Site icon Vistara News

Joida News: ಕರ್ನಾಟಕ ಪ್ರದೇಶ ಕಿಸಾನ್ ಕಾಂಗ್ರೆ‌‌ಸ್ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ರವಿ ರೇಡಕರ ನೇಮಕ

Ravi Redakar Karnataka Pradesh Kisan Congress

#image_title

ಜೋಯಿಡಾ: ಜೋಯಿಡಾದ ಕ್ರಿಯಾಶೀಲ ಹೋರಾಟಗಾರ ರವಿ ರೇಡಕರ ಅವರು ಕಾಂಗ್ರೆಸ್‌ ಪಕ್ಷಕ್ಕೆ ಸೇರಿದ್ದು, ಅವರನ್ನು ಕರ್ನಾಟಕ ಪ್ರದೇಶ ಕಿಸಾನ್ ಕಾಂಗ್ರೆ‌‌ಸ್ ನ (Kisan Congress) ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿದೆ. ರಾಜ್ಯ ಕಿಸಾನ್ ಕಾಂಗ್ರೆಸ್‌ ಅಧ್ಯಕ್ಷ ಸಚಿನ್ ಮೀಗಾ ಅವರು ಈ ನೇಮಕ ಮಾಡಿದ್ದಾರೆ.

ಹಳಿಯಾಳ ಶಾಸಕ ಆರ್.ವಿ.ದೇಶಪಾಂಡೆ ಅವರ ನೇತೃತ್ವದಲ್ಲಿ ಗುರುವಾರ (ಫೆ.೨೩) ಅಧಿಕೃತವಾಗಿ ನೇಮಕ ಪತ್ರ ನೀಡಲಾಯಿತು. ಶಾಸಕ ದೇಶಪಾಂಡೆ ಅವರು ಶಾಲು ಹಾಕಿ ಮತ್ತು ನೇಮಕ ಪತ್ರ ನೀಡಿ ರವಿ ರೇಡಕರ ಅವರನ್ನು ಪಕ್ಷಕ್ಕೆ ಬರ ಮಾಡಿಕೊಂಡರು. ಈ ಸಂದರ್ಭದಲ್ಲಿ ಜೋಯಿಡಾದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿನಯ ದೇಸಾಯಿ ಮತ್ತು ಕಾರ್ಯಕರ್ತರು ಹಾಜರಿದ್ದರು.

ಇದನ್ನೂ ಓದಿ: Paternity Leave: ಜನನ ಪ್ರಮಾಣ ಭಾರೀ ಕುಸಿತ: ನೂತನ ಅಪ್ಪಂದಿರಿಗೆ ರಜೆ ಹೆಚ್ಚಿಸಲು ಮುಂದಾದ ಸಿಂಗಾಪುರ

ರವಿ ರೇಡಕರ ಅವರು ಕಳೆದ ಮೂರು ದಶಕಗಳಿಂದ ಹಲವು ಸಾಮಾಜಿಕ ಸಂಘಟನೆಗಳು ಹಾಗೂ ಅನೇಕ ಹೋರಾಟಗಳ ಮುಖಾಂತರ ಜಿಲ್ಲೆಯಲ್ಲಿ ಜನಮನ್ನಣೆ ಗಳಿಸಿದ್ದರು. ‘ಕಾಳಿ ಬ್ರಿಗೇಡ್’ ಸಂಘಟನೆಯು ರಾಜ್ಯದಲ್ಲಿ ಉತ್ತಮ ಹೆಸರು ಪಡೆದಿತ್ತು. ಇವತ್ತು ಕಿಸಾನ್ ಕಾಂಗ್ರೆಸ್ ನ ರಾಜ್ಯ ಪ್ರಧಾನ ಕಾರ್ಯದರ್ಶಿ ಆಗುವ ಮೂಲಕ ಹೊಸ ಇನ್ನಿಂಗ್ಸ್ ಪ್ರಾರಂಭಿಸಿದರು.

