Site icon Vistara News

JDS Pancharatna: ಆನೇಕಲ್‌ನಲ್ಲಿ ಪಂಚರತ್ನ ಯಾತ್ರೆ ಯಶಸ್ಸಿಗಾಗಿ ಕುರಿ ಬಲಿ ಕೊಟ್ಟ ಅಭಿಮಾನಿಗಳು

Fans sacrifice sheep for pancharatna yatra success in Anekal

Fans sacrifice sheep for pancharatna yatra success in Anekal

ಆನೇಕಲ್: ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ರಾಜ್ಯಾದ್ಯಂತ ಪಂಚರತ್ನ ಯಾತ್ರೆ (JDS Pancharatna) ಕೈಗೊಂಡಿದ್ದು, ರಾಗಿ ಕಣಜ ಆನೇಕಲ್‌ಗೆ ಪ್ರವೇಶ ಮಾಡಲಿರುವ ಹಿನ್ನೆಲೆಯಲ್ಲಿ ಯಾತ್ರೆಯು ಯಶಸ್ವಿಯಾಗಲೆಂದು ಪ್ರಾರ್ಥಿಸಿ ಕುರಿಯೊಂದನ್ನು ಬಲಿ ಕೊಟ್ಟು ಪೂಜೆ ಸಲ್ಲಿಸಲಾಗಿದೆ.

ಕಟೌಟ್‌ಗೆ ಹಾಲಿನ ಅಭಿಷೇಕ ಮಾಡಿದ ಅಭಿಮಾನಿಗಳು

ಬೆಂಗಳೂರು ಹೊಸೂರು ಮುಖ್ಯರಸ್ತೆಯ ಚಂದಾಪುರ ವೃತ್ತದಲ್ಲಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಹಾಗೂ ಮಾಜಿ ಸಿಎಂ ಕುಮಾರಸ್ವಾಮಿ ಅವರ ಭಾವಚಿತ್ರದ ಕಟೌಟ್‌ಗಳಿಗೆ ಅಭಿಮಾನಿಗಳು ಹಾಲಿನ ಅಭಿಷೇಕ ಮಾಡಿದ್ದಾರೆ. ಜತೆಗೆ ಯಾತ್ರೆಗೆ ಯಾವುದೇ ಅಪಶಕುನ ಆಗಬಾರದೆಂದು ಕುರಿ ಬಲಿ ನೀಡಿ ಪೂಜೆ ಸಲ್ಲಿಸಿದ್ದಾರೆ.

ಇದನ್ನೂ ಓದಿ: Modi in Karnataka: ಮೋದಿ, ಮೋದಿ, ಮೋದಿ! 26 ಬಾರಿ ಮೋದಿ ಹೆಸರು ಹೇಳಿದ ಬೊಮ್ಮಾಯಿ!!

ರಾಗಿ ಹಾರದ ಮೂಲಕ ಸ್ವಾಗತ

ರಾಗಿಯ ಕಣಜದ ನಾಡಿನಲ್ಲಿ ಎಚ್‌.ಡಿ. ಕುಮಾರಸ್ವಾಮಿಗೆ ರಾಗಿಯ ಹಾರದೊಂದಿಗೆ ಸ್ವಾಗತ ಕೋರಲಾಗಿದೆ. ಚಂದಾಪುರದಲ್ಲಿ ಬೃಹತ್ ರಾಗಿ ಹಾರ ಸಿದ್ಧವಾಗಿದ್ದು, ಎರಡು ಕ್ರೈನ್ ಮೂಲಕ ರಾಗಿಯ ಹಾರವನ್ನು ಹಾಕಲಾಯಿತು. ಪ್ಯಾಕೆಟ್‌ಗಳಲ್ಲಿ ಜೋಡಣೆ ಮಾಡಿರುವ ಬೃಹತ್ ರಾಗಿ ಹಾರವು ಸುಮಾರು 40 ಅಡಿಗೂ ಹೆಚ್ಚು ಎತ್ತರ ಇದೆ. ಇನ್ನು ಈಗಾಗಲೇ ಸಾವಿರಾರು ಸಂಖ್ಯೆಯಲ್ಲಿ ಜೆಡಿಎಸ್‌ ಮುಖಂಡರು ಹಾಗೂ ಕಾರ್ಯಕರ್ತರು ಭಾಗಿಯಾಗಿದ್ದಾರೆ.

ರಾಜ್ಯದ ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version