Rashmika Mandanna | ಕೈ ಸನ್ನೆಯಿಂದಲೇ ರಶ್ಮಿಕಾ ಮಂದಣ್ಣ ಸ್ಟೈಲ್‌ನಲ್ಲಿ ತಿರುಗೇಟು ನೀಡಿದ ರಿಷಬ್‌ ಶೆಟ್ಟಿ: ಆಗಿದ್ದೇನು? - Vistara News

ಸಿನಿಮಾ

Rashmika Mandanna | ಕೈ ಸನ್ನೆಯಿಂದಲೇ ರಶ್ಮಿಕಾ ಮಂದಣ್ಣ ಸ್ಟೈಲ್‌ನಲ್ಲಿ ತಿರುಗೇಟು ನೀಡಿದ ರಿಷಬ್‌ ಶೆಟ್ಟಿ: ಆಗಿದ್ದೇನು?

ರಶ್ಮಿಕಾ ಮಂದಣ್ಣ (Rashmika Mandanna) ಕೈಗಳಿಂದ ಕೋಟ್ ರೀತಿಯಲ್ಲಿ ಸನ್ನೆ ಮಾಡಿ ನೀಡಿದ ಉತ್ತರಕ್ಕೆ ರಿಷಬ್‌ ಶೆಟ್ಟಿ ತಿರುಗೇಟು ನೀಡಿದ್ದಾರೆ. ಆಗಿದ್ದೇನು?

VISTARANEWS.COM


on

Rashmika Mandanna (Rishab shetty answer )
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು : ರಿಷಬ್‌ ಶೆಟ್ಟಿ ನಿರ್ದೇಶನ ಹಾಗೂ ರಕ್ಷಿತ್‌ ಶೆಟ್ಟಿ ಬಂಡವಾಳ ಹಾಕಿ ನಾಯಕ ನಟನಾಗಿ ನಟಿಸಿದ ‘ಕಿರಿಕ್ ಪಾರ್ಟಿ’ ಮೂಲಕ ನ್ಯಾಷನಲ್‌ ಕ್ರಶ್‌ ರಶ್ಮಿಕಾ ಮಂದಣ್ಣ (Rashmika Mandanna) ಸಿನಿರಂಗಕ್ಕೆ ಪದಾರ್ಪಣೆ ಮಾಡಿದರು. ಸಂದರ್ಶನವೊಂದರಲ್ಲಿ ಮೊದಲ ಸಿನಿಮಾ ಆಫರ್ ಬಂದ ವಿಷಯ ಮಾತನಾಡುವಾಗ ಮೊದಲು ನಟಿಸಿದ ಚಿತ್ರ, ಯಾವ ನಿರ್ಮಾಣ ಸಂಸ್ಥೆ ಎಂದು ಹೆಸರನ್ನು ಎಲ್ಲಿಯೂ ಉಲ್ಲೇಖ ಮಾಡದೆ ಕೈಗಳಿಂದ ಕೋಟ್ ರೀತಿಯಲ್ಲಿ ಸನ್ನೆ ಮಾಡಿ ತೋರಿಸಿದ್ದಾರೆ ನಟಿ ರಶ್ಮಿಕಾ. ಈ ವಿಡಿಯೊಗೆ ಅನೇಕರು ಅಸಮಾಧಾನ ಹೊರ ಹಾಕಿದ್ದಾರೆ. ಅದೇ ರೀತಿ ರಿಷಬ್‌ ಶೆಟ್ಟಿ ಅವರು ಇನ್ನೊಂದು ಸಂದರ್ಶನವೊಂದರಲ್ಲಿ ಸನ್ನೆ ಮಾಡುವುದರ ಮೂಲಕವೇ ಪರೋಕ್ಷವಾಗಿ ರಶ್ಮಿಕಾ ಮಂದಣ್ಣ ಅವರಿಗೆ ತಿರುಗೇಟು ನೀಡಿದ್ದಾರೆ.

ರಶ್ಮಿಕಾ ವಿರುದ್ಧ ನೆಟ್ಟಿಗರು ಫುಲ್‌ ಗರಂ
ಸಂದರ್ಶನವೊಂದರಲ್ಲಿ ರಶ್ಮಿಕಾ ಅವರು ತಮ್ಮ ಸಿನಿ ಪಯಣವನ್ನು ಮಾತನಾಡಿದ್ದಾರೆ. ಈ ವೇಳೆ ʻʻನಾನು ಫ್ರೆಶ್‌ ಫೇಸ್‌ ಎಂಬ ಸ್ಪರ್ಧೆಯಲ್ಲಿ ಭಾಗವಹಿಸಿದ್ದೆ. ಆದರೆ ನನಗೆ ಅದರಲ್ಲಿ ಭಾಗವಹಿಸಲು ಮನಸಿರಲಿಲ್ಲ. ನನ್ನ ಶಿಕ್ಷಕರು ತುಂಬಾ ಪ್ರೋತ್ಸಾಹ ನೀಡಿದರು. ಬಳಿಕ ಅದರಲ್ಲಿ ವಿಜೇತಳಾದೆ. ಪೇಪರ್​ನಲ್ಲಿ ಫೋಟೊ ಬಂತುʼʼ ಎಂಬಿತ್ಯಾದಿ ವಿಚಾರಗಳನ್ನು ಹೇಳಿಕೊಂಡಿದ್ದಾರೆ. ನಂತರ ತಮಗೆ ಮೊದಲ ಸಿನಿಮಾ ಆಫರ್ ಬಂದ ವಿಷಯ ಮಾತನಾಡುವಾಗ ಮೊದಲು ನಟಿಸಿದ ಚಿತ್ರ, ಯಾವ ನಿರ್ಮಾಣ ಸಂಸ್ಥೆ ಎಂದು ಹೆಸರನ್ನು ಎಲ್ಲಿಯೂ ಉಲ್ಲೇಖ ಮಾಡದೆ ಕೈಗಳಿಂದ ಕೋಟ್ ರೀತಿಯಲ್ಲಿ ಸನ್ನೆ ಮಾಡಿ ತೋರಿಸಿದ್ದಾರೆ ನಟಿ. ಈ ಕುರಿತಾಗಿ ನೆಟ್ಟಿಗರು ಗರಂ ಆಗಿದ್ದು, ಟ್ರೋಲ್‌ ಮಾಡಿದ್ದಾರೆ.

ಇದನ್ನೂ ಓದಿ | Rashmika Mandanna | ರಶ್ಮಿಕಾ ಮಂದಣ್ಣ ನಟನೆಯ 2ನೇ ಹಿಂದಿ ಚಿತ್ರ ನೇರವಾಗಿ ಒಟಿಟಿಗೆ? ನಟಿ ಟ್ರೋಲ್‌ ಆಗಿದ್ಯಾಕೆ?

ತಿರುಗೇಟು ನೀಡಿದ ರಿಷಬ್‌ ಶೆಟ್ಟಿ
ಇತ್ತ ರಿಷಬ್‌ ಶೆಟ್ಟಿ ಅವರು ಸಂದರ್ಶನವೊಂದರಲ್ಲಿ ರಶ್ಮಿಕಾ ಮಂದಣ್ಣ ಅವರಿಗೆ ತಿರುಗೇಟು ನೀಡವಂತೆ ಕೈ ಸನ್ನೆಯಲ್ಲಿಯೇ ಉತ್ತರಿಸಿದ್ದಾರೆ. ರಿಷಬ್‌ ಶೆಟ್ಟಿ ಅವರಿಗೆ ಸಂದರ್ಶನಕಾರರು ʻʻರಶ್ಮಿಕಾ, ಸಮಂತಾ, ಕೀರ್ತಿ ಸುರೇಶ್‌ ಮತ್ತು ಸಾಯಿ ಪಲ್ಲವಿ ಇವರೆಲ್ಲರೂ ಒಳ್ಳೆಯ ಕಲಾವಿದರು. ಯಾರ ಜತೆ ಕೆಲಸ ಮಾಡಲು ಇಚ್ಛಿಸುತ್ತೀರಿʼʼ ಎಂದು ಪ್ರಶ್ನೆ ಕೇಳಿದ್ದಾರೆ. ಎಲ್ಲಿಯೂ ರಶ್ಮಿಕಾ ಹೆಸರನ್ನು ಹೇಳದ ರಿಷಬ್‌ ಶೆಟ್ಟಿ ʻʻಹೊಸ ಕಲಾವಿದರ ಜತೆ ಕೆಲಸ ಮಾಡಲು ಇಷ್ಟ. ನೀವು ಹೇಳಿದ ಹೆಸರುಗಳಲ್ಲಿ (ಕೋಟ್‌ ಸನ್ನೆ ಮಾಡಿ) ನಟಿಯರು ನನಗೆ ಇಷ್ಟವಿಲ್ಲ. ಸಾಯಿಪಲ್ಲವಿ ಮತ್ತು ಸಮಂತಾ ಅವರ ಅಭಿನಯ ನನಗೆ ಇಷ್ಟʼʼ ಎಂದು ಖಡಕ್‌ ಆಗಿ ಉತ್ತರ ನೀಡಿದ್ದಾರೆ.

