ಬೆಂಗಳೂರು: ಡೆಲ್ಲಿ ಕ್ಯಾಪಿಟಲ್ಸ್ vs ಬೆಂಗಳೂರು ಆರ್‌ಸಿಬಿ ಪಂದ್ಯಾವಳಿ ಸಮಯದಲ್ಲಿ ದೆಹಲಿ ತಂಡದ ಕ್ರಿಕೆಟ್ ಕಿಟ್ ಕಳವು (IPL 2023) ಆಗಿತ್ತು. ಹೀಗಾಗಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಮ್ಯಾನೇಜ್ಮೆಂಟ್ ದೆಹಲಿ ಪೊಲೀಸರಿಗೆ ದೂರು ನೀಡಿತ್ತು. ಈ ಸಂಬಂಧ ದೆಹಲಿ ಪೊಲೀಸರು ಎಫ್ಐಆರ್ ಕೂಡ ದಾಖಲಿಸಿದ್ದರು.
ತನಿಖೆ ವೇಳೆ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿಯೇ ಕಳವುವಾಗಿರುವ ಬಗ್ಗೆ ಅನುಮಾನ ವ್ಯಕ್ತವಾಗಿತ್ತು. ಈ ಬಗ್ಗೆ ದೆಹಲಿ ತಂಡದವರು ಬೆಂಗಳೂರು ಪೊಲೀಸರನ್ನು ಸಂಪರ್ಕ ಮಾಡಿದ್ದರು. ತನಿಖೆಗಿಳಿದ ಕಬ್ಬನ್ ಪಾರ್ಕ್ ಪೊಲೀಸರು ಸದ್ಯ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಆರೋಪಿಗಳ ಬಂಧನದ ವೇಳೆ 17 ಬ್ಯಾಟ್‌ಗಳು, ಗ್ಲೌಸ್, ಹೆಲ್ಮೆಟ್, ಪ್ಯಾಡ್ ಸೇರಿ ಹಲವು ವಸ್ತುಗಳು ಪತ್ತೆ ಆಗಿವೆ. ಬಂಧಿತರಾಗಿರುವ ಇಬ್ಬರು ಆರೋಪಿಗಳನ್ನು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.
ಏನಿದು ಘಟನೆ?
ಏಪ್ರಿಲ್ 19ರಂದು ಡೆಲ್ಲಿ ಕ್ಯಾಪಿಟಲ್ಸ್ ತಂಡದ ಆಟಗಾರರ ಕಿಟ್ ಬ್ಯಾಗ್ಗಳು ಕಾಣೆಯಾಗಿದ್ದವು. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯ ಮುಕ್ತಾಯಗೊಂಡ ಬಳಿಕ ಡೆಲ್ಲಿಗೆ ವಾಪಸ್ ತೆರಳುವ ದಾರಿಯಲ್ಲಿ ಅವರ ಕಿಟ್ ಬ್ಯಾಗ್ಗಳು ಕಾಣೆಯಾಗಿದ್ದವು. ಡೇವಿಡ್ ವಾರ್ನರ್, ಮಿಚೆಲ್ ಮಾರ್ಶ್, ಫಿಲ್ ಸಾಲ್ಟ್, ಯಶ್ ಧುಲ್ ಕಿಟ್ ಬ್ಯಾಗ್ಗಳನ್ನು ಕಳ್ಳತನ ಮಾಡಿದ್ದರು.
ಕ್ರಿಕೆಟ್ ಆಟಗಾರರು ನೀಡಿದ ದೂರಿನನ್ವಯ ಪೊಲೀಸರು ಕಿಟ್ ಬ್ಯಾಗ್ಗಳನ್ನು ಪತ್ತೆ ಮಾಡಿ ವಾಪಸ್ ತಂದುಕೊಟ್ಟಿದ್ದರು. ಬ್ಯಾಗ್ನಲ್ಲಿ 16 ಬ್ಯಾಟ್‌ಗಳು, ಪ್ಯಾಡ್ಗಳು, ಶೂಗಳು, ಥಿಗ್ ಪ್ಯಾಡ್ಗಳು, ಗ್ಲವ್ಸ್ಗಳಿದ್ದವು. ಲಾಜಿಸ್ಟಿಕ್ ಕಂಪೆನಿ ಕ್ರಿಕೆಟ್ ಆಟಗಾರರ ಲಗೇಜ್ ಹಾಗೂ ಕಿಟ್ ಬ್ಯಾಗ್ಗಳನ್ನು ರವಾನೆ ಮಾಡುವ ಕೆಲಸ ಮಾಡುತ್ತವೆ. ಆಟಗಾರರು ನಿರ್ದಿಷ್ಟ ಹೋಟೆಲ್ಗೆ ತಲುಪುವ ಮೊದಲು ಅವರು ಬ್ಯಾಟ್ಗಳನ್ನು ಅಲ್ಲಿಗೆ ತಲುಪಿಸಬೇಕು. ಆದರೆ, ಡೆಲ್ಲಿಯಿಂದ ವಾಪಸಾದ್ ಡೇವಿಡ್ ವಾರ್ನರ್ ಸೇರಿದಂತೆ ಕೆಲವು ಆಟಗಾರರ ಬ್ಯಾಗ್ನಲ್ಲಿದ್ದ ವಸ್ತುಗಳು ನಾಪತ್ತೆಯಾಗಿದ್ದವು.
