ಕಲಬುರಗಿ: ಕುಡಿದ ಮತ್ತಿನಲ್ಲಿ ಈಜಲು ಹೋಗಿ (Drowned in Water) ಯುವಕನೊರ್ವ ನೀರುಪಾಲಾಗಿದ್ದಾನೆ. ಕಲಬುರಗಿ ಜಿಲ್ಲೆ ಕಮಲಾಪುರ ತಾಲೂಕಿನ ಪಟವಾಡ ಗ್ರಾಮದ ಬಳಿ ಘಟನೆ ನಡೆದಿದೆ. ಹೈದ್ರಾಬಾದ್ ಮೂಲದ ಮಹ್ಮದ್ ಸಾಜೀದ್ ಮೃತ ದುರ್ದೈವಿ.
ಮಹ್ಮದ್ ತನ್ನ ಗೆಳೆಯರೊಂದಿಗೆ ಕಮಲಾಪುರ ಪಕ್ಕದ ದರ್ಗಾ ಜಾತ್ರೆಗೆ ಹೊರಟಿದ್ದ. ಮಾರ್ಗ ಮಧ್ಯೆ ಬ್ರಿಜ್ ಕಂ ಬ್ಯಾರೇಜಲ್ಲಿ ಈಜಲು ನೀರಿಗೆ ಇಳಿದಿದ್ದ. ಕಂಠ ಪೂರ್ತಿ ಕುಡಿದು ಅದೇ ಮತ್ತಿನಲ್ಲಿ ಈಜಲು ಹೋದ ಮಹ್ಮದ್ ನೀರಿನಲ್ಲಿ ಮುಳುಗಿದ್ದ. ಗೆಳೆಯರ ಕಣ್ಣೆದುರೇ ನೀರಲ್ಲಿ ಮುಳುಗಿ ಸಾವನ್ನಪ್ಪುವ ದೃಶ್ಯ ಮೊಬೈಲ್‌ನಲ್ಲಿ ಸೆರೆಯಾಗಿತ್ತು.
ಬ್ರಿಜ್ ಮೇಲಿದ್ದ ಮಹ್ಮದ್ ಈಜುವುದನ್ನು ಇನ್ನೊಬ್ಬ ಗೆಳೆಯ ತನ್ನ ಮೊಬೈಲ್‌ನಲ್ಲಿ ರೆಕಾರ್ಡ್ ಮಾಡಿದ್ದ. ನೋಡನೋಡುತ್ತಿದ್ದಂತೆ ಮಹ್ಮದ್ ಈಜಲು ಆಗದೆ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದ. ಇನ್ನೂ ಮಹ್ಮದ್ ಸಾವಿಗೆ ಶಂಕೆ ವ್ಯಕ್ತಪಡಿಸಿ ಮೃತನ ಸಹೋದರ ದೂರು ನೀಡಿದ್ದಾನೆ. ಕಮಲಾಪುರ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ.
ಇದನ್ನೂ ಓದಿ: Road Accident: ಸೇತುವೆಯಿಂದ ಪಲ್ಟಿ ಹೊಡೆದ ಕಾರು, ತಿರುಪತಿಗೆ ಹೋಗುತ್ತಿದ್ದ 4 ಮಂದಿ ದುರ್ಮರಣ
ವಕೀಲೆಯ ಅನುಮಾನಾಸ್ಪದ ಸಾವಿನ ಪ್ರಕರಣ; ಪೋಸ್ಟ್ ಮಾರ್ಟಮ್ ರಿಪೋರ್ಟ್ ಹೇಳಿದ್ದೇನು?
ಬೆಂಗಳೂರು: ವಕೀಲೆ (Advocate) ಚೈತ್ರಾ ಗೌಡ ಅನುಮಾನಾಸ್ಪದ ಸಾವು (Suspicious Death) ಪ್ರಕರಣದಲ್ಲಿ ತನಿಖೆ ಮುಂದುವರಿಸಿರುವ ಪೊಲೀಸರು ಪೋಸ್ಟ್ ಮಾರ್ಟಮ್ (post mortem) ರಿಪೋರ್ಟ್ ಅನ್ನು ಪಡೆದಿದ್ದು, ತನಿಖೆ ಮುಗಿಸಿರುವ ಬಗ್ಗೆ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಚೈತ್ರಾ ಸಾವು ಆತ್ಮಹತ್ಯೆಯಿಂದಲೇ (Self Harming) ಆಗಿದೆ ಎಂಬುದು ದೃಢಪಟ್ಟಿದೆ.
