ಬಳ್ಳಾರಿ: ಪ್ಲಾಸ್ಟಿಕ್ ಮುಕ್ತ ಬಳ್ಳಾರಿಯ (Ballari) ಸಂಕಲ್ಪ ಮಹಾನಗರ ಪಾಲಿಕೆಯಾಗಿದ್ದಾಗಿದೆ, ವಿದ್ಯಾರ್ಥಿಗಳಲ್ಲಿ (Students) ಮತ್ತು ಜನರಲ್ಲಿ (Public) ಪ್ಲಾಸ್ಟಿಕ್ (Plastic) ಬಳಕೆಯ ಬಗ್ಗೆ ಅರಿವು (Awareness) ಮೂಡಿಸುವುದು ಅಗತ್ಯವಿದೆ ಎಂದು ಮಹಾನಗರ ಪಾಲಿಕೆ ಆಯುಕ್ತ ಎನ್.ರುದ್ರೇಶ್ ತಿಳಿಸಿದರು.
ಬಳ್ಳಾರಿ ಲಯನ್ಸ್ ಕ್ಲಬ್ ವತಿಯಿಂದ ಶನಿವಾರ ನಗರದ ಐತಿಹಾಸಿಕ ಕೋಟೆಯಲ್ಲಿ ಹಮ್ಮಿಕೊಂಡಿದ್ದ `ಸ್ವಚ್ಛತೆ ಕಡೆ ನಮ್ಮ ನಡೆ’ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ವಿದ್ಯಾರ್ಥಿಗಳು ತಮ್ಮ ದೈನಂದಿನ ಜೀವನದಲ್ಲಿ ಪ್ಲಾಸ್ಟಿಕ್ ಬಳಕೆಯನ್ನು ನಿಯಂತ್ರಣ ಮಾಡಬೇಕು. ಸ್ಟೀಲ್ ಅಥವಾ ತಾಮ್ರ (ಕಾಪರ್) ಬಾಟಲ್‌ಗಳನ್ನು ಬಳಕೆ ಮಾಡಬೇಕು ಎಂದು ತಿಳಿಸಿದರು.
ದಾವಣಗೆರೆಯ ವಾಣಿಜ್ಯ ತೆರಿಗೆ ಇಲಾಖೆಯ ಜಂಟಿ ಆಯುಕ್ತ ವೀರೇಂದ್ರ ಪಾಟೀಲ್ ಮಾತನಾಡಿ, ಪ್ಲಾಸ್ಟಿಕ್ ಬಳಕೆಯಿಂದಾಗುವ ಅಪಾಯಗಳ ಕುರಿತು ವಿವರಿಸಿದರಲ್ಲದೆ, ಆರೋಗ್ಯ ದೃಷ್ಟಿಯಿಂದ ಪ್ರತಿ ಹಂತದಲ್ಲೂ ಅಪಾಯಕಾರಿ ಪ್ಲಾಸ್ಟಿಕ್ ಬಳಕೆಯಿಂದ ದೂರ ಇರುವುದು ಒಳ್ಳೆಯದು ಎಂದರು.
ಇದನ್ನೂ ಓದಿ: Jasprit Bumrah: ಹಾರ್ದಿಕ್ ಪಾಂಡ್ಯ ದಾಖಲೆ ಮೇಲೆ ಕಣ್ಣಿಟ್ಟ ಜಸ್ಪ್ರೀತ್ ಬುಮ್ರಾ
ಲಯನ್ಸ್ ಕ್ಲಬ್‌ನ ಹಿರಿಯ ಸದಸ್ಯ ಡಾ.ಅರವಿಂದ ಪಾಟೀಲ್ ಮಾತನಾಡಿ, ಪ್ಲಾಸ್ಟಿಕ್ ಬಳಕೆ ಹೆಚ್ಚು ಅಪಾಯಕಾರಿ ಎಂಬುದು ಗೊತ್ತಿದ್ದರೂ ಬಳಕೆ ಕಡಿಮೆಯಾಗುತ್ತಿಲ್ಲ. ತೆಳು ಪ್ಲಾಸ್ಟಿಕ್ ಮರು ಬಳಕೆಗೆ ಸಾಧ್ಯತೆ ಇರುವುದಿಲ್ಲ. ಹೀಗಾಗಿ ತೆಳು ಪ್ಲಾಸ್ಟಿಕ್‌ನ್ನು ಯಾವುದೇ ಕಾರಣಕ್ಕೂ ಬಳಕೆ ಮಾಡಬಾರದು ಎಂದರು.