ಸರಿಯಾಗೇ ಉತ್ತರ ನೀಡಿದ್ದೀರಿ ಶೆಟ್ರೆ!
ರಿಷಬ್‌ ಶೆಟ್ಟಿ ಅವರ ಈ ಉತ್ತರಕ್ಕೆ ನೆಟ್ಟಿಗರು ಸರಿಯಾಗೇ ಉತ್ತರ ನೀಡಿದ್ದೀರಿ ಶೆಟ್ರೆ ಎಂದು ಸೋಷಿಯಲ್‌ ಮೀಡಿಯಾದಲ್ಲಿ ಕಮೆಂಟ್‌ ಮೂಲಕ ವ್ಯಕ್ತಪಡಿಸಿದ್ದಾರೆ. ಇನ್ನು ರಶ್ಮಿಕಾ ಅವರು ಈ ಹಿಂದೆ ಅಷ್ಟೇ ತಮಗಾಗುತ್ತಿರುವ ಟ್ರೋಲ್‌ ವಿಚಾರದ ಬಗ್ಗೆ ಇನ್‌ಸ್ಟಾದಲ್ಲಿ ಪತ್ರ ಬರೆದು ಬೇಸರ ವ್ಯಕ್ತಪಡಿಸಿದ್ದರು. ಕಾಂತಾರ ಸಿನಿಮಾ ಕುರಿತಾಗಿಯೂ ರಶ್ಮಿಕಾ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದರು. ಭಾರತೀಯ ಸಿನಿರಂಗದ ದಿಗ್ಗಜರೇ ಚಿತ್ರವನ್ನು ವೀಕ್ಷಿಸಿ ಹಾಡಿಹೊಗಳಿರುವಾಗ ರಶ್ಮಿಕಾ ಚಿತ್ರವನ್ನು ನೋಡಿಲ್ಲ ಎಂದು ಹಿಗ್ಗಾ ಮುಗ್ಗ ಟ್ರೋಲ್‌ ಮಾಡುತ್ತಿದ್ದಾರೆ.

ಇದನ್ನೂ ಓದಿ | Rashmika Mandanna | ನನಗೊಂದು ಗೊಂಬೆ ಕೊಡಿಸಲು ಅಪ್ಪ ಕಷ್ಟಪಡುತ್ತಿದ್ದರು: ರಶ್ಮಿಕಾ ಮಂದಣ್ಣ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

Lok Sabha Election 2024

Lok Sabha Election 2024: ಓದಿದ ಶಾಲೆಯಲ್ಲಿ ಮತ ಹಾಕಿದ ನಟ ರಿಷಬ್‌ ಶೆಟ್ಟಿ; ಕಾಂತಾರ 2 ಸೀಕ್ರೆಟ್‌ ರಿವೀಲ್‌!

Lok Sabha Election 2024 : ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಸಂಜೆ ಮತಗಟ್ಟೆಗೆ ಬಂದು ನಟ ರಿಷಬ್‌ ಶೆಟ್ಟಿ (Rishab Shetty) ಮತದಾನವನ್ನು ಮಾಡಿದ್ದಾರೆ. ಸಾಂಪ್ರದಾಯಿಕವಾಗಿ ವೈಟ್‌ ಆ್ಯಂಡ್‌ ವೈಟ್‌ ಶರ್ಟ್‌ ಪಂಚೆ ತೊಟ್ಟು ಮತಗಟ್ಟೆಗೆ ಆಗಮಿಸಿದ್ದರು. ಇದೇ ವೇಳೆ ಕಾಂತಾರ 2 (Kantara 2) ಚಿತ್ರದ ಬಗ್ಗೆಯೂ ಮಾತನಾಡಿದರು.

VISTARANEWS.COM


on

By

lok sabha Election 2024 Actor Rishb Shetty
Koo

ಉಡುಪಿ: ಲೋಕಸಭಾ ಚುನಾವಣೆ (Lok Sabha Election 2024) ಹಿನ್ನೆಲೆಯಲ್ಲಿ ಉಡುಪಿಯ ಬೈಂದೂರಿನಲ್ಲಿ ಡಿವೈನ್‌ ಸ್ಟಾರ್‌ ಖ್ಯಾತಿಯ ನಟ ರಿಷಬ್ ಶೆಟ್ಟಿ ಮತ ಚಲಾಯಿಸಿದರು. ಬೈಂದೂರಿನ ಕೆರಾಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆ ಸಂಖ್ಯೆ 135 ರಲ್ಲಿ ರಿಷಬ್ (Rishab Shetty) ಮತದಾನ ಮಾಡಿದರು.

ಮತದಾನದ ಬಳಿಕ ಮಾತನಾಡಿನ ನಟ ರಿಷಬ್ ಶೆಟ್ಟಿ ಲೋಕಸಭಾ ಚುನಾವಣೆ ನಡೆಯುವುದು ದೇಶಕ್ಕಾಗಿ, ನಾನು ದೇಶಕ್ಕೆ ಮತ ಹಾಕಿದ್ದೇನೆ. ಮತದಾನ ನಮ್ಮ ಹಕ್ಕು ಜವಾಬ್ದಾರಿ ಅದನ್ನು ಚಲಾಯಿಸಿದ್ದೇನೆ. ಜನ ಕಡಿಮೆ ಇರುತ್ತಾರೆ ಎಂದು ಸಂಜೆ ಬಂದಿದ್ದೇನೆ. ಸರ್ಕಾರದ ನಿರೀಕ್ಷೆ ಹಾಗೂ ಬೇಡಿಕೆ ಹಾಗೂ ರಾಜಕೀಯದ ಬಗ್ಗೆ ಮಾತನಾಡಲ್ಲ. ನನ್ನ ಜವಾಬ್ದಾರಿಯನ್ನು ಮಾಡಿದ್ದೇನೆ ಅಷ್ಟೇ ಅಂದರು.

ರಿಷಬ್ ಶೆಟ್ಟಿ ತಾವು ಓದಿದ ಶಾಲೆಯಲ್ಲಿ ಮತದಾನ ಮಾಡಿದ್ದಾರೆ. ಮಾತ್ರವಲ್ಲ ಈ ಶಾಲೆಯನ್ನು ದತ್ತು ಸ್ವೀಕಾರ ಮಾಡಿ ಅಭಿವೃದ್ಧಿ ಮಾಡುತ್ತಿದ್ದಾರೆ. ಚುನಾವಣೆ ಇರುವುದರಿಂದ ಪೂರ್ತಿ ಕೆಲಸ ಮಾಡಲು ಆಗಿಲ್ಲ. ಶಾಲೆಯ ಗ್ರೌಂಡನ್ನು ಮಕ್ಕಳಿಗೆ ಆಟವಾಡಲು ದೊಡ್ಡದಾಗಿ ಮಾಡಿದ್ದೇವೆ. ಕಟ್ಟಡದ ಕೆಲಸ ಮತ್ತು ಪೀಠೋಪಕರಣ ಕೆಲಸ ಇನ್ನು ಆಗಬೇಕಾಗಿದೆ ಎಂದು ಮಾಹಿತಿ ನೀಡಿದರು.

ಇದನ್ನೂ ಓದಿ: Lok Sabha Election 2024: ಮತ ಹಾಕಲು ವಿದೇಶದಿಂದ ಬಂದರು! ಒಂದೇ ಕುಟುಂಬದ 69 ಮಂದಿಯ ವೋಟ್‌ ಸೆಲ್ಫಿ!

ಚಿತ್ರೀಕರಣ ಮುಗಿಯುವವರೆಗೆ ಎಲ್ಲವೂ ಗೌಪ್ಯ

ಕಾಂತಾರ 2 ಚಿತ್ರದ ಬಗ್ಗೆಯೂ ಮಾತನಾಡಿರುವ ನಟ ರಿಷಬ್ ಶೆಟ್ಟಿ, ಕಾಂತಾರ ಚಿತ್ರದ ಕುರಿತು ಅಧಿಕೃತವಾಗಿ ಹೊಂಬಾಳೆ ಸಂಸ್ಥೆ ಎಲ್ಲವನ್ನೂ ಘೋಷಣೆ ಮಾಡುತ್ತದೆ. ಈಗಾಗಲೇ ಚಿತ್ರೀಕರಣ ಆರಂಭವಾಗಿದ್ದು, ಬಹಳ ಚೆನ್ನಾಗಿ ಕೆಲಸಕಾರ್ಯಗಳು ನಡೀತಾ ಇದೆ. ಮೊದಲಿಗಿಂತ ದೊಡ್ಡ ಜವಾಬ್ದಾರಿಯೊಂದಿಗೆ ದೊಡ್ಡ ತಂಡ ಕೆಲಸ ಮಾಡುತ್ತಿದೆ.

