ಮಂಗಳೂರು: ಹಮಾಸ್ ಉಗ್ರರ (Hamas Terrorists) ಅಟ್ಟಹಾಸವನ್ನು ಸಮರ್ಥಿಸಿಕೊಂಡು, ಅದನ್ನು ಬೆಂಬಲಿಸಿ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹರಿಬಿಟ್ಟಿದ್ದ ಮಂಗಳೂರಿನ ಝಾಕಿರ್‌ನನ್ನು ಬಂದರು ಪೊಲೀಸರು (Israel palestine war) ಬಂಧಿಸಿದ್ದಾರೆ. ಕೋಮು ಸೌಹಾರ್ದಕ್ಕೆ ಧಕ್ಕೆ ತಂದ ಹಿನ್ನೆಲೆಯಲ್ಲಿ ಐಪಿಸಿ ಸೆಕ್ಷನ್ 153a ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಪೊಲೀಸರು ಬಂಧಿಸಿದ್ದಾರೆ.
ಏನಿದು ಘಟನೆ?
ಇಸ್ರೇಲ್-ಪ್ಯಾಲೆಸ್ತೀನ್ ಕದನದಲ್ಲಿ (Israel palestine war) ಸಾವಿರಾರು ಮಂದಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಅಮಾಯಕರ ಪ್ರಾಣಹರಣವಾಗುತ್ತಿದೆ. ಈ ಪರಿಸ್ಥಿತಿಗೆ ಮೂಲ ಕಾರಣವಾದ, ಕ್ರೌರ್ಯದಿಂದಲೇ ಗಮನ ಸೆಳೆಯುತ್ತಿರುವ ಹಮಾಸ್ ಉಗ್ರರಿಗೆ (Hamas Terrorists) ಮಂಗಳೂರಿನ ವ್ಯಕ್ತಿಯೊಬ್ಬ (Mangalore Man supports Hamas terrorists) ಬಹಿರಂಗ ಬೆಂಬಲ ನೀಡಿದ್ದರಿಂದ ಭಾರಿ ವಿವಾದಕ್ಕೆ ಕಾರಣವಾಗಿತ್ತು.
ಭಾರತದಲ್ಲಿ ಇಸ್ರೇಲ್‌ನ್ನು ಬೆಂಬಲಿಸಬೇಕೋ, ಪ್ಯಾಲೆಸ್ತೀನ್‌ಗೆ ಬೆಂಬಲ ನೀಡಬೇಕೋ ಎನ್ನುವ ವಿಚಾರದಲ್ಲಿ ಗೊಂದಲವಿದೆ. ಆದರೆ, ಹಮಾಸ್ ನಡೆಸುತ್ತಿರುವ ಕ್ರೌರ್ಯವನ್ನು ಯಾರೂ ಒಪ್ಪುವುದಿಲ್ಲ. ಅದರಲ್ಲೂ ಅಮಾಯಕ ಮಕ್ಕಳನ್ನು ಬರ್ಬರವಾಗಿ ಕೊಲೆ ಮಾಡಿದ ಘಟನೆಯನ್ನು ಎಲ್ಲೆಡೆ ಖಂಡಿಸಲಾಗುತ್ತದೆ. ಅಂಥ ಕ್ರೌರ್ಯ ಮೆರೆದ ಹಮಾಸ್ ಉಗ್ರರನ್ನು ಮಂಗಳೂರಿನ ತಾಲಿಬಾನ್ ಝಾಕಿರ್ ಬೆಂಬಲಿಸಿ ವಿಡಿಯೊ ಮಾಡಿದ್ದ. ತಾನೇ ಸ್ವತಃ ಹಮಾಸ್ ಉಗ್ರನಂತೆ ಕಾಣುವ ಮಂಗಳೂರಿನ ಬಂದರು ಪ್ರದೇಶದ ಝಾಕಿರ್ ಎಂಬಾತ ವಿಡಿಯೊ ಮೂಲಕ ತನ್ನ ಬೆಂಬಲವನ್ನು ಸಾರಿದ್ದ. ಝಾಕಿರ್ “ಹಮಾಸ್ ಉಗ್ರರರನ್ನು ದೇಶ ಪ್ರೇಮಿಗಳು” ಎಂದು ಕರೆದಿದ್ದ.
