್‌ ಬದಲಾಗಿದೆ. “ಇನ್ನೀಗ ವಿಶ್ವಗುರು ಒಂದೇ ಗುರಿ” ಎಂಬ ಉಪ ಶೀರ್ಷಿಕೆಯನ್ನು ಹಾಕಿದ್ದೇವೆ. ಈ ಮೂಲಕ ಭಾರತ ವಿಶ್ವಕ್ಕೇ ಗುರು ಆಗಬೇಕು ಎಂದು ಚಕ್ರವರ್ತಿ ಸೂಲಿಬೆಲೆ ಹೇಳಿದರು.

chakravarty sulibele in jago bharat at swatantrya shravana Independence Day 2023

ಭಾರತವು ಅತ್ಯಂತ ವಿಶಿಷ್ಟವಾದ ರಾಷ್ಟ್ರವಾಗಿದೆ. ಇದು ಮಾತೃಭೂಮಿ, ಪಿತೃಭೂಮಿ ಹಾಗೂ ಗುರು ಸ್ವರೂಪಿಯಾಗಿರುವ ರಾಷ್ಟ್ರವೂ ಹೌದು. ಗುರು ವಿದ್ಯಾನಂದರು ಭಾರತ ಪದದ ಬಗ್ಗೆ ಹೇಳುವ ಮಾತೊಂದು ಬಹಳ ಚೆನ್ನಾಗಿದೆ. ಭಾ ಎಂದರೆ ಭಾವ, ರ ಎಂದರೆ ರಾಗ ಹಾಗೂ ತ ಎಂದರೆ ತಾಳವಾಗಿದೆ. ಹಾಗಾಗಿ ಭಾವ, ರಾಗ, ತಾಳಗಳ ಸುಂದರ ಮಿಶ್ರಣಗಳ ಸಂಗೀತ ನನ್ನ ಭಾರತ ಎಂದು ಹೇಳುತ್ತಿದ್ದರು. ಭಾರತ ಯಾಕೆ ಅತ್ಯಂತ ಶ್ರೇಷ್ಠ ಎಂದು ಕೇಳಿದರೆ ಹೇಳಲು ನೂರಾರು ಕಾರಣಗಳಿವೆ. ರಾಮ ಹುಟ್ಟಿದ್ದು ನಮ್ಮ ನಾಡಿನಲ್ಲಿ, ಅದಕ್ಕಾಗಿ ಈ ನಾಡು ಗ್ರೇಟ್.‌ ಕೃಷ್ಣ ಹುಟ್ಟಿದ್ದು ಕೂಡಾ ಇಲ್ಲಿ ಎಂದು ಹೇಳುತ್ತಾ ಭಾರತೀಯ ಸಂಸ್ಕೃತಿಯ ಶ್ರೇಷ್ಠತೆಯ ಬಗ್ಗೆ ಚಕ್ರವರ್ತಿ ಸೂಲಿಬೆಲೆ ವಿವರಿಸಿದರು.

ರಾಮ ಯಾಕೆ ಇನ್ನೂ ಜೀವಂತವಾಗಿದ್ದಾನೆ?

ಜಗತ್ತಿನ ಅತ್ಯಂತ ಶ್ರೇಷ್ಠ ಗ್ರಂಥ ಎಂದರೆ ರಾಮಾಯಣ, ಮಹಾಭಾರತ ಎಂದು ಪರಿಗಣಿಸಲಾಗಿದೆ. ಆದರೆ, ಇಂದು ಶೇಕಡಾ 90ರಷ್ಟು ಜನ ರಾಮಾಯಣ ಮತ್ತು ಮಹಾಭಾರತವನ್ನು ಓದಿಯೇ ಇಲ್ಲ. ಹೀಗಿದ್ದರೂ ರಾಮ, ಸೀತೆ, ರಾವಣ ಯಾರು ಗೊತ್ತಾ? ಎಂದು ಕೇಳಿದರೆ ಎಲ್ಲರಿಗೂ ಗೊತ್ತಿರುತ್ತದೆ. ರಾವಣ ಸೀತೆಗೆ ಏನು ಮಾಡಿದ ಎಂದು ಕೇಳಿದರೂ ಗೊತ್ತಿದೆ. ಸೀತೆಯನ್ನು ಹೊತ್ತುಕೊಂಡು ಹೋಗಿದ್ದು ಯಾರು ಎಂಬುದು ಸಹ ಗೊತ್ತಿದೆ. ಆಂಜನೇಯ ಯಾರು ಎಂಬುದೂ ಗೊತ್ತಿದೆ. ರಾಮ ಹುಟ್ಟಿದ್ದು ಕನಿಷ್ಠ ಎಂಟು ಸಾವಿರ ವರ್ಷಗಳ ಹಿಂದೆ. ಹೀಗಿರುವಾಗ ರಾಮ, ರಾಮಾಯಣದ ಬಗ್ಗೆ ಇಂದಿನವರಿಗೂ ಸಂಪೂರ್ಣ ಮಾಹಿತಿ ಇದೆ. ಸಾಹಿತ್ಯವನ್ನು ಓದದಿದ್ದರೂ ಬಹಳಷ್ಟು ಜನರಿಗೆ ಗೊತ್ತಿರುವುದು ಹೇಗೆ ಸಾಧ್ಯವೆಂದರೆ, ನಮ್ಮ ರಾಮ ಪುಸ್ತಕದಲ್ಲಿ ಇಲ್ಲ. ಆತ ಭಾರತೀಯರ, ಹಿಂದುಗಳ ಮನಸ್ಸಿನಲ್ಲಿ ಇದ್ದಾನೆ. ಹಾಗಾಗಿ ರಾಮ ಇನ್ನೂ ಜೀವಂತವಾಗಿದ್ದಾನೆ ಎಂದು ಚಕ್ರವರ್ತಿ ಸೂಲಿಬೆಲೆ ತಿಳಿಸಿದರು.