ಹೊಂಬಾಳೆ ಪ್ರೊಡಕ್ಷನ್ ಹೌಸ್ ಸಿಕ್ಕಿರುವುದು ಫಿಲಂ ಮೇಕರ್‌ಗಳಿಗೆ ಒಂದು ಪುಣ್ಯ. ಕಾಂತರದಲ್ಲಿ ಅದ್ಭುತವಾದ ಟೆಕ್ನಿಷಿಯನ್ಸ್‌ಗಳು ಕೆಲಸ ಮಾಡುತ್ತಿದ್ದಾರೆ. ನಿರಂತರವಾಗಿ ಕೆಲಸಗಳು ನಡೆಯುತ್ತಿದ್ದು ಪಾರ್ಟ್ ಬೈ ಪಾರ್ಟ್ ಚಿತ್ರೀಕರಣ ನಡೆಯುತ್ತದೆ. ಜನ ಕಾಂತಾರವನ್ನು ಗೆಲ್ಲಿಸಿದ್ದಾರೆ, ಹೀಗಾಗಿ ಮಾತಿನಲ್ಲಿ ಏನನ್ನು ಹೇಳುವುದಿಲ್ಲ. ಕೆಲಸದ ಮೂಲಕ ಮಾಡಿ ತೋರಿಸಬೇಕು ಎಂದು ಅಂದುಕೊಂಡಿದ್ದೇನೆ.

ಸಿನಿಮಾಗಾಗಿ ಒಂದು ವರ್ಷದಿಂದ ಗಡ್ಡ ಹಾಗೂ ಕೂದಲು ಬಿಟ್ಟಿದ್ದೇನೆ. ಚಿತ್ರೀಕರಣ ಪೂರ್ತಿ ಮುಗಿದ ಮೇಲೆ ಸೆಟ್ ವರ್ಕ್ ಚಿತ್ರೀಕರಣ ಸ್ಥಳಕ್ಕೆ ಕರೆಯುತ್ತೇವೆ. ಚಿತ್ರೀಕರಣ ಮುಗಿಯುವವರೆಗೆ ಬಹಳ ಗೌಪ್ಯತೆಯನ್ನು ಕಾಪಾಡಬೇಕಾಗುತ್ತದೆ. ಅಂತೆ ಕಂತೆಗಳ ಸುದ್ದಿ ಬಹಳಷ್ಟು ಹರಿದಾಡುತ್ತಿದೆ,ಆದರೆ ಚಿತ್ರದ ಬಗ್ಗೆ ಜನಕ್ಕೆ ನಿರೀಕ್ಷೆ ಹೋಗಬಾರದು. ಜನರು ಸಿನಿಮಾವನ್ನು ಚಿತ್ರಮಂದಿರದಲ್ಲಿ ನೋಡಿದರೆ ಒಳ್ಳೆಯದು. ಚಿತ್ರ ತೆರೆಗೆ ಬರುವ ತನಕ ಗೌಪ್ಯತೆ ಕಾಪಾಡಬೇಕು ಜನಕ್ಕೆ ಕುತೂಹಲ ಇರಬೇಕು. ಪೂರ್ತಿ ಕರಾವಳಿ ಭಾಗದಲ್ಲಿ ಚಿತ್ರೀಕರಣ ಮಾಡುತ್ತೇವೆ ಎಂದು ತಿಳಿಸಿದರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಸಿನಿಮಾ

Salman Khan: ಸಲ್ಮಾನ್‌ ಖಾನ್‌ ಮನೆ ಎದುರು ಫೈರಿಂಗ್‌ ಕೇಸ್‌; ಐದನೇ ಆರೋಪಿಯ ಬಂಧನ

Salman Khan: ಇತ್ತೀಚೆಗೆ ಬಾಲಿವುಡ್‌ ನಟ ಸಲ್ಮಾನ್‌ ಖಾನ್‌ ನಿವಾಸದ ಎದುರು ಗುಂಡಿನ ದಾಳಿ ನಡೆಸಿದ್ದ ಪ್ರಕರಣದಲ್ಲಿ ಮತ್ತೊಂದು ಮಹತ್ವದ ಬೆಳವಣಿಗೆ ಸಂಭವಿಸಿದ್ದು, ಕ್ರೈಂ ಬ್ರ್ಯಾಂಚ್‌ ಐದನೇ ಆರೋಪಿಯನ್ನು ಬಂಧಿಸಿದ್ದಾರೆ. ʼʼರಾಜಸ್ತಾನದ ಮೊಹಮ್ಮದ್‌ ಚೌಧರಿಯನ್ನು ಬಂಧಿಸಲಾಗಿದ್ದು, ಈತ ಇಬ್ಬರು ಶೂಟರ್‌ಗಳಾದ ಸಾಗರ್‌ ಪಾಲ್‌ ಮತ್ತು ವಿಕ್ಕಿ ಗುಪ್ತಾ ಅವರಿಗೆ ಹಣ ನೀಡಿದ್ದ ಮಾತ್ರವಲ್ಲ ಅವರು ಸ್ಥಳದಿಂದ ಪರಾರಿಯಾಗಲು ನರೆವಾಗಿದ್ದʼʼ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮೊಹಮ್ಮದ್‌ ಚೌಧರಿಯನ್ನು ಇಂದು (ಮಂಗಳವಾರ) ಮುಂಬೈಗೆ ಕರೆತಂದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು. ವಿಚಾರಣೆಗಾಗಿ ಆತನನ್ನು ವಶಕ್ಕೆ ನೀಡುವಂತೆ ಮನವಿ ಸಲ್ಲಿಸಲಾಗುವುದು ಎಂದು ಮುಂಬೈ ಕ್ರೈಂ ಬ್ರ್ಯಾಂಚ್‌ ತಿಳಿಸಿದೆ.

VISTARANEWS.COM


on

Salman Khan
Koo

ಮುಂಬೈ: ಇತ್ತೀಚೆಗೆ ಬಾಲಿವುಡ್‌ ನಟ ಸಲ್ಮಾನ್‌ ಖಾನ್‌ (Salman Khan) ನಿವಾಸದ ಎದುರು ಗುಂಡಿನ ದಾಳಿ ನಡೆಸಿದ್ದ ಪ್ರಕರಣದಲ್ಲಿ ಮತ್ತೊಂದು ಮಹತ್ವದ ಬೆಳವಣಿಗೆ ಸಂಭವಿಸಿದ್ದು, ಕ್ರೈಂ ಬ್ರ್ಯಾಂಚ್‌ ಐದನೇ ಆರೋಪಿಯನ್ನು ಬಂಧಿಸಿದ್ದಾರೆ. ʼʼರಾಜಸ್ತಾನದ ಮೊಹಮ್ಮದ್‌ ಚೌಧರಿಯನ್ನು ಬಂಧಿಸಲಾಗಿದ್ದು, ಈತ ಇಬ್ಬರು ಶೂಟರ್‌ಗಳಾದ ಸಾಗರ್‌ ಪಾಲ್‌ ಮತ್ತು ವಿಕ್ಕಿ ಗುಪ್ತಾ ಅವರಿಗೆ ಹಣ ನೀಡಿದ್ದ ಮಾತ್ರವಲ್ಲ ಅವರು ಸ್ಥಳದಿಂದ ಪರಾರಿಯಾಗಲು ನರೆವಾಗಿದ್ದʼʼ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮೊಹಮ್ಮದ್‌ ಚೌಧರಿಯನ್ನು ಇಂದು (ಮಂಗಳವಾರ) ಮುಂಬೈಗೆ ಕರೆತಂದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು. ವಿಚಾರಣೆಗಾಗಿ ಆತನನ್ನು ವಶಕ್ಕೆ ನೀಡುವಂತೆ ಮನವಿ ಸಲ್ಲಿಸಲಾಗುವುದು ಎಂದು ಮುಂಬೈ ಕ್ರೈಂ ಬ್ರ್ಯಾಂಚ್‌ ತಿಳಿಸಿದೆ.