ಇದನ್ನೂ ಓದಿ: ಇಸ್ರೇಲ್‌ನಲ್ಲಿ ಉಗ್ರರ ಅಟ್ಟಹಾಸ, ಮನೆಗೆ ನುಗ್ಗಿ ಮಕ್ಕಳು, ಮಹಿಳೆಯರ ಹತ್ಯೆ; ವಿಡಿಯೊ ವೈರಲ್
ಹಮಾಸ್ ದೇಶಪ್ರೇಮಿಗಳು ಜಯ ಸಿಗಲಿ!
ʻʻಪ್ಯಾಲೆಸ್ತೀನ್, ಗಾಝಾ ಹಾಗೂ ಹಮಾಸ್ ದೇಶಪ್ರೇಮಿ ಯೋಧರಿಗೆ ಜಯ ಸಿಗಲಿ. ಹಮಾಸಿಗರು ದೇಶ ಪ್ರೇಮಿ ಯೋಧರು. ವಿಶ್ವ ಕಬರಸ್ಥಾನ್ ಸಂಘದ ಸದಸ್ಯರು ಪ್ರತ್ಯೇಕ ಪ್ರಾರ್ಥನೆ ಸಲ್ಲಿಸಬೇಕುʼʼ ಎಂದು ಹೇಳಿರುವ ಝಾಕಿರ್ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈತನ ವಿರುದ್ಧ ತೀವ್ರ ಆಕ್ರೋಶವು ವ್ಯಕ್ತವಾಗಿತ್ತು.
ತಾಲಿಬಾನ್ ಮಾದರಿಯಲ್ಲಿ ಗಡ್ಡ ಬೆಳೆಸಿಕೊಂಡಿರುವ ಆತ ಇದೀಗ ಬಹಿರಂಗವಾಗಿ ಈ ರೀತಿ ಮಾತನಾಡಿರುವುದು ಆತನಿಗೆ ಕಾನೂನಿನ ಹೆದರಿಕೆಯೇ ಇಲ್ಲವೇ ಎಂಬ ಪ್ರಶ್ನೆಗೆ ಕಾರಣವಾಗಿತ್ತು. ಆತನ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು, ಬಂಧಿಸಬೇಕು, ಇನ್ನು ಇಂಥ ಹೇಳಿಕೆ ನೀಡದಂತೆ ಮಾಡಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದರು.
ಸ್ವಯಂ ದೂರು ದಾಖಲಿಸಿಕೊಂಡ ಪೊಲೀಸರು
ಮಂಗಳೂರಿನ ಬಂದರು ಪ್ರದೇಶದಲ್ಲಿ ತಾಲಿಬಾನ್ ಎಂದೇ ಗುರುತಿಸಲ್ಪಡುವ ಝಾಕಿರ್ ಈ ಹಿಂದೆಯೂ ಹಲವು ಬಾರಿ ಇಂಥ ಮಾನವ ವಿರೋಧಿ, ದೇಶ ವಿರೋಧಿ ಹೇಳಿಕೆಯನ್ನು ನೀಡಿದ್ದ. ಈಗಾಗಲೇ ಈತನ ಮೇಲೆ 1989 ರಿಂದ 2006 ರ ವರೆಗೆ 8 ಪ್ರಕರಣಗಳು ದಾಖಲಾಗಿವೆ. ವಿಡಿಯೊ ವೈರಲ್ ಆಗುತ್ತಿದ್ದಂತೆ ಬಂದರು ಪೊಲೀಸರು ಸ್ವಯಂ ಪ್ರೇರಿತ ಕೇಸ್ ದಾಖಲು ಮಾಡಿಕೊಂಡಿದ್ದರು. ಇದೀಗ ಆತನನ್ನು ವಶಕ್ಕೆ ಪಡೆದುಕೊಂಡು ತನಿಖೆಯನ್ನು ನಡೆಸುತ್ತಿದ್ದಾರೆ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