ಬೆಂಗಳೂರು: 162 ಹಾಸಿಗೆಗಳನ್ನು ಹೊಂದಿರುವ ಇಂಟಿಗ್ರೇಟೆಡ್ ಮಲ್ಟಿ-ಸ್ಪೆಷಾಲಿಟಿ ಟರ್ಷಿಯರಿ ಕೇರ್ ಹಾಸ್ಪಿಟಲ್ ಆಗಿರುವ ಜಯದೇವ ಸ್ಮಾರಕ ರಾಷ್ಟ್ರೋತ್ಥಾನ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರವು (Rashtrotthana Parishat) ಡೋಝಿಯ ಸುಧಾರಿತ ಎಐ ಆಧರಿತ ಸಂಪರ್ಕರಹಿತ, ಕಂಟಿನ್ಯೂಯಸ್ ಪೇಷೆಂಟ್ ಮಾನಿಟರಿಂಗ್ ಆಂಡ್ ಅರ್ಲಿ ವಾರ್ನಿಂಗ್ ಸಿಸ್ಟಮ್ (ಇಡಬ್ಲ್ಯೂಎಸ್) ಅಳವಡಿಸಿಕೊಂಡಿರುವುದಾಗಿ ಘೋಷಿಸಿದೆ.
ಈ ಹೊಸ ವ್ಯವಸ್ಥೆ ಅನುಷ್ಠಾನದ ಮೂಲಕ ಜಯದೇವ ಸ್ಮಾರಕ ರಾಷ್ಟ್ರೋತ್ಥಾನ ಆಸ್ಪತ್ರೆಯು ರಾಷ್ಟ್ರೋತ್ಥಾನ ಪರಿಷತ್ತಿನೊಂದಿಗೆ ಸಂಯೋಜಿತವಾಗಿರುವ ದಕ್ಷಿಣ ಭಾರತದ ಆಸ್ಪತ್ರೆಗಳಲ್ಲಿಯೇ ಈ ವ್ಯವಸ್ಥೆ ಅಳವಡಿಸಿಕೊಂಡಿರುವ ಮೊದಲ ಆಸ್ಪತ್ರೆ ಎಂಬ ಹೆಗ್ಗಳಿಕೆ ಗಳಿಸಿದೆ. ಆ ಮೂಲಕ ರೋಗಿಗಳ ಸುರಕ್ಷತೆ, ನಿರಂತರ ಕಾಳಜಿ ಮತ್ತು ರೋಗಿಗಳ ಆರೈಕೆಯ ಗುಣಮಟ್ಟವನ್ನು ಹೆಚ್ಚಿಸಲು “ಮೇಡ್ ಇನ್ ಇಂಡಿಯಾ’ ತಂತ್ರಜ್ಞಾನವನ್ನು ಬಳಸಿಕೊಂಡಿದೆ.
ಜಯದೇವ ಸ್ಮಾರಕ ರಾಷ್ಟ್ರೋತ್ಥಾನ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದಲ್ಲಿರುವ ನಾನ್-ಐಸಿಯು ವಾರ್ಡ್ ಬೆಡ್‌ಗಳು ಮುಂದಿನ ಪೀಳಿಗೆಯ ಅತ್ಯಾಧುನಿಕ ಸಂಚಾರಿ- ಸಂಪರ್ಕಿತ ರೋಗಿಗಳ ನಿಗಾ ವಹಿಸುವ ವ್ಯವಸ್ಥೆ ಹೊಂದಿದೆ. ಜತೆಗೆ ಅದು ಡೋಝಿಯ ಅರ್ಲಿ ವಾರ್ನಿಂಗ್ ಸಿಸ್ಟಮ್ ವ್ಯವಸ್ಥೆಯನ್ನೂ ಹೊಂದಿದ್ದು, ಸಂಪರ್ಕರಹಿತವಾಗಿ ನಿರಂತರವಾಗಿ ರೋಗಿಗಳ ನಿಗಾವಹಿಸುವಿಕೆಯ ಕೆಲಸವನ್ನು ಮಾಡುತ್ತದೆ.