ಎಪ್ರಿಲ್‌ 14ರಂದು ಮುಂಬೈಯ ಬಾಂದ್ರಾದಲ್ಲಿರುವ ಸಲ್ಮಾನ್ ಖಾನ್ ಅವರ ಮನೆಯ ಹೊರಗೆ ಗುಂಡಿನ ದಾಳಿ ನಡೆದಿತ್ತು. ದಾಳಿ ನಡೆಸಿದ್ದ ಶೂಟರ್‌ಗಳಾದ ಸಾಗರ್‌ ಪಾಲ್‌ ಮತ್ತು ವಿಕ್ಕಿ ಗುಪ್ತಾ ಎಂಬ ಇಬ್ಬರು ದುಷ್ಕರ್ಮಿಗಳನ್ನು ಬಳಿಕ ಅರೆಸ್ಟ್‌ ಮಾಡಲಾಗಿತ್ತು. ಮುಂಬೈ ಪೊಲೀಸರು ಜೈಲಿನಲ್ಲಿರುವ ಗ್ಯಾಂಗ್​ಸ್ಟರ್ ಲಾರೆನ್ಸ್ ಬಿಷ್ಣೋಯ್ ಮತ್ತು ಅವನ ಕಿರಿಯ ಸಹೋದರ ಅನ್ಮೋಲ್ ಬಿಷ್ಣೋಯ್ ಅವರನ್ನು ಈ ಪ್ರಕರಣದ ಪ್ರಮುಖ ಆರೋಪಿಗಳು ಎಂದು ಘೋಷಿಸಿದ್ದರು.

ಈ ಮಧ್ಯೆ ಗುಂಡಿನ ದಾಳಿ ನಡೆಸಿದ್ದ ಶೂಟರ್‌ಗಳಿಗೆ ಶಸ್ತ್ರಾಸ್ತ್ರಗಳನ್ನು ಪೂರೈಕೆ ಮಾಡಿದ್ದ ಆರೋಪ ಎದುರಿಸುತ್ತಿದ್ದ ಅನೂಜ್‌ ಥಾಪನ್‌ ಕೆಲವು ದಿನಗಳ ಹಿಂದೆ ಪೊಲೀಸ್‌ ಕಸ್ಟಡಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ. ಜೀವನ್ಮರಣದ ನಡುವೆ ಹೋರಾಡುತ್ತಿದ್ದ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಆತ ಕೊನೆಯುಸಿರೆಳೆದಿದ್ದ. ಅನುಜ್ ಥಾಪನ್ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದ ಆತನ ಕುಟುಂಬ ಇದರ ತನಿಖೆಯನ್ನು ಸಿಬಿಐಗೆ ವಹಿಸುವಂತೆ ಕೋರಿ ಬಾಂಬೆ ಹೈಕೋರ್ಟ್ ಮೆಟ್ಟಿಲೇರಿತ್ತು. ಲಾಕಪ್‌ನಲ್ಲಿ ಥಾಪನ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ಹೇಳಿದ್ದರೆ ಆತನ ತಾಯಿ ಇದು ಕೊಲೆ ಎಂದು ಆರೋಪಿಸಿದ್ದರು.

ಗುಂಡಿನ ದಾಳಿಗೆ ಕಾರಣವೇನು?

ಹಲವು ವರ್ಷಗಳ ಹಿಂದಿನ ಕೃಷ್ಣಮೃಗ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಲ್ಮಾನ್‌ ಅವರನ್ನು ಕೊಲ್ಲುವುದಾಗಿ 2018 ರಲ್ಲಿ ಬೆದರಿಕೆ ಹಾಕಿದ ನಂತರ ಬಿಷ್ಣೋಯ್ ಅವರ ಸಹಾಯಕರಲ್ಲಿ ಒಬ್ಬನನ್ನು ಬಂಧಿಸಲಾಯಿತು. ಜೋಧಪುರ್​ನ ಬಿಷ್ಣೋಯ್​ಗಳು ಕೃಷ್ಣಮೃಗವನ್ನು ತಮ್ಮ ಧಾರ್ಮಿಕ ಗುರು ಭಗವಾನ್ ಜಂಬೇಶ್ವರ ಅವರ ಪುನರ್ಜನ್ಮ ಎಂದು ಪರಿಗಣಿಸುತ್ತಾರೆ. ಹೀಗಾಗಿ ಕೃಷ್ಣಮೃಗ ಕೊಲ್ಲುವುದನ್ನು ಬಿಷ್ಣೋಯ್​ಗಳು ಎಂದಿಗೂ ಸಹಿಸುವುದಿಲ್ಲ. ಈ ಕಾರಣಕ್ಕೆ ಸಲ್ಮಾನ್ ಖಾನ್ ಹತ್ಯೆ ಮಾಡಲು ಲಾರೆನ್ಸ್ ಬಿಷ್ಣೋಯ್ ನಿರ್ಧರಿಸಿದ್ದ. ಎಬಿಪಿ ನ್ಯೂಸ್‌ಗೆ ನೀಡಿದ ಇತ್ತೀಚಿನ ಸಂದರ್ಶನದಲ್ಲಿ, ʻʻಸಲ್ಮಾನ್ ಖಾನ್ ಅವರನ್ನು ಕೊಲ್ಲುವುದು ನನ್ನ ಜೀವನದ ಗುರಿ. ಸಲ್ಮಾನ್‌ ಅವರು ಬಿಷ್ಣೋಯ್ ಸಮುದಾಯಕ್ಕೆ ಕ್ಷಮೆಯಾಚಿಸಿದ ನಂತರವೇ ಈ ವಿಷಯ ಕೊನೆಗೊಳ್ಳುತ್ತದೆʼʼ ಎಂದು ಹೇಳಿದ್ದ.

ಇದನ್ನೂ ಓದಿ: Salman Khan: ಸಲ್ಮಾನ್‌ ಖಾನ್‌ ಮನೆ ಹೊರಗೆ ಗುಂಡಿನ ದಾಳಿ; ಶಂಕಿತರ ಫೋಟೊ ಬಿಡುಗಡೆ ಮಾಡಿದ ಪೊಲೀಸರು

ʼʼಸಲ್ಮಾನ್ ಖಾನ್ ಕ್ಷಮೆಯಾಚಿಸಿದರೆ, ಈ ವಿಷಯ ಕೊನೆಗೊಳ್ಳುತ್ತದೆ. ಸಲ್ಮಾನ್ ಅಹಂಕಾರಿ, ಗಾಯಕ ಮೂಸೆವಾಲಾ ಕೂಡ ಹಾಗೇ ಇದ್ದ. ಸಲ್ಮಾನ್ ಖಾನ್‌ನ ಅಹಂ ರಾವಣನಿಗಿಂತ ದೊಡ್ಡದಾಗಿದೆ. ಸಲ್ಮಾನ್ ಖಾನ್ ಬಗ್ಗೆ ನಮ್ಮ ಸಮಾಜದಲ್ಲಿ ಕೋಪವಿದೆ. ಅವರು ನನ್ನ ಸಮಾಜವನ್ನು ಅವಮಾನಿಸಿದರು. ಅವರ ವಿರುದ್ಧ ಪ್ರಕರಣ ದಾಖಲಾಗಿದ್ದರೂ ಅವರು ಕ್ಷಮೆ ಕೇಳಲಿಲ್ಲʼʼ ಎಂದು ಲಾರೆನ್ಸ್ ಬಿಷ್ಣೋಯ್ ಹೇಳಿದ್ದ.

Continue Reading

ಸಿನಿಮಾ

Ramana Avatara Movie: ಬಂಪರ್ ಆಫರ್; ಕೇವಲ 99 ರೂ.ಗೆ ಸಿಗಲಿದೆ ‘ರಾಮನ ಅವತಾರ’ ಸಿನಿಮಾ ಟಿಕೆಟ್

Ramana Avatara Movie: ಸ್ಯಾಂಡಲ್‌ವುಡ್‌ನ ಭರವಸೆಯ ನಾಯಕ ರಿಷಿ ಮತ್ತು ಬಹುಭಾಷಾ ನಡಿ ಪ್ರಣೀತಾ ಸುಭಾಷ್‌ ಮೊದಲ ಬಾರಿ ತೆರೆ ಹಂಚಿಕೊಳ್ಳುತ್ತಿರುವ ಚಿತ್ರ ʼರಾಮನ ಅವತಾರʼ. ಈಗಾಗಲೇ ಈ ಚಿತ್ರ ಪ್ರೇಕ್ಷಕರ ಗಮನ ಸೆಳೆದಿದೆ. ಮೇ 10ರಂದು ಸಿನಿಮಾ ತೆರೆ ಕಾಣಲಿದೆ. ಇದೀ ಚಿತ್ರತಂಡ ಸಿನಿಮಾದ ಟಿಕೆಟ್ ಬೆಲೆಯನ್ನು ಕಡಿಮೆ ಮಾಡಲಾಗಿದೆ. ಸಿಂಗಲ್ ಸ್ಕ್ರೀನ್ ಜತೆಗೆ ಮಲ್ಟಿಫ್ಲೆಕ್ಸ್‌ಗಳಲ್ಲಿ ಟಿಕೆಟ್ ದರ ತಗ್ಗಿಸಲಾಗಿದ್ದು, ಕೇವಲ 99 ರೂ.ಗೆ ʼರಾಮನ ಅವತಾರʼ ಸಿನಿಮಾವನ್ನು ನೀವು ಕಣ್ತುಂಬಿಕೊಳ್ಳಬಹುದು.

