Site icon Vistara News

Janardana Reddy | ಮಗಳು ಬ್ರಹ್ಮಣಿಯನ್ನು ರಾಜಕೀಯಕ್ಕೆ ಕರೆ ತರುತ್ತಾರಾ ಗಾಲಿ ಜನಾರ್ದನ ರೆಡ್ಡಿ?

Brahmani reddy

ರಾಯಚೂರು: ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಸ್ಥಾಪನೆಯ ಮೂಲಕ ರಾಜಕೀಯದಲ್ಲಿ ಎರಡನೇ ಇನಿಂಗ್ಸ್‌ ಶುರು ಮಾಡಿರುವ ಗಾಲಿ ಜನಾರ್ದನ ರೆಡ್ಡಿ (Janardana Reddy) ಅವರು ತಮ್ಮ ಮಗಳು ಬ್ರಹ್ಮಣಿಯನ್ನು ರಾಜಕೀಯಕ್ಕೆ ಕರೆದು ತರುತ್ತಾರಾ? ಈ ರೀತಿ ಸಂಶಯ ಮೂಡಿಸುವ ಒಂದು ಮಾತನ್ನು ರೆಡ್ಡಿ ಅವರು ಶುಕ್ರವಾರ ಆಡಿದ್ದಾರೆ.

ಭತ್ತದ ನಾಡಾದ ರಾಯಚೂರಿನಲ್ಲಿ ಪೊಲಿಟಿಕಲ್‌ ರೌಂಡ್ಸ್‌ ಹಾಕಿದ ಅವರು ಸಿಂಧನೂರಿನಲ್ಲಿ ನಡೆದ ರೋಡ್‌ ಶೋ ಮತ್ತು ಬೃಹತ್‌ ಸಮಾವೇಶದಲ್ಲಿ ಬಿಜೆಪಿ, ಕಾಂಗ್ರೆಸ್‌ ಮತ್ತು ಜೆಡಿಎಸ್‌ನ ಹಲವು ನಾಯಕರು ಹಾಗೂ ಕಾರ್ಯಕರ್ತರನ್ನು ಪಕ್ಷಕ್ಕೆ ಸೇರಿಸಿಕೊಂಡಿದ್ದಾರೆ.

ಪಿಡಬ್ಲ್ಯುಡಿ ಕ್ಯಾಂಪ್ ಮೂಲಕ‌ ರೋಡ್ ಶೋ ನಡೆಸಿದ ಗಾಲಿ ಜನಾರ್ಧನ ರೆಡ್ಡಿಗೆ ನೂರಾರು ಕಾರ್ಯಕರ್ತರು ಬೆಂಬಲ ನೀಡಿದರಯ. ತನ್ನ ಕಾರಿನಲ್ಲಿ ರೋಡ್ ಶೋ ನಡೆಸಿದ ಗಣಿ ದಣಿ ದಾರಿಯುದ್ದಕ್ಕೂ ಬರುವ ದೇವಸ್ಥಾನ, ಮಸೀದಿ ಗಳಿಗೆ ಭೇಟಿ ನೀಡಿದರು. ಮೊದಲ ಬಾರಿಗೆ ಸಿಂಧನೂರಿಗೆ ‌ಆಗಮಿಸಿದ ಜನಾರ್ಧನ ರೆಡ್ಡಿಗೆ ಅದ್ದೂರಿ ಸ್ವಾ
ಗತ ಸಿಕ್ಕಿದೆ. ಸುಮಾರು 5 ಕ್ವಿಂಟಾಲ್ ತೂಕದ ಬೃಹತ್ ಸೇಬಿನ ಹಾರ ಹಾಕಿ ಮಹಾತ್ಮ ಗಾಂಧಿ ಸರ್ಕಲ್ ‌ನಲ್ಲಿ ಸ್ವಾಗತ ಕೋರಲಾಯಿತು. ಬಳಿಕ ಸ್ತ್ರೀ ಶಕ್ತಿ ಭವನದಲ್ಲಿ ಕಾರ್ಯಕರ್ತರ ಜೊತೆ ಸಭೆ ನಡೆಸಿದ ಜನಾರ್ಧನ ರೆಡ್ಡಿ ನೂರಾರು ಕಾರ್ಯಕರ್ತರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡರು.

