Site icon Vistara News

Kalaburagi News: ಮಾನವ ಜನ್ಮ ಬಹುದೊಡ್ಡದು: ಶ್ರೀ ವಿಶ್ವಾರಾಧ್ಯ ಮಳೇಂದ್ರ ಶಿವಾಚಾರ್ಯ ಸ್ವಾಮೀಜಿ

Panamuktha NavaJeevanotsava programme inauguration at Afzalpur

ಅಫಜಲಪುರ: ಪ್ರತಿಯೊಬ್ಬರ ಜೀವನವು ಸುಖ ಶಾಂತಿ ನೆಮ್ಮದಿಯಿಂದ ಬದುಕು ಸಾಗುವಂತಾಗಿ ಆರೋಗ್ಯವಂತ ಸಮಾಜ ನಿರ್ಮಾಣವಾಗಲಿ ಎಂದು (Kalaburagi News) ಶ್ರೀ ಮಳೇಂದ್ರ ಸಂಸ್ಥಾನ ಹಿರೇಮಠದ ಶ್ರೀ ವಿಶ್ವಾರಾಧ್ಯ ಮಳೇಂದ್ರ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.

ಪಟ್ಟಣದ ಹಿಂಗಲಾಂಬಿಕ ಕಲ್ಯಾಣ ಮಂಟಪದಲ್ಲಿ ತಾಲೂಕ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ವತಿಯಿಂದ ಪಾನಮುಕ್ತ ನವ ಜೀವನೋತ್ಸವ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ, ಮಾತನಾಡಿದ ಶ್ರೀಗಳು, ಮಾನವ ಜನ್ಮ ಬಹುದೊಡ್ಡದು ಅದನ್ನು ಹಾಳು ಮಾಡಿಕೊಳ್ಳದೆ ಸನ್ಮಾರ್ಗದಲ್ಲಿ ಸಾಗುವಂತಾಗಲಿ ಎಂದರು.

ಇದನ್ನೂ ಓದಿ: Hampi Utsav 2024: ಹಂಪಿ ಉತ್ಸವದಲ್ಲಿ ಆಕರ್ಷಕ ಶ್ವಾನ ಪ್ರದರ್ಶನ; ಗಮನ ಸೆಳೆದ ವಿವಿಧ ತಳಿಗಳು

ಶ್ರೀ ಧರ್ಮಸ್ಥಳದ ಡಾ. ವೀರೇಂದ್ರ ಹೆಗ್ಗಡೆ ಅವರ ಮಾರ್ಗದರ್ಶನದಲ್ಲಿ ಕಳೆದ ಅನೇಕ ವರ್ಷಗಳಿಂದ ಈ ನಾಡಿನಲ್ಲಿ ಸಮಾಜಮುಖಿ ಕಾರ್ಯಗಳು ನಿರಂತರವಾಗಿ ಜರುಗುತ್ತಿವೆ, ಜತೆಗೆ ಆರೋಗ್ಯವಂತ ಸಮಾಜ ನಿರ್ಮಾಣ ಮಾಡಲು ಸಮಾಜದಲ್ಲಿ ವ್ಯಸನಕ್ಕೆ ಅಂಟಿಕೊಂಡು ತಮ್ಮ ಜೀವನ ಹಾಗೂ ಕುಟುಂಬ ನೆಮ್ಮದಿ ಇಲ್ಲದಂತಹ ಕುಟುಂಬಗಳಲ್ಲಿ ಅವರಿಗೆ ಸೂಕ್ತ ಮಾರ್ಗದರ್ಶನ, ಉತ್ತಮ ಸಲಹೆ ನೀಡಿ, ಆರೋಗ್ಯಯುತ ಕುಟುಂಬ ನಿರ್ಮಾಣ ಮಾಡುವಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಸಾಮಾಜಿಕ ಸೇವೆ ಅಮೋಘವಾದದ್ದು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಮುಖಂಡ ಸಂಗ್ರಾಮಗೌಡ ಪಾಟೀಲ, ಕಲ್ಬುರ್ಗಿ ಜಿಲ್ಲಾ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನಾ ನಿರ್ದೇಶಕ ಸತೀಶ್‌ ಸುವರ್ಣ ಮಾತನಾಡಿದರು.

ಇದನ್ನೂ ಓದಿ: KPSC Recruitment 2024: ವಿವಿಧ ಇಲಾಖೆಗಳಲ್ಲಿನ 1,227 ಹುದ್ದೆಗಳಿಗೆ ನೇಮಕ; ಕೆಪಿಎಸ್‌ಸಿಗೆ ಪ್ರಸ್ತಾವನೆ ಸಲ್ಲಿಕೆ

ಈ ಸಂದರ್ಭದಲ್ಲಿ ಬಿಜೆಪಿ ಪಕ್ಷದ ತಾಲೂಕಾ ಅಧ್ಯಕ್ಷ ಶೈಲೇಶ ಗುಣಾರಿ, ಡಾ. ರಾಜೇಶ ಆಲಮೇಲಕರ, ಆಶಾ ಕಿರಣ ಸೇವಾ ಸಂಸ್ಥೆ ಅಧ್ಯಕ್ಷೆ ಪ್ರಭಾವತಿ ಮೇತ್ರಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನಾ ತಾಲೂಕಾ ಯೋಜನಾಧಿಕಾರಿ ಶಿವರಾಜ ಆಚಾರ್ಯ, ಕವಿತಾ,ರೂಪ ಸೇರಿದಂತೆ ಇತರರು ಉಪಸ್ಥಿತರಿದ್ದರು.

Exit mobile version