VISTARANEWS.COM


on

Ramana Avatara Movie
Koo

ಬೆಂಗಳೂರು: ‘ಕವಲುದಾರಿ’ಯಂತಹ ಗಂಭೀರ ಸಿನಿಮಾ, ‘ನೋಡಿ ಸ್ವಾಮಿ ಇವನು ಇರೋದು ಹೀಗೆ’, ‘ಆಪರೇಷನ್ ಅಲಮೇಲಮ್ಮ’ ದಂತಹ ಕಾಮಿಡಿ ಚಿತ್ರಗಳಲ್ಲಿಯೂ ನಟಿಸಿ ಗಮನ ಸೆಳೆದಿರುವ ನಟ ರಿಷಿ (Rishi) ಇದೀಗ ‘ರಾಮನ ಅವತಾರ’ (Ramana Avatara Movie) ಮೂಲಕ ಪ್ರೇಕ್ಷಕರ ಎದುರು ಬರುತ್ತಿದ್ದಾರೆ. ಈಗಾಗಲೇ ಈ ಚಿತ್ರದ ಪ್ರಚಾರ ಕಾರ್ಯ ಕೂಡ ಭರದಿಂದ ಸಾಗುತ್ತಿದೆ. ವಿಭಿನ್ನ ಪ್ರಮೋಷನ್ ವಿಡಿಯೊ ಮೂಲಕ ʼರಾಮನ ಅವತಾರʼ ಬಳಗವೀಗ ಪ್ರೇಕ್ಷಕರನ್ನು ಸೆಳೆಯುತ್ತಿದೆ. ಈಗ ಚಿತ್ರತಂಡದ ಕಡೆಯಿಂದ ಮೆಗಾ ಆಫರ್‌ ಸಿಕ್ಕಿದೆ. ʼರಾಮನ ಅವತಾರʼ ಸಿನಿಮಾದ ಟಿಕೆಟ್ ಬೆಲೆಯನ್ನು ಕಡಿಮೆ ಮಾಡಲಾಗಿದೆ. ಸಿಂಗಲ್ ಸ್ಕ್ರೀನ್ ಜತೆಗೆ ಮಲ್ಟಿಫ್ಲೆಕ್ಸ್‌ಗಳಲ್ಲಿ ಟಿಕೆಟ್ ದರ ತಗ್ಗಿಸಲಾಗಿದ್ದು, ಕೇವಲ 99 ರೂ.ಗೆ ʼರಾಮನ ಅವತಾರʼ ಸಿನಿಮಾವನ್ನು ನೀವು ಕಣ್ತುಂಬಿಕೊಳ್ಳಬಹುದು.

ಮೇ 9ಕ್ಕೆ ಪ್ರೀಮಿಯರ; ಮೇ 10ಕ್ಕೆ ಚಿತ್ರ ರಿಲೀಸ್

ʼರಾಮನ ಅವತಾರʼ ಚಿತ್ರ ಮೇ 10ಕ್ಕೆ ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ಮೇ 10ಕ್ಕೂ ಮುನ್ನ ಒಂದು ದಿನ ಮೊದಲು ಅಂದರೆ ಮೇ 9ರಂದು ಪೇಯ್ಡ್ ಪ್ರೀಮಿಯರ್ ಶೋ ಏರ್ಪಡಿಸಲಾಗಿದೆ. ಪೇಯ್ಡ್ ಪ್ರೀಮಿಯರ್ ಶೋ ಟಿಕೆಟ್ ದರ ಕೂಡ 99 ರೂ. ನಿಗದಿ ಮಾಡಲಾಗಿದೆ. ಜತೆಗೆ ಚಿತ್ರ ಬಿಡುಗಡೆ ದಿನ ಅಂದರೆ ಮೇ 10ಕ್ಕೂ ಕೂಡ ಟಿಕೆಟ್ ಬೆಲೆ 99 ರೂ. ಇರಲಿದೆ. ಒಟ್ಟಿನಲ್ಲಿ ಮೇ 9 ಹಾಗೂ ಮೇ 10ರಂದು ನೀವು ʼರಾಮನ ಅವತಾರʼ ಸಿನಿಮಾವನ್ನು 99 ರೂ.ಗೆ ವೀಕ್ಷಿಬಹುದು.

ʼರಾಮನ ಅವತಾರʼ ಸಿನಿಮಾದಲ್ಲಿ ರಿಷಿಗೆ ಜೋಡಿಯಾಗಿ ಪ್ರಣೀತಾ ಸುಭಾಷ್  ಹಾಗೂ ಶುಭ್ರ ಅಯ್ಯಪ್ಪ ಸಾಥ್ ಕೊಟ್ಟಿದ್ದಾರೆ. ಅರುಣ್ ಸಾಗರ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ವಿಕಾಸ್ ಪಂಪಾಪತಿ ಸಾರಥ್ಯದಲ್ಲಿ ಚಿತ್ರ ಮೂಡಿ ಬಂದಿದ್ದು, ನಿರ್ದೇಶಕರಾಗಿ ಇವರಿಗೆ ಇದು ಮೊದಲ ಸಾಹಸ. ʼರಾಮನ ಅವತಾರʼ ಸಿನಿಮಾದ ಮೂಲಕ ವಿಕಾಸ್ ಮಾರ್ಡನ್ ರಾಮನ ಕಥೆಯನ್ನು ಹೇಳೋದಿಕ್ಕೆ ಹೊರಟಿದ್ದಾರೆ. ಟ್ರೈಲರ್‌ ನೋಡುತ್ತಿದ್ದರೆ ರಾಮಾಯಣ ನೆನಪಿಸುವ ಒಂದಷ್ಟು ದೃಶ್ಯಗಳು ಕಾಣುತ್ತವೆ. ರಾಮ ಹೆಗೆ ಜೆಂಟಲ್ ಮ್ಯಾನ್ ಆಗ್ತಾನೆ? ರಾವಣನ ರೀತಿ ಸಮಸ್ಯೆಗಳನ್ನು ಹೇಗೆ ಎದುರಿಸ್ತಾನೆ ಎನ್ನುವುದನ್ನು ಕಟ್ಟಿ ಕೊಡಲಾಗದೆ.

ಸ್ಟಾರ್ ಫ್ಯಾಬ್ ಪ್ರೊಡಕ್ಷನ್ನಡಿ ‘ಆಪರೇಷನ್ ಅಲಮೇಲಮ್ಮ’ ಸಿನಿಮಾ ನಿರ್ಮಾಣ ಮಾಡಿದ್ದ ಅಮರೇಜ್ ಸೂರ್ಯವಂಶಿ ಚಿತ್ರ ನಿರ್ಮಾಣ ಮಾಡಿದ್ದಾರೆ. ರೋಮ್ಯಾಂಟಿಕ್ ಕಾಮಿಡಿ ಜಾನರ್ ಈ ಸಿನಿಮಾಗೆ ವಿಷ್ಣುಪ್ರಸಾದ್ ಹಾಗೂ ಸಮೀರ್ ದೇಶ್ ಪಾಂಡೇ ಕ್ಯಾಮೆರಾ ಕೈಚಳಕವಿದ್ದು, ಜೂಡಾ ಸ್ಯಾಂಡಿ ಟ್ಯೂನ್ ಹಾಕಿದ್ದು, ಅಮರನಾಥ್ ಸಂಲಕನವಿದೆ. ಉಡುಪಿ, ಬೆಂಗಳೂರು ಸುತ್ತುಮುತ್ತ ಶೂಟಿಂಗ್ ನಡೆಸಲಾಗಿದೆ.