ಇದನ್ನೂ ಓದಿ: Summer Tour: ಐತಿಹಾಸಿಕ ಹೆಗ್ಗುರುತಿನ ಶ್ರೀಮಂತ ನಗರ ತಿರುಚ್ಚಿ; ಬೇಸಿಗೆ ಪ್ರವಾಸದಲ್ಲಿ ನೋಡಲು ಮರೆಯದಿರಿ
ಡೋಝಿಯ ಉತ್ಪನ್ನವು ಕ್ಲೌಡ್ ಆಧರಿತವಾಗಿದೆ. ರೋಗಿಗಳ ಸುರಕ್ಷತೆಗಾಗಿ ಹಾಗೂ ಉತ್ತಮ ಚಿಕಿತ್ಸಾ ಫಲಿತಾಂಶ ದೊರಕಿಸಲು ಸಕಾಲಿಕ ವೈದ್ಯಕೀಯ ಚಿಕಿತ್ಸೆಗಳನ್ನು ಒದಗಿಸಲು ರೋಗಿಯನ್ನು ನಿರಂತರವಾಗಿ ಮತ್ತು ಹೆಚ್ಚು ಪರಿಣಾಮಕಾರಿಯಾಗಿ ನಿಗಾ ವಹಿಸಲು ಆಸ್ಪತ್ರೆ ಸಿಬ್ಬಂದಿಗೆ ಅನುವು ಮಾಡಿಕೊಡುವ ಸೆಂಟ್ರಲ್ ಆಂಡ್ ರಿಮೋಟ್ ಮಾನಿಟರಿಂಗ್ ಸಾಮರ್ಥ್ಯವನ್ನು ಹೊಂದಿದೆ.
ಜಯದೇವ ಸ್ಮಾರಕ ರಾಷ್ಟ್ರೋತ್ಥಾನ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರವು ರಾಷ್ಟ್ರೋತ್ಥಾನ ಪರಿಷತ್ತಿನ ಒಂದು ಭಾಗವಾಗಿದ್ದು, ಸಮಾಜದ ಎಲ್ಲಾ ಸ್ತರದ ಜನರಿಗೆ ಕೈಗೆಟುಕುವ ಬೆಲೆಯಲ್ಲಿ, ಉತ್ತಮ-ಗುಣಮಟ್ಟದ ಆರೋಗ್ಯ ಸೇವೆಯನ್ನು ಒದಗಿಸುವ ಉದ್ದೇಶದಿಂದ ಸ್ಥಾಪಿಸಲಾಗಿದೆ. ಆಸ್ಪತ್ರೆಯು 19 ಸಾಮಾನ್ಯ ವಾರ್ಡ್‌ಗಳು, 72 ಅರೆ-ಖಾಸಗಿ ವಾರ್ಡ್‌ಗಳು, 11 ತುರ್ತು ಚಿಕಿತ್ಸಾ ವಿಭಾಗಗಳು ಮತ್ತು 17 ಖಾಸಗಿ ವಾರ್ಡ್‌ಗಳನ್ನು ಹೊಂದಿದೆ. ಒಟ್ಟು 162 ಹಾಸಿಗೆಗಳನ್ನು ಹೊಂದಿದ್ದು, ಅತ್ಯಾಧುನಿಕ ಮೂಲಸೌಕರ್ಯವನ್ನು ಹೊಂದಿದೆ.
ಹೃದಯ ಬಡಿತ, ಉಸಿರಾಟ ಸ್ಥಿತಿ, ರಕ್ತದೊತ್ತಡ, ಎಸ್‌ಪಿಓ2 ಮಟ್ಟಗಳು, ಟೆಂಪರೇಚರ್ ಮತ್ತು ಇಸಿಜಿಯಂತಹ ರೋಗಿಗಳ ಪ್ರಮುಖ ಆರೋಗ್ಯ ಅಂಶಗಳನ್ನು ದೂರದಿಂದಲೇ ನಿಗಾ ವಹಿಸುವ ಸೌಲಭ್ಯವನ್ನು ಡೋಝಿ ಆರೋಗ್ಯ ಕಾರ್ಯಕರ್ತರಿಗೆ ಒದಗಿಸುತ್ತದೆ. ಡೋಝಿಯ ಅರ್ಲಿ ವಾರ್ನಿಂಗ್ ಸಿಸ್ಟಮ್ (ಇಡಬ್ಲ್ಯೂಎಸ್) ಅವಶ್ಯ ಮಾಹಿತಿಗಳನ್ನು ಗಮನಿಸುತ್ತಿರುತ್ತದೆ ಮತ್ತು ಒಂದು ವೇಳೆ ರೋಗಿಯ ಆರೋಗ್ಯ ಕ್ಷೀಣಿಸುವಿಕೆ ಕಂಡುಬಂದರೆ ಆ ಕುರಿತು ಆರೋಗ್ಯ ಕಾರ್ಯಕರ್ತರಿಗೆ ಎಚ್ಚರಿಕೆ ನೀಡುತ್ತದೆ. ಆ ಮೂಲಕ ಸಕಾಲಿಕ ವೈದ್ಯಕೀಯ ಚಿಕಿತ್ಸೆ ಒದಗಿಸಲು ನೆರವಾಗುತ್ತದೆ. ಸಂಪರ್ಕರಹಿಕ ನಿಗಾ ವಹಿಸುವಿಕೆಗಾಗಿ ಡೋಝಿ ಎಐ ಆಧಾರಿತ ಬ್ಯಾಲಿಸ್ಟೋಕಾರ್ಡಿಯೋಗ್ರಫಿ (ಬಿಸಿಜಿ) ಅನ್ನು ಬಳಸುತ್ತದೆ. ಡೋಝಿಯ ಈ ಹೊಸ ತಂತ್ರಜ್ಞಾನವು ಪೇಟೆಂಟ್ ಹೊಂದಿದ್ದು, ಭಾರತದಲ್ಲಿಯೇ ತಯಾರಿಸಲ್ಪಟ್ಟಿದೆ.
