Site icon Vistara News

IPL 2023: ಆರ್‌ಸಿಬಿ ಪಂದ್ಯದ ವೇಳೆ ಚಿನ್ನಸ್ವಾಮಿ ಸ್ಟೇಡಿಯಂನಲ್ಲೂ ಮೋದಿ ಹವಾ; ಇಲ್ಲಿದೆ ವಿಡಿಯೊ

IPL 2023: Narendra Modi wave in Chinnaswamy Stadium during RCB Match

IPL 2023: Narendra Modi wave in Chinnaswamy Stadium during RCB Match

ಬೆಂಗಳೂರು: ರಾಜಸ್ಥಾನ್‌ ರಾಯಲ್ಸ್‌ ವಿರುದ್ಧ ನಡೆದ ಪಂದ್ಯದಲ್ಲಿ ರಾಯಲ್ಸ್‌ ಚಾಲೆಂಜರ್ಸ್‌ ಬೆಂಗಳೂರು (RCB) ತಂಡವು ಗೆಲುವು ಸಾಧಿಸಿದೆ. ಗೆಲುವಿನ ಹಿನ್ನೆಲೆಯಲ್ಲಿ ಸ್ಟೇಡಿಯಂ ತುಂಬ ಆರ್‌ಸಿಬಿ ಅಭಿಮಾನಿಗಳು ಸಂತಸ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲ, ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಪಂದ್ಯದ ವೇಳೆಯೂ ಮೋದಿ ಅಲೆ ಕಂಡು ಬಂದಿದೆ. ಆರ್‌ಸಿಬಿ ಅಭಿಮಾನಿಗಳು ಮೋದಿ ಎಂದು ಬರೆದಿರುವ ಟಿ-ಶರ್ಟ್‌ಗಳನ್ನು ಧರಿಸಿ ಪಂದ್ಯ ವೀಕ್ಷಿಸಿದ್ದಾರೆ. ಇವರ ಟಿ-ಶರ್ಟ್‌ ಮೇಲೆ ಮೋದಿ ಎಂದು ಬರೆದುಕೊಂಡು, ಅಭಿಮಾನ ಪ್ರದರ್ಶಿಸಿದ ವಿಡಿಯೊ ಈಗ ವೈರಲ್‌ ಆಗಿದೆ.

ಇಲ್ಲಿದೆ ವಿಡಿಯೊ

ಅಷ್ಟೇ ಅಲ್ಲ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೆಸರೂ ಬರೆದುಕೊಂಡಿರುವ ವಿಡಿಯೊ ಕೂಡ ಲಭ್ಯವಾಗಿದೆ. ಯುವಕರು ಟಿ-ಶರ್ಟ್‌ಗಳ ಮೇಲೆ ಬೊಮ್ಮಾಯಿ ಎಂದು ಬರೆದುಕೊಂಡು ಅಭಿಮಾನ ತೋರಿದ್ದಾರೆ. ಇನ್ನು ಮೋದಿ ಹಾಗೂ ಬೊಮ್ಮಾಯಿ ಅವರ ಭಾವಚಿತ್ರ ಇರುವ ಟಿ-ಶರ್ಟ್‌ಗಳನ್ನೂ ಧರಿಸಿ ಒಂದಷ್ಟು ಯುವಕರು ಕ್ರೀಡಾಂಗಣಕ್ಕೆ ಆಗಮಿಸಿದ್ದರು.

ಅಭಿಮಾನಿಗಳ ಟಿ-ಶರ್ಟ್‌ ಮೇಲೆ ಮೋದಿ-ಬೊಮ್ಮಾಯಿ ಭಾವಚಿತ್ರಗಳು.

ಇದನ್ನೂ ಓದಿ: IPL 2023: ರಾಯಲ್ಸ್​ ಚಾಲೆಂಜ್​ ಗೆದ್ದ ಆರ್​ಸಿಬಿ

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಆರ್‌ಸಿಬಿಯು ರಾಜಸ್ಥಾನ್‌ ರಾಯಲ್ಸ್‌ ವಿರುದ್ಧ ಏಳು ರನ್‌ಗಳ ಗೆಲುವು ಸಾಧಿಸಿದೆ. ಮೊದಲು ಬ್ಯಾಟ್‌ ಮಾಡಿದ ಆರ್‌ಸಿಬಿ, ನಿಗದಿತ 20 ಓವರ್‌ಗಳಲ್ಲಿ 9 ವಿಕೆಟ್‌ ಕಳೆದುಕೊಂಡು 189 ರನ್‌ ಗಳಿಸಿತು. ಸ್ಪರ್ಧಾತ್ಮಕ ಮೊತ್ತವನ್ನು ಬೆನ್ನತ್ತಿದ ಆರ್‌ಆರ್‌, 20 ಓವರ್‌ಗಳಲ್ಲಿ 6 ವಿಕೆಟ್‌ ಕಳೆದುಕೊಂಡು 182 ರನ್‌ಗಳನ್ನಷ್ಟೇ ಗಳಿಸಲು ಶಕ್ತವಾಯಿತು.

Exit mobile version