ಕಲಬುರಗಿ: ಅಕ್ರಮವಾಗಿ (Illegal) ಅಕ್ಕಿ (Rice) ಸಾಗಾಟ ಮಾಡುತ್ತಿದ್ದ ವ್ಯಕ್ತಿಯೋರ್ವನನ್ನು ಚಿತ್ತಾಪುರ ಠಾಣೆಯ ಪೊಲೀಸರು ಬಂಧಿಸಿದ್ದು , ಆತನಿಂದ 21.90 ಕ್ವಿಂಟಾಲ್ ಅಕ್ಕಿಯನ್ನು ವಶಪಡಿಸಿಕೊಳ್ಳಲಾಗಿದೆ.
ಚಿತ್ತಾಪುರದಿಂದ ದಂಡಗುಂಡ ಗ್ರಾಮಕ್ಕೆ ಅಕ್ರಮವಾಗಿ ಅಕ್ಕಿ ಸಾಗಿಸಲಾಗುತ್ತಿದೆ ಎಂಬ ಖಚಿತ ಮಾಹಿತಿ ಪಡೆದ ಪೊಲೀಸರು ದಾಳಿ ನಡೆಸಿ, ಅಕ್ಕಿ ಸಮೇತ ವಾಹನವನ್ನು ಜಪ್ತಿ ಮಾಡಲಾಗಿದ್ದು, ಚಾಲಕನನ್ನು ಬಂಧಿಸಿದ್ದಾರೆ..
ಘಟನೆಯ ಹಿನ್ನೆಲೆ ಏನು?
ದಂಡಗುಂಡ ಗ್ರಾಮದ ಗ್ರಾಮದ ಬಸ್ಸುಗೌಡ ಎಂಬುವವರು ಅಕ್ರಮವಾಗಿ ಮಾರಾಟ ಮಾಡಲೆಂದು ವಾಹನ ಚಾಲಕ ಮಲ್ಲೇಶಿ ಬಸ್ಸಪ್ಪ ಎಂಬುವವನಿಂದ ವಿವಿಧೆಡೆಯಿಂದ ಅಕ್ಕಿ ಸಂಗ್ರಹಿಸಿಕೊಂಡು ಗ್ರಾಮಕ್ಕೆ ಸಾಗಾಟ ಮಾಡುತ್ತಿದ್ದರು. ಬಳಿಕ ಆ ಗ್ರಾಮದಿಂದ ಬೇರೆಡೆಗೆ ಅಕ್ಕಿ ಮಾರಾಟ ದಂಧೆ ನಡೆಯುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: Kedarnath Temple: ಕೇದಾರನಾಥ ದೇಗುಲ ಚಿನ್ನದ ಹಗರಣ; ಉನ್ನತ ಸಮಿತಿ ರಚನೆಗೆ ಸರ್ಕಾರ ನಿರ್ಧಾರ
ಪಟ್ಟಣದ ಭುವನೇಶ್ವರಿ ವೃತ್ತದ ಹತ್ತಿರ ಅಕ್ಕಿ ತುಂಬಿಕೊಂಡು ಪಿಕಪ್ ವಾಹನ ಸಾಗುತ್ತಿದೆ ಎನ್ನುವ ಖಚಿತ ಮಾಹಿತಿ ಆಧರಿಸಿ ಆಹಾರ ಇಲಾಖೆಯ ಆಹಾರ ನಿರೀಕ್ಷಕ ಹೀರಾಸಿಂಗ್, ಪೊಲೀಸ್ ಸಿಬ್ಬಂದಿಯೊಂದಿಗೆ ದಾಳಿ ನಡೆಸಿದ್ದರು. ಆಗ 7,32,850 ಲಕ್ಷ ಮೌಲ್ಯದ 21.90 ಕ್ವಿಂಟಾಲ್ ಅಕ್ಕಿ ಜಪ್ತಿ ಮಾಡಿದ್ದಾರೆ.
ಇದನ್ನೂ ಓದಿ: Amruthadhare Kannada Serial: ಹೆಣ್ಮಕ್ಕಳ ಮೂಕ ವೇದನೆಗೆ ದನಿಯಾದ ಭೂಮಿಕಾ: ನಟಿಯ ಅಭಿನಯಕ್ಕೆ ಮನಸೋತ ಪ್ರೇಕ್ಷಕರು!
ಘಟನಾ ಸ್ಥಳಕ್ಕೆ ಪಿಎಸ್‌ಐ ಚೇತನ್ ಪೂಜಾರಿ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಈ ಕುರಿತು ಅಹಾರ ಇಲಾಖೆಯ ನಿರೀಕ್ಷಕ ಹೀರಾಸಿಂಗ್ ದೂರು ನೀಡಿದ್ದು, ಚಿತ್ತಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.