ಇದನ್ನೂ ಓದಿ: Karnataka Weather : ಉತ್ತರ ಕರ್ನಾಟಕದಲ್ಲಿ ಸುರಿದ ಭಾರಿ ವರ್ಷಧಾರೆ; ನಾಳೆ ರಭಸವಾಗಿ ಬೀಸಲಿದೆ ಗಾಳಿ- ಮಳೆ
ಬೆಂಗಳೂರಿನ ಜಯದೇವ ಸ್ಮಾರಕ ರಾಷ್ಟ್ರೋತ್ಥಾನ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಐಸಿಯು ಮತ್ತು ಇಆರ್‌ನ ಅನೆಸ್ತೇಷಿಯಾಲಜಿ ಎಚ್‌ಒಡಿ ಡಾ. (ಕರ್ನಲ್) ಆನಂದ್ ಶಂಕರ್ ಮಾತನಾಡಿ, “ಆರೋಗ್ಯ ಸೇವಾ ಕ್ಷೇತ್ರವು ನಿರಂತರವಾಗಿ ರೂಪಾಂತರಕ್ಕೆ ಒಳಗಾಗುತ್ತಿರುವುದರಿಂದ ಆರೋಗ್ಯ ಸೇವೆ ಪೂರೈಕೆದಾರರು ರೋಗಿಗಳಿಗೆ ಅತ್ಯುತ್ತಮ ಆರೈಕೆ ಒದಗಿಸಲು ಅತ್ಯಾಧುನಿಕ ಸಾಧನಗಳಿಗೆ ಹೊಂದಿಕೊಳ್ಳುವುದು ಮತ್ತು ಅವುಗಳನ್ನು ಹೊಂದುವುದು ಅವಶ್ಯವಾಗಿದೆ. ಉತ್ತಮ ಗುಣಮಟ್ಟದ ಆರೈಕೆಯನ್ನು ಒದಗಿಸುವ ಮತ್ತು ರೋಗಿಗಳ ಚಿಕಿತ್ಸೆ ಫಲಿತಾಂಶಗಳನ್ನು ಸುಧಾರಿಸುವ ನಮ್ಮ ಉದ್ದೇಶಕ್ಕೆ ಪೂರಕವಾಗಿ ‘ಮೇಡ್ ಇನ್ ಇಂಡಿಯಾ’ ಸಂಪರ್ಕರಹಿತ, ನಿರಂತರ ರೋಗಿಗಳ ನಿಗಾ ವಹಿಸುವಿಕೆ ಪರಿಹಾರೋತ್ಪನ್ನವಾದ ಡೋಝಿ ಜತೆಗಿನ ಪಾಲುದಾರಿಕೆ ಸೂಕ್ತವಾಗಿ ಹೊಂದಿಕೊಂಡಿದೆ.
ಜೀವಗಳನ್ನು ಉಳಿಸುವ ಸಾಮರ್ಥ್ಯವಿರುವ ಈ ಹೊಸ ಆರೋಗ್ಯ ಸೇವೆ ಆವಿಷ್ಕಾರವನ್ನು ಮೊದಲು ಬಳಸಿಕೊಳ್ಳುವ ಮೂಲಕ ದೇಶದಲ್ಲಿನ ರೋಗಿಗಳ ಸುರಕ್ಷತೆಗೆ ಹೊಸ ಮಾನದಂಡಗಳನ್ನು ರೂಪಿಸುವಲ್ಲಿ ನಾವು ಮುಂಚೂಣಿಯಲ್ಲಿ ನಿಂತಿದ್ದೇವೆ. ಡೋಝಿ ಜತೆಗೆ ಈ ಪ್ರಯಾಣದ ಭಾಗವಾಗಲು ನಮಗೆ ಸಂತೋಷವಿದೆ” ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: Home Remedies For Sunburn: ಬಿಸಿಲಿಗೆ ಚರ್ಮದ ಅಂದಗೆಟ್ಟಿದೆಯೆ? ಇಲ್ಲಿದೆ ಮನೆಮದ್ದು!
