ಬೆಂಗಳೂರು: ಕಾಲುಗಳಿಲ್ಲದ ವಿಶೇಷ ಚೇತನರು ಕೃತಕ ಕಾಲುಗಳನ್ನು ಅಳವಡಿಸಿಕೊಂಡು ನಡೆಯಬಹುದಾದರೂ, ಅವುಗಳು ವಿಶೇಷ ಚೇತನರ ನಡಿಗೆಗೆ ತಕ್ಕಂತೆ ಇರುವುದಿಲ್ಲ. ಅವರಿಗೆ “ಕಂಫರ್ಟ್” ಎನಿಸುವುದಿಲ್ಲ. ಆದರೆ, ಇಂತಹ ಸಮಸ್ಯೆಯನ್ನು ಬಗೆಹರಿಸುವ ದಿಸೆಯಲ್ಲಿ ಭಾರತದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO), ವಿಶೇಷ ಚೇತನರಿಗಾಗಿ ಅತ್ಯಾಧುನಿಕ ಹಾಗೂ ಎಲ್ಲ ರೀತಿಯಲ್ಲಿಯೂ ಅನುಕೂಲವಾಗುವ ಕೃತಕ ಕಾಲುಗಳನ್ನು (Smart Limb) ವಿಶೇಷ ಚೇತನರ ನಡೆಯುವ ಕನಸಿಗೆ ಇಸ್ರೊ ʼಸ್ಮಾರ್ಟ್ ಕೃತಕ ಕಾಲುʼ, ನಡಿಗೆ ಶೈಲಿಗೆ ತಕ್ಕಂತೆ ಕಾರ್ಯ!ಅಭಿವೃದ್ಧಿಪಡಿಸಿದೆ.
ಮೈಕ್ರೊಪ್ರೊಸೆಸರ್ ನಿಯಂತ್ರಿತ ಕೃತಕ ಕಾಲು ತಯಾರಿಸಲಾಗಿದ್ದು, ವ್ಯಕ್ತಿಯ ನಡಿಗೆ, ಅವರಿಗೆ ಕಂಫರ್ಟ್ ಎನಿಸುವ ರೀತಿಯಲ್ಲಿ ಬಳಸಬಹುದಾಗಿದೆ. ಹಾಗೆಯೇ, ಹೆಚ್ಚು ಸಮಯ ನಡೆದರೂ ನೋವಾಗದ, ಯಾವುದೇ ರೀತಿಯ ಸಮಸ್ಯೆ ಎನಿಸದ ರೀತಿಯಲ್ಲಿಯೂ ಇವುಗಳನ್ನು ಅಭಿವೃದ್ಧಿಪಡಿಸಲಾಗಿದೆ.
ಜಂಟಿ ಸಹಯೋಗದಲ್ಲಿ ಅಭಿವೃದ್ಧಿ
ವಿಶೇಷ ಚೇತನರ ಅನುಕೂಲಕ್ಕಾಗಿ ಇಸ್ರೊ, ವಿಕ್ರಮ್ ಸಾರಾಭಾಯಿ ಬಾಹ್ಯಾಕಾಶ ಕೇಂದ್ರ (ವಿಎಸ್‌ಎಸ್‌ಸಿ)ಯು ನ್ಯಾಷನಲ್ ಇನ್‌ಸ್ಟಿಟ್ಯೂಟ್ ಫಾರ್ ಲೋಕೊಮೋಟರ್ ಡಿಸೇಬಿಲಿಟೀಸ್ (ಎನ್‌ಐಎಲ್‌ಡಿ), ದೀನದಯಾಳ್ ಉಪಾಧ್ಯಾಯ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಫಾರ್ ಪರ್ಸನ್ಸ್ ವಿತ್ ಫಿಸಿಜಕ್ ಡಿಸೇಬಿಲಿಟೀಸ್ (Divyangjan) ಸೇರಿ ಹಲವು ಸಂಸ್ಥೆಗಳ ಜತೆ ಒಡಂಬಡಿಕೆ ಮಾಡಿಕೊಂಡು ಕೃತಕ ಸ್ಮಾರ್ಟ್ ಕಾಲುಗಳನ್ನು ಅಭಿವೃದ್ಧಿಪಡಿಸಲಾಗಿದೆ.
ಯಾವ ತಂತ್ರಜ್ಞಾನ ಬಳಕೆ?
ವಿಶೇಷ ಚೇತನರಿಗೆ ಸಕಲ ರೀತಿಯಲ್ಲಿ ನೆರವಾಗಲಿ ಎಂದು ಹಲವು ತಂತ್ರಜ್ಞಾನಗಳನ್ನು ಬಳಸಲಾಗಿದೆ. ಮೈಕ್ರೊಪ್ರೊಸೆಸರ್, ಹೈಡ್ರಾಲಿಕ್ ಡ್ಯಾಂಪರ್, ಮೊಣಕಾಲಿನ ಕೋನ ಸಂವೇದಕಗಳು, ಸಂಯೋಜಿತ ಮೊಣಕಾಲು, ಲೀಥಿಯಂ ಬ್ಯಾಟರಿ ಸೇರಿ ವಿವಿಧ ತಂತ್ರಜ್ಞಾನಗಳನ್ನು ಬಳಸಿದೆ. ಇದು ನಡಿಗೆಯ ತಕ್ಕಹಾಗೆ ಕೃತಕ ಕಾಲು ಕಾರ್ಯನಿರ್ವಹಿಸಲು ಸಾಧ್ಯವಾಗುತ್ತದೆ.
೧೦ ಪಟ್ಟು ಬೆಲೆ ಕಡಿಮೆ
ಸದ್ಯ ಮಾರುಕಟ್ಟೆಯಲ್ಲಿರುವ ಕೃತಕ ಕಾಲುಗಳಿಗಿಂತ ಸ್ಮಾರ್ಟ್ ಕೃತಕ ಕಾಲುಗಳ ಬೆಲೆಯು ೧೦ ಪಟ್ಟು ಕಡಿಮೆ ಇದೆ. ಸದ್ಯ ಮಾರುಕಟ್ಟೆಯಲ್ಲಿ ಕೃತಕ ಕಾಲುಗಳ ಬೆಲೆ ೧೦-೬೦ ಲಕ್ಷ ರೂ. ಇದೆ. ಆದರೆ, ಅತ್ಯಾಧುನಿಕ ಕೃತಕ ಕಾಲುಗಳ ಬೆಲೆಯು ೫ ಲಕ್ಷ ರೂ. ಇರಲಿದೆ.
ಇದನ್ನೂ ಓದಿ | Azaadi sat| ಗಗನಕೆ ಚಿಮ್ಮಿತು ಪುಟ್ಟ SSLV, 750 ಹೆಣ್ಮಕ್ಕಳ ವೈಜ್ಞಾನಿಕ ಸಾಧನೆಯ ಕನಸನು ಹೊತ್ತು!