Site icon Vistara News

Drought Study: ಜೆಡಿಎಸ್‌ ಬರ ಅಧ್ಯಯನ ತಂಡಗಳ ರಚನೆ; ನ. 18ರೊಳಗೆ ವರದಿ ಸಲ್ಲಿಸಲು ಸೂಚನೆ

JDS drought study

ಬೆಂಗಳೂರು: ರಾಜ್ಯದಲ್ಲಿ ಬರ ಪರಿಸ್ಥಿತಿ ಅಧ್ಯಯನ (Drought Study) ಮಾಡಲು 31 ಜಿಲ್ಲೆಗಳಿಗೂ ತಂಡಗಳನ್ನು ರಚನೆ ಮಾಡಿರುವ ಜೆಡಿಎಸ್‌ ಪಕ್ಷವು, ದೀಪಾವಳಿ ಹಬ್ಬದ ಒಳಗಾಗಿ ಅಧ್ಯಯನ ಮುಗಿಸಿ ಕೇಂದ್ರ ಕಚೇರಿಗೆ ವರದಿ ನೀಡಬೇಕೆಂದು ಆಯಾ ತಂಡಗಳಿಗೆ ಸೂಚನೆ ನೀಡಿದೆ.

ಆಯಾ ಜಿಲ್ಲೆಗಳ ಪಕ್ಷದ ಜಿಲ್ಲಾಧ್ಯಕ್ಷರು, ಹಾಲಿ ಶಾಸಕರು, ಮಾಜಿ ಶಾಸಕರು, ಪರಾಭವಗೊಂಡಿರುವ ಅಭ್ಯರ್ಥಿಗಳು, ಮತ್ತಿತರೆ ಹಿರಿಯ ಮುಖಂಡರನ್ನು ಒಳಗೊಂಡ 31 ತಂಡಗಳನ್ನು ರಚನೆ ಮಾಡಿರುವ ಪಕ್ಷವು, ನವೆಂಬರ್‌ 18ರೊಳಗೆ ವರದಿಗಳನ್ನು ಸಲ್ಲಿಸುವಂತೆ ತಿಳಿಸಿದೆ.

ಈ ಬಗ್ಗೆ ಇವರೆಲ್ಲರ ಜತೆ ಪಕ್ಷದ ಕಚೇರಿಯಲ್ಲಿಂದು ಸಮಾಲೋಚನೆ ನಡೆಸಿದ ನಂತರ ಪಕ್ಷದ ಹಿರಿಯ ಮುಖಂಡರ ಜತೆ ಮಾಧ್ಯಮಗೋಷ್ಠಿ ನಡೆಸಿದ ಮಾಜಿ ಮುಖ್ಯಮಂತ್ರಿ ಹಾಗೂ ಪಕ್ಷದ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರು, ಹಾನಿಗೆ ಒಳಗಾಗಿರುವ ಪ್ರತಿ ಪ್ರದೇಶಕ್ಕೂ ಭೇಟಿ ನೀಡಬೇಕು. ಸಂಕಷ್ಟದಲ್ಲಿರುವ ರೈತರ ಜತೆ ನೇರ ಮಾತುಕತೆ ನಡೆಸಿ ವರದಿಗಳನ್ನು ಸಿದ್ಧ ಮಾಡಬೇಕು. ಅದಾದ ಪಕ್ಷವು ವಿಧಾನ ಮಂಡಲದ ಒಳಗೆ, ಹೊರಗೆ ದೊಡ್ಡ ಮಟ್ಟದಲ್ಲಿ ರೈತರ ಪರವಾಗಿ ದನಿ ಎತ್ತಲಿದೆ ಎಂದು ತಿಳಿಸಿದರು.

ರೈತರು ಮತ್ತೆ ಆತ್ಮಹತ್ಯೆಗೆ ಶರಣಾಗುವ ಸಂದರ್ಭವನ್ನು ಈ ಸರ್ಕಾರವೇ ಸೃಷ್ಟಿ ಮಾಡುತ್ತಿದೆ. ರೈತರು ಬಿಕಾರಿಗಳಾ ಅಥವಾ ಬಿಕ್ಷುಕರಾ? ಅವರ ಬಗ್ಗೆ ಯಾಕೆ ಇಷ್ಟೊಂದು ಅಸಡ್ಡೆಯಿಂದ ಸರ್ಕಾರ ವರ್ತಸುತ್ತಿದೆ? ಐದು ತಿಂಗಳಿಗೆ ಇವರ ಪಾಪದ ಕೊಡ ತುಂಬಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಇದನ್ನೂ ಓದಿ | Karnataka Drought: ಬಿಜೆಪಿ ಬರ ಅಧ್ಯಯನ ಶುರು; ಮಡುಗಟ್ಟಿದ ರೈತರ ಆಕ್ರೋಶ

