Site icon Vistara News

IPL 2023: ಬೆಂಗಳೂರಲ್ಲಿ ಐಪಿಎಲ್‌ ಮ್ಯಾಚ್‌; ರಾತ್ರಿ 1.30ರವರೆಗೂ ಮೆಟ್ರೋ ಸಂಚಾರ ಸಮಯ ವಿಸ್ತರಣೆ

namma metro

ಬೆಂಗಳೂರು: ದೇಶದಲ್ಲೀಗ ಐಪಿಎಲ್‌ (ಇಂಡಿಯನ್‌ ಪ್ರೀಮಿಯರ್‌ ಲೀಗ್‌) ಫೀವರ್‌ ಶುರುವಾಗಿದ್ದು, ಕ್ರೀಡಾ ಪ್ರೇಮಿಗಳ ಹಾಟ್‌ ಫೇವರಿಟ್‌ ಆಗಿರುವ ಈ ಚುಟುಕು ಪಂದ್ಯದಲ್ಲಿ ಬೆಂಗಳೂರಿಗರು ಸೇರಿದಂತೆ ರಾಜ್ಯದವರಿಗೆ ರಾಯಲ್‌ ಚ್ಯಾಲೆಂಜಸ್‌ ಬೆಂಗಳೂರು (Royal challengers bangalore) ನೆಚ್ಚಿನ ತಂಡವಾಗಿದೆ. ಈಗ ಬೆಂಗಳೂರಲ್ಲಿ ನಡೆಯುವ ಐಪಿಎಲ್‌ ಪಂದ್ಯಾವಳಿ (IPL 2023) ದಿನದಂದು ಮೆಟ್ರೋ ಸಂಚಾರದ (Metro Timings) ಸಮಯವನ್ನು ಬಿಎಂಆರ್‌ಸಿಎಲ್‌ ವಿಸ್ತರಿಸಿದೆ.

ಬೆಂಗಳೂರಲ್ಲಿ ಏಪ್ರಿಲ್ 2, 10, 17, 26 ಹಾಗೂ ಮೇ 21ರಂದು ಐಪಿಎಲ್‌ ಪಂದ್ಯಾವಳಿಯನ್ನು ಆಯೋಜಿಸಲಾಗಿದ್ದು, ರಾತ್ರಿ ಕ್ರಿಕೆಟ್‌ ಪಂದ್ಯಾವಳಿ ನಡೆಯುವ ವೇಳೆ ಬೈಯಪ್ಪನಹಳ್ಳಿ – ಕೆಂಗೇರಿ ಮತ್ತು ನಾಗಸಂದ್ರ – ರೇಷ್ಮೆ ಟರ್ಮಿನಲ್‌ನಿಂದ ಕೊನೆಯ ರೈಲು ಸೇವೆಯು ಮಧ್ಯರಾತ್ರಿ 1 ಗಂಟೆ ಹೊರಡಲಿದ್ದು, ಕೆಂಪೇಗೌಡ ನಿಲ್ದಾಣದಿಂದ 1.30ಕ್ಕೆ ಕೊನೇ ರೈಲು ಓಡಾಡಲಿದೆ. ಇತ್ತ ಹೊಸ ರೈಲು ಮಾರ್ಗವಾದ ವೈಟ್‌ ಫೀಲ್ಡ್‌ ಹಾಗೂ ಕೆ.ಆರ್‌. ಪುರ ನಡುವಿನ ರೈಲು ಸೇವೆಯನ್ನು ವಿಸ್ತರಿಸಲಾಗಿಲ್ಲ.

ಗ್ರಾಹಕರಿಗೆ ಅನುಕೂಲವಾಗಲು 50 ರೂಪಾಯಿ ಪೇಪರ್ ಟಿಕೆಟ್ ಅನ್ನು ಪಂದ್ದ ನಡೆಯುವ ದಿನದಂದು ಮಧ್ಯಾಹ್ನ 3 ಗಂಟೆಗೆ ವಿತರಣೆ ಮಾಡಲಾಗುತ್ತದೆ. ಎಂ.ಜಿ ರಸ್ತೆ, ಕಬ್ಬನ್ ಪಾರ್ಕ್ ನಿಲ್ದಾಣದಿಂದ ಯಾವುದೇ ನಿಲ್ದಾಣಕ್ಕೆ ತಲುಪಬಹುದಾಗಿದೆ. ಪೇಪರ್ ಟಿಕೆಟ್ ಖರೀದಿ ಮಾಡುವವರಿಗೆ ಮಾತ್ರ ಈ ದರ ಅನ್ವಯವಾಗಲಿದ್ದು, ಉಳಿದಂತೆ ಕಾರ್ಡ್ ಹಾಗೂ ಕ್ಯೂಆರ್ ಹೋಲ್ಡರ್‌ಗಳಿಗೆ ಸಾಮಾನ್ಯ ದರ ಇರಲಿದೆ.