chakravarty sulibele in jago bharat at swatantrya shravana Independence Day 2023

ರಾಮಾಯಣವು ರಾಮ-ಲಕ್ಷ್ಮಣರ ಬಾಂಧವ್ಯವನ್ನು ಸೂಚಿಸುತ್ತದೆ. ಇನ್ನು ಭರತನ ಸಹೋದರ ಪ್ರೇಮ ಎಂಥದ್ದು ಎಂಬುದು ಗೊತ್ತಾಗುತ್ತದೆ. ಇನ್ನೊಂದು ಸ್ವಾರಸ್ಯಕರ ಸಂಗತಿಯೆಂದರೆ, ರಾಮನ ಪಾದುಕೆಯನ್ನು ಸಿಂಹಾಸನದ ಮೇಲಿಟ್ಟು ಭರತ 14 ವರ್ಷ ಹೇಗೆ ಆಳ್ವಿಕೆ ನಡೆಸಿದ್ದಾನೆ ಎಂಬುದು ನಮ್ಮವರಿಗೆ ಹೆಚ್ಚು ಗೊತ್ತಿದೆಯೋ ಇಲ್ಲವೋ ನನಗೆ ಗೊತ್ತಿಲ್ಲ. ಆದರೆ, ಇಂಡೋನೇಷ್ಯಾದಲ್ಲಿ ಇಂದು ಯಾರೇ ರಾಜನಾಗಿ ಅಧಿಕಾರ ಸ್ವೀಕಾರ ಮಾಡಿದರೂ ಆತನ ಹೆಸರು ರಾಮ ಎಂದೇ ಆಗಿರುತ್ತದೆ. ಆ ರಾಜ ಪ್ರಮಾಣವಚನವನ್ನು ಸ್ವೀಕಾರ ಮಾಡುವಾಗ, “ರಾಮನ ಪಾದುಕೆಗಳ ಮೇಲಾಣೆ, ಈ ರಾಜ್ಯವನ್ನು ಭರತ ಹೇಗೆ ನಡೆಸಿಕೊಂಡನೋ ಹಾಗೆಯೇ ನಾನು ಈ ರಾಜ್ಯದ ಆಳ್ವಿಕೆ ನಡೆಸುತ್ತೇನೆ ಎಂದು ಈಗಲೂ ಹೇಳುತ್ತಾರೆ ಎಂಬುದನ್ನು ಚಕ್ರವರ್ತಿ ಸೂಲಿಬೆಲೆ ಸ್ಮರಿಸಿದರು.

ಆಕ್ರಮಣಕಾರರು ರಾಮ ಮಂದಿರವನ್ನು ಧ್ವಂಸ ಮಾಡಿದರೆ ಮುಂದೇನೂ ಮಾಡಲಾಗದು ಎಂದು ಅಂದುಕೊಂಡಿದ್ದರು. ಆದರೆ, ರಾಮ ಮಂದಿರದಲ್ಲಿ ಮಾತ್ರವಲ್ಲ, ಪ್ರತಿಯೊಬ್ಬರ ಮನಸ್ಸಿನಲ್ಲಿ ಇದ್ದಾನೆ. ಹೀಗಾಗಿ ರಾಮನನ್ನು ಉಳಿಸಿಕೊಂಡ ಪರಂಪರೆ ನಮ್ಮದು. ಇಡೀ ಉತ್ತರ ಭಾರತದಲ್ಲಿ ಜನರ ಮನಸ್ಥಿತಿ ಹೇಗಿತ್ತೆಂದರೆ, ನೀನು ರಾಮ ಮಂದಿರವನ್ನು ಒಡೆದಿರಬಹುದು. ಆದರೆ, ನನ್ನ ಮನಸ್ಸು, ಬಾಯಿಯಿಂದ ಬರುವ ರಾಮನನ್ನು ಹೇಗೆ ತಡೆಯುತ್ತೀಯಾ? ಎಂಬ ಸವಾಲನ್ನು ಹಾಕುವ ಮನಸ್ಥಿತಿಯನ್ನು ಹೊಂದಿದ್ದರು. ಈಗ ಮತ್ತೆ ರಾಮ ಮಂದಿರ ತಲೆ ಎತ್ತುತ್ತಿದೆ ಎಂದು ಚಕ್ರವರ್ತಿ ಸೂಲಿಬೆಲೆ ಹೇಳಿದರು.

