ಬೆಂಗಳೂರು: ಹಿಂದುತ್ವ, ಗೋಮಾತೆ, ಗೋರಕ್ಷಣೆ ಬಗ್ಗೆ ಮಾತನಾಡುವ, ಗೋವಿನ ಬಗ್ಗೆ ಪೂಜನೀಯ ಭಾವವನ್ನು ಎಲ್ಲರೂ ಬೆಳೆಸಿಕೊಳ್ಳಬೇಕು ಎಂದು ಹೇಳುವ ಬಿಜೆಪಿ ಈಗ ಮುಜುಗರಕ್ಕೀಡಾಗಿದೆ. ಜ.೫ ಮತ್ತು ಜ.೬ರಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ (JP Nadda) ಅವರು ರಾಜ್ಯ ಪ್ರವಾಸ ಕೈಗೊಂಡಿದ್ದರು. ಈ ವೇಳೆ ತುಮಕೂರಿನ ಕಾರ್ಯಕ್ರಮದಲ್ಲಿ ಗೋಪೂಜೆ ನೆರವೇರಿಸಿದ್ದರು. ಈ ವೇಳೆ ಅವರು ಶೂ ಧರಿಸಿರುವುದು ಈಗ ವಿವಾದಕ್ಕೆ ಕಾರಣವಾಗಿದೆ. ಕಾಂಗ್ರೆಸ್ ಈ ಬಗ್ಗೆ ಟ್ವೀಟ್ ಮಾಡಿ ಟೀಕಿಸಿದೆ.
ತುಮಕೂರಿನಲ್ಲಿ ಜ.೫ರಂದು ಹಮ್ಮಿಕೊಂಡಿದ್ದ ತುಮಕೂರು ಮತ್ತು ಮಧುಗಿರಿ ಸಂಘಟನಾ ಜಿಲ್ಲೆಗಳ ಶಕ್ತಿ ಕೇಂದ್ರ ಪ್ರಮುಖರ ಸಭೆ ಉದ್ಘಾಟನೆ ವೇಳೆ ಜೆ.ಪಿ ನಡ್ಡಾ ಗೋಪೂಜೆ ನೆರವೇರಿಸಿದ್ದರು. ಈ ವೇಳೆ ಅವರು ಶೂ ಧರಿಸಿದ್ದರು. ಇದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗಿತ್ತು. ಈಗ ಆ ಫೋಟೊವನ್ನು ಯೂತ್ ಕಾಂಗ್ರೆಸ್ ತನ್ನ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, ಬಿಜೆಪಿ ನಡೆಯನ್ನು ಪ್ರಶ್ನೆ ಮಾಡಿದೆ.
“ಚಪ್ಪಲಿ ಹಾಕಿಕೊಂಡು ಗೋಪೂಜೆ ಮಾಡಬಹುದಾ? ಪ್ರಜೆಗಳೇ ಹಿಂದು ಅನ್ನೋದು ಬಿಜೆಪಿಗರಿಗೆ ಚುನಾವಣೆ ವಸ್ತು ಅಷ್ಟೇ” ಎಂದು ಟ್ವೀಟ್ ಮಾಡಿದೆ.
ಇದನ್ನೂ ಓದಿ | Cattle festival | ಬೂಕನಬೆಟ್ಟದ ದನಗಳ ಜಾತ್ರೆ ರದ್ದು ವಿರುದ್ಧ ರೈತರ ಆಕ್ರೋಶ, 3 ದಿನದ ಅವಕಾಶ ನೀಡಲು ಪಟ್ಟು