ಆರ್​ಸಿಬಿ ತಂಡದ ವೇಗದ ಬೌಲರ್​ ಮೊದಲ ಏಳು ಪಂದ್ಯಗಳಿಗೆ ಅಲಭ್ಯ; ಏನಾಯಿತು ಅವರಿಗೆ?

ಬೆಂಗಳೂರು: ಹೇಗಾದರೂ ಮಾಡಿ ಒಂದು ಕಪ್​ ಗೆಲ್ಲಬೇಕು ಎಂಬ ಹುಮ್ಮಸ್ಸಿನಲ್ಲಿರುವ ಆರ್​ಸಿಬಿ ತಂಡಕ್ಕೆ ಆರಂಭದಲ್ಲೇ ಆಘಾತ ಎದುರಾಗಿದೆ. ತಂಡದ ಪ್ರಧಾನ ವೇಗದ ಬೌಲರ್ ಜೋಶ್​ ಹೇಜಲ್​ವುಡ್​ ಗಾಯದ ಸಮಸ್ಯೆಯಿಂದಾಗಿ ಮೊದಲ ಏಳು ಪಂದ್ಯಗಳಿಗೆ ಅಲಭ್ಯರಾಗಿದ್ದಾರೆ. ಹೀಗಾಗಿ ಏಪ್ರಿಲ್​ 2ರಂದು ನಡೆಯಲಿರುವ ಮುಂಬಯಿ ಇಂಡಿಯನ್ಸ್​ ವಿರುದ್ಧದ ಪಂದ್ಯದಲ್ಲಿ ಅವರು ಪಾಲ್ಗೊಳ್ಳುವುದಿಲ್ಲ ಎಂದು ಆರ್​ಸಿಬಿ ತಂಡದ ಮೂಲಗಳು ತಿಳಿಸಿವೆ.

ಆಸ್ಟ್ರೇಲಿಯಾದ ವೇಗದ ಬೌಲರ್​ ಹೇಜಲ್​ವುಡ್ ಏಪ್ರಿಲ್​​ 14ರಂದು ಆರ್​ಸಿಬಿ ತಂಡವನ್ನು ಸೇರಿಕೊಳ್ಳಲಿದ್ದಾರೆ. ಆದರೆ, ತಕ್ಷಣವೇ ಅವರು ಆಡುವುದಿಲ್ಲ. ಬದಲಾಗಿ, ಒಂದಿಷ್ಟು ದಿನಗಳ ಕಾಲ ವಿಶ್ರಾಂತಿ ಪಡೆದು ಆಟ ಮುಂದುವರಿಸಲಿದ್ದಾರೆ ಎಂದು ಆರ್​ಸಿಬಿ ತಂಡದ ಮ್ಯಾನೇಜ್ಮೆಂಟ್ ಹೇಳಿದೆ. ಇದೇ ವೇಳೆ ಆಸ್ಟ್ರೇಲಿಯಾದವರೇ ಆಗಿರುವ ಗ್ಲೆನ್​ ಮ್ಯಾಕ್ಸ್​ವೆಲ್​ ಕೂಡ ಮೊದಲ ಪಂದ್ಯದಲ್ಲಿ ಆಡುವುದಿಲ್ಲ ಎಂದು ತಂಡದ ಮ್ಯಾನೇಜ್ಮೆಂಟ್​ ಮಾಹಿತಿ ನೀಡಿದೆ.

ದಕ್ಷಿಣ ಆಫ್ರಿಕಾ ತಂಡದ ವಿರುದ್ಧದ ತವರಿನ ಸರಣಿಯ ವೇಳೆ ಹೇಜಲ್​​ವುಡ್​ ಅಸ್ಥಿರಜ್ಜು ಸಮಸ್ಯೆ ಎದುರಿಸಿದ್ದರು. ಹೀಗಾಗಿ ಅಲ್ಲಿಂದ ಬಳಿಕ ಆಸ್ಟ್ರೇಲಿಯಾ ತಂಡದ ಪರವಾಗಿ ಆಡಿರಲಿಲ್ಲ. ಭಾರತ ಪ್ರವಾಸದ ವೇಳೆಯೂ ತಂಡದಲ್ಲಿ ಇರಲಿಲ್ಲ. ಇದೀಗ ಅವರು ನಿಧಾನವಾಗಿ ವಾಸಿಯಾಗಿದ್ದಾರೆ. ಆದರೆ, ಮೈದಾನಕ್ಕೆ ಇಳಿಯವುದಕ್ಕೆ ಸಂಪೂರ್ಣ ಫಿಟ್​ ಎನಿಸಿಕೊಂಡಿಲ್ಲ. ಹೀಗಾಗಿ ಏಪ್ರಿಲ್​ 14ರಂದು ತಂಡ ಸೇರಿಕೊಳ್ಳಲಿದ್ದಾರೆ ಎಂದು ಆರ್​ಸಿಬಿ ಮ್ಯಾನೇಜ್ಮೆಂಟ್ ಹೇಳಿದ್ದಾರೆ.

