Hampi Utsav 2024: ಹಂಪಿ ಉತ್ಸವದಲ್ಲಿ ಆಕರ್ಷಕ ಶ್ವಾನ ಪ್ರದರ್ಶನ; ಗಮನ ಸೆಳೆದ ವಿವಿಧ ತಳಿಗಳು - Vistara News

ವಿಜಯನಗರ

Hampi Utsav 2024: ಹಂಪಿ ಉತ್ಸವದಲ್ಲಿ ಆಕರ್ಷಕ ಶ್ವಾನ ಪ್ರದರ್ಶನ; ಗಮನ ಸೆಳೆದ ವಿವಿಧ ತಳಿಗಳು

Hampi Utsav 2024: ಹಂಪಿ ಉತ್ಸವ -2024 ರ ಅಂಗವಾಗಿ ಕಮಲಾಪುರದ ಹವಾಮಾ ಕಚೇರಿ ಹಿಂಭಾಗದ ಆವರಣದಲ್ಲಿ ಶ್ವಾನ ಪ್ರದರ್ಶನ‌ ಜರುಗಿತು.

VISTARANEWS.COM


on

Dog show at the Hampi Utsav
ಹಂಪಿ ಉತ್ಸವ -2024 ರ ಅಂಗವಾಗಿ ಕಮಲಾಪುರದ ಹವಾಮಾ ಕಚೇರಿ ಹಿಂಭಾಗದ ಆವರಣದಲ್ಲಿ ಶ್ವಾನ ಪ್ರದರ್ಶನ‌ ಜರುಗಿತು.
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಹೊಸಪೇಟೆ(ವಿಜಯನಗರ): ಹಂಪಿ ಉತ್ಸವ -2024 (Hampi Utsav 2024)ರ ಅಂಗವಾಗಿ ಭಾನುವಾರ ಕಮಲಾಪುರದ ಹವಾಮಾ ಕಚೇರಿ ಹಿಂಭಾಗದ ಆವರಣದಲ್ಲಿ ಆಯೋಜಿಸಲಾಗಿದ್ದ ಶ್ವಾನ ಪ್ರದರ್ಶನ‌ವು ಜನರಿಂದ ಭಾರಿ ಮೆಚ್ಚುಗೆ ಪಡೆದುಕೊಂಡಿತು. ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ್‌ ಶ್ವಾನ ಪ್ರದರ್ಶನಕ್ಕೆ ಚಾಲನೆ ನೀಡಿದರು.

ಹುದುಗಿಸಿಟ್ಟ ಬಾಂಬ್ ಹುಡುಕಿದ ಲೂಸಿ, ಅಪರಾಧಿ ಪತ್ತೆ ಹಚ್ಚಿದ ಬ್ರೂನೋ, ಕದ್ದವಸ್ತು ಕಂಡುಹಿಡಿದ ಸಿಂಬಾ ಎಂಬ ವಿಜಯನಗರ ಜಿಲ್ಲಾ ಪೊಲೀಸ್‌ ಶ್ವಾನದಳದ ಶ್ವಾನಗಳ ಜಾಣ್ಮೆಗೆ ಜನ ಬೆರಗಾದರು. ಇದೇ ಮೊದಲ ಬಾರಿ ಹಂಪಿ ಉತ್ಸವದ ಶ್ವಾನ ಪ್ರದರ್ಶನದಲ್ಲಿ ಪೊಲೀಸ್ ಶ್ವಾನಗಳು ಭಾಗವಹಿಸಿದ್ದವು.

ಇದನ್ನೂ ಓದಿ: KPSC Recruitment 2024: ವಿವಿಧ ಇಲಾಖೆಗಳಲ್ಲಿನ 1,227 ಹುದ್ದೆಗಳಿಗೆ ನೇಮಕ; ಕೆಪಿಎಸ್‌ಸಿಗೆ ಪ್ರಸ್ತಾವನೆ ಸಲ್ಲಿಕೆ

ಒಂದೂವರೆ ವರ್ಷದ ಬ್ರೂನೋ ಡಾಬರ್‌ಮನ್ ಜಾತಿ ಸೇರಿದ ನಾಯಿ. ಸುಮಾರು 19 ಅಪರಾಧ ಪ್ರಕರಣಗಳಲ್ಲಿ ಅಪರಾಧಿಗಳನ್ನು ಪತ್ತೆ ಹಚ್ಚುವಲ್ಲಿ ಪ್ರಮುಖ ಪಾತ್ರವಹಿಸಿದೆ. ಲಾಬ್ರಡಾರ್ ಜಾತಿಗೆ ಸೇರಿದ ಎರಡು ವರ್ಷದ ಲೂಸಿ ಬಾಂಬ್ ಪತ್ತೆ ಹಚ್ಚುವಲ್ಲಿ, ಇನ್ನೂ ಇದೇ ಜಾತಿಗೆ ಸೇರಿದ ಸಿಂಬಾ ಅಪರಾಧ ಪ್ರಕರಣಗಳನ್ನು ಪತ್ತೆ ಹಚ್ಚುವಲ್ಲಿ ಪೊಲೀಸರ ಕಾರ್ಯದಲ್ಲಿ ನೆರವಾಗುತ್ತಿದ್ದಾನೆ.

19 ತಳಿಯ 66ಕ್ಕೂ ಹೆಚ್ಚು ಶ್ವಾನಗಳು ಭಾಗಿ

ಈ ಬಾರಿಯ ಉತ್ಸವದಲ್ಲಿ 19 ವಿವಿಧ ಜಾತಿಯ ದೇಶಿ ಹಾಗೂ ವಿದೇಶಿ ತಳಿಗಳ 66ಕ್ಕೂ ಹೆಚ್ಚು ಶ್ವಾನಗಳು ತಮ್ಮ ಮಾಲೀಕರೊಂದಿಗೆ ಸ್ಪರ್ಧೆಯಲ್ಲಿ ಭಾಗವಹಿಸಿದ್ದವು.

ಗ್ರೇಟ್ ಡೆನ್ ಶ್ವಾನ ಚಾಂಪಿಯನ್

ಶ್ವಾನ ಪ್ರದರ್ಶನದಲ್ಲಿ ಹೊಸಪೇಟೆ ನಗರದ ವೀರು ಅವರ ಗ್ರೇಟ್ ಡೆನ್ ತಳಿಗೆ ಸೇರಿದ ಶ್ವಾನ ಚಾಂಪಿಯನ್ ಆಫ್ ಚಾಂಪಿಯನ್ ಪಟ್ಟ ಅಲಂಕರಿಸಿ, ರೂ.10,000 ನಗದು ಪುರಸ್ಕಾರವನ್ನು ಪಡೆದಿದೆ. ಮರಿಯಮ್ಮನಹಳ್ಳಿಯ ಸತೀಶ್ ಚಿದ್ರಿಯವರ ಡಾಬರ್ ಮನ್ ದ್ವೀತಿಯ ಸ್ಥಾನ ಪಡೆಯುವುದರೊಂದಿಗೆ ರೂ.7,500 ನಗದು ಬಹುಮಾನಕ್ಕೆ ಪಾತ್ರವಾಯಿತು. ಇನ್ನು ಮರಿಯಮ್ಮನಹಳ್ಳಿಯ ಬಸವರಾಜ್ ಅವರ ಮುದೋಳ ಹೌಂಡ್ ತೃತೀಯ ಸ್ಥಾನ ಪಡೆದು ರೂ.5000 ನಗದು ತನ್ನದಾಗಿಸಿಕೊಂಡಿತು. ಶ್ರೇಯಸ್ ಅವರ ಟಾಯ್ ಪಾಪ್, ಶಿವಪ್ರಸಾದ್ ಅವರ ಸೈಬೀರಿಯನ್ ಹಸ್ಕಿ, ಕಾರ್ತಿಕ್ ಅವರ ಬೀಗಲ್, ಲಕ್ಷ್ಮೀ ನಾರಾಯಣ ಅವರ ಸಿಡ್ಜು ತೀರ್ಪುಗಾರರ ಮೆಚ್ಚುಗೆ ಪಡೆದು, ಪ್ರಶಂಸೆಗೆ ಪಾತ್ರವಾದವು.

