ಬೆಂಗಳೂರು: ಆದಾಯ ತೆರಿಗೆ ವಂಚನೆ (Income tax evasion) ಆರೋಪ ಕೇಳಿ ಬಂದ ಹಿನ್ನೆಲೆ ರಿಯಲ್ ಎಸ್ಟೇಟ್ ಕಂಪನಿಯಾದ ಶೋಭಾ ಡೆವಲಪರ್ಸ್ ಕಂಪನಿ ಮೇಲೆ ಸೋಮವಾರ ಐಟಿ ದಾಳಿ ನಡೆದಿದೆ. ಬೆಂಗಳೂರು ಹಾಗೂ ಚೆನ್ನೈನ ಐಟಿ ಅಧಿಕಾರಿಗಳು ಏಕಕಾಲಕ್ಕೆ ಈ ದಾಳಿ ನಡೆಸಿದ್ದಾರೆ. ಕರ್ನಾಟಕ, ಕೇರಳ ಹಾಗೂ ತಮಿಳುನಾಡಿನಲ್ಲಿ ಏಕಕಾಲಕ್ಕೆ ದಾಳಿ ನಡೆಸಲಾಗಿದೆ.
ಹತ್ತಕ್ಕೂ ಹೆಚ್ಚು ಕಾರುಗಳಲ್ಲಿ ಬಂದಿದ್ದ ಐವತ್ತಕ್ಕೂ ಹೆಚ್ಚು ಐಟಿ ಅಧಿಕಾರಿಗಳಿಂದ ಕಡತಗಳ ಪರಿಶೀಲನೆ ನಡೆಸಲಾಯಿತು. ಶೋಭಾ ಡೆವಲಪರ್ಸ್ ಮುಖ್ಯ ಕಚೇರಿಯಲ್ಲಿ ಕೆಲಸ ಸಂಪೂರ್ಣ ಸ್ಥಗಿತಗೊಂಡಿತ್ತು. ಮಾರ್ಚ್ 20ರ ಬೆಳಗ್ಗೆ ಎಂಟು ಗಂಟೆ ಸುಮಾರಿಗೆ ಬೆಂಗಳೂರಿನ ದೊಮ್ಮಲೂರು, ಹೂಡಿ, ಬಾಣಸವಾಡಿಯಲ್ಲಿರುವ ಕಚೇರಿಗಳ ಮೇಲೆ ಅಧಿಕಾರಿಗಳು ದಾಳಿ ನಡೆಸಿದರು. ಈ ವೇಳೆ ಕಚೇರಿಯಲ್ಲಿದ್ದ ಸಿಬ್ಬಂದಿಯನ್ನು ಹೊರಗೆ ಬಿಡದೆ ಕಾರ್ಯಾಚರಣೆ ನಡೆಸಿದರು.
ಈ ಹಿಂದೆ ಬರೋಬ್ಬರಿ 201 ಕೋಟಿ ಅಕ್ರಮ ಹಣ ಗಳಿಕೆ ಸಂಬಂಧ ಇ.ಡಿ ಪ್ರಕರಣ ದಾಖಲು ಮಾಡಿದ್ದು, ಪ್ರಕರಣ ಇನ್ನೂ ಮುಂದುವರಿದಿದೆ. ಹೀಗಿರುವಾಗ ಶೋಭಾ ಡೆವಲಪರ್ಸ್‌ಗೆ ಐಟಿ ಅಧಿಕಾರಿಗಳು ಶಾಕ್ ನೀಡಿದ್ದಾರೆ. ಸತತ ಐದಾರು ಗಂಟೆಗಳ ಕಾಲ ಕಚೇರಿ ಶೋಧ ನಡೆಸಿದ ಐಟಿ ಅಧಿಕಾರಿಗಳು ಆದಾಯ ಹಾಗೂ ತೆರಿಗೆ ಪಾವತಿ ಸಂಬಂಧ ವ್ಯತ್ಯಾಸ ಕಂಡು ಬಂದ ಕಡತಗಳನ್ನು ವಶಕ್ಕೆ ಪಡೆದಿದ್ದಾರೆ.
ಇದನ್ನೂ ಓದಿ: Police Health Issues: ಬೆಂಗಳೂರು ಪೊಲೀಸರಲ್ಲಿ ಹೆಚ್ಚಾಗುತ್ತಿದೆ Low Bp, ಹೃದಯ ಸಮಸ್ಯೆ; ಕಾಳಜಿಗೆ ಮುಂದಾದ ಅಧಿಕಾರಿಗಳು
ಐಟಿ ದಾಳಿ ವಿಚಾರ ಬಹಿರಂಗವಾಗುತ್ತಿದ್ದಂತೆ ಶೋಭಾ ಡೆವಲಪರ್ಸ್‌ನ ಶೇರುಗಳ ಮೌಲ್ಯದಲ್ಲಿ ಇಳಿಕೆಯಾಗಿದೆ ಎಂಬ ಮಾಹಿತಿಯು ಹೊರಬಿದ್ದಿದೆ. ಇ.ಡಿ ಬಳಿಕ ಈಗ ಶೋಭಾ ಡೆವಲಪರ್ಸ್‌ಗೆ ಐಟಿ ಸಂಕಷ್ಟ ಎದುರಾಗಿದೆ. ಐಟಿ ದಾಳಿಯಲ್ಲಿ ಯಾವೆಲ್ಲ ಅಕ್ರಮಗಳು ಹೊರಗೆ ಬರುತ್ತದೆ ಎಂದು ಕಾದು ನೋಡಬೇಕಿದೆ.
ರಾಜ್ಯದ ಪ್ರಮುಖ ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