Site icon Vistara News

Infosys Foundation Awards: ಆರೋಹಣ್ ಸೋಶಿಯಲ್ ಇನ್ನೋವೇಶನ್ ಪ್ರಶಸ್ತಿಗೆ ಆಹ್ವಾನ, ವಿಜೇತರಿಗೆ 50 ಲಕ್ಷ ರೂ. ಬಹುಮಾನ!

Invitation for Aarohan Social Innovation Award, initiated by the infosys foundation

ಬೆಂಗಳೂರು: ಇನ್ಫೋಸಿಸ್‌ನ ಜನೋಪಕಾರಿ ಮತ್ತು ಸಿಎಸ್ಆರ್ ಅಂಗವಾಗಿರುವ ಇನ್ಫೋಸಿಸ್ ಫೌಂಡೇಶನ್ ತನ್ನ ಆರೋಹಣ್‌ನ (Infosys Foundation Awards) ಮೂರನೇ ಆವೃತ್ತಿಯ ಸೋಷಿಯಲ್ ಇನ್ನೋವೇಶನ್ ಅವಾರ್ಡ್ಸ್ ಆರಂಭಿಸಿದೆ. ಭಾರತದಲ್ಲಿನ ಮತ್ತಷ್ಟು ಸಾಮಾಜಿಕ ಆವಿಷ್ಕಾರಕ್ಕಾಗಿ ಇನ್ಫೋಸಿಸ್ ಫೌಂಡೇಶನ್ ದೇಶಾದ್ಯಂತ ಇರುವ ನವೋದ್ಯಮಿಗಳು ಮತ್ತು ಸಾಮಾಜಿಕ ಉದ್ಯಮಿಗಳನ್ನು ಈ ಪ್ರಶಸ್ತಿಗಾಗಿ ಆಹ್ವಾನಿಸುತ್ತಿದೆ.

ಈ ಆರೋಹಣ್ ಸೋಶಿಯಲ್ ಇನ್ನೋವೇಶನ್ ಪ್ರಶಸ್ತಿ 2023 ದೇಶಾದ್ಯಂತ ಹಿಂದುಳಿದವರಿಗೆ ಗಮನಾರ್ಹವಾದ ವ್ಯತ್ಯಾಸವನ್ನು ಉಂಟು ಮಾಡುವ ನಿಟ್ಟಿನಲ್ಲಿ ಸಾಮರ್ಥ್ಯವನ್ನು ಹೊಂದಿರುವ ಅನನ್ಯ ತಂತ್ರಜ್ಞಾನ ಆಧಾರಿತ ಪರಿಹಾರಗಳನ್ನು ಅಭಿವೃದ್ಧಿಪಡಿಸುವ ವ್ಯಕ್ತಿಗಳು, ತಂಡಗಳು ಮತ್ತು ಎನ್ ಜಿಒಗಳನ್ನು ಗೌರವಿಸಿ ಪ್ರೋತ್ಸಾಹಿಸುವ ದಿಸೆಯಲ್ಲಿ ಮುಂದಡಿ ಇಟ್ಟಿದೆ. ಈ ಪ್ರಶಸ್ತಿಯ ಮೊತ್ತ ಒಟ್ಟು 2 ಕೋಟಿ ರೂಪಾಯಿದ್ದಾಗಿದ್ದು, ವಿಜೇತರಿಗೆ ತಲಾ 50 ಲಕ್ಷ ರೂಪಾಯಿವರೆಗಿನ ನಗದು ಬಹುಮಾನ ನೀಡಲು ಇನ್ಫೋಸಿಸ್ ಫೌಂಡೇಶನ್ ಬದ್ಧವಾಗಿದೆ.

ಈ ಬಗ್ಗೆ ಮಾತನಾಡಿದ ಇನ್ಫೋಸಿಸ್ ಫೌಂಡೇಶನ್ ನ ಟ್ರಸ್ಟಿ ಸುಮಿತ್ ವೀರಮಣಿ ಅವರು, “ಇನ್ಫೋಸಿಸ್ ನಲ್ಲಿ ನಾವು ಯಾವಾಗಲೂ ಸಾಮಾಜಿಕ ಒಳಿತಿಗಾಗಿ ನಿರಂತರವಾಗಿ ಕಾರ್ಯನಿರ್ವಹಣೆ ಮಾಡುವ ಶಕ್ತಿಯಲ್ಲಿ ನಂಬಿಕೆ ಇಟ್ಟಿದ್ದೇವೆ. ಆರೋಹಣ್ ಸೋಶಿಯಲ್ ಇನ್ನೋವೇಶನ್ ಪ್ರಶಸ್ತಿಗಳು ಸಾಮಾಜಿಕ ಸ್ವಾಸ್ಥ್ಯ ಮತ್ತು ಒಳಿತಿನ ಮೇಲೆ ಪ್ರಭಾವ ಬೀರುವ ಸಾಮರ್ಥ್ಯವನ್ನು ಮೌಲ್ಯೀಕರಿಸುವ, ಪ್ರೋತ್ಸಾಹ ನೀಡುವ ಮತ್ತು ಪುರಸ್ಕರಿಸುವ ನಿಟ್ಟಿನಲ್ಲಿ ಈ ಗುರಿಯನ್ನು ಹೆಚ್ಚಿಸುತ್ತವೆ. ಪ್ರಶಸ್ತಿಗಳ ಹಿಂದಿನ ಆವೃತ್ತಿಗಳು ಭಾರೀ ಯಶಸ್ಸು ಗಳಿಸಿದ್ದು, ಇದರ ಪರಿಣಾಮ ಸಾಕಷ್ಟು ಪ್ರಭಾವಶಾಲಿಯಾಗಿದೆ. 2023 ರ ಆವೃತ್ತಿಯೊಂದಿಗೆ, ದೇಶಾದ್ಯಂತ ಸಾಮಾಜಿಕ ನವೋದ್ಯಮಿಗಳನ್ನು ಪ್ರೋತ್ಸಾಹಿಸುವ ಮೂಲಕ ಅವರ ಚಿಂತನೆಗಳು ಮತ್ತು ಉತ್ಸಾಹವನ್ನು ಪ್ರಭಾವಶಾಲಿ ಪ್ರಶಸ್ತಿ –ವಿಜೇತ ಪರಿಹಾರಗಳಾಗಿ ಭಾಷಾಂತರಿಸುವುದರೊಂದಿಗೆ ಈ ಆವೇಗವನ್ನು ಮುಂದುವರಿಸಲು ನಾವು ಆಶಿಸುತ್ತೇವೆ’’ ಎಂದು ತಿಳಿಸಿದರು.