ಬೆಂಗಳೂರು ಪಶು ವೈದ್ಯಕೀಯ ಕಾಲೇಜಿನ ಪ್ರೊ. ಡಾ. ಬಸವಾರಾಜ್ ಬಾಳಣ್ಣನವರ್, ಶಿವಮೊಗ್ಗ ಪಾಲಿ ಕ್ಲೀನಿಕ್‌ನ ಡಾ.ಬಸವರಾಜ ಹೂಗಾರ್, ಹಿರಿಯ ಪಶುವೈದ್ಯಾಧಿಕಾರಿ ಡಾ.ಶ್ರೀಪಾದ್ ರಾವ್ ಶ್ವಾನ ಪ್ರದರ್ಶನ ಸ್ಪರ್ಧೆಯ ನಿರ್ಣಾಯಕರಾಗಿ ಕಾರ್ಯನಿರ್ವಹಿಸಿದರು. ಮೂಲ ಜಾತಿ ತಳಿ, ದೇಹದಾರ್ಡ್ಯತೆ, ಚುರುಕುತನ ಮಾಲಿಕರೊಂದಿಗೆ ಅವಿನಾಭ ಸಂಬಂಧದ ಆಧಾರದ ಮೇಲೆ ವಿಜೇತ ಶ್ವಾನಗಳನ್ನು ಆಯ್ಕೆ ಮಾಡಲಾಯಿತು.

ಇದನ್ನೂ ಓದಿ:Viral News: ಪುಸ್ತಕಗಳಿಗಾಗಿ 1 ಕೋಟಿ ರೂಪಾಯಿ ಖರ್ಚು ಮಾಡಿದ ಶಿಕ್ಷಕ!

ಈ ವೇಳೆ ಪಶುಸಂಗೋಪನೆ ಹಾಗೂ ಪಶು ವೈದ್ಯಕೀಯ ಸೇವಾ ಇಲಾಖೆಯ ಉಪನಿರ್ದೇಶಕ ಡಾ. ಪಾಮ್‌ಸಿಂಗ್, ಸಹಾಯಕ ನಿರ್ದೇಶಕ ಡಾ. ಬೆಣ್ಣಿ ಬಸವರಾಜ, ಪಶು ವೈದ್ಯಾಧಿಕಾರಿ ಡಾ. ಮಲ್ಲಿಕಾರ್ಜುನ್, ಡಾ. ಯುಗೇಂದ್ರ ಮಾನ್ವಿ ಉಪಸ್ಥಿತರಿದ್ದರು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಮಳೆ

Karnataka weather: ವ್ಯಾಪಕ ಮಳೆಯೊಂದಿಗೆ 60 ಕಿ.ಮೀ ವೇಗದಲ್ಲಿ ಅಪ್ಪಿಳಿಸಲಿದೆ ಗಾಳಿ; 10 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್‌

Karnataka weather Forecast: ರಾಜ್ಯದ ವಿವಿಧೆಡೆ ಮಳೆ ಅಬ್ಬರ (Heavy Rain)ಮುಂದುವರಿದಿದೆ. ಮೇ 14ರಂದು ಭಾರಿ ಮಳೆಯಾಗುವ ಮುನ್ಸೂಚನೆಯನ್ನು ನೀಡಲಾಗಿದ್ದು, ಹವಾಮಾನ ಇಲಾಖೆಯು 10 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್‌ ಘೋಷಣೆ ಮಾಡಲಿದೆ.

VISTARANEWS.COM


on

By

karnataka weather Forecast
Koo

ಬೆಂಗಳೂರು: ದಕ್ಷಿಣ ಒಳನಾಡು, ಉತ್ತರ ಒಳನಾಡು ಸೇರಿ ಮಲೆನಾಡು ಮತ್ತು ಕರಾವಳಿಯಲ್ಲಿ ಪ್ರತ್ಯೇಕ ಕಡೆಗಳಲ್ಲಿ ಭಾರಿ ಮಳೆಯಾಗುವ (Rain News) ಸಾಧ್ಯತೆಯಿದೆ. ರಾಜ್ಯದ ಪ್ರತ್ಯೇಕ ಸ್ಥಳಗಳಲ್ಲಿ ಗುಡುಗು ಮಿಂಚು ಮತ್ತು ಗಾಳಿಯೊಂದಿಗೆ (30-40 ಕಿ.ಮೀ) ಗಾಳಿ ಬೀಸುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ (Karnataka Weather Forecast) ಮುನ್ಸೂಚನೆಯನ್ನು ನೀಡಿದೆ.

ದಕ್ಷಿಣ ಒಳನಾಡಿನ ಪ್ರತ್ಯೇಕವಾಗಿ ಭಾರಿ ಮಳೆಯಾಗುವ ಸಾಧ್ಯತೆ ಇದೆ. ಬಹುತೇಕ ಜಿಲ್ಲೆಗಳಲ್ಲಿ ವ್ಯಾಪಕವಾಗಿ ಮಧ್ಯಮ ಮಳೆಯಾಗುವ ಸಾಧ್ಯತೆಯಿದೆ. ಇನ್ನೂ ಉತ್ತರ ಒಳನಾಡಿನ ಕಲಬುರಗಿ, ಯಾದಗಿರಿ, ಬಾಗಲಕೋಟೆ, ವಿಜಯಪುರ ಮತ್ತು ವಿಜಯನಗರ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ.

ಮಲೆನಾಡಿನ ಹಾಸನ, ಚಿಕ್ಕಮಗಳೂರು, ಕೊಡಗು ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಗುಡುಗು ಸಹಿತ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಕರಾವಳಿಯ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದ್ದರೆ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗಲಿದೆ.

ಇದನ್ನೂ ಓದಿ: HD Revanna Bail: ರೇವಣ್ಣ ದೇಶ ಬಿಡಂಗಿಲ್ಲ, ಕೆ.ಆರ್‌. ನಗರಕ್ಕೆ ಎಂಟ್ರಿ ಕೊಡಂಗಿಲ್ಲ! ಕೋರ್ಟ್‌ ವಿಧಿಸಿದ ಷರತ್ತು ಏನು?

ಬೆಂಗಳೂರು ವ್ಯಾಪ್ತಿಯಲ್ಲಿ ಗುಡುಗು ಸಹಿತ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನವು ಕ್ರಮವಾಗಿ 33 ಡಿಗ್ರಿ ಸೆಲ್ಸಿಯಸ್ ಮತ್ತು 24 ಡಿಗ್ರಿ ಸೆಲ್ಸಿಯಸ್ ಇರಲಿದೆ.