ನಾನು ಯಾವಾಗಲೂ ಒಬ್ಬಂಟಿ ಎಂದ ರೆಡ್ಡಿ
ಕಾರ್ಯಕರ್ತರ ಸಭೆಯಲ್ಲಿ ಅಸಲಿ ರಾಜಕೀಯ ಶುರು‌‌ ಮಾಡಿದ ರೆಡ್ಡಿ, ವಿರೋಧಿಗಳ ವಿರುದ್ಧ ಕಿಡಿ ಕಾರಿದರು. ʻʻನಾನು ಯಾವಾಗಲೂ ಒಬ್ಬಂಟಿ, ಅದಕ್ಕಾಗಿ ಒಬ್ಬಂಟಿಯಾಗಿ‌ ಮತ್ತೆ ರಾಜಕೀಯಕ್ಕೆ ಬಂದೆ. ದಕ್ಷಿಣ ಭಾರತದಲ್ಲಿ ಭಾರತೀಯ ಜನತಾ ಪಕ್ಷವನ್ನ ಅಧಿಕಾರಕ್ಕೆ ತಂದಿದ್ದು ಇದೇ ಜನಾರ್ಧನ ರೆಡ್ಡಿ. 12 ವರ್ಷಗಳ ಕಾಲ ಮನೆಯಲ್ಲೆ ಉಳಿದಿದ್ದೆ. 2018 ರಲ್ಲೇ ಹೊಸ ಪಕ್ಷ ಮಾಡಬೇಕಿತ್ತು. ಯಡಿಯೂರಪ್ಪ ಅವರನ್ನು ಸಿಎಂ ಅಭ್ಯರ್ಥಿ ಅಂತ ಘೋಷಿಸಲಾಗಿತ್ತು.
ಆಗ ಬಿಎಸ್ ವೈ ಅವರು ಸಿಎಂ ಆಗುವುದನ್ನು ತಪ್ಪಿಸುವುದು ಬೇಡ. ಆ ಆಪಾದನೆ ನನಗೆ ಬರುತ್ತದೆ ಎಂದು ಸುಮ್ಮನಾದೆʼʼ ಎಂದು ತನ್ನ ಕಥೆ ಹೇಳಿಕೊಂಡರು.

ʻʻಧನುರ್ಮಾಸದ ಬಳಿಕ ಜನವರಿ 16 ರ ನಂತರ ಅಭ್ಯರ್ಥಿ ಘೋಷಣೆ ಮಾಡುತ್ತೇನೆ. ನಮ್ಮೆಲ್ಲರ ಶ್ರಮದಿಂದ ಬೆಂಗಳೂರು ಅಭಿವೃದ್ಧಿ ಆಗಿದೆ. ಹೀಗಾಗಿ ಹೆಚ್ಚಿನ ಸೀಟು ಗೆಲ್ಲಿಸಿದ್ರೆ, ಅಧಿಕಾರ ನಮ್ಮ ಕೈಯಲ್ಲಿರುತ್ತೆ. ಸಿಂಧನೂರನ್ನು ಫಾರಿನ್ ರೀತಿ ಅಭಿವೃದ್ಧಿ ಮಾಡುತ್ತೇನೆʼʼ ಎಂದ ಅವರು, ನಮ್ಮ ಪಕ್ಷ ಕೇವಲ ಕಲ್ಯಾಣ ಕರ್ನಾಟಕ್ಕೆ ಸೀಮಿತವಾಗಿಲ್ಲ. ಚಾಮರಾಜನಗರ ಸೇರಿ 18-20 ಜಿಲ್ಲೆಗಳು ಹಿಂದುಳಿದಿವೆ. ಎಲ್ಲವನ್ನೂ ಅಭಿವೃದ್ಧಿ ಮಾಡುತ್ತೇವೆʼʼ ಎಂದರು.

