ಬೆಂಗಳೂರು: ಡೋಲೋ 650 ಮಾತ್ರೆ ತಯಾರಿಕೆ ಸಂಸ್ಥೆಯಾಗಿರುವ ಮೈಕ್ರೋ ಲ್ಯಾಬ್ಸ್ ಫಾರ್ಮಾಸಿಟಿಕಲ್ ಮೇಲೆ ನಗರದಲ್ಲಿ ಬುಧವಾರ ಐಟಿ (IT Raids) ದಾಳಿ ನಡೆದಿದೆ. ಆದಾಯ ತೆರಿಗೆ ವಂಚನೆ ಆರೋಪದ ಹಿನ್ನೆಲೆಯಲ್ಲಿ ಬೆಳಗ್ಗೆ 7.45ರ ಸುಮಾರಿಗೆ ರೇಸ್ ಕೋರ್ಸ್ ರಸ್ತೆಯಲ್ಲಿರುವ ಕಚೇರಿಗೆ 20ಕ್ಕೂ ಹೆಚ್ಚು ಅಧಿಕಾರಿಗಳು ತೆರಳಿ ಶೋಧ ನಡೆಸಿದರು. ಇದೀಗ ಅಧಿಕಾರಿಗಳಿಂದ ದಾಖಲೆಗಳ ಪರಿಶೀಲನೆ ಆಗುತ್ತಿದೆ.
ಇದನ್ನೂ ಓದಿ |ಗುಜರಿ ಬಾಬು ಜತೆಗಿನ ವ್ಯವಹಾರ ಜಮೀರ್ ಅಹ್ಮದ್ ಮನೆ ಮೇಲೆ ಎಸಿಬಿ ದಾಳಿಗೆ ಕಾರಣವಾಯಿತೇ?
ಕೋವಿಡ್ ಸಂದರ್ಭದಲ್ಲಿ ಅತಿ ಹೆಚ್ಚು ವ್ಯಾಪಾರ ವಹಿವಾಟು ನಡೆಸಿದ್ದ ಸಂಸ್ಥೆ ಇದಾಗಿದೆ. ಭಾರಿ ಪ್ರಮಾಣದ ಲಾಭ ಗಳಿಸಿದರೂ ತೆರಿಗೆ ಕಟ್ಟದೆ ವಂಚನೆ ಮಾಡಿರುವ ಕಾರಣ ದಾಳಿ ನಡೆದಿದೆ ಎಂದು ತಿಳಿದು ಬಂದಿದೆ.
ಸಿಎಂಡಿ ದಿಲೀಪ್ ಸುರಾನಾ, ಡೈರೆಕ್ಟರ್ ಆನಂದ್ ಸುರಾನ ಅವರ ನಿವಾಸಗಳ ಮೇಲೂ ದಾಳಿ ನಡೆದಿದೆ. ಬೆಂಗಳೂರಿನ ಕೇಂದ್ರ ಕಚೇರಿ ಸೇರಿದಂತೆ ತಮಿಳುನಾಡು, ಗೋವಾ, ಪಂಜಾಬ್, ಮುಂಬೈ , ದೆಹಲಿ, ಸಿಕ್ಕಿಂ ಸೇರಿದಂತೆ ದೇಶದ 40 ಕಡೆಗಳಲ್ಲಿ ಬುಧವಾರ ಬೆಳಗ್ಗೆ ಐಟಿ ದಾಳಿ ನಡೆದಿದೆ.
ಇದನ್ನೂ ಓದಿ | ಆಪ್ತನ ಮೇಲಿನ ದಾಳಿಗೆ ಅಶ್ವತ್ಥನಾರಾಯಣ, ವಿಜಯೇಂದ್ರ ಕಡೆ ಬೊಟ್ಟು ಮಾಡಿದ ಸಿದ್ದರಾಮಯ್ಯ