ಯೆಲ್ಲೋ ಅಲರ್ಟ್‌:

ಭಾರೀ ಮಳೆಯೊಂದಿಗೆ ಗುಡುಗು ಹಾಗೂ ಬಿರುಗಾಳಿ ಇರಲಿದ್ದು ಹೀಗಾಗಿ ಯೆಲ್ಲೋ ಅಲರ್ಟ್‌ ನೀಡಲಾಗಿದೆ. ಪ್ರಮುಖವಾಗಿ ಮೈಸೂರು, ಮಂಡ್ಯ, ಕೊಡಗು, ಹಾಸನ, ಚಿಕ್ಕಮಗಳೂರು, ಯಾದಗಿರಿ, ಕಲಬುರಗಿ, ಬಾಗಲಕೋಟೆ, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ವಿಜಯನಗರ

Ujjaini Marulasiddeshwara Jatre: ಸಾಮಾಜಿಕ ಸೌಹಾರ್ದತೆ ಸಾರುವ ಶ್ರೀ ಉಜ್ಜಯಿನಿ ಮರುಳಸಿದ್ಧೇಶ್ವರ ಜಾತ್ರಾ ಮಹೋತ್ಸವ

Ujjaini Marulasiddeshwara Temple: ಶ್ರೀ ಉಜ್ಜಯಿನಿ ಸದ್ಧರ್ಮ ಪೀಠದ ಪ್ರಸ್ತುತ ಪರಮ ಪೀಠಾಚಾರ್ಯರಾದ ಶ್ರೀ ಜಗದ್ಗುರು ಸಿದ್ಧಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರರ ಸಾನ್ನಿಧ್ಯದಲ್ಲಿ ಜಾತ್ರಾ ಮಹೋತ್ಸವ ಆಯೋಜಿಸಲಾಗಿದೆ. ವಿಜಯನಗರ ಜಿಲ್ಲೆಯ ಕೊಟ್ಟೂರು ತಾಲೂಕಿನ ಉಜ್ಜಯಿನಿ ಗ್ರಾಮದಲ್ಲಿ ಮರುಳಸಿದ್ಧೇಶ್ವರ ರಥೋತ್ಸವ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಭಾನುವಾರ ನೆರವೇರಿತು.

VISTARANEWS.COM


on

Ujjaini Marulasiddeshwara Temple
Koo

| ನಿರಂಜನ ದೇವರಮನೆ, ಚಿತ್ರದುರ್ಗ
ಭಾರತೀಯರ ಬದುಕಿನಲ್ಲಿ ಹಬ್ಬಗಳು ಮತ್ತು ಜಾತ್ರೆಗಳಿಗೆ ಒಂದು ವಿಶೇಷವಾದ ಅರ್ಥ ಹಾಗೂ ಅತಿಶಯವಾದ ಸ್ಥಾನಮಾನವಿದೆ. ಅವುಗಳು ಧಾರ್ಮಿಕ ಹಿನ್ನೆಲೆ ಹೊಂದಿ ಮಹತ್ತರವಾದ ಸಂದೇಶಗಳನ್ನು ಸಾರುತ್ತವೆ. ಸಾಮಾಜಿಕ ಜೀವನದಲ್ಲಿ ಧರ್ಮದ ಬಗ್ಗೆ ಸದಾ ಜಾಗೃಕನಾಗಿರುವಂತೆ ಮಾಡುವುದೇ ಈ ಆಚರಣೆಗಳ ಮಹೋದ್ದೇಶವಾಗಿರುತ್ತದೆ. ಎಲ್ಲ ಜಾತ್ರಾ ಮಹೋತ್ಸವ ಹಾಗೂ ರಥೋತ್ಸವದ ಸಂದರ್ಭದಲ್ಲಿ ಎಲ್ಲರೂ ಯಾವುದೇ ಭೇದ-ಭಾವವಿಲ್ಲದೇ ಒಗ್ಗಟ್ಟಿನಿಂದ ಜಾತ್ರೆ (Ujjaini Marulasiddeshwara Jatre) ಆಚರಿಸುವುದರೊಂದಿಗೆ ರಥ ಎಳೆಯುವ ಮುಖೇನ ಸಾಮಾಜಿಕ ಸೌಹಾರ್ದತೆ ಪ್ರದರ್ಶಿಸುತ್ತಾರೆ. ಪರಸ್ಪರ ದ್ವೇಷಾಸೂಯೆಗಳನ್ನು ಮರೆತು ಸಹಬಾಳ್ವೆಯಿಂದ ವರ್ತಿಸುತ್ತಾರೆ. ಜೊತೆಗೆ ರಾಷ್ಟ್ರೀಯ ಭಾವೈಕ್ಯತೆ ಬೆಳೆಸುವಲ್ಲಿ ಸಹಕಾರಿಯಾಗುತ್ತಾರೆ.

ಇಂಥ ವೈಶಿಷ್ಯವಾದ ಆಲೋಚನೆ, ಆಚರಣೆಗಳನ್ನಿಟ್ಟುಕೊಂಡು ನಿರಂತರ ಸಮಾಜೋ-ಧಾರ್ಮಿಕ ಕಾರ್ಯಗಳನ್ನು ನಿರ್ವಹಿಸುತ್ತಿರುವ ಈ ನಾಡಿನ ಅನೇಕ ಧರ್ಮಪೀಠಗಳು ಹಾಗೂ ದೇವಮಂದಿರಗಳು ಜನತೆ ಪಾಲಿಗೆ ಸದಾ ಜೀವನ್ಮುಕ್ತಿಯ ಪುಣ್ಯತಾಣಗಳಾಗಿ ಕಂಗೊಳಿಸುತ್ತಿವೆ.

ಪರಶಿವನ ಪಂಚಮುಖಗಳಿಂದ ಪ್ರಾದುರ್ಭವಿಸಿ ವೀರಶೈವ ಮತವನ್ನು ಸ್ಥಾಪಿಸಿ, ಶಿವಸರ್ವೋತ್ತಮತೆ ಪ್ರಶಂಸಿಸಿ, ಶಿವಭಕ್ತಿ ಪ್ರಸಾರವನ್ನು ಕೈಗೊಂಡು ತಮ್ಮ ತಪಃಪ್ರಭಾವ ಹಾಗೂ ಕ್ರಿಯಾತ್ಮಕ ಶಕ್ತಿಯಿಂದ ಜಗತ್ತಿನ ಪವಿತ್ರ ಸ್ಥಳಗಳಲ್ಲಿ ಶಿವಲಿಂಗಗಳನ್ನು ಸ್ಥಾಪಿಸಿ, ಶಿವಪೂಜಾ ವೈಭವವನ್ನು ಪ್ರದರ್ಶಿಸಿ ಶೈವ-ವೀರಶೈವ-ಲಿಂಗಾಯತ ಕ್ಷೇತ್ರಗಳನ್ನು ಉದ್ಧರಿಸಿದ ಶ್ರೀ ಜಗದ್ಗುರು ಪಂಚಾಚಾರ್ಯರು ಇಡೀ ವಿಶ್ವಕ್ಕೆ ಲೋಕಪೂಜ್ಯರೆನ್ನಿಸಿದ್ದಾರೆ.

ಇದನ್ನೂ ಓದಿ | Basava Jayanti 2024: ಬದುಕಿನ ಪಾಠ ಕಲಿಸುವ ಬಸವಣ್ಣನ 10 ವಚನಗಳಿವು

ಇಂಥ ವೀರಶೈವ ಧರ್ಮಸ್ಥಾಪಿತ ಪಂಚಪೀಠಗಳಲ್ಲಿ ಒಂದಾದ ಪೀಠವೇ ಶ್ರೀಮದುಜ್ಜಯಿನಿ ಸದ್ಧರ್ಮ ಪೀಠ. ಶಿವನ ವಾಮದೇವ ಮುಖಸಂಜಾತಾರಾದ ಶ್ರೀ ಜಗದ್ಗುರು ಮರುಳಾರಾಧ್ಯರು ಮಾಳವ ದೇಶದ ಕ್ಷಿಪ್ರ ನದಿ ತಟದಲ್ಲಿರುವ ಶ್ರೀ ಸಿದ್ಧೇಶ್ವರ ಜ್ಯೋತಿರ್ಲಿಂಗ ಮುಖದಿಂದ ದಿವ್ಯ ದೇಹಿಯಾಗಿ ಅವತರಿಸಿ ಅಲ್ಲಿಯೇ ಶ್ರೀ ಪೀಠವನ್ನು ಸ್ಥಾಪಿಸಿ ವೇದಾಂತ ಸಮ್ಮತವಾದ ಶಿವಾದ್ವೈತ ಸಿದ್ಧಾಂತವನ್ನು ಮಾನವ ಕುಲದ ಉದ್ಧಾರಕ್ಕಾಗಿ ಸಂಸ್ಥಾಪಿಸಿ ಅದನ್ನು ಬೋಧಿಸಿ ಆ ಪರಂಪರೆ ಮುಂದುವರೆಸಿದ ಮಹಾಮಹಿಮರಾಗಿದ್ದಾರೆ.