ಈ ಹಿಂದೆ ಚಿತ್ರದ ಬಗ್ಗೆ ಮಾತನಾಡಿದ್ದ ನಿರ್ದೇಶಕ ವಿಕಾಸ್ ಪಂಪಾಪತಿ, ʻʻಈ ಸಿನಿಮಾ ಕ್ಯಾರೆಕ್ಟರ್ ಜರ್ನಿ ಹೇಳುತ್ತಿದ್ದೇವೆ. ರಾಮ ಪಾತ್ರಧಾರಿ ಅವನಿಗೆ ಅವನೇ ಜೆಂಟಲ್ ಮ್ಯಾನ್ ಎಂದು ಹೇಳಿಕೊಂಡು ಓಡಾಡುತ್ತಾ ಇರುತ್ತಾನೆ. ಅವನು ಹೇಗೆ ಜೆಂಟಲ್ ಮ್ಯಾನ್ ಆಗುತ್ತಾನೆ? ಅವನ ಜೀವನದಲ್ಲಿ ನಡೆದ ಘಟನೆಗಳು ಅವನನ್ನು ಹೇಗೆ ಬದಲಾಯಿಸುತ್ತದೆ? ರಾಮನ ಹೇಗೆ ಜೆಂಟಲ್ ಮ್ಯಾನ್ ಆಗುತ್ತಾನೆ? ಎನ್ನುವುದನ್ನು ಎಂಟರ್ಟೈನಮೆಂಟ್ ಆಗಿ ಹೇಳಿದ್ದೇವೆ. ರಾಮನ ಅವತಾರ ಎಂದು ಹೇಗೆ ಹೆಸರಟ್ಟಿದ್ದೇವೆ ಎಂದರೆ ಎಲ್ಲರ ಲೈಫ್ ನಲ್ಲಿಯೂ ಒಂದಲ್ಲ ಒಂದು ರಾಮಾಯಣ ನಡೆಯುತ್ತದೆ. ಸೀತೆ ತರ ಹೆಂಡತಿ, ಲಕ್ಷ್ಮಣ ರೀತಿ ತಮ್ಮ, ರಾವಣನಿಂದ ಆಗುವ ಸಮಸ್ಯೆ. ಈ ರೀತಿ ಸಮಸ್ಯೆಗಳು ಎಲ್ಲರ ಜೀವನದಲ್ಲಿ ನಡೆಯುತ್ತವೆ. ಆ ಘಟನೆಗಳನ್ನು ಚಿತ್ರದಲ್ಲಿ ತೋರಿಸಲಾಗಿದೆʼʼ ಎಂದು ತಿಳಿಸಿದ್ದರು.

ಇದನ್ನೂ ಓದಿ: Cauvery Theatre: ಬೆಂಗಳೂರಿನಲ್ಲಿ ಪ್ರದರ್ಶನ ನಿಲ್ಲಿಸಿದ ʻಕಾವೇರಿʼ ಥಿಯೇಟರ್! ಮುಂದೇನು?

Continue Reading

ಕರ್ನಾಟಕ

Ramana Avatara Movie: ಹಿಂದುಗಳ ಧಾರ್ಮಿಕ ಭಾವನೆಗೆ ಧಕ್ಕೆ; ‘ರಾಮನ ಅವತಾರ’ ಚಿತ್ರ ನಿಷೇಧಿಸಲು ಆಗ್ರಹ!

Ramana Avatara Movie: ʼರಾಮನ ಅವತಾರ’ ಕನ್ನಡ ಚಲನಚಿತ್ರವನ್ನು ನಿಷೇಧಿಸಬೇಕು ಎಂದು ಕರ್ನಾಟಕ ಚಲನಚಿತ್ರ ಮಂಡಳಿಗೆ ಹಿಂದು ಜನಜಾಗೃತಿ ಸಮಿತಿ ಮನವಿ ಮಾಡಿದೆ. ಚಿತ್ರದ ವಿರುದ್ಧ ಹಿಂದುಗಳು ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿರುವ ಆರೋಪ ಕೇಳಿಬಂದಿದೆ.

VISTARANEWS.COM


on

Ramana Avatara Movie
Koo

ಬೆಂಗಳೂರು: ಕೋಟ್ಯಂತರ ಹಿಂದುಗಳು ಅತ್ಯಂತ ಭಕ್ತಿಯಿಂದ ಪೂಜಿಸುವ ಪ್ರಭು ಶ್ರೀ ರಾಮಚಂದ್ರ ಮತ್ತು ರಾಮಾಯಣ ಧರ್ಮಗ್ರಂಥದ ಅಪಮಾನ ಮಾಡಿರುವ ʼರಾಮನ ಅವತಾರ’ (Ramana Avatara Movie) ಕನ್ನಡ ಚಲನಚಿತ್ರವನ್ನು ನಿಷೇಧಿಸಬೇಕು ಎಂದು ಹಿಂದು ಜನಜಾಗೃತಿ ಸಮಿತಿ ಒತ್ತಾಯಿಸಿದೆ. ಈ ಬಗ್ಗೆ ಕರ್ನಾಟಕ ಚಲನಚಿತ್ರ ಮಂಡಳಿ ಅಧ್ಯಕ್ಷ ಎನ್.ಎಂ. ಸುರೇಶ್ ಅವರಿಗೆ ಹಿಂದು ಜನಜಾಗೃತಿ ಸಮಿತಿಯ ಶರತ್ ಕುಮಾರ್ ನೇತೃತ್ವದಲ್ಲಿ ಮನವಿ ಸಲ್ಲಿಸಲಾಗಿದೆ.

ವಿನಯ ಪಂಪಾಪತಿ ಮತ್ತು ವಿಕಾಸ ಪಂಪಾಪತಿ ನಿರ್ದೇಶನದ ಹಾಗೂ ಅಮ್ರೆಜ್ ಸೂರ್ಯವಂಶಿ ನಿರ್ಮಾಣದ ‘ರಾಮನ ಅವತಾರ’ ಎಂಬ ಕನ್ನಡ ಚಲನಚಿತ್ರ ಮೇ 10 ಕ್ಕೆ ಬಿಡುಗಡೆಗೊಳ್ಳಲಿದ್ದು, ಅದರ ಟೀಸರ್ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಅದರಲ್ಲಿ ಕೋಟ್ಯಂತರ ಹಿಂದುಗಳು ಅತ್ಯಂತ ಭಕ್ತಿಯಿಂದ ಪೂಜಿಸುವ ಪ್ರಭು ಶ್ರೀ ರಾಮಚಂದ್ರ ಮತ್ತು ರಾಮಾಯಣ ಧರ್ಮಗ್ರಂಥದ ಅಪಮಾನ ಮಾಡಲಾಗಿದೆ. ಆದ್ದರಿಂದ ಸಿನಿಮಾದ ಹೆಸರನ್ನು ಬದಲಾಯಿಸಬೇಕು ಮತ್ತು ಅದರಲ್ಲಿನ ರಾಮಾಯಣದ ಅಪಮಾನಾತ್ಮಕ ಸನ್ನಿವೇಶಗಳನ್ನು ತೆಗೆದುಹಾಕಬೇಕೆಂದು ಹಿಂದು ಜನಜಾಗೃತಿ ಸಮಿತಿ ಆಗ್ರಹಿಸಿದೆ.

ರಾಮನ ಅವತಾರ ಚಿತ್ರದಲ್ಲಿ ರಾಮನ ವೇಷದಲ್ಲಿ ನಟ ರಿಷಿ.

ಚಿತ್ರದ ಟ್ರೈಲರ್‌ನಲ್ಲಿ ‘ರಾಮ’ ಹೆಸರಿನ ಚಿತ್ರದ ನಾಯಕ ‘ಯಾವ ಊರಿನ ಜನ ನನ್ನನ್ನು ಊರಿಂದ ಹೊರಗೆ ತಳ್ಳಿದರೋ ಅದೇ ಜನ ನನಗೆ ಗೌರವ ಕೊಡುವ ತನಕ ನಾನು ಇಲ್ಲೇ ಎಲ್ಲದರೂ ರಸ್ತೆಯಲ್ಲಿ ಕಾಲ ಕಳೆಯುತ್ತೇನೆ’ ಎನ್ನುತ್ತಾನೆ, ಇದು ರಾಮಾಯಣ ಧರ್ಮಗ್ರಂಥಕ್ಕೆ ಮಾಡಿದ ಘೋರ ಅಪಮಾನವಾಗಿದೆ. ಚಿತ್ರನಟ ‘ರಾಮನ’ ಹೆಸರಿನಲ್ಲಿ ಚುನಾವಣೆಗೆ ನಿಂತಿರುತ್ತಾನೆ, ಅಲ್ಲಿ ‘ಯಾರ ಮನೆ ಮುಂದೆ ಕಸ ಇದ್ದರೆ ರಾಮನಿಗೆ ಕಾಲ್ ಮಾಡಿ’ ಎಂದು ಕರೆ ನೀಡಲಾಗುತ್ತದೆ. ಇನ್ನು ಚಿತ್ರ ನಾಯಕಿ ರಾಮಾಯಣದಂತೆ ರಾಮನನನ್ನು ಜಿಂಕೆಯ ಚಿತ್ರವಿರುವ ಕಾರಿನ ಹಿಂದೆ ಓಡಿಸಿ ನಂತರ ಅವಳನ್ನು ಕಿಡ್ನ್ಯಾಪ್ ಮಾಡುತ್ತಿರುವಂತೆ ತೋರಿಸಲಾಗಿದೆ. ಅಷ್ಟೇ ಅಲ್ಲದೆ ರಾಮನ ವೇಷದಲ್ಲಿ ಚಿತ್ರದ ನಾಯಕ ಖಳನಾಯಕರೊಂದಿಗೆ ಫೈಟಿಂಗ್ ಮಾಡುತ್ತಿರುವಂತೆ ತೋರಿಸಲಾಗಿದೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ಇದನ್ನೂ ಓದಿ | Megha Dhade: ನಮ್ಮ ದೇಶ ಬಿಟ್ಟು ನರಕಕ್ಕೆ ಹೋಗಿ ಎಂದು ರಾಹುಲ್‌ ಗಾಂಧಿ ವಿರುದ್ಧ ʻಬಿಗ್‌ ಬಾಸ್‌ʼ ವಿಜೇತೆ ಆಕ್ರೋಶ!