ಮಗಳ ರಾಜಕೀಯ ಎಂಟ್ರಿ ಬಗ್ಗೆ ಜನಾರ್ದನ ರೆಡ್ಡಿ ಹೇಳಿದ್ದೇನು?
ಅವರಿವರು, ಗೆಳೆಯರನ್ನು ನಂಬಿ ರಾಜಕೀಯ ಮಾಡುತ್ತಿದ್ದ ಜನಾರ್ದನ ರೆಡ್ಡಿ ಈ ಬಾರಿ ತಮ್ಮ ಕುಟುಂಬ ವರ್ಗವನ್ನೇ ರಾಜಕೀಯಕ್ಕೆ ತರಲು ಮುಂದಾಗಿದ್ದಾರೆ. ಈಗಾಗಲೇ ರೆಡ್ಡಿ ಅವರ ಪತ್ನಿ ಅರುಣಾ ಲಕ್ಷ್ಮಿ ಅವರು ರೆಡ್ಡಿ ಅವರ ಹೆಗಲೆಣೆಯಾಗಿ ನಿಂತಿದ್ದಾರೆ. ರೆಡ್ಡಿ ಅವರಿಲ್ಲದಿದ್ದರೂ ಸ್ವತಂತ್ರವಾಗಿ ರಾಜಕೀಯ ನಿಭಾಯಿಸಬಲ್ಲಷ್ಟು ಸಾಮರ್ಥ್ಯ ಪ್ರದರ್ಶಿಸಿದ್ದಾರೆ.
ಈ ನಡುವೆ ರೆಡ್ಡಿ ತಮ್ಮ ಮಗಳು ಬ್ರಹ್ಮಣಿ ರೆಡ್ಡಿಯನ್ನು ರಾಜಕೀಯಕ್ಕೆ ಕರೆ ತರುವ ಮಾತು ಆಡಿದ್ದಾರೆ. ನನ್ನ ಮಗಳು ಬ್ರಹ್ಮಣಿ ಸಿಂಧನೂರಿಗೆ ಬರಬೇಕಿತ್ತು. ಆದರೆ ಬಳ್ಳಾರಿಗೆ ಬಂದು ಪ್ರಚಾರದ
ಕಾರ್ಯದಲ್ಲಿ ತೊಡಗಲಿದ್ದಾಳೆ. ಅವಳು ಒಳ್ಳೆಯ ರೀತಿಯಲ್ಲಿ ಸಿದ್ಧಳಾಗಿ ನನ್ನ ಜತೆ ಬರುತ್ತಿದ್ದಾಳೆ ಎಂದು ಜನಾರ್ದನ ರೆಡ್ಡಿ ಹೇಳಿದರು. ಈ ನಡುವೆ ಪುತ್ರ ಕೀರ್ತಿ ರೆಡ್ಡಿಯ ಸಿನಿಮಾದ ಬಗ್ಗೆ ಮಾತನಾಡಿರುವ ಅವರು ಚುನಾವಣೆಯ ಸಂದರ್ಭದಲ್ಲಿ ಸಿನಿಮಾ ರಿಲೀಸ್‌ ಮಾಡಲ್ಲ ಎಂದರು. ಮಗನ ಸಿನಿಮಾ ಮುಂದಿಟ್ಟು ರಾಜಕೀಯ ಮಾಡಬೇಕಾದ ಅವಶ್ಯಕತೆ ತನಗಿಲ್ಲ ಎಂದರು ರೆಡ್ಡಿ.

ಏನು ಮಾಡುತ್ತಿದ್ದಾರೆ ಬ್ರಹ್ಮಣಿ ರೆಡ್ಡಿ?
ಬ್ರಹ್ಮಣಿ ರೆಡ್ಡಿ ಅವರಿಗೆ ೨೦೧೬ರಲ್ಲಿ ಮದುವೆಯಾಗಿದ್ದು, ಇಬ್ಬರು ಮಕ್ಕಳನ್ನು ಹೊಂದಿದ್ದಾರೆ. ಇತ್ತೀಚೆಗಷ್ಟೇ ಎರಡನೇ ಮಗುವಿನ ನಾಮಕರಣ ಜೈಪುರದಲ್ಲಿ ಅದ್ದೂರಿಯಾಗಿ ನಡೆದಿತ್ತು.

ಇದನ್ನೂ ಓದಿ | Karnataka Election : ರಾಯಚೂರಿನಲ್ಲಿ ಬೈಕ್‌ ರ‍್ಯಾಲಿ ನಡೆಸಿ ಬಲ ಪ್ರದರ್ಶಿಸಿದ ಕೆಆರ್‌ಪಿ ಸಂಸ್ಥಾಪಕ ಜನಾರ್ದನ ರೆಡ್ಡಿ

Exit mobile version