ಈ ಪರಂಪರೆಯ ಶ್ರೀ ದಾರುಕಾಚಾರ್ಯರು ಹಿಂದುಳಿದ ಜಾತಿಯ ಕೀಲಿಗನಾದ ದಧೀಚಿಗೆ ಶಿವಾದ್ವೈತವನ್ನು ಬೋಧಿಸಿ ಕುಲ-ಹದಿನೆಂಟು ಜಾತಿಯನ್ನು ಉದ್ಧರಿಸಿದ ಸಮಾಜ ಪರಿವರ್ತನ ಮಹಾ ಪ್ರವರ್ತಕರಾಗಿದ್ದಾರೆ.

ಕಾಲಾಂತರದಲ್ಲಿ ಕರ್ನಾಟಕದ ಉಜ್ಜಯಿನಿ ಪರಿಸರಕ್ಕೆ ಸ್ಥಳಾಂತರವಾದ ಈ ಪೀಠ ಅಂದಿನ ತನ್ನ ಧರ್ಮ-ಸಂಸ್ಕೃತಿ-ಪರಂಪರೆಯನ್ನು ಇಂದಿಗೂ ಮುಂದುವರೆಸಿಕೊಂಡು ಬರುತ್ತಿದೆ. ಈ ಪೀಠದ ಆಚರಣೆಗಳಲ್ಲಿ ಬಹುಮುಖ್ಯವಾದ ಶ್ರೀ ಮರುಳಸಿದ್ಧೇಶ್ವರಸ್ವಾಮಿ ಜಾತ್ರಾ ಮಹೋತ್ಸವ ಹಾಗೂ ತೈಲಾಭಿಷೇಕ ಬಹುವಿಶಿಷ್ಟವಾಗಿದ್ದು, ಅವುಗಳು ವೈಭವಪೂರ್ಣವಾಗಿ ಜರುಗುವುದರೊಂದಿಗೆ ರಾಷ್ಟ್ರದ ಭಾವೈಕ್ಯತೆಯ ಬೆಸುಗೆಯಾಗಿ, ಸರ್ವಧರ್ಮ ಸಹಿಷ್ಣುತೆಯ ಸಂಬಂಧಿಯಾಗಿ, ಸಾಮಾಜಿಕ ಸಂವೇದನೆಯ ಸೇತುಬಂಧವಾಗಿ ತನ್ನ ಆಚರಣೆಗಳನ್ನು ಅನಾವರಣಗೊಳಿಸಿಕೊಂಡಿದೆ.

ಶ್ರೀ ಉಜ್ಜಯಿನಿ ಸದ್ಧರ್ಮ ಪೀಠದ ಪ್ರಸ್ತುತ ಪರಮ ಪೀಠಾಚಾರ್ಯರಾದ ಶ್ರೀ ಜಗದ್ಗುರು ಸಿದ್ಧಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರು ತಮ್ಮ ಪೀಠ ಪರಂಪರೆಯೊಂದಿಗೆ ಜನಪರ ಕಲ್ಯಾಣವನ್ನು ತಮ್ಮದಾಗಿಸಿಕೊಂಡು ಮಾನವ ಧರ್ಮ ಎತ್ತಿ ಹಿಡಿಯುವ ಕೈಂಕರ್ಯವನ್ನು ಸದಾ ನಿರ್ವಹಿಸುತ್ತಿದ್ದಾರೆ. ಈ ನಾಡು ವಿಶ್ವಕಲ್ಯಾಣ ರಾಷ್ಟ್ರವಾಗಲಿ, ಸರ್ವರೂ ಸುಖ-ಸಂತೋಷದಿಂದ ಬಾಳಲಿ, ನಾಡಿನ ಕ್ಷಾಮ-ಡಾಮರಗಳು ದೂರವಾಗಿ ಕ್ಷೇಮ-ಸಂಪತ್ತುಗಳು ಸದಾ ನೆಲೆಸುವಂತಾಗಲಿ, ಭಕ್ತರು ವಾಸಿಸುವ ಊರು-ಕೇರಿಗಳು ಒಂದಾಗಿ ಧರ್ಮ-ಸಂಸ್ಕೃತಿಯ ನೆಲೆಗಳಾಗಲಿ ಎಂಬ ಪ್ರೇರಕ ಧರ್ಮಶಕ್ತಿಯನ್ನು ಈ ಜಾತ್ರಾ ಮಹೋತ್ಸವದ ಸಂದರ್ಭದಲ್ಲಿ ಅನುಷ್ಠಾನಗೊಳಿಸುತ್ತಾರೆ.

ಅಕ್ಷಯ ತದಿಗೆ ಅಮವಾಸ್ಯೆಯೆಂದು ಕ್ಷೇತ್ರನಾಥ ಶ್ರೀ ಮರುಳಸಿದ್ಧೇಶ್ವರಸ್ವಾಮಿಗೆ ಕಂಕಣಧಾರಣೆ ಮಾಡುವುದರೊಂದಿಗೆ ಪ್ರತಿ ದಿವಸ ವಿವಿಧ ವಾಹನೋತ್ಸವಗಳನ್ನು ನಡೆಸಲಾಗುತ್ತದೆ. ಇವುಗಳು ಧರ್ಮ-ಸಂಸ್ಕೃತಿಯನ್ನು ರಕ್ಷಿಸಿ, ಪೋಷಿಸುವಂತಹ ಕಾರ್ಯಕ್ರಮಗಳ ಧ್ಯೋತಕವಾಗಿರುತ್ತವೆ.

ಈ ನಾಡಿನ ರೈತರಿಗೆ ಶ್ರೀ ಮರುಳಸಿದ್ಧೇಶ್ವರನ ಕೃಪೆ ಇದ್ದರೇ ಮಳೆ, ಬೆಳೆ ಸಮೃದ್ಧವಾಗಿ ಬರುತ್ತದೆಂಬ ಗಾಢ ನಂಬಿಕೆ ಭಕ್ತರಲ್ಲಿರುವುದರಿಂದ ಈ ಜಾತ್ರಾ ಮಹೋತ್ಸವಕ್ಕೆ ಬರುವ ರೈತರು, ಭಕ್ತಾದಿಗಳು ತಮ್ಮ ದಾಸೋಹ ಸೇವೆಯನ್ನು ಅರ್ಪಿಸಿ ಕೃತಾರ್ಥರಾಗುತ್ತಾರೆ. ಹತ್ತಾರು ದಿನಗಳವರೆಗೆ ಜರುಗುವ ಈ ಜಾತ್ರಾ ಮಹೋತ್ಸವ ನೂರಾರು ಚಿಂತನೆಗಳನ್ನು ಇಟ್ಟುಕೊಂಡು ಸಮಾಜೋ-ಧಾರ್ಮಿಕ ಕಾರ್ಯ ಯೋಜನೆಗಳನ್ನು ಅನುಷ್ಠಾನಗೊಳಿಸುವ ಮುಖೇನ ಸಾಮಾಜಿಕ ಸೌಹಾದರ್ತೆಯ ತತ್ವ-ಸಿದ್ಧಾಂತಗಳನ್ನು ಸಾರಿ ಸತ್ವಪೂರ್ಣ ಸಾತ್ವಿಕ ಸಮಾಜವನ್ನು ನಿರ್ಮಾಣ ಮಾಡುವಲ್ಲಿ ಯಶಸ್ವಿಯಾಗುತ್ತದೆ.