ಹಿಂದು ಜನಜಾಗೃತಿ ಸಮಿತಿಯ ಶರತ್ ಕುಮಾರ್ ಮಾತನಾಡಿ, ಭಾರತ ಸೇರಿ ವಿಶ್ವಾದ್ಯಂತ ಪ್ರಭು ಶ್ರೀರಾಮನನ್ನು ಪೂಜಿಸಲಾಗುತ್ತಿದೆ. ರಾಮನಿಗಾಗಿ ಸಾವಿರಾರು ಹಿಂದುಗಳು ತಮ್ಮ ಪ್ರಾಣತ್ಯಾಗ ಮಾಡಿ ಭವ್ಯ ರಾಮಮಂದಿರ ಕಟ್ಟಿದ್ದಾರೆ. ಹೀಗಿರುವಾಗ ಈ ಚಿತ್ರದಲ್ಲಿ ಶ್ರೀರಾಮನ ವೇಷವನ್ನು ನಾಯಕನಿಗೆ ತೊಡಿಸಿ, ಪೊಲೀಸರು ಶ್ರೀರಾಮನನ್ನು ಅಟ್ಟಾಡಿಸುವಂತೆ ತೋರಿಸಲಾಗಿದೆ. ಕಾಮಿಡಿ ಚಿತ್ರ ಮಾಡುವ ಗೀಳಿನಲ್ಲಿ ಪವಿತ್ರ ರಾಮಾಯಣ ಮತ್ತು ಪ್ರಭು ಶ್ರೀರಾಮನ ಘೋರ ಅಪಮಾನ ಮಾಡಿರುವುದು ಕಂಡುಬರುತ್ತದೆ ಎಂದು ಆರೋಪಿಸಿದ್ದಾರೆ.

ಈ ಹಿಂದೆ ಇದೇ ಕಾರಣಕ್ಕೆ ಈ ಚಲನಚಿತ್ರ ಬಿಡುಗಡೆಯಾಗಲು ವಿರೋಧ ವ್ಯಕ್ತವಾಗಿತ್ತು, ಆದರೆ ಚಿತ್ರದಲ್ಲಿ ಬದಲಾವಣೆಗಳನ್ನು ಮಾಡಿರುವಂತೆ ಕಂಡರೂ ಚಿತ್ರದ ಹೆಸರು ಮತ್ತು ಅದರಲ್ಲಿನ ತುಣುಕುಗಳಲ್ಲಿ ಇನ್ನೂ ರಾಮನ ಅಪಮಾನ ಎದ್ದು ಕಾಣಿಸುತ್ತಿದೆ. ಕಾಮಿಡಿ ಚಿತ್ರ ರಚಿಸುವ ಉದ್ದೇಶವಿದ್ದಿದ್ದರೆ ‘ರಾಮನ ಅವತಾರ’ವೆಂದೇ ಏಕೆ ಹೆಸರಿಡಬೇಕಿತ್ತು ? ಇತರ ಪಂಥೀಯರ ಶ್ರದ್ಧಾಸ್ಥಾನಗಳ ಮೇಲೆ ಈ ರೀತಿಯ ಕಾಮಿಡಿ ಚಿತ್ರ ರಚಿಸುವ ಧೈರ್ಯ ತೋರುವರೆ? ಕೀಳುಮಟ್ಟದ ಸಿನಿಮಾ ಪ್ರಚಾರಕ್ಕಾಗಿ ಹಿಂದೂಗಳ ಧಾರ್ಮಿಕ ಭಾವನೆಗೆ ನೋವುಂಟು ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ಇದು ಭಾರತೀಯ ದಂಡ ಸಂಹಿತೆ 295, 298 ಮತ್ತು 295 A ಪ್ರಕಾರ ಗಂಭೀರ ಅಪರಾಧವಾಗಿದೆ. ಅದಲ್ಲದೇ ಸಿನಿಮಾಟೋಗ್ರಾಫ್ ಆಕ್ಟ್ 1952 ನ ಕಲಂ 5 B ಪ್ರಕಾರ ಇದು ಸೆನ್ಸಾರ್ ಮಂಡಳಿ ನಿಯಮದ ಉಲ್ಲಂಘನೆಯಾಗಿದೆ. ದೇಶದಲ್ಲಿ ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿರುವಾಗ ಧಾರ್ಮಿಕ ಭಾವನೆಗೆ ನೋವುಂಟು ಮಾಡುವ ಸಿನಿಮಾ ಮಾಡಿ ಕಾನೂನು ಸುವ್ಯವಸ್ಥೆಗೆ ಧಕ್ಕೆ ಉಂಟು ಮಾಡುವುದು ನೀತಿ ಸಂಹಿತೆ ಉಲ್ಲಂಘನೆ ಆಗಿದೆ. ಈ ಚಿತ್ರದ ಸೆನ್ಸಾರ್ ಪ್ರಮಾಣ ಪತ್ರ ರದ್ದುಗೊಳಿಸದಿದ್ದರೆ ರಾಜ್ಯಾದ್ಯಂತ ಆಂದೋಲನ ನಡೆಸಲಾಗುವುದು ಎಂದಿದ್ದಾರೆ.

ಈ ಮನವಿಯಲ್ಲಿ ಪ್ರಭು ಶ್ರೀರಾಮನ ಹೆಸರಿನ ಮತ್ತು ರಾಮಾಯಣದ ಸನ್ನಿವೇಶಗಳಿರುವ ಹಿಂದುಗಳ ಧಾರ್ಮಿಕ ಭಾವನೆಗೆ ನೋವುಂಟು ಮಾಡುವ ದೃಶ್ಯಗಳನ್ನು ಚಿತ್ರದಿಂದ ತೆಗೆಯಬೇಕು ಮತ್ತು ‘ರಾಮನ ಅವತಾರ’ ಎಂದರೆ ಜನರಿಗೆ ಇದು ತ್ರೇತಾಯುಗದ ಪ್ರಭು ಶ್ರೀರಾಮನದ್ದೇ ಕಥೆಯೆಂದೆನಿಸುತ್ತದೆ, ಆದರೆ ವಾಸ್ತವದಲ್ಲಿ ಇದು ಕಾಮಿಡಿ ಚಲನಚಿತ್ರವಾಗಿರುವುದರಿಂದ ಚಿತ್ರದ ಹೆಸರು ಬದಲಿಸಬೇಕು ಎಂದು ಆಗ್ರಹಿಸಲಾಗಿದೆ.

ಇದನ್ನೂ ಓದಿ | Rahul Gandhi : ಸುಳ್ಳು ಹರಡಬೇಡಿ, ಸುಮ್ಮನಿರಿ; ರಾಹುಲ್​ ಗಾಂಧಿಗೆ ಬಹಿರಂಗ ಪತ್ರ ಬರೆದು ಕುಟುಕಿದ ಯೂನಿವರ್ಸಿಟಿಗಳ ಕುಲಪತಿಗಳು

ಮನವಿ ಸಲ್ಲಿಕೆ ವೇಳೆ ಹಿಂದು ಜನಜಾಗೃತಿ ಸಮಿತಿಯ ನೀಲೇಶ್ವರ, ನಿರಂಜನ ನಾರಾಯಣಕರ, ಪ್ರಶಾಂತ್ ದಾಸರಹಳ್ಳಿ, ರಾಷ್ಟ್ರೀಯ ಹಿಂದು ಪರಿಷತ್‌ನ ರಾಜ್ಯಾಧ್ಯಕ್ಷ ಸುರೇಶ್ ಗೌಡ, ನಗರ ಜಿಲ್ಲಾಧ್ಯಕ್ಷರಾದ ವಿಕ್ರಂ ಶೆಟ್ಟಿ ಅವರು ಉಪಸ್ಥಿತರಿದ್ದರು.

