ಬೆಂಗಳೂರು: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO)ಯು ಮೊದಲ ಬಾರಿಗೆ ವಾಣಿಜ್ಯಿಕ ಉಡಾವಣೆ ಮಾಡಲು ಸಕಲ ರೀತಿಯಲ್ಲಿ ಸಜ್ಜಾಗಿದೆ. ಬ್ರಿಟನ್‌ನ ಒನ್‌ವೆಬ್ (OneWeb) ಕಂಪನಿಯ ೩೬ ಉಪಗ್ರಹಗಳನ್ನು ಇಸ್ರೊ ಉಡಾವಣೆ ಮಾಡಲಿದೆ. ಇದರಿಂದ ಇಸ್ರೊ ಜಾಗತಿಕವಾಗಿ ವಾಣಿಜ್ಯಿಕ ಉಡಾವಣೆ ಮಾರುಕಟ್ಟೆಗೆ ಪ್ರವೇಶಿಸಿದಂತೆ ಆಗಲಿದೆ.
ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಅಕ್ಟೋಬರ್ ೨೩ರ ಮಧ್ಯರಾತ್ರಿ ೧೨.೦೭ಕ್ಕೆ ೩೬ ಉಡಾವಣೆಗಳನ್ನು ಹೊತ್ತು ಎಲ್‌ವಿಎಂ-೩ (LVM-3) ರಾಕೆಟ್ ನಭಕ್ಕೆ ಹಾರಲಿದೆ. ಎಲ್ಲ ಉಪಗ್ರಹಗಳು ಲೋ ಅರ್ತ್ ಆರ್ಬಿಟ್ ಸೇರಲಿವೆ. ವಾಣಿಜ್ಯಿಕ ಉಡಾವಣೆಗಾಗಿ ಬ್ರಿಟನ್‌ನ ಒನ್‌ವೆಬ್ ಹಾಗೂ ಭಾರತದ ನ್ಯೂ ಸ್ಪೇಸ್ ಇಂಡಿಯಾ ಲಿಮಿಟೆಡ್ (NSIL) ಮಧ್ಯೆ ಒಪ್ಪಂದ ಮಾಡಿಕೊಳ್ಳಲಾಗಿದೆ.
“ಉಪಗ್ರಹಗಳ ಉಡಾವಣೆಗಾಗಿ ಎಲ್‌ವಿಎಂ-೩ ರಾಕೆಟ್‌ಅನ್ನು ಸಕಲ ರೀತಿಯಲ್ಲಿ ಸನ್ನದ್ಧುಗೊಳಿಸಲಾಗಿದೆ. ಸದ್ಯ, ಕೊನೆಯ ಹಂತದ ಸಿದ್ಧತೆ ಹಾಗೂ ತಪಾಸಣೆ ನಡೆಯುತ್ತಿದೆ. ವಾಣಿಜ್ಯಿಕ ಉಡಾವಣೆ ದೃಷ್ಟಿಯಿಂದ ಒನ್‌ವೆಬ್ ಹಾಗೂ ಎನ್‌ಎಸ್‌ಐಎಲ್ ನಡುವಿನ ಒಪ್ಪಂದವು ಮೈಲುಗಲ್ಲಾಗಿದೆ” ಎಂದು ಇಸ್ರೊ ಮಾಹಿತಿ ನೀಡಿದೆ. ಒನ್‌ವೆಬ್ ಕಂಪನಿಯಲ್ಲಿ ಭಾರತದ ಭಾರ್ತಿ ಇಂಡಸ್ಟ್ರೀಸ್‌ನ ಹೂಡಿಕೆ ಇದೆ. ಎಲ್‌ವಿಎಂ-೩ ರಾಕೆಟ್ ಇಸ್ರೊದ ಅತಿ ಭಾರದ ರಾಕೆಟ್‌ಗಳಲ್ಲಿ ಒಂದಾಗಿದೆ.
ಇದನ್ನೂ ಓದಿ | Smart Limb | ವಿಶೇಷ ಚೇತನರ ನಡೆಯುವ ಕನಸಿಗೆ ಇಸ್ರೊ ಸ್ಮಾರ್ಟ್ ಕಾಲು, ನಡಿಗೆ ಶೈಲಿಗೆ ತಕ್ಕಂತೆ ಕಾರ್ಯ!