ಕಲಬುರಗಿ: ಕಮಲಾಪುರ ತಾಲೂಕಿನ ಭೀಮನಾಳ ಕ್ರಾಸ್ನಲ್ಲಿ ಕಾರು ಮತ್ತು ಕ್ರೂಸರ್ ಮುಖಾಮುಖಿ ಡಿಕ್ಕಿಯಾಗಿ ಕಾರಿನಲ್ಲಿದ್ದ ಇಬ್ಬರು ಮೃತಪಟ್ಟಿದ್ದು, ಮೂವರಿಗೆ ಗಂಭೀರ ಗಾಯಗಳಾಗಿವೆ. ತೆಲಂಗಾಣದ ಮಹ್ಮದ್ ಅಬ್ದುಲ್ ಮಜೀದ್ ಸಿದ್ದಿಕಿ (71) ಮತ್ತು ಖುನ್ನಿಸಾ ಬೇಗಂ (55) ಮೃತರು.
ಅಪಘಾತದಲ್ಲಿ ಹುಸೇನ್ (7), ಫರಹತ್ ಸುಲ್ತಾನಾ ಮತ್ತು ಅಂಜುಮನ್ ಸುಲ್ತಾನ ಗಂಭೀರವಾಗಿ ಗಾಯಗೊಂಡಿದ್ದು, ಹುಸೇನ್ ಸ್ಥಿತಿ ಚಿಂತಾಜನಕವಾಗಿದೆ.
ಕಾರಿನಲ್ಲಿದ್ದವರು ತೆಲಂಗಾಣದಿಂದ ಕಲಬುರಗಿಯ ಖ್ವಾಜಾ ಬಂದೇ ನವಾಜ್ ದರ್ಗಾಕ್ಕೆ ಬರುತ್ತಿದ್ದರು, ಕ್ರೂಸರ್ನಲ್ಲಿದ್ದವರು ಕಲಬುರಗಿಯಿಂದ ಬೀದರ್ನ ಗುರುನಾನಕ ದೇಗುಲಕ್ಕೆ ತೆರಳುತ್ತಿದ್ದರು. ಕ್ರೂಸರ್ನಲ್ಲಿದ್ದವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಕಮಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಸ್ತೆಯಲ್ಲಿ ನಿಲ್ಲಿಸಿದ್ದ ಟ್ರ್ಯಾಕ್ಟರ್ಗೆ ಬೈಕ್ ಡಿಕ್ಕಿಯಾಗಿ ಸವಾರ ಸಾವು