ಪ್ರಸ್ತುತ ಶ್ರೀ ಜಗದ್ಗುರುಗಳು ಶ್ರೀ ಪೀಠದ ಧರ್ಮ-ಸಂಸ್ಕೃತಿ-ಪರಂಪರೆಯನ್ನು ಆಧುನಿಕತೆಯೊಂದಿಗೆ ಮುಖಾ-ಮುಖಿಯಾಗಿಸಿ ಶ್ರೀ ಪೀಠದ ಅಸ್ಮಿತೆಯನ್ನು ಇಡೀ ನಾಡಿಗೆ ಅನಾವರಣಗೊಳಿಸುತ್ತಿರುವುದು ಬಹುವಿಶೇಷವಾಗಿದೆ. ಹಾಗೆಯೇ ಇಂದಿನ ಜಾತ್ರಾ ಮಹೋತ್ಸವದ ಆಮಂತ್ರಣ ಪತ್ರಿಕೆಯಲ್ಲಿ ಪ್ರತಿಯೊಬ್ಬರು ತಪ್ಪದೇ ಮತ ಚಲಾಯಿಸಿ, ಪ್ರಜಾಪ್ರಭುತ್ವದ ಭವ್ಯತೆಯನ್ನು ಬೆಳಗಿಸಿ ಎಂಬ ಘೋಷವಾಕ್ಯವನ್ನು ಶ್ರೀಪೀಠದ ವತಿಯಿಂದ ಪ್ರಕಟಿಸಿ ಮತದಾರರಲ್ಲಿ ಜಾಗೃತಿ ಮೂಡಿಸಿದ ಪರಿ ತುಂಬಾ ಶ್ಲಾಘನೀಯವಾಗಿದೆ.

ಕಾರ್ಯಕ್ರಮಗಳ ವಿವರ

ಮೇ.12ರ ಭಾನುವಾರ ಸಂಜೆ ಶ್ರೀ ಮರುಳಸಿದ್ಧೇಶ್ವರಸ್ವಾಮಿಯ ಮಹಾರಥೋತ್ಸವ ಶ್ರೀ ಜಗದ್ಗುರುಗಳ ಸಾನ್ನಿಧ್ಯದಲ್ಲಿ ಸಾವಿರಾರು ಶಿವಾಚಾರ್ಯರ ನೇತೃತ್ವದಲ್ಲಿ, ನೂರಾರು ವಿರಕ್ತ ಚರಮೂರ್ತಿಗಳ ಸಮ್ಮುಖದಲ್ಲಿ ನಾಡಿನ ಲಕ್ಷಾಂತರ ಜನತೆಯ ಉಪಸ್ಥಿತಿಯಲ್ಲಿ ವಿವಿಧ ಜಾನಪದ ಕಲಾಮೇಳಗಳೊಂದಿಗೆ ಸಾಲಂಕೃತ ವರ್ಣರಂಜಿತ ಭವ್ಯವಾದ ಮಹಾರಥ ಉಜ್ಜಯಿನಿ ಪೀಠ ಪರಿಸರದಲ್ಲಿ ಅತ್ಯಂತ ಶ್ರದ್ಧಾ-ಭಾವ-ಭಕ್ತಿಯೊಂದಿಗೆ ಎಳೆಯಲ್ಪಟ್ಟಿತು. ಸಂಜೆ 7ಕ್ಕೆ ಶ್ರೀ ಜಗದ್ಗುರುಗಳ ಸಾನ್ನಿಧ್ಯದಲ್ಲಿ ಶ್ರೀ ದಾರುಕಾಚಾರ್ಯರ ಜಯಂತಿ ಯುಗಮಾನೋತ್ಸವ ಹಾಗೂ ಸದ್ಧರ್ಮ ಜನಜಾಗೃತಿ ಧರ್ಮ ಸಮಾರಂಭ ಅತ್ಯಂತ ಸಡಗರ-ಸಂಭ್ರಮಗಳಿಂದ ಜರುಗಿತು. ಶ್ರೀ ದಾರುಕರ ಜನಹಿತ ಕಾರ್ಯಗಳು ಹಾಗೂ ಅವರು ಕೈಗೊಂಡ ಅಪ್ರತಿಮ ಪವಾಡ ಸದೃಶ ಕಾರ್ಯಗಳನ್ನು ಈ ಸಂದರ್ಭದಲ್ಲಿ ವಿಧ್ವತ್‌ಪೂರ್ಣ ಉಪನ್ಯಾಸದ ಮುಖೇನ ಅನಾವರಣಗೊಳಿಸಲಾಯಿತು.

ಮೇ 13ರ ಸೋಮವಾರ ಸಂಜೆ 5 ಗಂಟೆಗೆ ಶ್ರೀ ಮರುಳಸಿದ್ಧೇಶ್ವರಸ್ವಾಮಿ ದೇವಾಲಯದ ಗೋಪುರದ ಶಿಖರಕ್ಕೆ ತೈಲಾಭಿಷೇಕ ನೆರವೇರಿಸಲಾಯಿತು. ಶ್ರೀಮದ್ ಉಜ್ಜಯಿನಿ ಜಗದ್ಗುರುಗಳು ಮತ್ತು ಶ್ರೀಮದ್ ಕಾಶಿ ಜಗದ್ಗುರುಗಳವರ ದಿವ್ಯ ಸಾನ್ನಿಧ್ಯದಲ್ಲಿ ಅಂದು ನಾಡಿನ ಮೂಲೆ-ಮೂಲೆಗಳಿಂದ ಆಗಮಿಸುವ ಅಸಂಖ್ಯಾತ ಭಕ್ತಾದಿಗಳು ಹಾಗೂ ಜರೀಮಲೆ ರಾಜವಂಶಸ್ಥರಿಂದ ಅತ್ಯಂತ ಭಕ್ತಿಪೂರ್ವಕವಾಗಿ ಶಿಖರಕ್ಕೆ ತೈಲವನ್ನು ಎರೆಯಲಾಯಿತು. ಈ ಕಾರ್ಯದಿಂದ ನಾಡಿನ ಜನತೆಗೆ ಬಂದೊಂದಗಿದ ಕಷ್ಟಕಾರ್ಪಣ್ಯಗಳು ನಿವಾರಣೆಯಾಗಿ ಸುಖ-ಶಾಂತಿ ನೆಲೆಸಲಿ ಎಂಬ ಆಶಯದೊಂದಿಗೆ ಹಾಗೂ ಶನಿದೋಷನಿವಾರಣೆಗೆ ಈ ಕಾರ್ಯವನ್ನು ನಡೆಸಲಾಗುತ್ತದೆ.

ಇದನ್ನೂ ಓದಿ | ಧವಳ ಧಾರಿಣಿ ಅಂಕಣ: ರಾಮಾಯಣದ ಕವಿಗೆ ಕಾಡಿದ ಮೂರು ಚಿಂತೆಗಳು

ಮೇ 14ರ ಮಂಗಳವಾರ ಬೆಳಗ್ಗೆ ಬ್ರಾಹ್ಮಿ ಮುಹೂರ್ತದಲ್ಲಿ ವೀರಮಾಹೇಶ್ವರ ಜಂಗಮ ವಟುಗಳಿಗೆ ಇಷ್ಟಲಿಂಗ ದೀಕ್ಷಾ ಸಂಸ್ಕಾರ ಹಾಗೂ ಧರ್ಮೋದೇಶ. ಮೇ 17ರ ಶುಕ್ರವಾರ ಮಧ್ಯಾಹ್ನ 12 ಗಂಟೆಗೆ ಸರ್ವಧರ್ಮ ಸಾಮೂಹಿಕ ವಿವಾಹ ಮಹೋತ್ಸವ ನಡೆಯುತ್ತದೆ. ಕೊನೆ ದಿವಸ ಶ್ರೀ ಮರುಳಸಿದ್ಧೇಶ್ವರ ಸ್ವಾಮಿಗೆ ಆಘ್ರವಣೆ ನೀಡುವ ಮುಖೇನ ಕಂಕಣ ವಿಸರ್ಜನೆ ಹಾಗೂ ದೇವಾಲಯ ಶುದ್ಧೀಕರಣ ಮಾಡಲಾಗುತ್ತದೆ.