Continue Reading
Advertisement
70.94 percent voting in Koppal Lok Sabha constituency says Koppal DC Nalin Atul
ಕೊಪ್ಪಳ2 hours ago

Lok Sabha Election 2024: ಕೊಪ್ಪಳ ಲೋಕಸಭಾ ಕ್ಷೇತ್ರದಲ್ಲಿ ಶೇ 70.94ರಷ್ಟು ಮತದಾನ

Rampura PSI Mahesh Hosapete admitted to the hospital Hanagal village road accident injured persons
ಕರ್ನಾಟಕ2 hours ago

Road Accident: ಅಪಘಾತವಾಗಿ ರಕ್ತದ ಮಡುವಿನಲ್ಲಿ ಬಿದ್ದ ಯುವಕರನ್ನು ಆಸ್ಪತ್ರೆಗೆ ಸೇರಿಸಿದ ಪಿಎಸ್‌ಐ

Lok Sabha Election 2024
ಕರ್ನಾಟಕ2 hours ago

Lok Sabha Election 2024: 2ನೇ ಹಂತದಲ್ಲಿ ಶೇ.70.41 ಮತದಾನ; ಕಳೆದ ಬಾರಿಗಿಂತ ಹೆಚ್ಚು, ಚಿಕ್ಕೋಡಿಯಲ್ಲಿ ಗರಿಷ್ಠ

Mayawati
ಪ್ರಮುಖ ಸುದ್ದಿ2 hours ago

Mayawati: ನೇಮಿಸಿದ 5 ತಿಂಗಳಲ್ಲೇ ಸೋದರಳಿಯನನ್ನು ಉತ್ತರಾಧಿಕಾರಿ ಹುದ್ದೆಯಿಂದ ತೆಗೆದ ಮಾಯಾವತಿ!

IPL 2024
ಪ್ರಮುಖ ಸುದ್ದಿ2 hours ago

IPL 2024 : ರಾಜಸ್ಥಾನ್​ ವಿರುದ್ಧ ಡೆಲ್ಲಿಗೆ 20 ರನ್​ ಗೆಲುವು, ಪ್ಲೇಆಫ್ ಕನಸು ಜೀವಂತ

Music Festival
ಬೆಂಗಳೂರು3 hours ago

Music Festival: ಬೆಂಗಳೂರಿನಲ್ಲಿ ಮೇ 12ರಂದು ಸಪ್ತಕ ʼಸಂಗೀತ ಸಂಭ್ರಮʼ

Amanatullah Khan
ದೇಶ3 hours ago

Amanatullah Khan: ಪೆಟ್ರೋಲ್‌ ಬಂಕ್‌ ಸಿಬ್ಬಂದಿ ಮೇಲೆ ಆಪ್‌ ಎಂಎಲ್‌ಎ ಪುತ್ರನಿಂದ ಹಲ್ಲೆ; ಬಿತ್ತು ಕೇಸ್

Yuzvendra Chahal
ಕ್ರಿಕೆಟ್3 hours ago

Yuzvendra Chahal : ಟಿ20 ವಿಕೆಟ್​​ಗಳ ಗಳಿಕೆಯಲ್ಲಿ ನೂತನ ದಾಖಲೆ ಬರೆದ ಸ್ಪಿನ್ನರ್ ಯಜ್ವೇಂದ್ರ ಚಹಲ್​

Bescom Helpline
ಕರ್ನಾಟಕ3 hours ago

BESCOM Helpline: ಮಳೆ ಹಾನಿ; ದೂರು ಸಲ್ಲಿಸಲು ಬೆಸ್ಕಾಂ ಗ್ರಾಹಕರಿಗೆ ಪರ್ಯಾಯ ವಾಟ್ಸ್‌ಆ್ಯಪ್‌, ದೂರವಾಣಿ ಸಂಖ್ಯೆ

Nissan India
ಆಟೋಮೊಬೈಲ್4 hours ago

Nissan India : ಉಚಿತ ಏಸಿ ರಿಪೇರಿ ಮಾಡಿಸಿಕೊಳ್ಳಲು ನಿಸ್ಸಾನ್ ಕಾರು ಮಾಲೀಕರಿಗೆ ಇಲ್ಲಿದೆ ಅವಕಾಶ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Prajwal Revanna Case HD Revanna has severe chest pain Admission in Victoria
ರಾಜಕೀಯ5 hours ago

Prajwal Revanna Case: ಎಚ್.ಡಿ. ರೇವಣ್ಣಗೆ ಹೆಚ್ಚಾದ ಎದೆ ನೋವು; ಸಲೈನ್‌ ಹಾಕಿ ಕಳಿಸಿದ ವೈದ್ಯರು

Karnataka Weather Forecast
ಮಳೆ8 hours ago

Karnataka Weather : ಹಾಸನ, ಚಿಕ್ಕಮಗಳೂರಲ್ಲಿ ಆಲಿಕಲ್ಲು ಸಹಿತ ಭಾರಿ ಮಳೆ; ನಾಳೆ ಬಿರುಗಾಳಿ ಎಚ್ಚರಿಕೆ

Prajwal Revanna Case Government work against Revanna HD Kumaraswamy gives details of the case
ರಾಜಕೀಯ10 hours ago

Prajwal Revanna Case: ರೇವಣ್ಣರಿಗೆ ಖೆಡ್ಡಾ ತೋಡಿದ್ದು ಸರ್ಕಾರ; ಎಲ್ಲೆಲ್ಲಿ ಏನೇನು ಮಾಡಲಾಯಿತೆಂಬ ಇಂಚಿಂಚು ಡಿಟೇಲ್ಸ್‌ ಕೊಟ್ಟ ಎಚ್‌ಡಿಕೆ!

Prajwal Revanna Case 2nd accused in KR Nagar victim abduction case sent to SIT custody Trouble for Revanna
ಕ್ರೈಂ1 day ago

Prajwal Revanna Case: ಕೆ.ಆರ್.‌ ನಗರ ಸಂತ್ರಸ್ತೆ ಕಿಡ್ನ್ಯಾಪ್‌ ಕೇಸ್‌ನ 2ನೇ ಆರೋಪಿ SIT ಕಸ್ಟಡಿಗೆ; ರೇವಣ್ಣಗೆ ಸಂಕಷ್ಟ?

karnataka weather forecast
ಮಳೆ1 day ago

Karnataka Weather : ಬೆಂಗಳೂರು ಸೇರಿ ಹಲವೆಡೆ ಮತ್ತೆ ಅಬ್ಬರಿಸುತ್ತಿರುವ ಮಳೆ; ಇನ್ನೊಂದು ವಾರ ಅಲರ್ಟ್‌

Prajwal Revanna Case DK Shivakumar behind Prajwal video leak Devaraje Gowda demands CBI probe
ಕ್ರೈಂ1 day ago

Prajwal Revanna Case: ಪ್ರಜ್ವಲ್‌ ವಿಡಿಯೊ ಲೀಕ್‌ ಹಿಂದೆ ಇರೋದು ಡಿಕೆಶಿ; ದಾಖಲೆ ತೋರಿಸಿ, ಸಿಬಿಐಗೆ ಕೇಸ್‌ ವಹಿಸಲು ದೇವರಾಜೇಗೌಡ ಆಗ್ರಹ

Dina bhavishya
ಭವಿಷ್ಯ2 days ago

Dina Bhavishya : ಈ ರಾಶಿಯವರಿಗೆ ಇಂದು ಹುಡುಕಿಕೊಂಡು ಬರಲಿವೆ ಹೊಸ ಅವಕಾಶಗಳು

Prajwal Revanna Case HD Revanna sent to judicial custody Shift to Parappana Agrahara
ಕ್ರೈಂ2 days ago

Prajwal Revanna Case: ಎಸ್‌ಐಟಿ ಕಸ್ಟಡಿಗೆ ಮಾಜಿ ಸಚಿವ ಎಚ್‌.ಡಿ. ರೇವಣ್ಣ; ಮತ್ತೆ ತೀವ್ರ ವಿಚಾರಣೆ

Prajwal Revanna Case No evidence against me its a conspiracy says HD Revanna
ಕರ್ನಾಟಕ2 days ago

Prajwal Revanna Case: ನನ್ನ ವಿರುದ್ಧ ಯಾವುದೇ ಸಾಕ್ಷಿಗಳಿಲ್ಲ, ಇದೊಂದು ಷಡ್ಯಂತ್ರ: ಎಚ್‌.ಡಿ. ರೇವಣ್ಣ ಫಸ್ಟ್‌ ರಿಯಾಕ್ಷನ್‌!

Narendra Modi
ದೇಶ2 days ago

Narendra Modi: ರಾಮನಗರಿ ಅಯೋಧ್ಯೆಯಲ್ಲಿ ಮೋದಿ ಭರ್ಜರಿ ರೋಡ್‌ ಶೋ; ಲೈವ್‌ ಇಲ್ಲಿ ವೀಕ್ಷಿಸಿ

ಟ್ರೆಂಡಿಂಗ್‌