Site icon Vistara News

ಚಿಂಚೋಳಿ ತಾಲೂಕಿನಲ್ಲಿ ಭೂಕಂಪನ, ಭಾರಿ ಶಬ್ದ

Earthquake In Karnataka 

ಕಲಬುರಗಿ: ಚಿಂಚೋಳಿ ತಾಲೂಕಿನ ನಾಲ್ಕು ಗ್ರಾಮಗಳಲ್ಲಿ ಲಘು ಭೂ ಕಂಪನದ ಅನುಭವವಾಗಿದೆ.

ರಾತ್ರಿ 10.59ರ ಸುಮಾರಿಗೆ ಭೂ ಕಂಪನವಾಗಿದ್ದು, ಭೂಮಿಯ ಆಳದಲ್ಲಿ ಗಡಗಡ ಎಂಬ ಭಾರಿ ಶಬ್ದ ಕೇಳಿಬಂದಿದೆ. ಚಿಂಚೋಳಿ ತಾಲ್ಲೂಕಿನ ಚಿಮ್ಮಾಇದ್ಲಾಯಿ, ದಸ್ತಾಪುರ, ಐಪಿ ಹೊಸಳ್ಳಿ ಹಾಗೂ ಸುಲೇಪೇಟ್‌ನಲ್ಲಿ ಕಂಪನದ ಅನುಭವವಾಗಿದೆ. ಭಾರಿ ಶಬ್ದ ಹಾಗೂ ಕಂಪನದಿಂದ ಬೆಚ್ಚಿಬಿದ್ದ ಗ್ರಾಮಸ್ಥರು ಭಯಭೀತರಾಗಿ ಮನೆಯಿಂದ ಹೊರಗಡೆ ಓಡಿ ಬಂದಿದ್ದಾರೆ.

ಈ ಹಿಂದೆ ಗಡಿಕೇಶ್ವರದಲ್ಲಿ ಆಗುತ್ತಿದ್ದ ಭೂ ಕಂಪನ ಹಾಗೂ ಭಾರೀ ಶಬ್ದ ಈಗ ಸಮೀಪದ ಗ್ರಾಮಗಳಿಗೂ ವಿಸ್ತರಿಸಿದೆ. ವಿಜಯಪುರ ಸುತ್ತಮುತ್ತ ಆತಂಕ ಸೃಷ್ಟಿಸಿದ್ದ ಭೂಕಂಪನ ಈಗ ಚಿಂಚೋಳಿಗೂ ವಿಸ್ತರಿಸಿದೆ.

Exit mobile version