Continue Reading

ಮಳೆ

Karnataka Weather : ನಾಳೆ ಮುಕ್ಕಾಲು ಕರ್ನಾಟಕದಲ್ಲಿ ಬಿರುಗಾಳಿ ಜತೆಗೆ ವಿಪರೀತ ಮಳೆ

Rain News : ರಾಜ್ಯಾದ್ಯಂತ ಮುಂದಿನ 24 ಗಂಟೆಯಲ್ಲಿ ಗುಡುಗು ಸಹಿತ ಗಾಳಿಯೊಟ್ಟಿಗೆ ಧಾರಾಕಾರ ಮಳೆಯಾಗುವ (Heavy Rain) ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆಯನ್ನು (Karnataka Weather Forecast) ನೀಡಿದೆ.

VISTARANEWS.COM


on

By

Karnataka Weather Forecast
Koo

ಬೆಂಗಳೂರು: ಭಾನುವಾರದಂದು ದಕ್ಷಿಣ ಒಳನಾಡಿನ ಹಲವು ಕಡೆಗಳಲ್ಲಿ ಹಾಗೂ ಕರಾವಳಿ, ಉತ್ತರ ಒಳನಾಡಿನ ಕೆಲವು ಕಡೆಗಳಲ್ಲಿ ಮಳೆಯಾಗಿರುವ (Rain News) ವರದಿ ಆಗಿದೆ. ಅತಿ ಹೆಚ್ಚು ಮಳೆಯು ಪುತ್ತೂರು ಹಾಗೂ ರಾಯಚೂರಿನಲ್ಲಿ ತಲಾ 10 ಸೆಂ.ಮೀ (Karnataka Weather Forecast) ಮಳೆಯಾಗಿದೆ. ಉಳಿದಂತೆ ಉಪ್ಪಿನಂಗಡಿ 9, ಸಿರಾ ಮತ್ತು ಕೊಟ್ಟಿಗೆಹಾರದಲ್ಲಿ ತಲಾ 8 ಸೆಂ.ಮೀ, ಗಬ್ಬೂರು, ಬೆಳಗಾವಿಯಲ್ಲಿ 7 ಸೆಂ.ಮೀ ಮಳೆಯಾಗಿರುವ ವರದಿ ಆಗಿದೆ. ಗರಿಷ್ಠ ಉಷ್ಣಾಂಶ ರಾಯಚೂರಿನಲ್ಲಿ 39.4 ಡಿ. ಸೆ ದಾಖಲಾಗಿದೆ.

ಕಾಸರಗೋಡಿನಲ್ಲಿ ಗಾಳಿ ಮಳೆಗೆ ನೆಲಕ್ಕುರುಳಿದ ಬೃಹತ್ ಹೋರ್ಡಿಂಗ್‌

ದಕ್ಷಿಣ ಕನ್ನಡ ಜಿಲ್ಲೆಯ ಗಡಿಭಾಗ ಕೇರಳದ ಕಾಸರಗೋಡಿನ ಬಸ್ ನಿಲ್ದಾಣ ಬಳಿ ಗಾಳಿ ಸಹಿತ ಮಳೆಯಾಗುತ್ತಿದೆ. ಗಾಳಿ ಮಳೆಗೆ ಬೃಹತ್ ಹೋರ್ಡಿಂಗ್‌ ನೆಲಕ್ಕುರುಳಿದ ಘಟನೆ ನಡೆದಿದೆ. ಹೋರ್ಡಿಂಗ್‌ ಬೀಳುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಇನ್ನೂ ಹೋರ್ಡಿಂಗ್‌ ಬಿದ್ದು ಕೆಳಗಡೆ ಪಾರ್ಕ್ ಮಾಡಿದ್ದ ವಾಹನಗಳಿಗೆ ಹಾನಿಯಾಗಿದೆ. ಮಳೆಯಾಗುತ್ತಿದ್ದ ಹಿನ್ನೆಲೆಯಲ್ಲಿ ಪಾರ್ಕಿಂಗ್‌ ಜಾಗದಲ್ಲಿ ಜನರು ಇರಲಿಲ್ಲ. ಇದರಿಂದ ದೊಡ್ಡ ಅನಾಹುತವೊಂದು ತಪ್ಪಿದೆ.

ಹಾಸನದಲ್ಲಿ ಉರುಳಿ ಬಿದ್ದ ಮರ

ಹಾಸನ ಜಿಲ್ಲೆಯ ವಿವಿಧೆಡೆ ಭಾನುವಾರ ರಾತ್ರಿ ಸುರಿದ ಧಾರಾಕಾರ ಮಳೆಗೆ ಮರವೊಂದು ಉರುಳಿ ಬಿದ್ದಿತ್ತು. ಪರಿಣಾಮ ಎರಡು ಗಂಟೆಗೂ ಹೆಚ್ಚು ಸಮಯ ಟ್ರಾಫಿಕ್ ಜಾಮ್ ಉಂಟಾಗಿತ್ತು. ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಶಿರಾಡಿಘಾಟ್‌ ರಸ್ತೆಯಲ್ಲಿ ಘಟನೆ ನಡೆದಿದೆ.

ಮಂಗಳೂರು-ಬೆಂಗಳೂರು ಸಂಪರ್ಕ ಕಲ್ಪಿಸುವ ಪ್ರಮುಖ ರಾಷ್ಟ್ರೀಯ ಹೆದ್ದಾರಿ 75 ಶಿರಾಡಿಘಾಟ್ ರಸ್ತೆಗೆ ಮರ ಬಿದ್ದಿತ್ತು. ಟ್ರಾಫಿಕ್ ಜಾಮ್‌ನಲ್ಲಿ ಸಿಲುಕಿದ ವಾಹನ ಸವಾರರು ಪರದಾಡಿದರು. ಸ್ಥಳಕ್ಕಾಗಮಿಸಿ ಟ್ರಾಫಿಕ್‌ ಪೊಲೀಸರು ಮರವನ್ನು ತೆರವುಗೊಳಿಸಿ ಸಂಚಾರಕ್ಕೆ ಮುಕ್ತ ಮಾಡಿದರು.

ಇದನ್ನೂ ಓದಿ: Karnataka Rain : ಕುರಿಗಾಹಿಗಳ ಪ್ರಾಣ ಕಸಿದ ಸಿಡಿಲು; 20ಕ್ಕೂ ಹೆಚ್ಚು ಕುರಿಗಳು ಸಾವು

ಮಳೆ ಜತೆಗೆ 60 ಕಿ.ಮೀ ವ್ಯಾಪ್ತಿಯಲ್ಲಿ ಬೀಸಲಿದೆ ಬಿರುಗಾಳಿ

ರಾಜ್ಯದಲ್ಲಿ ಮಳೆ ಅಬ್ಬರ ಮುಂದುವರಿದ್ದು, ಮೇ 14ರಂದು ಭಾರಿ ಮಳೆಯೊಂದಿಗೆ ಗಾಳಿ ವೇಗವು 50-60 ಕಿ.ಮೀ ವ್ಯಾಪ್ತಿಯಲ್ಲಿ ಬೀಸಲಿದೆ. ದಕ್ಷಿಣ ಕನ್ನಡ, ಉಡುಪಿಯಲ್ಲಿ ಗುಡುಗು ಸಹಿತ ಭಾರಿ ಮಳೆಯಾಗುವ ಸಾಧ್ಯತೆ ಇದೆ. ಇನ್ನೂ ಚಿಕ್ಕಮಗಳೂರು, ಹಾಸನ, ಮಂಡ್ಯ,ಮೈಸೂರು ಸೇರಿ ಕಲಬುರಗಿ, ಬೆಳಗಾವಿ, ಯಾದಗಿರಿ ಜಿಲ್ಲೆಗಳಲ್ಲಿ ಗಾಳಿಯೊಂದಿಗೆ ಭಾರಿ ಮಳೆಯಾಗಲಿದೆ.

ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ತುಮಕೂರು, ಕೋಲಾರ, ವಿಜಯಪುರ, ಬಾಗಲಕೋಟೆ, ಬೀದರ್‌, ಧಾರವಾಡ,ಗದಗದಲ್ಲಿ ಗುಡುಗು, ಸಿಡಿಲಿನೊಂದಿಗೆ ಜೋರಾದ ಗಾಳಿಯೊಂದಿಗೆ ಮಳೆಯಾಗಲಿದೆ. ಉಳಿದೆಡೆ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆಯನ್ನು ನೀಡಿದೆ.

ರಾಜಧಾನಿ ಬೆಂಗಳೂರಿನಲ್ಲಿ ಸಾಮಾನ್ಯವಾಗಿ ಮೋಡ ಕವಿದ ವಾತಾವರಣ ಇರಲಿದೆ. ಸಂಜೆ ಅಥವಾ ರಾತ್ರಿ ನಂತರ ಗುಡುಗು ಸಹಿತ ಭಾರಿ ಮಳೆಯಾಗುವ ಸಾಧ್ಯತೆ ಇದೆ. ಗರಿಷ್ಠ ಉಷ್ಣಾಂಶ 33 ಹಾಗೂ ಕನಿಷ್ಠ ಉಷ್ಣಾಂಶ 22 ಡಿ.ಸೆ ಇರಲಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ವಿಜಯನಗರ

Vijayanagara News: ವಿಜೃಂಭಣೆಯಿಂದ ನಡೆದ ಉಜ್ಜಯಿನಿ ಶ್ರೀ ಮರುಳಸಿದ್ದೇಶ್ವರ ಸ್ವಾಮಿ ರಥೋತ್ಸವ

Vijayanagara News: ಕೊಟ್ಟೂರು ತಾಲೂಕಿನ ಉಜ್ಜಯಿನಿ ಸದ್ಧರ್ಮ ಪೀಠದ ಶ್ರೀ ಮರುಳಸಿದ್ದೇಶ್ವರ ಸ್ವಾಮಿಯ ಮಹಾರಥೋತ್ಸವವು ಲಕ್ಷಾಂತರ ಭಕ್ತರ ಮಧ್ಯೆ ಭಾನುವಾರ ಸಂಜೆ ವಿಜೃಂಭಣೆಯಿಂದ ನೆರವೇರಿತು. ರಥೋತ್ಸವದ ಅಂಗವಾಗಿ ಶ್ರೀ ಮರುಳಸಿದ್ದೇಶ್ವರ ಸ್ವಾಮಿಗೆ ವಿಶೇಷ ಪೂಜಾ ಕೈಂಕರ್ಯಗಳು ನೆರವೇರಿದವು. ನಾಡಿನ ಮೂಲೆ ಮೂಲೆಗಳಿಂದ ಆಗಮಿಸಿದ್ದ ಅಪಾರ ಸಂಖ್ಯೆಯ ಭಕ್ತರು ಹರ್ಷೋದ್ಗಾರದಿಂದ ಜಯಘೋಷ ಕೂಗುತ್ತ ರಥವನ್ನು ಶ್ರದ್ಧಾ ಭಕ್ತಿಯಿಂದ ಎಳೆದು ಭಕ್ತಿ ಸಮರ್ಪಿಸಿದರು.

VISTARANEWS.COM


on

Ujjaini Sri Marulasiddeshwara Rathotsava
Koo

ಕೊಟ್ಟೂರು: ಪಂಚಪೀಠಗಳಲ್ಲಿ ಒಂದಾದ ಉಜ್ಜಯಿನಿ ಸದ್ಧರ್ಮ ಪೀಠದ ಶ್ರೀ ಮರುಳಸಿದ್ದೇಶ್ವರ ಸ್ವಾಮಿಯ ಮಹಾರಥೋತ್ಸವವು ಲಕ್ಷಾಂತರ ಭಕ್ತರ ಮಧ್ಯೆ ಭಾನುವಾರ ಸಂಜೆ ವಿಜೃಂಭಣೆಯಿಂದ (Vijayanagara News) ನೆರವೇರಿತು. ಇದಕ್ಕೂ ಮೊದಲು ಶ್ರೀ ಮರುಳಸಿದ್ದೇಶ್ವರ ಸ್ವಾಮಿಗೆ ವಿಶೇಷ ಪೂಜಾ ಕೈಂಕರ್ಯಗಳು ನೆರವೇರಿದವು. ಭಕ್ತಾದಿಗಳು ಶ್ರೀ ಮರುಳಸಿದ್ದೇಶ್ವರ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿ, ಇಷ್ಠಾರ್ಥ ಸಿದ್ಧಿಗಾಗಿ ಪ್ರಾರ್ಥಿಸಿದರು.

ಇದನ್ನೂ ಓದಿ: Gold Rate Today: ಬಂಗಾರದ ಬೆಲೆಯಲ್ಲಿ ಇಳಿಕೆ; ರಾಜ್ಯ ಮಾರುಕಟ್ಟೆಯಲ್ಲಿ ಚಿನ್ನ- ಬೆಳ್ಳಿ ದರಗಳು ಹೀಗಿವೆ

ಪಟಾಕ್ಷಿ ಸವಾಲು

ಶ್ರೀ ಮರುಳಸಿದ್ದೇಶ್ವರ ಸ್ವಾಮಿಯ ರಥದ ಪಟಾಕ್ಷಿ ಸವಾಲು ಪ್ರಕ್ರಿಯೆ ನಡೆಯಿತು. 2.01 ಲಕ್ಷ ರೂ.ಗೆ ಚಿತ್ರದುರ್ಗ ಜಿಲ್ಲೆಯ ಸಿದ್ದಾಪುರ ಪ್ರವೀಣ್ ಸವಾಲಿನಲ್ಲಿ ಪಡೆದುಕೊಂಡರು. ಬಳಿಕ ಉಜ್ಜಯಿನಿ ಸದ್ಧರ್ಮ ಪೀಠದ ಜಗದ್ಗುರು ಶ್ರೀ ಸಿದ್ಧಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಸ್ವಾಮೀಜಿ, ವೈಭವದ ಮಹಾರಥೋತ್ಸವಕ್ಕೆ ಚಾಲನೆ ನೀಡಿದರು.

ಶ್ರೀಗಳು ರಥೋತ್ಸವಕ್ಕೆ ಚಾಲನೆ ನೀಡುತ್ತಿದ್ದಂತೆ ನಾಡಿನ ಮೂಲೆ ಮೂಲೆಗಳಿಂದ ಆಗಮಿಸಿದ್ದ ಅಪಾರ ಸಂಖ್ಯೆಯ ಭಕ್ತರು ಹರ್ಷೋದ್ಗಾರದಿಂದ ಜಯಘೋಷ ಕೂಗುತ್ತ, ಶ್ರದ್ಧಾ ಭಕ್ತಿಯಿಂದ ರಥವನ್ನು ಎಳೆದು ಭಕ್ತಿ ಸಮರ್ಪಿಸಿದರು.

ಇದನ್ನೂ ಓದಿ: CBSE 12th Results 2024: ಸಿಬಿಎಸ್‌ಇ 12ನೇ ತರಗತಿ ಫಲಿತಾಂಶ ಪ್ರಕಟ, 87.98% ಪಾಸ್‌

ರಥೋತ್ಸವಕ್ಕೆ ಆಗಮಿಸಿದ್ದ ಭಕ್ತಾದಿಗಳಿಗೆ ಶ್ರೀ ಪೀಠದ ಪ್ರೌಢಶಾಲಾ ಆವರಣದಲ್ಲಿ ಪ್ರಸಾದ ವ್ಯವಸ್ಥೆ ಏರ್ಪಡಿಸಲಾಗಿತ್ತು.