ಮೂರು ವಿಭಾಗಗಳಿಗೆ ಅರ್ಜಿ ಆಹ್ವಾನ

ಶಿಕ್ಷಣ, ಆರೋಗ್ಯರಕ್ಷಣೆ, ಮಹಿಳಾ ಸಬಲೀಕರಣ- ಹೀಗೆ ಮೂರು ವಿಭಾಗಗಳಲ್ಲಿ ಪ್ರಶಸ್ತಿಯನ್ನು ಆಹ್ವಾನಿಸಲಾಗುತ್ತಿದೆ. ಆರೋಹಣ್ ಸೋಶಿಯಲ್ ಇನ್ನೋವೇಶನ್ ಪ್ರಶಸ್ತಿ 2023 ಕ್ಕೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಮಾರ್ಚ್ 12, 2023. ಭಾರತೀಯ ನಾಗರಿಕರು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ಅರ್ಜಿ ಸಲ್ಲಿಸುವವರು ಭಾರತದಲ್ಲೇ ವಾಸವಾಗಿದ್ದು, 18 ವರ್ಷ ಮತ್ತು ಅದಕ್ಕಿಂತ ಮೇಲ್ಪಟ್ಟ ವಯೋಮಾನದವರಾಗಿರಬೇಕು. ಸ್ಪರ್ಧಿಗಳು ತಮ್ಮ ಕಾರ್ಯವನ್ನು ವಿವರಿಸುವ ವಿವರಗಳನ್ನು ವಿಡಿಯೋ ಮೂಲಕ ಆರೋಹಣ್ ಸೋಶಿಯಲ್ ಇನ್ನೋವೇಶನ್ ಅವಾರ್ಡ್ಸ್ ವೆಬ್ ಸೈಟ್ ನಲ್ಲಿ ಅಪ್ಲೋಡ್ ಮಾಡಬೇಕು.

ಇದನ್ನೂ ಓದಿ: Infosys | 3ನೇ ತ್ರೈಮಾಸಿಕದಲ್ಲಿ 6000 ಫ್ರೆಶರ್ಸ್ ನೇಮಕ ಮಾಡಿಕೊಂಡ ಇನ್ಫೋಸಿಸ್!

ಅರ್ಜಿಗಳು ಸಂಪೂರ್ಣವಾಗಿ ಕಾರ್ಯನಿರ್ವಹಣೆಯ ಮೂಲ ಮಾದರಿ ಅಥವಾ ಪೂರ್ಣಗೊಂಡ ಯೋಜನೆಯಾಗಿರಬೇಕು ಮತ್ತು ಕೇವಲ ಪರಿಕಲ್ಪನೆ, ಕಲ್ಪನೆ ಅಥವಾ ಮಾಕಪ್ ಆಗಿರುವಂತಿಲ್ಲ: ಹೆಚ್ಚುವರಿಯಾಗಿ ನಾವೀನ್ಯತೆಯ ವ್ಯಕ್ತಿ, ತಂಡ, ಲಾಭರಹಿತ ಅಥವಾ ಸಾಮಾಜಿಕ ಉದ್ಯಮವಾಗಿರಬೇಕು.
ಪ್ರತಿಷ್ಠಿತ ಪರಿಣತರನ್ನು ಒಳಗೊಂಡ ತೀರ್ಪುಗಾರರು ಅರ್ಜಿಗಳನ್ನು ಪರಿಶೀಲಿಸಿ ಅಂತಿಮ ವಿಜೇತರನ್ನು ಆಯ್ಕೆ ಮಾಡಲಿದ್ದಾರೆ. ಆರೋಹಣ್ ಸೋಶಿಯಲ್ ಇನ್ನೋವೇಶನ್ ಅವಾರ್ಡ್ಸ್ ಅರ್ಜಿ ಸಲ್ಲಿಸುವ ವಿಧಾನಗಳು ಮತ್ತು ತೀರ್ಪಿನ ಮಾನದಂಡಗಳ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದುಕೊಳ್ಳಲು Infosys Foundation ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಬಹುದು.

Exit mobile version