Site icon Vistara News

JDS Pancharatna Yatre | ಪಂಚರತ್ನ ರಥಯಾತ್ರೆಯಲ್ಲಿ ಮಗುವಿಗೆ ನಾಮಕರಣ ಮಾಡಿದ ಮಾಜಿ ಸಿಎಂ ಕುಮಾರಸ್ವಾಮಿ

JDS Pancharatna Yatre ಕುಮಾರಸ್ವಾಮಿ

ಚಿಕ್ಕಬಳ್ಳಾಪುರ: ಎರಡನೇ ದಿನದ ಪಂಚರತ್ನ ರಥಯಾತ್ರೆಯು (JDS Pancharatna Yatre) ಗುರುವಾರ ಶಿಡ್ಲಘಟ್ಟ ತಾಲೂಕಿಗೆ ಆಗಮಿಸಿದೆ. ಮೈ ಹುಣಸೇನಹಳ್ಳಿಯ ಬಳಿ ಮಾಜಿ ಸಿಎಂ ಕುಮಾರಸ್ವಾಮಿ ಕಾರ್ಯಕ್ರಮಕ್ಕೆ ಸಿದ್ದತೆ ಬರದಿಂದ ಸಾಗಿದೆ.

ಪಂಚರತ್ನ ರಥಯಾತ್ರೆಯಲ್ಲಿ ಕುಮಾರಸ್ವಾಮಿಯವರು ಮಗುವೊಂದಕ್ಕೆ ನಾಮಕರಣ ಮಾಡುವ ಮೂಲಕ ಅಭಿಮಾನಿಯೊಬ್ಬ ಆಸೆ ಈಡೇರಿಸಿದ್ದಾರೆ.

ಚಿಂತಾಮಣಿ ತಾಲೂಕಿನ ದಾಚಾಪುರ ಗ್ರಾಮದ ದಂಪತಿ ಸುರೇಶ್ ಮತ್ತು ರೂಪಾ ಅವರ ಮಗುವಿಗೆ ಕುಮಾರಸ್ವಾಮಿ ನಾಮಕರಣ ಮಾಡಿದ್ದಾರೆ. ಮಗುವಿಗೆ ರಿಶಿಕ್ ಎಂದು ಹೆಸರಿಟ್ಟು ನಾಮಕರಣ ಮಾಡಿ, ಉಡುಗೊರೆ ರೂಪದಲ್ಲಿ ಹಣವನ್ನು ನೀಡಿದ್ದಾರೆ.

ಇನ್ನು ಮಾಜಿ ಸಿಎಂ ಆಗಮನಕ್ಕಾಗಿ ಡೊಳ್ಳು ಕುಣಿತ, ವೀರಗಾಸೆ, ತಮಟೆ ವಾದ್ಯ ಕಲಾವಿದರಿಂದ ಅದ್ಧೂರಿ ಸ್ವಾಗತಕ್ಕೆ ತಯಾರಿ ನಡೆದಿದೆ. ಇದಕ್ಕೂ ಮೊದಲು ಕುಮಾರಸ್ವಾಮಿ ಗಣಪತಿಗೆ ನವಗ್ರಹ ಪೂಜೆ ಸಲ್ಲಿಸಿದರು.

ಆರೋಗ್ಯವನ್ನೂ ಲೆಕ್ಕಿಸದೆ ಹೋರಾಟ ಮಾಡುತ್ತಿರುವೆ
ನನ್ನ ಆರೋಗ್ಯವನ್ನೂ ಲೆಕ್ಕಿಸದೆ ಹೋರಾಟ ಮಾಡ್ತಿದ್ದೇನೆ ಎಂದು ಶಿಡ್ಲಘಟ್ಟ ಕ್ಷೇತ್ರದ ಹುಣಸನಹಳ್ಳಿಯಲ್ಲಿ ಎಚ್.ಡಿ.ಕುಮಾರಸ್ವಾಮಿ ಮಾತನಾಡಿದ ಅವರು, ರಾಜ್ಯಾದ್ಯಂತ ಪಂಚರತ್ನ ಯೋಜನೆ ನಾಡಿನ ಜನತೆಗೆ ತಲುಪಿಸಬೇಕು. ಕುಟುಂಬದ ಮಗನಾಗಿ ಕೆಲಸ ಮಾಡುತ್ತಿರುವ ರವಿ, ನಿಮ್ಮ ಪ್ರೀತಿ ವಿಶ್ವಾಸ ಗಳಿಸಿದ್ದಾರೆ. ಅವರಿಗೆ ನಿಮ್ಮ ಆಶೀರ್ವಾದ ಬೇಕು. ಜೆಡಿಎಸ್ ಸ್ವತಂತ್ರ ಸರ್ಕಾರ ಬರಲು 123 ಕ್ಷೇತ್ರದಲ್ಲಿ ಗೆಲ್ಲಬೇಕಿದೆ ಎಂದರು.

ಕೋಲಾರ, ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ನಮ್ಮ ಅಭ್ಯರ್ಥಿಗಳನ್ನು ಗೆಲ್ಲಿಸಿ. ಇಡೀ ರಾಜ್ಯದಲ್ಲಿ ರೈತ ಬಂಧುಗಳು, ಯುವಕರಿದ್ದೀರಾ. ನಾಡಿನಾದ್ಯಂತ ಜೆಡಿಎಸ್ ಅಲೆ ಆರಂಭವಾಗಿದೆ. ಪಂಚರತ್ನ ಯೋಜನೆ ಮೂಲಕ ಸಮಾಜದ ಎಲ್ಲರೂ ನೆಮ್ಮದಿಯಿಂದ ಬದುಕಬೇಕು ಎಂದು ಹೇಳಿದರು.

ಪಂಚರತ್ನ ಯೋಜನೆಯನ್ನು ಐದು ವರ್ಷಗಳಲ್ಲಿ ಸಂಪೂರ್ಣ ಮಾಡದಿದ್ದರೆ ಪಕ್ಷವನ್ನು ವಿಸರ್ಜನೆ ಮಾಡುವುದಾಗಿ ಹೇಳಿದ ಕುಮಾರಸ್ವಾಮಿ ಅವರು, ರವಿ ಅವರನ್ನು ಒಮ್ಮೆ ಗೆಲ್ಲಿಸಿ ನಿಮ್ಮೆಲ್ಲರ ಕೆಲಸ ಮಾಡಲು ಅವಕಾಶ ಮಾಡಿಕೊಡಿ ಎಂದು ಜೆಡಿಎಸ್ ಅಭ್ಯರ್ಥಿ ರವಿಕುಮಾರ್ ಪರ ಮಾತನಾಡಿದರು.

ಇದನ್ನೂ ಓದಿ | Rashmika Mandanna | ಕೈ ಸನ್ನೆಯಿಂದಲೇ ರಶ್ಮಿಕಾ ಮಂದಣ್ಣ ಸ್ಟೈಲ್‌ನಲ್ಲಿ ತಿರುಗೇಟು ನೀಡಿದ ರಿಷಬ್‌ ಶೆಟ್ಟಿ: ಆಗಿದ್ದೇನು?

Exit mobile version