Continue Reading
Advertisement
Viral News
ದೇಶ13 mins ago

Viral News: 100 ದಿನ..200ಕ್ಕೂ ಹೆಚ್ಚು ವಿಮಾನಗಳು.. ಮಹಿಳಾ ಪ್ರಯಾಣಿಕರೇ ಈತನ ಟಾರ್ಗೆಟ್‌, ಇದು ಹೈಟೆಕ್‌ ಕಳ್ಳನ ಕಥೆ

HD Revanna Bail
ಪ್ರಮುಖ ಸುದ್ದಿ25 mins ago

HD Revanna Bail: ನಿನ್ನೆ ಜಾಮೀನು ಸಿಕ್ಕರೂ ಇಂದು ಸಂಜೆಯವರೆಗೆ ರೇವಣ್ಣ ಜೈಲಿನಲ್ಲಿರಬೇಕು!

Kalki 2898 AD
ಸಿನಿಮಾ26 mins ago

Kalki 2898 AD: ʼಕಲ್ಕಿʼ ಚಿತ್ರಕ್ಕಾಗಿ ಕನ್ನಡದಲ್ಲಿ ಡಬ್‌ ಮಾಡಲಿದ್ದಾರೆ ದೀಪಿಕಾ ಪಡುಕೋಣೆ

mumbai hoarding collapse
ಪ್ರಮುಖ ಸುದ್ದಿ1 hour ago

Hoarding Collapse: ಹೋರ್ಡಿಂಗ್‌ ಕುಸಿತದಲ್ಲಿ ಸತ್ತವರ ಸಂಖ್ಯೆ 14ಕ್ಕೆ ಏರಿಕೆ, ಇನ್ನಷ್ಟು ಜನ ಅದರಡಿಯಲ್ಲಿ

Vertigo Problem
ಆರೋಗ್ಯ1 hour ago

Vertigo Problem: ನಿಮಗೆ ಇದ್ದಕ್ಕಿದ್ದಂತೆ ತಲೆ ಸುತ್ತುತ್ತಿದೆಯೆ? ಈ ವಿಷಯ ತಿಳಿದುಕೊಂಡಿರಿ

king dasharatha dhavala dharini
ಅಂಕಣ1 hour ago

ಧವಳ ಧಾರಿಣಿ ಅಂಕಣ: ಆತುರಗೆಟ್ಟು ಸ್ತಿಮಿತ ಕಳೆದುಕೊಂಡವನ ವಿಲಾಪ

karnataka weather Forecast
ಮಳೆ2 hours ago

Karnataka weather: ವ್ಯಾಪಕ ಮಳೆಯೊಂದಿಗೆ 60 ಕಿ.ಮೀ ವೇಗದಲ್ಲಿ ಅಪ್ಪಿಳಿಸಲಿದೆ ಗಾಳಿ; 10 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್‌

Food Tips Kannada
ಆಹಾರ/ಅಡುಗೆ2 hours ago

Food Tips Kannada: ಸಸ್ಯಾಹಾರಿಗಳಿಗೆ ಒಮೇಗಾ 3 ಕೊಬ್ಬಿನಾಮ್ಲ ಯಾವುದರಲ್ಲಿ ದೊರೆಯುತ್ತದೆ?

Narendra Modi
ದೇಶ3 hours ago

Narendra Modi: ಇಂದು ವಾರಾಣಸಿಯಲ್ಲಿ ನಾಮಪತ್ರ ಸಲ್ಲಿಕೆ ಜತೆಗೆ ಮೋದಿ ಕಾರ್ಯಕ್ರಮ ಏನೇನು?

Dina Bhavishya
ಭವಿಷ್ಯ3 hours ago

Dina Bhavishya : ಉದ್ಯೋಗದ ಸ್ಥಳದಲ್ಲಿ ನಿಮ್ಮ ವಿರುದ್ಧ ಪಿತೂರಿ ಮಾಡ್ಬಹುದು ಎಚ್ಚರ!

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina Bhavishya
ಭವಿಷ್ಯ3 hours ago

Dina Bhavishya : ಉದ್ಯೋಗದ ಸ್ಥಳದಲ್ಲಿ ನಿಮ್ಮ ವಿರುದ್ಧ ಪಿತೂರಿ ಮಾಡ್ಬಹುದು ಎಚ್ಚರ!

HD Revanna Bail Revanna will not leave the country condition imposed by the court
ಕ್ರೈಂ14 hours ago

HD Revanna Bail: ರೇವಣ್ಣ ದೇಶ ಬಿಡಂಗಿಲ್ಲ, ಕೆ.ಆರ್‌. ನಗರಕ್ಕೆ ಎಂಟ್ರಿ ಕೊಡಂಗಿಲ್ಲ! ಕೋರ್ಟ್‌ ವಿಧಿಸಿದ ಷರತ್ತು ಏನು?

HD Revanna Bail
ಕ್ರೈಂ14 hours ago

HD Revanna Bail: ಎಚ್‌.ಡಿ ರೇವಣ್ಣಗೆ ಕೊನೆಗೂ ಜಾಮೀನು; ಎಸ್‌ಐಟಿಗೆ ಮುಖಭಂಗ!

Prajwal Revanna Case Revanna bail plea to be heard Judge reprimands SIT cops for their behaviour
ಕ್ರೈಂ14 hours ago

Prajwal Revanna Case: ರೇವಣ್ಣ ಜಾಮೀನು ಅರ್ಜಿ ವಿಚಾರಣೆ; ಎಸ್‌ಐಟಿ ಪೊಲೀಸರ ವರ್ತನೆಗೆ ಜಡ್ಜ್‌ ಗರಂ!

Karnataka Weather Forecast
ಮಳೆ15 hours ago

Karnataka Weather : ನಾಳೆ ಮುಕ್ಕಾಲು ಕರ್ನಾಟಕದಲ್ಲಿ ಬಿರುಗಾಳಿ ಜತೆಗೆ ವಿಪರೀತ ಮಳೆ

Modi Roadshow Live
ದೇಶ15 hours ago

Modi Roadshow Live: ವಾರಾಣಸಿಯಲ್ಲಿ ಮೋದಿ ಭರ್ಜರಿ ರೋಡ್‌ ಶೋ; ಲೈವ್‌ ಇಲ್ಲಿ ವೀಕ್ಷಿಸಿ

Karnataka Rain
ಮಳೆ21 hours ago

Karnataka Rain : ಕುರಿಗಾಹಿಗಳ ಪ್ರಾಣ ಕಸಿದ ಸಿಡಿಲು; 20ಕ್ಕೂ ಹೆಚ್ಚು ಕುರಿಗಳು ಸಾವು

karnataka weather forecast karnataka rains
ಮಳೆ1 day ago

Karnataka Weather : ವಾಯುಭಾರ ಕುಸಿತ; ಕರಾವಳಿ, ಮಲೆನಾಡು ಸೇರಿ ಹಲವೆಡೆ ಭಾರಿ ಮಳೆ ಎಚ್ಚರಿಕೆ

Dina Bhavishya
ಭವಿಷ್ಯ1 day ago

Dina Bhavishya : ಇಂದು ಹೂಡಿಕೆ ಮಾಡಿದರೆ ಗಳಿಸುವಿರಿ ಭಾರಿ ಲಾಭ; ಅನಿರೀಕ್ಷಿತ ಸುದ್ದಿಯಿಂದ ಸಂತಸ

Prajwal Revanna Case I was never kidnapped and son has made a false complaint Video of victim goes viral
ಕ್ರೈಂ2 days ago

Prajwal Revanna Case: ರೇವಣ್ಣ ಕೇಸ್‌ಗೆ ಟ್ವಿಸ್ಟ್‌! ನನ್ನ ಕಿಡ್ನ್ಯಾಪ್‌ ಮಾಡಿಯೇ ಇಲ್ಲ; ಮಗ ತಪ್ಪು ದೂರು ಕೊಟ್ಟಿದ್ದಾನೆ; ಸಂತ್ರಸ್ತೆಯ ವಿಡಿಯೊ ವೈರಲ್

ಟ್ರೆಂಡಿಂಗ್‌