ಐಪಿಎಲ್ ಬೆಟ್ಟಿಂಗ್‌ನಲ್ಲಿ ಲಕ್ಷ ಲಕ್ಷ ಕಳೆದುಕೊಂಡ ಯುವಕ ಹಾಸ್ಟೆಲ್‌ನಲ್ಲಿ ಆತ್ಮಹತ್ಯೆ
ಕಲಬುರಗಿ: ಐಪಿಎಲ್ ಬೆಟ್ಟಿಂಗ್‌ನಲ್ಲಿ (IPL Betting) ಲಕ್ಷಾಂತರ ರೂಪಾಯಿ ಕಳೆದುಕೊಂಡ ಯುವಕನೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜೇವರ್ಗಿ ಪಟ್ಟಣದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಬಾಲಕರ ವಸತಿ ನಿಲಯದಲ್ಲಿ ನಡೆದಿದೆ. ಸಿದ್ದುಪ್ರಸಾದ ಸಾ.ಬಿರಾಳ ಬಿ (26) ನೇಣಿಗೆ ಶರಣಾದವನು.
ಸಿದ್ದುಪ್ರಸಾದ ಪದವಿ ಮುಗಿದರೂ ತನ್ನ ಸ್ನೇಹಿತರೊಂದಿಗೆ ಹಾಸ್ಟೆಲ್‌ನಲ್ಲಿ ವಾಸವಾಗಿರುತ್ತಿದ್ದ. ಐಪಿಎಲ್ ಕ್ರಿಕೆಟ್ ಅನ್ನು ನೋಡುತ್ತಿದ್ದ ಆತ ಬೆಟ್ಟಿಂಗ್‌ನ ಹಿಂದೆ ಬಿದ್ದಿದ್ದ. ಇದರಲ್ಲಿ ಲಕ್ಷಾಂತರ ರೂಪಾಯಿ ಹಣವನ್ನು ಕಳೆದುಕೊಂಡಿದ್ದ ಎಂದು ತಿಳಿದು ಬಂದಿದೆ. ಬೆಟ್ಟಿಂಗ್‌ನಲ್ಲಿ ಹಣ ಕಳೆದುಕೊಳ್ಳುತ್ತಿದ್ದರೂ ಇವತ್ತಲ್ಲ ನಾಳೆ ಮರಳಿ ಬರುತ್ತದೆ ಎನ್ನುವ ಭರವಸೆಯೊಂದಿಗೆ ಸಾಲ ಮಾಡಿ ತಂದು 5 ಲಕ್ಷ ರೂಪಾಯಿ ಸುರಿದಿದ್ದ. ಈತ ಐಪಿಎಲ್ ಬೆಟ್ಟಿಂಗ್‌ನಲ್ಲಿ ಹಣ ಕಳೆದುಕೊಂಡಿದ್ದರ ಬಗ್ಗೆ ಮನೆಯವರಿಗೆ ತಿಳಿಸಿದ್ದ ಎನ್ನಲಾಗಿದೆ.
ಇದನ್ನೂ ಓದಿ: IPL 2023: ವಡಾ ಪಾವ್ ಎಂದರೆ ರಬಾಡಗೆ ಪಂಚ ಪ್ರಾಣ
ಇತ್ತ ಮನೆಯವರು ಸಿದ್ದುಗೆ ಹೇಗಾದರೂ ಮಾಡಿ ಸಾಲವನ್ನು ತೀರಿಸೋಣ ಎಂದು ಹೇಳಿದ್ದರಂತೆ. ಆದರೆ ಲಕ್ಷ ಕಳೆದುಕೊಂಡ ಸಿದ್ದು ಮನನೊಂದು ಯಾರು ಇಲ್ಲದ ವೇಳೆ ಹಾಸ್ಟೆಲ್‌ನಲ್ಲಿ ನೇಣು ಬಿಗಿದುಕೊಂಡಿದ್ದಾನೆ. ವಿಷಯ ತಿಳಿಯುತ್ತಿದ್ದಂತೆಯೇ ಜೇವರ್ಗಿ ಶಾಸಕ ಡಾ.ಅಜಯ್ ಸಿಂಗ್ ಹಾಗೂ ಪಿಎಸ್ಐ ಶಿವರಾಜ ಪಾಟೀಲ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.