ಲಯನ್ಸ್ ಕ್ಲಬ್‌ನ ಅಧ್ಯಕ್ಷ ಸಿದ್ಧರಾಮೇಶ್ವರಗೌಡ ಕರೂರು ಮಾತನಾಡಿ, ಬಳ್ಳಾರಿಯ ಐತಿಹಾಸಿಕ ಕೋಟೆಯನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ನಮ್ಮೆಲ್ಲರ ಹೊಣೆಯಾಗಿದೆ. ಚಾರಿತ್ರಿಕವಾಗಿ ಅತ್ಯಂತ ಮಹತ್ವ ಹೊಂದಿರುವ ಬಳ್ಳಾರಿ ಕೋಟೆ ಪ್ರೇಕ್ಷಣೀಯ ಸ್ಥಳ. ಇಲ್ಲಿ ಜಿಲ್ಲೆ ಸೇರಿದಂತೆ ಹೊರ ಜಿಲ್ಲೆ, ರಾಜ್ಯಗಳಿಂದಲೂ ಪ್ರವಾಸಿಗರು ಬಂದು ವೀಕ್ಷಣೆ ಮಾಡುತ್ತಾರೆ. ಇಂತಹ ಅಪರೂದ ತಾಣದಲ್ಲಿ ಯಾವುದೇ ರೀತಿಯ ತ್ಯಾಜ್ಯ ಬಿಸಾಡದೆ ಕೋಟೆ ಸ್ವಚ್ಛತೆಯನ್ನು ಕಾಪಾಡಿಕೊಳ್ಳಬೇಕು ಎಂದರು.
ಲಯನ್ಸ್ ಕ್ಲಬ್ ಹಮ್ಮಿಕೊಂಡಿರುವ `ಸ್ವಚ್ಛತೆ ಕಡೆ ನಮ್ಮ ನಡೆ’ ಕಾರ್ಯಕ್ರಮದಲ್ಲಿ ಭಾಗವಹಿಸಿದ ಬ್ರಹ್ಮಚೈತನ್ಯ ಶಾಲೆ ಹಾಗೂ ನಾಗಪ್ಪ ಬಾಲ ವಿಹಾರ ಶಾಲೆಯ ವಿದ್ಯಾರ್ಥಿಗಳು, ಶಿಕ್ಷಕರು, ನಗರದ ಪರಿಸರ ಪ್ರೇಮಿಗಳಿಗೆ ಅಭಿನಂದನೆ ಸಲ್ಲಿಸಿದರು.
ಮೇಯರ್ ತ್ರಿವೇಣಿ, ಉಪ ಮೇಯರ್ ಜಾನಕಿ, ನಗರದ ಹಿರಿಯ ವೈದ್ಯ ಹಾಗೂ ಪರಿಸರ ಪ್ರೇಮಿ ಡಾ.ತಿಪ್ಪಾರೆಡ್ಡಿ ಕರೂರು, ಲಯನ್ಸ್ ಕ್ಲಬ್‌ನ ಮಾಜಿ ಜಿಲ್ಲಾ ಗವರ್ನರ್ ಗುರುರಾಜ್ ಬಹದ್ದೂರ್, ಕಾರ್ಯದರ್ಶಿ ಕಲ್ಯಾಣ ಚಕ್ರವರ್ತಿ, ಕೋಶಾಧಿಕಾರಿ ಕಲ್ಲುಕಂಬ ಎರ‍್ರಿಸ್ವಾಮಿ, ಬಂಗಾರ ಪ್ರಭು, ರವಿದೇಸಾಯಿ, ಕೈಲಾಶ್ ಜೈನ್, ಚಂದ್ರಕಾಂತ್ ದೇದಿಯಾ, ಕ್ಲಬ್‌ನ ಮಾಜಿ ಅಧ್ಯಕ್ಷ ಕಮಲ್ ಕುಮಾರ್ ಜೈನ್, ಡಾ. ಚಂದ್ರಶೇಖರ ಪಾಟೀಲ್, ಬ್ರಹ್ಮಚೈತನ್ಯ ಶಾಲೆಯ ಆಡಳಿತ ಮಂಡಳಿ ಅಧ್ಯಕ್ಷ ಎಸ್.ಜಿ.ಪಾಟೀಲ್, ನಾಗಪ್ಪ ಬಾಲವಿಹಾರ ಶಾಲೆಯ ಅಧ್ಯಕ್ಷ ಪಂಪನಗೌಡ ಮತ್ತಿತರರಿದ್ದರು.
ಇದನ್ನೂ ಓದಿ: RBI New rules: ಮನೆ ಸಾಲದ ಇಎಂಐ ಏರಿಕೆ ಖಚಿತ! ಆರ್‌ಬಿಐ ಹೊಸ ರೂಲ್ ಪ್ರಭಾವ
ಶಾಲಾ ವಿದ್ಯಾರ್ಥಿಗಳು, ಲೆಕ್ಕಪರಿಶೋಧಕ ವಿದ್ಯಾರ್ಥಿಗಳು ಸೇರಿದಂತೆ 500ಕ್ಕೂ ಹೆಚ್ಚು ಜನರು ಕೋಟೆ ಸ್ವಚ್ಛತಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.