ಕೋಲಾರ: ಪ್ರಸ್ತುತ ಸಂದರ್ಭದಲ್ಲಿ ದಲಿತರ ಮೇಲೆ ಆಗುತ್ತಿರುವ ದೌರ್ಜನ್ಯವನ್ನು ತಡೆಯುವ ನಿಟ್ಟಿನಲ್ಲಿ ರಾಜ್ಯದಲ್ಲಿ ಜೆಡಿಎಸ್(JDS Pancharatna) ಸ್ವತಂತ್ರವಾಗಿ ಅಧಿಕಾರಕ್ಕೆ ಬಂದರೆ ದಲಿತ ಸಮಾಜದ ಒಬ್ಬರನ್ನು ಉಪ ಮುಖ್ಯಮಂತ್ರಿ ಮಾಡಲು ತಯಾರಿದ್ದೇವೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ರಾಜ್ಯದಲ್ಲಿ ದಲಿತರ ಮೇಲೆ ನಿರಂತರ ದೌರ್ಜನ್ಯವಾಗುತ್ತಿದೆ. ಆದರೆ, ಈ ಬಗ್ಗೆ ಬಿಜೆಪಿ ಹಾಗೂ ಕಾಂಗ್ರೆಸ್‌ನವರು ಏನು ಕ್ರಮ ಕೈಗೊಂಡಿದ್ದಾರೆ? ಆ ಪಕ್ಷಗಳ ನಾಯಕರು, ನಾವು ದೊಡ್ಡಮಟ್ಟದಲ್ಲಿ ದಲಿತ ಸಮಾಜವನ್ನು ಗುರುತಿಸಿದ್ದೇವೆ ಎಂದು ಹೇಳುತ್ತಾರೆ. ಆದರೆ ಅವರು ದಲಿತರನ್ನು ಜನಸಾಮಾನ್ಯರ ಭಾವನೆಯಲ್ಲಿ ನೋಡಿದರು. ಹೀಗಾಗಿ ದಲಿತರ ಸ್ಥಿತಿಯಲ್ಲಿ ಯಾವುದೇ ಬದಲಾವಣೆಗಳಾಗಲಿಲ್ಲ ಎಂದರು.
ರಾಜ್ಯದಲ್ಲಿ ಜೆಡಿಎಸ್ ಸ್ವತಂತ್ರವಾಗಿ ಅಧಿಕಾರಕ್ಕೆ ಬಂದರೆ, ದಲಿತ ಸಮಾಜಕ್ಕೆ ಸಂಪೂರ್ಣ ರಕ್ಷಣೆ ಒದಗಿಸಲು ಹಾಗೂ ಆ ಸಮಾಜದ ಬಗ್ಗೆ ಈಗಲೂ ಇರುವ ಅಸ್ಪೃಶ್ಯತೆ ಭಾವನೆಯನ್ನು ಸಂಪೂರ್ಣವಾಗಿ ತೊಲಗಿಸಲು ಕಾರ್ಯಕ್ರಮಗಳನ್ನು ಕೊಡುವುದಷ್ಟೇ ಅಲ್ಲ, ದಲಿತ ಸಮಾಜದ ಒಬ್ಬರನ್ನು ಉಪ ಮುಖ್ಯಮಂತ್ರಿ ಮಾಡಲೂ ತಯಾರಿದ್ದೇವೆ ಎಂದು ಹೇಳಿದರು.
ಇದನ್ನೂ ಓದಿ | Election 2023 | ಕೊಪ್ಪಳದ 5 ಕ್ಷೇತ್ರದಲ್ಲಿ ಅಭ್ಯರ್ಥಿ ಹೆಸರು ಘೋಷಿಸಿದ್ದ ಸಿದ್ದು ವಿರುದ್ಧ ಎಐಸಿಸಿಗೆ ದೂರು; ಡಿಕೆಶಿ ಅಸಮಾಧಾನ