ರಾಷ್ಟ್ರೋತ್ಥಾನ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ. ಆತ್ಮಾರಾಮ್ ಡಿ.ಸಿ. ಡೋಝಿ ತಂತ್ರಜ್ಞಾನದ ಅಳವಡಿಕೆಯ ಕುರಿತು ಮಾತನಾಡಿ, ಜಯದೇವ್ ಸ್ಮಾರಕ ಆಸ್ಪತ್ರೆಯು 162 ಹಾಸಿಗೆಗಳ ಇಂಟಿಗ್ರೇಟೆಡ್ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಾಗಿದ್ದು, ಸಮಾಜದ ಎಲ್ಲಾ ವರ್ಗಗಳ ಜನರಿಗೆ ಕೈಗೆಟುಕುವ ಗುಣಮಟ್ಟದ ಆರೋಗ್ಯ ಸೇವೆಯನ್ನು ಒದಗಿಸುವುದರ ಮೇಲೆ ಗಮನ ಕೇಂದ್ರೀಕರಿಸಿದೆ. ರೋಗಿಗಳ ಸುರಕ್ಷತೆಯು ನಮ್ಮ ಪ್ರಮುಖ ಆದ್ಯತೆಯಾಗಿದೆ. ಅದಕ್ಕಾಗಿ ಡೋಝಿಯ ಎಐ ಆಧಾರಿತ ಸಂಪರ್ಕರಹಿತ ನಿಗಾವಹಿಸುವಿಕೆ ವ್ಯವಸ್ಥೆಯನ್ನು ಅಳವಡಿಸಿದ್ದು, ಅದರ ಅರ್ಲಿ ವಾರ್ನಿಂಗ್ ಸಿಸ್ಟಮ್ ಸಮಯಕ್ಕೆ ಸರಿಯಾಗಿ ಎಚ್ಚರಿಸುವ ಕೆಲಸ ಮಾಡುತ್ತಿದ್ದು, ಉತ್ತಮ ಆರೈಕೆ ಒದಗಿಸಲು ಸಹಾಯ ಮಾಡುತ್ತದೆ. ಅದರ ಕ್ಲೌಡ್-ಆಧರಿತ ತಂತ್ರಜ್ಞಾನದಿಂದಾಗಿ ನಮ್ಮ ವೈದ್ಯರು ತಮ್ಮ ರೋಗಿಗಳಿಗೆ ಸಂಬಂಧಿಸಿದ ಮಾಹಿತಿಗಳನ್ನು ದೂರದಿಂದಲೇ ನಿಗಾವಹಿಸಬಹುದಾಗಿದೆ ಮತ್ತು ಅದಕ್ಕೆ ಅನುಗುಣವಾಗಿ ಸಲಹೆಯನ್ನು ನೀಡಬಹುದಾಗಿದೆ. ಈ ಮೂಲಕ ಸಂಗ್ರಹಿಸಿದ ಡೇಟಾವು ಮಹತ್ವದ್ದಾಗಿದ್ದು, ಬಹುಶಃ ಭವಿಷ್ಯದ ಎಲ್ಲಾ ಸಂಶೋಧನಾ ಅಧ್ಯಯನಗಳಿಗೆ ನೆರವನ್ನು ನೀಡಬಹುದಾಗಿದೆ ಎಂದು ತಿಳಿಸಿದ್ದಾರೆ.
