Site icon Vistara News

Reserved forest : ರಕ್ಷಿತಾರಣ್ಯದಲ್ಲಿ ಜೀಪ್‌ ರೇಸ್‌; 10 ಮಹೀಂದ್ರಾ ಥಾರ್‌ ಜಪ್ತಿ

Jeep race in Reserved forest at sakaleshpura

ಹಾಸನ: ರಕ್ಷಿತಾರಣ್ಯದಲ್ಲಿ (Reserved forest) ಅಕ್ರಮ ಪ್ರವೇಶ ಮಾಡಿದ್ದಲ್ಲದೆ, ಆಫ್ ರೋಡ್ ರೇಸ್ (Off road Jeep Race) ನಡೆಸಿದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಹತ್ತು ವಾಹನಗಳನ್ನು ವಶಕ್ಕೆ (Ten vehicles seized) ಪಡೆದಿದ್ದಾರೆ. ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಅಚ್ಚರಡಿ ಗ್ರಾಮದಲ್ಲಿ ಈ ಘಟನೆ ನಡೆದಿದೆ.

ಗ್ರಾಮದ ಸರ್ವೆ ನಂಬರ್ 100ರ ರಕ್ಷಿತಾರಣ್ಯದಲ್ಲಿ ಆಫ್ ರೋಡ್ ರೇಸ್ ನಡೆಸಲಾಗಿದೆ. ಈ ಮಾಹಿತಿ ಗೊತ್ತಾಗುತ್ತಿದ್ದಂತೆ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಹೋಗಿದ್ದಾರೆ. ಅಲ್ಲಿ ವಾಹನಗಳ ರೇಸ್‌ ನಡೆಸುತ್ತಿರುವುದು ಗಮನಕ್ಕೆ ಬಂದಿದೆ. ಹೀಗಾಗಿ ಅವುಗಳನ್ನು ತಕ್ಷಣವೇ ಜಪ್ತಿ ಮಾಡಿ ವಶಕ್ಕೆ ಪಡೆದಿದ್ದಾರೆ.

ಇದನ್ನೂ ಓದಿ: Nitin Gadkari : ನಿತಿನ್‌ ಗಡ್ಕರಿಗೆ ಜೀವ ಬೆದರಿಕೆ ಹಾಕಿದವನಿಗೆ ಉಗ್ರನ ಪ್ರಚೋದನೆ?

ಕೇಸ್‌ ದಾಖಲು

ಇದರ ಜತೆಗೆ ವಾಹನ ಚಾಲನೆ ಮಾಡಿದವರ ವಿರುದ್ಧ ಅರಣ್ಯ ಕಾಯ್ದೆಯಡಿ ಪ್ರಕರಣವನ್ನು ದಾಖಲು (case registered under the Forest Act) ಮಾಡಲಾಗಿದೆ. ಹೊರ ಜಿಲ್ಲೆಗಳಿಂದ ಈ ಭಾಗದ ರೆಸಾರ್ಟ್‌ಗೆ ಬರುವವರು ಈ ರೀತಿ ಮಾಡುತ್ತಿರುವುದಾಗಿ ತಿಳಿದು ಬಂದಿದೆ. ಸ್ಥಳೀಯ ಕೆಲವು ರೆಸಾರ್ಟ್‌ಗಳಿಗೆ ಬಂದವರು ಹೀಗೆ ತಮ್ಮ ವಾಹನಗಳನ್ನು ತಂದು ರೇಸ್‌ ನಡೆಸುತ್ತಿದ್ದಾರೆ. ಈ ಬಗ್ಗೆ ಸಾಕಷ್ಟು ದೂರುಗಳು ಸಹ ಬಂದಿತ್ತು. ಅಲ್ಲದೆ, ರೆಸಾರ್ಟ್‌ಗಳಿಗೂ ಮಾಹಿತಿ ನೀಡಲಾಗಿತ್ತು ಎನ್ನಲಾಗಿದೆ.

ಇಷ್ಟಾದರೂ ಇಂಥ ಪ್ರಕರಣಗಳು ಹೆಚ್ಚಾಗಿದ್ದರಿಂದ ಈಗ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗಿದೆ. ಅಕ್ರಮವಾಗಿ ರಕ್ಷಿತಾರಣ್ಯ ಪ್ರವೇಶ (Illegal entry into Reserved forest‌) ಮಾಡಿದವರ ಮೇಲೆ ಪ್ರಕರಣ ದಾಖಲು ಮಾಡಿಕೊಂಡು, ಅವರ ವಾಹನಗಳನ್ನು ಜಪ್ತಿ ಮಾಡಲಾಗಿದೆ.

ರೆಸಾರ್ಟ್‌ ಮಾಲೀಕರಿಂದ ತಪ್ಪು ಮಾಹಿತಿ?

ವೀಕೆಂಡ್‌ಗೆಂದು ರೆಸಾರ್ಟ್‌ಗೆ ಬಂದಿದ್ದವರಿಂದ ರಕ್ಷಿತಾರಣ್ಯದಲ್ಲಿ ಮನಬಂದಂತೆ ವಾಹನ‌ವನ್ನು ಚಲಾಯಿಸಲಾಗಿದೆ. ವಾಹನ ಚಾಲನೆ ಮಾಡಿ ಸೋಲೋ ಹುಲ್ಲುಗಾವಲಿಗೆ ಸಹ ಹಾನಿಯಾಗಿದೆ ಎಂಬ ಆರೋಪ ಕೇಳಿಬಂದಿದೆ. ಹತ್ತು ಮಹೇಂದ್ರ ಥಾರ್ ಮೂಲಕ ರೇಸ್ ನಡೆಸಲಾಗುತ್ತಿತ್ತು. ಕೆಲವು ರೆಸಾರ್ಟ್ ಮಾಲೀಕರಿಂದ ತಪ್ಪು ಮಾಹಿತಿ ಹಿನ್ನೆಲೆಯಲ್ಲಿ ಪ್ರವಾಸಿಗರಿಂದ ಅರಣ್ಯಕ್ಕೆ ಅಕ್ರಮ ಪ್ರವೇಶ ನಡೆದಿದೆ ಎಂದು ಅಧಿಕಾರಿಗಳಿಗೆ ಈ ವೇಳೆ ಮಾಹಿತಿ ಬಂದಿದೆ ಎನ್ನಲಾಗಿದೆ.

ಇದನ್ನೂ ಓದಿ: Electricity load shedding : ‌ಈ ಮಳೆಗಾಲ ಮುಗಿಯುವುದರೊಳಗೇ ಲೋಡ್‌ ಶೆಡ್ಡಿಂಗ್?

ಈಗಾಗಲೇ ಹಲವು ರೆಸಾರ್ಟ್‌ಗಳಿಗೆ ನೋಟಿಸ್ ನೀಡಲಾಗಿದೆ ಎಂದು ಪ್ರವಾಸಿಗರಿಗೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಆದರೆ, ಇನ್ನು ಮುಂದೆ ಅಕ್ರಮ ಪ್ರವೇಶದ ವಿರುದ್ಧ ಕಠಿಣ ಕ್ರಮವನ್ನು ಕೈಗೊಳ್ಳುವುದಾಗಿ ಅರಣ್ಯ ಇಲಾಖೆ ಅಧಿಕಾರಿಗಳು ಎಚ್ಚರಿಕೆಯನ್ನು ನೀಡಿದ್ದಾರೆ.

Exit mobile version