ಎಲ್ಲ ಜಿಲ್ಲೆಗಳಲ್ಲಿ ರೈತ ಸಾಂತ್ವನ ಯಾತ್ರೆ

ಬರ, ವಿದ್ಯುತ್ ಕ್ಷಾಮ ಸೇರಿ ಅನೇಕ ಗಂಭೀರ ಸಮಸ್ಯೆಗಳಿಂದ ಬಸವಳಿದಿರುವ ರೈತ ಸಮುದಾಯಕ್ಕೆ ಧೈರ್ಯ ತುಂಬುವ ಸಲುವಾಗಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ರೈತ ಸಾಂತ್ವನ ಯಾತ್ರೆ ಕೈಗೊಳ್ಳುತ್ತೇನೆ. ಮುಂಬರುವ ವಿಧಾನ ಮಂಡಲ ಅಧಿವೇಶನ ಮುಗಿದ ಕೂಡಲೇ ನಮ್ಮ ಪಕ್ಷದ ಎಲ್ಲಾ ಶಾಸಕರು, ಕೋರ್ ಕಮಿಟಿ ಸದಸ್ಯರು, ಮಾಜಿ ಸಚಿವರು, ಜಿಲ್ಲಾ ಅಧ್ಯಕ್ಷರು ಹಾಗೂ ಸ್ಥಳೀಯ ಮುಖಂಡರ ಜತೆಗೂಡಿ ಎಲ್ಲಾ ಜಿಲ್ಲೆಗಳಲ್ಲಿ ರೈತ ಸಾಂತ್ವನ ಯಾತ್ರೆ ಮಾಡುತ್ತೇನೆ. ಅವರ ನೋವಿಗೆ ದನಿ ಆಗುತ್ತೇನೆ. ಅವರ ಹಕ್ಕುಗಳಿಗಾಗಿ ಸರ್ಕಾರದ ವಿರುದ್ಧ ಹೋರಾಟ ನಡೆಸುತ್ತೇನೆ ಎಂದು ಕುಮಾರಸ್ವಾಮಿ ಅವರು ಹೇಳಿದರು.

ರಾಜ್ಯದಲ್ಲಿ ಈ ವರ್ಷ ಮುಂಗಾರು ಕೃಷಿ ಚಟುವಟಿಕೆಗಳಲ್ಲಿ ರೈತರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಮಂತ್ರಿಗಳು ಜಿಲ್ಲಾ ಪ್ರವಾಸ ಮಾಡಿ ವರದಿ ಕೊಟ್ಟಿದ್ದಾರೆ. ಕೇಂದ್ರಕ್ಕೆ ಪರಿಹಾರಕ್ಕಾಗಿ ಮನವಿ ಸಲ್ಲಿಸಿದ್ದಾರೆ ಎಂದು ಸಿಎಂ ಹೇಳಿದ್ದಾರೆ. ಇತ್ತೀಚಿನ ದಿನಗಳಲ್ಲಿ ಇಂತಹ ತೀವ್ರ ಬರಗಾಲ ನೋಡಿರಲಿಲ್ಲ ಅಂತ ಸರ್ಕಾರವೇ ಹೇಳಿದೆ. ಮಳೆ ಅಭಾವದಿಂದ 65 ಲಕ್ಷ ಹೆಕ್ಟೇರ್ ಭೂಮಿಯಲ್ಲಿ ಬೆಳೆ ನಾಶ ಆಗಿದೆ ಅಂತ ಕೇಂದ್ರ ಸರ್ಕಾರಕ್ಕೆ ವರದಿಯನ್ನೂ ನೀಡಿದೆ. ಆದರೆ, ರೈತರಿಗೆ ಸಹಾಯ ಹಸ್ತ ಚಾಚುವಲ್ಲಿ ಸೋತಿದೆ ಎಂದು ಟೀಕಾಪ್ರಹಾರ ನಡೆಸಿದರು.

ಇದನ್ನೂ ಓದಿ | ‌Congress Karnataka : ಮಾತನಾಡಿ ರಾಜಕೀಯ ಭವಿಷ್ಯ ಹಾಳು ಮಾಡಿಕೊಳ್ಳಬೇಡಿ; ಶಾಸಕರು, ಸಚಿವರಿಗೆ ಡಿಕೆಶಿ ವಾರ್ನಿಂಗ್!

ಬರ ಅಧ್ಯಯನ ತಂಡಗಳು ಇಂತಿವೆ

Exit mobile version