ಬೆಂಗಳೂರಿನ ಜಯದೇವ ಸ್ಮಾರಕ ರಾಷ್ಟ್ರೋತ್ಥಾನ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ವೈದ್ಯಕೀಯ ಆಡಳಿತಾಧಿಕಾರಿ ಡಾ. ಶೈಲಾ ಎಚ್.ಎನ್. ಮಾತನಾಡಿ, ನಮ್ಮ ರೋಗಿಗಳ ಆರೈಕೆಯಲ್ಲಿ ಡೋಝಿಯ ಅನುಷ್ಠಾನವು ಆರೋಗ್ಯ ಸೇವೆ ಒದಗಿಸುವಲ್ಲಿ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಬಳಸುವ ನಮ್ಮ ಬದ್ಧತೆಯನ್ನು ತೋರಿಸಿಕೊಟ್ಟಿದೆ. ಈ ಅತ್ಯಾಧುನಿಕ ತಂತ್ರಜ್ಞಾನವು ನಮ್ಮ ರೋಗಿಗಳಿಗೆ ಸಾಧ್ಯವಾದಷ್ಟು ಉತ್ತಮವಾದ ಆರೋಗ್ಯ ಸೇವೆ ಒದಗಿಸುವ ನಮ್ಮ ದೃಷ್ಟಿಗೆ ಹೊಂದಿಕೆಯಾಗುತ್ತದೆ. ರಾಷ್ಟ್ರೋತ್ಥಾನ ಆಸ್ಪತ್ರೆಯಲ್ಲಿ ಪ್ರಮುಖವಾಗಿ ನಾವು ಉತ್ಕೃಷ್ಟ ಆವಿಷ್ಕಾರ ಮತ್ತು ತಾಂತ್ರಿಕ ಪ್ರಗತಿಯನ್ನು ಅಳವಡಿಸಿಕೊಂಡು ನಮ್ಮ ಚಿಕಿತ್ಸಾ ವಿಧಾನವನ್ನು ಪರಿಷ್ಕರಿಸುವ ಮೌಲ್ಯವನ್ನು ಹೊಂದಿದ್ದೇವೆ. ಶ್ರೇಷ್ಠತೆಯನ್ನು ಅಳವಡಿಸಿಕೊಂಡು ಸಮುದಾಯಕ್ಕೆ ಸಹಾನುಭೂತಿ, ಕಾಳಜಿ ಮತ್ತು ಸೇವೆ ಒದಗಿಸುವ ಬದ್ಧತೆಯನ್ನು ಮುಂದುವರಿಸುತ್ತೇವೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: Rameshwaram Cafe Blast: ಮೂರು ವರ್ಷದಲ್ಲಿ ಮೂರು ಬ್ಲಾಸ್ಟ್; ಈ ಮೂರಕ್ಕೂ ಶಿವಮೊಗ್ಗ ನಂಟು!
ಈ ಕುರಿತು ಡೋಝಿ ಸಿಇಒ ಮತ್ತು ಸಹ ಸಂಸ್ಥಾಪಕ ಮುದಿತ್ ದಂಡವಾಟೆ ಮಾತನಾಡಿ, ಜಯದೇವ ಸ್ಮಾರಕ ರಾಷ್ಟ್ರೋತ್ಥಾನ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದಂತಹ ಪ್ರತಿಷ್ಠಿತ ಸಂಸ್ಥೆಯೊಂದಿಗೆ ಕೈಜೋಡಿಸುವುದಕ್ಕೆ ನಮಗೆ ಹೆಮ್ಮೆ ಇದೆ. ಏಕೆಂದರೆ ರೋಗಿಗಳಿಗೆ ಹೆಚ್ಚಿನ ಸುರಕ್ಷತೆ ಒದಗಿಸಲು ಮತ್ತು ಚಿಕಿತ್ಸಾ ಫಲಿತಾಂಶಗಳು ಮತ್ತು ಶುಶ್ರೂಷೆಯ ಧಕ್ಷತೆಯನ್ನು ಸುಧಾರಿಸಲು ನಾವು ತಂತ್ರಜ್ಞಾನವನ್ನು ಬಳಸಿಕೊಳ್ಳುವ ಉದ್ದೇಶವನ್ನು ಹೊಂದಿದ್ದೇವೆ. ನಿರಂತರವಾದ ವಾರ್ಡ್ ಮಾನಿಟರಿಂಗ್ ಮತ್ತು ಅರ್ಲಿ ವಾರ್ನಿಂಗ್ ಸಿಸ್ಟಮ್ ಅಳವಡಿಕೆಯಿಂದ ಗುಣಮಟ್ಟದ ಆರೋಗ್ಯ ಸೇವೆ ಒದಗಿಸುವುದು ಸಾಧ್ಯವಾಗುತ್ತದೆ. ಜಾಗತಿಕವಾಗಿ ಆರೋಗ್ಯ ಸೇವಾ ಕ್ಷೇತ್ರದ ಭವಿಷ್ಯವನ್ನು ರೂಪಿಸುವಲ್ಲಿ ಭಾರತೀಯ ಆವಿಷ್ಕಾರಗಳ ಪಾತ್ರವು ಹೆಚ್ಚುತ್ತಿರುವುದಕ್ಕೆ ಈ ಸಹಯೋಗವು ಸಾಕ್ಷಿಯಾಗಿದೆ ಎಂದು ಅವರು ತಿಳಿಸಿದ್ದಾರೆ.