ಇದನ್ನೂ ಓದಿ: Wrestling: ಏಷ್ಯನ್ ಚಾಂಪಿಯನ್‌ಶಿಪ್​; ಭಾರತದಿಂದ ಕಜಕಿಸ್ತಾನಕ್ಕೆ ಸ್ಥಳಾಂತರ

“ಇವತ್ತು ಕಿಸಾನ್ ಕಾಂಗ್ರೆಸ್‌ ರಾಜ್ಯದ ಜವಾಬ್ದಾರಿ ವಹಿಸಿಕೊಳ್ಳಲು ಹಾಗೂ ರಾಜ್ಯದ ಪ್ರಭಾವಿ ನಾಯಕ ದೇಶಪಾಂಡೆ ಅವರ ನೇತೃತ್ವದಲ್ಲಿ ಪಕ್ಷ ಸೇರ್ಪಡೆ ಮಾಡುವುದು ತುಂಬಾ ಸಂತಸ ತಂದಿದೆ. ಅವಕಾಶ ನೀಡಿದ ರಾಜ್ಯದ ಪ್ರಭಾರಿ, ಹಾಗೂ ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ರಣದೀಪ್ ಸಿಂಗ್ ಸುರ್ಜೆವಾಲಾ, ಪಿಸಿಸಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ, ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ, ಶಾಸಕರಾದ ಆರ್.ವಿ.ದೇಶಪಾಂಡೆ‌, ಕಿಸಾನ್ ಕಾಂಗ್ರೆಸ್ ರಾಜ್ಯ ಅಧ್ಯಕ್ಷ ಸಚಿನ್ ಮೀಗಾ, ಭೀಮಣ್ಣ ನಾಯ್ಕ, ಜಿಲ್ಲಾ ಅಧ್ಯಕ್ಷ ಸಾಯಿ ಗಾಂವಕರ, ಹಿಂ.ವ. (ಎಲ್.ಡಿ.ಎಮ್) ಸೆಲ್ ನ ರಾಷ್ಟ್ರೀಯ ಸಂಯೋಜಕ ನಾಗರಾಜ ನಾರ್ವೆಕರ, ಜೋಯಿಡಾ ಬ್ಲಾಕ್ ಅಧ್ಯಕ್ಷ ವಿನಯ ದೇಸಾಯಿ ಮತ್ತು ಸಹಕಾರ ನೀಡಿದ ಕಾಂಗ್ರೆಸ್ ಪಕ್ಷದ ಎಲ್ಲ ಕಾರ್ಯಕರ್ತರಿಗೂ ನಾನು ಚಿರಋಣಿಯಾಗಿದ್ದೇನೆ. ಪಕ್ಷವನ್ನು ಗೆಲ್ಲಿಸಲಿಕ್ಕೆ ಹಾಗೂ ಕಿಸಾನ್ ಸಂಘಟನೆಗಾಗಿ ಸರ್ವತೋಮುಖವಾಗಿ ಶ್ರಮ ಹಾಕುತ್ತೇನೆ” ಎಂದು ಕಿಸಾನ್ ಕಾಂಗ್ರೆಸ್‌ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿ ರೇಡಕರ್ ಹೇಳಿದರು.

ಕಾಳಿ ಬ್ರಿಗೇಡ್ ಮುಖ್ಯ ಸಂಚಾಲಕ ಸ್ಥಾನಕ್ಕೆ ರಾಜೀನಾಮೆ

ಬುಧವಾರ (ಫೆ.೨೨) ನಡೆದ ಬ್ರಿಗೇಡ್ ತುರ್ತು ಸಭೆಯಲ್ಲಿ ಕಾಳಿ ಬ್ರಿಗೇಡ್ ಸಂಚಾಲಕ ಸ್ಥಾನಕ್ಕೆ ರವಿ ರೇಡಕರ್ ಅವರು ರಾಜೀನಾಮೆ ನೀಡಿದರು. ಕಾಂಗ್ರೆಸ್ ಪಕ್ಷದ ಕಿಸಾನ ಸೆಲ್‌ನ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ನೇಮಕಗೊಂಡಿದ್ದರಿಂದ ಕಾಳಿ ಬ್ರಿಗೇಡ್ ನಿಯಮಾವಳಿ ಪ್ರಕಾರ ರಾಜೀನಾಮೆ ನೀಡಿದರು. ಹೊಸ ಮುಖ್ಯ ಸಂಚಾಲಕರಾಗಿ ವಕೀಲರಾದ ಸುನಿಲ್ ದೇಸಾಯಿ ಅವರನ್ನು ಆಯ್ಕೆ ಮಾಡಲಾಯಿತು.

ಇದನ್ನೂ ಓದಿ: UPI LITE ಸೇವೆ ಆರಂಭಿಸಿದ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್, ಇದರಿಂದ ಏನು ಲಾಭ?

Exit mobile version