ಮೇ 11ರಂದು ಸಂಜಯನಗರ ಅಣ್ಣಯ್ಯಪ್ಪ ಲೇ ಔಟ್‌ನಲ್ಲಿ ಚೈತ್ರಾ ಶವ ಪತ್ತೆಯಾಗಿತ್ತು. ಚೈತ್ರಾ ಕುಟುಂಬಸ್ಥರು ಇದು ಕೊಲೆ ಎಂದು ಆರೋಪಿಸಿ ಪೊಲೀಸರಿಗೆ ದೂರು ನೀಡಿದ್ದರು. ದೂರಿನನ್ವಯ ಚೈತ್ರಾ ಪತಿ, ಕೆಎಎಸ್ ಅಧಿಕಾರಿ ಶಿವಕುಮಾರ್ ಅವರನ್ನು ಪೊಲೀಸರು ವಿಚಾರಣೆ ಮಾಡಿದ್ದರು.
ವಿಚಾರಣೆ ವೇಳೆ, ಪತ್ನಿಯೊಂದಿಗೆ ಯಾವುದೇ ವೈಷಮ್ಯ ಇರಲಿಲ್ಲ. ಜೊತೆಗೆ ಯಾವುದೇ ಹಣಕಾಸಿನ ಸಮಸ್ಯೆ ಕೂಡ ಇರಲಿಲ್ಲ ಎಂದು ಶಿವಕುಮಾರ್ ತಿಳಿಸಿದ್ದರು. ಆದರೆ ಪ್ರಾಪರ್ಟಿ ವಿಚಾರವಾಗಿ ಆಗಾಗ್ಗೆ ಸ್ವಲ್ಪ ಜಗಳ ನಡೀತಾ ಇತ್ತು. ಇದರಿಂದ ಖಿನ್ನತೆಗೊಳಗಾಗಿದ್ದಳು ಎಂದು ಮಾಹಿತಿ ನೀಡಿದ್ದರು.
ಮರಣೋತ್ತರ ಪರೀಕ್ಷೆಯಲ್ಲೂ ಇದು ಆತ್ಮಹತ್ಯೆ ಎಂದು ಕಂಡುಬಂದಿದೆ. ಜೊತೆಗೆ ಮನೆಯಲ್ಲಿ ಸಿಕ್ಕ ಡೆತ್ ನೋಟ್ ಕೂಡ ಚೈತ್ರಾ ಬರೆದಿರುವುದು ಖಚಿತವಾಗಿದೆ. ಚೈತ್ರಾ, ತಮ್ಮ ಕುಟುಂಬಸ್ಥರ ಬಳಿ ಮೂರು ತಿಂಗಳ ಹಿಂದೆಯೇ ತಾವು ಸಾಯುವುದಾಗಿ ಮಾತಾಡಿದ್ದರು. ಈ ಮಾತಾಡಿದ ಬಳಿಕವೇ ಡೆತ್ ನೋಟ್ ಬರೆದಿಟ್ಟಿರುವುದು ಗೊತ್ತಾಗಿದೆ. 10 ದಿನಗಳ ತನಿಖೆ ಬಳಿಕ ಹಿರಿಯ ಅಧಿಕಾರಿಗಳಿಗೆ ಸಂಜಯನಗರ ಪೊಲೀಸರು ಮಾಹಿತಿ ನೀಡಿದ್ದಾರೆ.
ಏನಿದು ಪ್ರಕರಣ?
