Site icon Vistara News

Gruha Jyothi : ಗೃಹಜ್ಯೋತಿಗೆ ಸಿಕ್ಕಿತು ಚಾಲನೆ; ಈ ತಿಂಗಳು ಫ್ರೀ ವಿದ್ಯುತ್‌ ಪಡೆದ 1.42 ಕೋಟಿ ಜನರಲ್ಲಿ ನೀವಿದ್ದಿರಾ?

Gruhajyothi scheme inauguated

ಬೆಂಗಳೂರು: ರಾಜ್ಯದ ಕಾಂಗ್ರೆಸ್‌ ಸರ್ಕಾರದ ಮಹತ್ವಾಕಾಂಕ್ಷಿ ಪಂಚ ಗ್ಯಾರಂಟಿ ಯೋಜನೆಗಳಲ್ಲಿ (Congress Guarantee) ಒಂದಾದ, ಪ್ರತಿ ಕುಟುಂಬಕ್ಕೆ 200 ಯುನಿಟ್‌ ವಿದ್ಯುತ್‌ನ್ನು ಉಚಿತವಾಗಿ ನೀಡುವ ಗೃಹಜ್ಯೋತಿ ಸ್ಕೀಮ್‌ಗೆ (Gruha Jyothi) ಶನಿವಾರ (ಆಗಸ್ಟ್‌ 4) ಕಲಬುರಗಿಯಲ್ಲಿ (Kalaburagi News) ಚಾಲನೆ ನೀಡಲಾಗಿದೆ. ಆಗಸ್ಟ್‌ ತಿಂಗಳ ಬಿಲ್‌ನಲ್ಲಿ ಉಚಿತ ವಿದ್ಯುತ್‌ (Free Electricity) ಎಂದು ನಮೂದಿಸಲ್ಪಟ್ಟ 1.42 ಕೋಟಿ ಫಲಾನುಭವಿಗಳ ಪೈಕಿ 10 ಮಂದಿಗೆ ಝೀರೋ ಬಿಲ್‌ (Zero Bill) ನೀಡುವ ಮೂಲಕ ಯೋಜನೆಗೆ ಚಾಲನೆ ನೀಡಲಾಯಿತು.

ಕಲ್ಬುರ್ಗಿಯ ಎನ್‌ವಿ ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರು ಗೃಹ ಜ್ಯೋತಿ ಕಾರ್ಯಕ್ರಮಕ್ಕೆ (Inaguration of Gruha jyothi scheme) ಚಾಲನೆ ನೀಡಿದರು. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjuna Kharge), ಡಿಸಿಎಂ ಡಿ.ಕೆ.ಶಿವಕುಮಾರ್ (DK Shivakumar), ಇಂಧನ ಸಚಿವ ಕೆ.ಜೆ. ಜಾರ್ಜ್ (Power Minister KJ George) ಅವರು ಹಾಗೂ ಇತರೆ ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಕಲಬುರಗಿಯಲ್ಲಿ ನಡೆದ ಗೃಹಜ್ಯೋತಿ ಯೋಜನೆಯ ಉದ್ಘಾಟನಾ ಸಮಾರಂಭದ ವೇದಿಕೆಯಲ್ಲಿರುವ ಗಣ್ಯರು

1.42 ಕೋಟಿ ಫಲಾನುಭವಿಗಳಿಗೆ ಈ ತಿಂಗಳು ಫ್ರೀ ಬಿಲ್‌

ತಿಂಗಳಿಗೆ 200 ಯುನಿಟ್‌ಗಿಂತ ಕಡಿಮೆ ವಿದ್ಯುತ್‌ ಬಳಸುವ ಮನೆಗಳಿಗೆ ಉಚಿತ ವಿದ್ಯುತ್‌ ನೀಡುವ ಮಹತ್ವದ ಯೋಜನೆಯಡಿ ರಾಜ್ಯದಲ್ಲಿ ಒಟ್ಟು 2.14 ಕೋಟಿ ಫಲಾನುಭವಿಗಳಿದ್ದಾರೆ. ಈ ಪೈಕಿ 1.42 ಕೋಟಿ ಫಲಾನುಭವಿಗಳು ಜುಲೈ 25ರೊಳಗೆ ನೋಂದಣಿ ಮಾಡಿಕೊಂಡಿದ್ದು, ಅವರಿಗೆ ಜುಲೈ ತಿಂಗಳ ಬಿಲ್‌ ಝೀರೋ ಬರಲಿದೆ. ಅಂದರೆ ಈ ಬಾರಿ 1.42 ಕೋಟಿ ಜನರಿಗೆ ಫ್ರೀ ಕರೆಂಟ್‌ ಸಿಕ್ಕಿದಂತಾಗಲಿದೆ.

ಯಾವ ಎಸ್ಕಾಂನಲ್ಲಿ ಎಷ್ಟು ಫಲಾನುಭವಿಗಳು?

ರಾಜ್ಯದಲ್ಲಿ ಈಗ ನೋಂದಣಿ ಮಾಡಿಕೊಂಡಿರುವ ಫಲಾನುಭವಿಗಳಲ್ಲಿ ಅತಿ ಹೆಚ್ಚು ಮಂದಿ ಬೆಸ್ಕಾಂ ವ್ಯಾಪ್ತಿಯವರು.

ಬೆಸ್ಕಾಂ: 54,99,000 ನೋಂದಣಿ
ಸೆಸ್ಕಾಂ: 20,49,000 ನೋಂದಣಿ
ಜೆಸ್ಕಾಂ: 20,22,000 ನೋಂದಣಿ
ಹೆಸ್ಕಾಂ: 30,66,000 ನೋಂದಣಿ
ಮೆಸ್ಕಾಂ: 14,53,೦೦೦ ನೋಂದಣಿ

ಕಾರ್ಯಕ್ರಮದಲ್ಲಿ ಸೇರಿದ ಜನರು

ಜೆಸ್ಕಾಂ ವ್ಯಾಪ್ತಿಯ 20.22 ಲಕ್ಷ ಫಲಾನುಭವಿಗಳಲ್ಲಿ ಕಲಬುರಗಿಯಲ್ಲಿ ಅತಿ ಹೆಚ್ಚು ಅಂದರೆ 4.70 ಲಕ್ಷ ಫಲಾನುಭವಿಗಳಿದ್ದಾರೆ. ಬಳ್ಳಾರಿ 226272, ಬೀದರ್ 317221, ಕೊಪ್ಪಳ 256609, ರಾಯಚೂರು 266154, ವಿಜಯನಗರ 238220, ಯಾದಗಿರಿ 168845 ಫಲಾನುಭವಿಗಳಿದ್ದಾರೆ.

ಇದನ್ನೂ ಓದಿ : Gruha jyothi Scheme : ಗೃಹಜ್ಯೋತಿ ಬಿಲ್‌ ಬಂತಾ? ಅಪ್ಲೈ ಮಾಡಿಲ್ವಾ? ಫ್ರೀ ಬೇಕಿದ್ದರೆ ಹೀಗೆ ಮಾಡಿ!

Exit mobile version