Site icon Vistara News

Janardhana Reddy: ರಾಜಸ್ತಾನದ ಅಜ್ಮೀರ್‌ ದರ್ಗಾಕ್ಕೆ ಜನಾರ್ದನ ರೆಡ್ಡಿ ದಂಪತಿ ಭೇಟಿ

Janardhan Reddy couple visit Ajmer Dargah in Rajasthan

ಕೊಪ್ಪಳ: ರಾಜಕೀಯದಿಂದ ದಶಕ ಕಾಲ ದೂರವಿದ್ದ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ (Janardhana Reddy) ಕಲ್ಯಾಣ ರಾಜ್ಯ ಪ್ರಗತಿ ಪಕ್ಷ (ಕೆಆರ್‌ಪಿಪಿ) ಕಟ್ಟಿ ವಿವಿಧೆಡೆ ಪ್ರಚಾರ ಕಾರ್ಯವನ್ನು ಆರಂಭಿಸಿದ್ದಾರೆ. ಈ ನಡುವೆ ಸರ್ವಧರ್ಮಗಳ ಮಂತ್ರವನ್ನು ಜಪಿಸುತ್ತಿರುವ ಅವರು, ಎಲ್ಲ ವರ್ಗದವರನ್ನೂ ತಮ್ಮತ್ತ ಸೆಳೆಯಲು ಮುಂದಾಗಿದ್ದಾರೆ. ದೇವಸ್ಥಾನಗಳ ಭೇಟಿಯ ಜತೆ ಜತೆಗೆ ವಿವಿಧ ಧಾರ್ಮಿಕ ಕ್ಷೇತ್ರಗಳಿಗೂ ಭೇಟಿ ಕೊಟ್ಟು ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ. ಈ ಮೂಲಕ ಎಲ್ಲ ವರ್ಗದವರ ಮನ ಗೆಲ್ಲಲು ಮುಂದಾಗಿದ್ದಾರೆ. ಇದರ ಭಾಗವಾಗಿ ರಾಜಸ್ತಾನದ ಅಜ್ಮೀರ್ ದರ್ಗಾಕ್ಕೆ ಭೇಟಿ ನೀಡಿದ್ದಾರೆ.

ರಾಜಕೀಯಕ್ಕೆ ರೆಡ್ಡಿ ಮರು ಪ್ರವೇಶ ಪಡೆದ ಹಿನ್ನೆಲೆಯಲ್ಲಿ ರಾಜಕೀಯ ಚಟುವಟಿಕೆಯನ್ನೂ ಚುರುಕುಗೊಳಿಸಿದ್ದಾರೆ. ರಾಜಸ್ಥಾನದ ಅಜ್ಮೀರ ದರ್ಗಾಕ್ಕೆ ಭೇಟಿ ನೀಡಿದ ಜನಾರ್ದನ ರೆಡ್ಡಿ ದಂಪತಿ ಪ್ರಾರ್ಥನೆ ಸಲ್ಲಿಸಿದ್ದಾರೆ. ಪತ್ನಿ ಅರುಣಾಲಕ್ಷ್ಮಿ ಅವರೊಂದಿಗೆ ತೆರಳಿದ ರೆಡ್ಡಿ, ರಾಜ್ಯಕ್ಕೆ ಶಾಂತಿ-ನೆಮ್ಮದಿ ಸಿಗಲಿ ಎಂದು ಪ್ರಾರ್ಥನೆ ಸಲ್ಲಿಸಿದ್ದಾಗಿ ತಿಳಿಸಿದ್ದಾರೆ. ಅಲ್ಲದೆ, ಅಲ್ಲಿನ ಸೂಫಿ ಸಂತ ಸಲ್ಮಾನ್‌ ಚಿಷ್ಟಿ ಅವರು, ರೆಡ್ಡಿಯವರ ಮುಂದಿನ ರಾಜಕೀಯ ಭವಿಷ್ಯ ಉಜ್ವಲವಾಗಲಿ ಎಂದು ಹಾರೈಸಿದ್ದಾರೆನ್ನಲಾಗಿದೆ.

Janardhan Reddy couple visit Ajmer Dargah in Rajasthan

ಕೊಪ್ಪಳ ಜಿಲ್ಲೆಯ ಗಂಗಾವತಿಯಿಂದ ಜನಾರ್ದನ ರೆಡ್ಡಿ, ಬಳ್ಳಾರಿ ಅಥವಾ ಸಿಂಧನೂರಿನಿಂದ ಪತ್ನಿ ಅರುಣಾಲಕ್ಷ್ಮಿ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಲಿದ್ದಾರೆ ಎಂಬ ಮಾಹಿತಿ ಇದೆ.

Janardhan Reddy couple visit Ajmer Dargah in Rajasthan

ಜ. ೬ರಂದು ರಾಯಚೂರು ದರ್ಗಾಕ್ಕೆ ಭೇಟಿ ನೀಡಿದ್ದ ರೆಡ್ಡಿ

ಜನವರಿ ೬ರಂದು ರಾಯಚೂರು ನಗರದಲ್ಲಿ ಬೈಕ್ ರ‍್ಯಾಲಿ ಆಯೋಜಿಸಿದ್ದ ಜನಾರ್ದನ ರೆಡ್ಡಿ ಅವರು ದಾರಿ ಮಧ್ಯೆ ಅಲ್ಲಿನ ಪಿಡಬ್ಲ್ಯೂಡಿ ಕ್ಯಾಂಪ್‌ನಲ್ಲಿರುವ ಸೈಯದ್ ಶಾಖಾದ್ರಿ ದರ್ಗಾಕ್ಕೆ ಭೇಟಿ ನೀಡಿದ್ದರು. ಮುಸ್ಲಿಂ ಸಂಪ್ರದಾಯದ ಕೆಲವು ಆಚರಣೆಯನ್ನು ಅಲ್ಲಿ ನೆರವೇರಿಸಿದ್ದರು. ಆ ಮೂಲಕ ಎಲ್ಲ ಸಮುದಾಯವರಿಗೂ ತಮ್ಮ ಪಕ್ಷ ಕೆಲಸ ಮಾಡಲಿದೆ ಎಂದು ಮನವರಿಕೆ ಮಾಡುವ ಪ್ರಯತ್ನವನ್ನು ಮಾಡಿದ್ದರು.

Janardhan Reddy couple visit Ajmer Dargah in Rajasthan

ಇದನ್ನೂ ಓದಿ: Karnataka Politics : ಕಾಂಗ್ರೆಸ್‌ 300 ಕಡೆ ಪ್ರತಿಭಟನೆ ಮಾಡುತ್ತಿರುವುದು ಏಕೆ?: ಸಿಎಂ ಬೊಮ್ಮಾಯಿ ನೀಡಿದ ಉತ್ತರ ಇದು

ಚುನಾವಣೆಯಲ್ಲಿ ಅಲ್ಪಸಂಖ್ಯಾತರ ಮತಗಳು ಪ್ರಮುಖ ಪಾತ್ರವನ್ನು ವಹಿಸುತ್ತದೆ ಎಂಬುದನ್ನು ಅರಿತಿರುವ ಜನಾರ್ದನ ರೆಡ್ಡಿ ಅವರು ಈಗ ಆ ನಿಟ್ಟಿನಲ್ಲಿ ಹೆಜ್ಜೆಯನ್ನಿಡುತ್ತಿದ್ದಾರೆ.

Exit mobile version