2016ರಲ್ಲಿ ಮದುವೆ ಆಗಿದ್ದ ಶಿವಕುಮಾರ್ ಹಾಗೂ ಚೈತ್ರಾ ದಂಪತಿಗೆ 5 ವರ್ಷದ ಒಂದು ಮಗು ಇದೆ. ಈ ದಂಪತಿ ಬೆಂಗಳೂರಿನ ಸಂಜಯ್ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಾಸವಾಗಿದ್ದರು. ಚೈತ್ರಾ ಹೈಕೋರ್ಟ್ ವಕೀಲೆ ಆಗಿದ್ದರೆ, ಶಿವಕುಮಾರ್ ಕೆಐಡಿಬಿಯಲ್ಲಿ ಉಪವಿಭಾಗಾಧಿಕಾರಿ ಆಗಿದ್ದರು. ಅಪಾರ್ಟ್‌ಮೆಂಟ್‌ನ ಮೂರು ಫ್ಲಾಟ್‌ನಲ್ಲಿ ಒಂದರಲ್ಲಿ ಚೈತ್ರಾ ಕುಟುಂಬ ಹಾಗೂ ಇನ್ನೊಂದು ಫ್ಲಾಟ್‌ನಲ್ಲಿ ಮೃತಳ ತಮ್ಮ ವಾಸವಾಗಿದ್ದರು. ಶನಿವಾರ ಬೆಳಗ್ಗೆ ಹತ್ತು ಗಂಟೆ ಸುಮಾರಿಗೆ ಪತಿ ಶಿವಕುಮಾರ್ ಜತೆ ನಂತರ ತಮ್ಮನನೊಟ್ಟಿಗೂ ಚೈತ್ರಾ ಮಾತನಾಡಿದ್ದಾರೆ. 11 ಗಂಟೆ ಸುಮಾರಿಗೆ ಚೈತ್ರಾಳ ತಮ್ಮ ಕರೆದಾಗ ಸ್ಪಂದಿಸಿಲ್ಲ. ಹೀಗಾಗಿ ಕಿಟಕಿಯಲ್ಲಿ ನೋಡಿದಾಗ ಫ್ಯಾನ್‌ಗೆ ವೇಲ್‌ನಿಂದ ನೇಣು ಬಿಗಿದುಕೊಂಡಿರುವುದು ಕಂಡು ಬಂದಿದೆ. ಕೂಡಲೇ ಚೈತ್ರಾಳ ಸಹೋದರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಚೈತ್ರಾರ ಬೆಡ್ ರೂಮಿನಲ್ಲಿ ಒಂದು ಪುಟದ ಡೆತ್ ನೋಟ್ ಪತ್ತೆಯಾಗಿದೆ. ಮೂರು ತಿಂಗಳ ಹಿಂದೆ ಅಂದರೆ ಮಾರ್ಚ್ 11ರಂದು ಇದನ್ನು ಬರೆಯಲಾಗಿತ್ತು. ಡೆತ್‌ನೋಟ್‌ನಲ್ಲಿ, ನನ್ನ ಪತಿ ತುಂಬಾ ಒಳ್ಳೆಯವರು. ನೀವೂ ಜೀವನವನ್ನು ಎಂಜಾಯ್ ಮಾಡಿ. ಮಗಳನ್ನು ಚೆನ್ನಾಗಿ ನೋಡಿಕೊಳ್ಳಿ. ನಾನು ಡಿಪ್ರೆಶನ್‌ನಿಂದ ಬಳಲುತ್ತಿದ್ದೇನೆ. ಅದರಿಂದ ಹೊರ ಬರಲು ಸಾಕಷ್ಟು ಪ್ರಯತ್ನ ಪಟ್ಟಿದ್ದೇನೆ. ಆದರೆ ಆಗುತ್ತಿಲ್ಲ, ನಾನು ನನ್ನ ಜೀವನವನ್ನು ಇಲ್ಲಿಗೆ ಕೊನೆಗೊಳಿಸುತ್ತಿದ್ದೆನೆ. ಮಗುವನ್ನು ಚೆನ್ನಾಗಿ ನೋಡಿಕೊಂಡು ಲೈಫ್ ಎಂಜಾಯ್ ಮಾಡಿ. ನಾನು ಸೂಸೈಡ್ ಮಾಡಿಕೊಳ್ಳುವುದು ತಪ್ಪು ಎಂದು ಗೊತ್ತಿದೆ. ಆದರೂ ಸಹ ಆತ್ಮಹತ್ಯೆಯನ್ನು ಮಾಡಿಕೊಂಡು ನನ್ನ ಜೀವನಕ್ಕೆ ಅಂತ್ಯವಾಡಿದ್ದೇನೆ ಎಂದು ಬರೆದಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