ಆರ್​ಸಿಬಿ ಕಪ್​ ಗೆಲ್ಲಲಿದೆ

ಬೆಂಗಳೂರು: ಆರ್​ಸಿಬಿಯ ಕಳೆದ 15 ವರ್ಷಗಳ ಐಪಿಎಲ್​ ಟ್ರೋಫಿಯ ಕನಸು ಈ ಬಾರಿ ನನಸಾಗಲಿದೆ ಎಂದು ಟೀಮ್​ ಇಂಡಿಯಾದ ಮಾಜಿ ಆಟಗಾರ ಸಂಜಯ್​ ಮಾಂಜ್ರೇಕರ್‌ (sanjay manjrekar) ಭವಿಷ್ಯ ನುಡಿದಿದ್ದಾರೆ. ಆರ್​ಸಿಬಿ ತಂಡವನ್ನು ಈ ಸಲ ವಿರಾಟ್​ ಕೊಹ್ಲಿ ಚಾಂಪಿಯನ್​ ಮಾಡುವುದು ಖಚಿತ ಎಂದು ಅವರು ಹೇಳಿದ್ದಾರೆ.

ಆರ್‌ಸಿಬಿ ತಂಡ ಐಪಿಎಲ್‌ 2023 ಟೂರ್ನಿಗೆ ಸಮರ್ಥ ತಂಡವನ್ನು ಹೊಂದಿದೆ. ಅದರಲ್ಲೂ ವಿರಾಟ್ ಕೊಹ್ಲಿ ಉತ್ತಮ ಬ್ಯಾಟಿಂಗ್​ ಫಾರ್ಮ್​ನಲ್ಲಿದ್ದಾರೆ. ಕಳೆದ ಬಾರಿ ಕೊಹ್ಲಿ ಅವರು ಬ್ಯಾಟಿಂಗ್​ ಫಾರ್ಮ್​ನಲ್ಲಿ ಇರದಿರುವುದು ತಂಡಕ್ಕೆ ದೊಡ್ಡ ಹಿನ್ನಡೆಯಾಗಿತ್ತು. ಆದರೆ, ಈ ಬಾರಿ ಅವರು ಉತ್ತಮ ಪ್ರದರ್ಶನ ತೋರಲಿದ್ದಾರೆ. ಅವರ ಈ ಬ್ಯಾಟಿಂಗ್​ ಪ್ರದರ್ಶನ ತಂಡವನ್ನು ಚಾಂಪಿಯನ್​ ಮಾಡಲಿದೆ ಎಂದು ಸಂಜಯ್​ ಮಾಂಜ್ರೇಕರ್‌ ವಿಶ್ವಾಸ ವ್ಯಕ್ತಪಡಿಸಿದರು.

ಇದನ್ನೂ ಓದಿ: IPL 2023: ಐಪಿಎಲ್​ ಉದ್ಘಾಟನಾ ಸಮಾರಂಭದಲ್ಲಿ ಕಂಗೊಳಿಸಲಿದೆ ವಿಶೇಷ ಡ್ರೋನ್​​ ಶೋ

2019ರ ಬಳಿಕ ಮೂರು ವರ್ಷಗಳ ಕಾಲ ಹೀನಾಯ ಬ್ಯಾಟಿಂಗ್‌ ಪ್ರದರ್ಶನ ನೀಡಿದ್ದ ವಿರಾಟ್‌ ಕೊಹ್ಲಿ, ಕಳೆದ 10 ತಿಂಗಳಲ್ಲಿ ಎಲ್ಲ ಮಾದರಿಯ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಶತಕ ಬಾರಿಸಿ ತಮ್ಮ ಶ್ರೇಷ್ಠ ಲಯ ಕಂಡುಕೊಂಡಿದ್ದಾರೆ. ಟೆಸ್ಟ್‌ ಕ್ರಿಕೆಟ್, ಏಕದಿನ ಕ್ರಿಕೆಟ್‌ ಮತ್ತು ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಅಬ್ಬರಿಸಿರುವ ಕೊಹ್ಲಿ, 16ನೇ ಆವೃತ್ತಿಯ ಐಪಿಎಲ್​ನಲ್ಲಿಯೂ ಗರ್ಜಿಸುವ ಮೂಲಕ ಹಲವು ದಾಖಲೆಗಳನ್ನು ತಮ್ಮ ಹೆಸರಿಗೆ ಬರೆಯಲು ಕಾತರಗೊಂಡಿದ್ದಾರೆ.

Exit mobile version