ಸ್ವಾತಂತ್ರ್ಯ ಇತಿಹಾಸದ ಬಗ್ಗೆ ಚಕ್ರವರ್ತಿ ಸೂಲಿಬೆಲೆ ಸಂವಾದ; ಇಲ್ಲಿದೆ ವಿಡಿಯೊ

ಇದನ್ನೂ ಓದಿ: Independence Day 2023: ವಿಶ್ವಕ್ಕೆ ಪ್ರಕಾಶ ನೀಡುವುದಕ್ಕಾಗಿಯೇ ಭಾರತ ಸ್ವತಂತ್ರವಾಗಿದೆ: ಡಾ. ಮೋಹನ್ ಭಾಗವತ್

ಜೌಹರ್‌ ಪದ್ಧತಿ ಆರಂಭವಾಗಿದ್ದು ಹೀಗೆ!

ಮಹಮ್ಮದ್‌ ಬಿನ್‌ ಖಾಸಿಮ್‌ ಭಾರತಕ್ಕೆ ಆಕ್ರಮಣ ಮಾಡಲು ಬಂದಿದ್ದ. ಆಗ ಸಿಂಧು ನದಿಯಲ್ಲಿ ಗಲಾಟೆ ಶುರುವಾಯಿತು. ಸಿಂಧು ನದಿಯ ಒಂದು ಭಾಗದಲ್ಲಿ ಮಹಮ್ಮದ್‌ ಬಿನ್‌ ಖಾಸಿಮ್‌ ಹಾಗೂ ಇನ್ನೊಂದು ಭಾಗದಲ್ಲಿ ರಾಜ ಧಾಹಿರನ ಸೈನ್ಯ ಇತ್ತು. ರಾಜ ಧಾಹಿರನ ಸೈನ್ಯದಲ್ಲಿದ್ದ ಆನೆಗಳನ್ನು ನೋಡಿ ಖಾಸಿಮ್‌ ಒಂದು ಕ್ಷಣ ಹೆದರಿದ. ಕೊನೆಗೆ ತನ್ನ ಬಳಿ ಇದ್ದ ಕುದುರೆಗಳಿಗೆ ಬೆಂಕಿಯ ಪಂಜುಗಳನ್ನು ಕಟ್ಟಿ ಆನೆಗಳ ಮೇಲೆ ದಾಳಿ ಮಾಡಿಸಿದ. ಆನೆಗಳು ಆಗ ಹಿಮ್ಮುಖವಾಗಿ ಓಡಿ ತನ್ನದೇ ಸೈನಿಕರನ್ನು ಕೊಂದು ಹಾಕುತ್ತಿತ್ತು. ಇದರಿಂದ ಗಲಿಬಿಲಿಗೊಂಡ ಧಾಹಿರ ಸೆರೆ ಸಿಕ್ಕ. ಕೊನೆಗೆ ಶಿರಚ್ಛೇದನಕ್ಕೂ ಒಳಗಾದ. ಬಳಿ ಧಾಹಿರನ ಮಡದಿ ಆಡಳಿತ ಚುಕ್ಕಾಣಿ ಹಿಡಿದಳಾದರೂ ಖಾಸಿಮ್‌ನಿಂದ ದೇಶ ಉಳಿಸಿಕೊಳ್ಳಲು ಆಗದು ಎಂಬುದು ಅರಿವಾಯಿತು. ಹೀಗಾಗಿ ಅತ್ಯಂತ ಕ್ರೂರಿ, ತುರ್ಕರ ಜನಾಂಗ ಇದಾಗಿದೆ. ಇವರಿಂದ ನನ್ನ ಮಾನಹರಣಕ್ಕೆ ಅವಕಾಶವನ್ನು ಕೊಡಲಾರೆ ಎಂದು ಆಕೆ ಅಗ್ನಿಕುಂಡವನ್ನು ಸಿದ್ಧಪಡಿಸಿ ಅಗ್ನಿಗೆ ಹಾರಿ ಪ್ರಾಣ ಬಿಟ್ಟಳು. ಆನಂತರ ಭಾರತದಲ್ಲಿ “ಜೌಹರ್‌” ಎಂಬ ಪದ್ಧತಿ ಶುರುವಾಯಿತು. ಹೀಗೆಂದರೆ, ಮಾನ ರಕ್ಷಣೆಗೋಸ್ಕರ ಜೀವವನ್ನು ಹರಣ ಮಾಡಿಕೊಳ್ಳುವ ಪದ್ಧತಿಯಾಗಿದೆ ಎಂದು ಚಕ್ರವರ್ತಿ ಸೂಲಿಬೆಲೆ ವಿವರಣೆ ನೀಡಿದರು.

Exit mobile version