ಕಲಬುರಗಿ: ಹಾಡಹಗಲೇ ನಗರದಲ್ಲಿ ವಕೀಲರೊಬ್ಬರ ಬರ್ಬರ (lawyer Murder) ಹತ್ಯೆಗೈದು ಪರಾರಿಯಾಗಿದ್ದ ಖತರ್ನಾಕ್ ಹಂತಕರನ್ನು (murder case) ಹಡೆಮುರಿ ಕಟ್ಟುವಲ್ಲಿ ಕಲಬುರಗಿ ನಗರ ಪೊಲೀಸರು ಯಶಸ್ವಿಯಾಗಿದ್ದಾರೆ. ಆಸ್ತಿಗಾಗಿ ನಡೆದ ದಶಕಗಳ ದ್ವೇಷಕ್ಕೆ ವಕೀಲ ಈರಣ್ಣಗೌಡ ಬಲಿಯಾಗಿದ್ದಾರೆ.
ಕಳೆದ ಡಿ.7ರಂದು ಈರಣ್ಣಗೌಡ ಕೋಟ್೯ಗೆ ತೆರುಳುವಾಗ ಇಬ್ಬರು ದುಷ್ಕರ್ಮಿಗಳು ಅಡ್ಡಗಟ್ಟಿದ್ದರು. ಏಕಾಏಕಿ ಮಚ್ಚು, ಲಾಂಗ್ನಿಂದ ಹಲ್ಲೆಗೆ ಮುಂದಾಗಿದ್ದರು. ಈ ವೇಳೆ ವಕೀಲ ಈರಣ್ಣಗೌಡ ಪ್ರಾಣ ಉಳಿಸಿಕೊಳ್ಳಲು ಓಡಿದ್ದರು. ಆದರೂ ಬಿಡದೆ ಹಂತಕರಿಬ್ಬರು ಕೈಯಲ್ಲಿ ಮಾರಕಾಸ್ತ್ರಗಳನ್ನು ಹಿಡಿದುಕೊಂಡು ಬರೋಬ್ಬರಿ ಅರ್ಧ ಕಿಲೋ ಮೀಟರ್ ಅಟ್ಟಾಡಿಸಿಕೊಂಡು ಬಂದಿದ್ದರು.
ಕಲಬುರಗಿ ನಗರದ ಸಾಯಿಮಂದಿರ ಬಳಿ ಇರುವ ಗಂಗಾವಿಹಾರ ಅಪಾರ್ಟ್ಮೆಂಟ್ನ ಕಾರ್ ಪಾರ್ಕಿಂಗ್ಗೆ ನುಗ್ಗಿದ ಈರಣ್ಣಗೌಡನನ್ನು ಬರೋಬ್ಬರಿ 20ಕ್ಕೂ ಹೆಚ್ಚು ಬಾರಿ ಹೊಡೆದು ಕೊಂದಿದ್ದರು. ಇಷ್ಟಕ್ಕೂ ಸುಮ್ಮನಾಗಲಿಲ್ಲ, ತಲೆ ಮೇಲೆ ಕಲ್ಲು ಎತ್ತಿಹಾಕಿ ಹೋಗಿದ್ದರು.
ಆರೋಪಿಗಳಾದ ಅವ್ವಣ್ಣಾ ನಾಯ್ಕೊಡಿ, ಮಲ್ಲಿನಾಥ್ ನಾಯ್ಕೊಡಿ, ಭಾಗೇಶ್ ನಾಯ್ಕೊಡಿ ಎಂಬುವವರನ್ನು ಮರುದಿನವೇ ಪೊಲೀಸರು ಬಂಧಿಸಿದ್ದರು. ಆದರೆ ಈ ಪ್ರಕರಣದ ಮಾಸ್ಟರ್ ಮೈಂಡ್ ನೀಲಕಂಠರಾವ್ ಪಾಟೀಲ್ ಹಾಗೂ ಕೊಲೆಗೆ ಸಹಕಾರ ನೀಡಿದ್ದ ಆತನ ಪತ್ನಿ ಸಿದ್ದಮ್ಮಳನ್ನು ವಿವಿ ಪೊಲೀಸರು ಬಂಧಿಸಿದ್ದಾರೆ.
ಇದನ್ನೂ ಓದಿ: Accident Case : ಕಿಟಕಿ ಒರೆಸುವಾಗ ಜಾರಿದ ಕಾಲು; 5ನೇ ಮಹಡಿಯಿಂದ ಬಿದ್ದು ಮಹಿಳೆ ಸಾವು
ಸುಪಾರಿ ಕೊಟ್ಟು ದೇವಸ್ಥಾನಕ್ಕೆ ಹೋಗಿದ್ದ
ನೂರಾರು ಕೋಟಿ ಆಸ್ತಿಯ ಒಡಯನಾಗಿದ್ದ ವಕೀಲ ಈರಣ್ಣಗೌಡ ಕುಟುಂಬಕ್ಕೂ ಹಾಗೂ ನಾಯ್ಕೊಡಿ ಕುಟುಂಬದ ನಡುವೆ ಆಸ್ತಿ ವಿಚಾರವಾಗಿ ಹಲವು ವರ್ಷಗಳಿಂದ ದ್ವೇಷ ಬೆಳೆದಿತ್ತು. ಇತ್ತ ಈರಣ್ಣಗೌಡ ಪಾಟೀಲ್ ಸಂಬಂಧಿಕರಲ್ಲೂ ಆಸ್ತಿ ವಿಚಾರವಾಗಿ ಜಗಳ ಶುರುವಾಗಿತ್ತು. ಹೇಗಾದರೂ ಮಾಡಿ ಈರಣ್ಣಗೌಡನನ್ನು ಮುಗಿಸಿದರೆ ಆಸ್ತಿ ತಮ್ಮ ಪಾಲಿಗೆ ಬರುತ್ತೆ ಎಂದುಕೊಂಡಿದ್ದರು.
ಹೀಗಾಗಿ ಪ್ಲ್ಯಾನ್ ಹಾಕಿ ನೀಲಕಂಠ ನಾಯ್ಕೊಡಿ ಕುಟುಂಬದೊಂದಿಗೆ ಸ್ಕೆಚ್ ಹಾಕಿದ್ದ. ನಾಲ್ಕೈದು ದಿನಗಳ ಕಾಲ ಲಾಡ್ಜ್ನಲ್ಲಿದ್ದು ಈರಣ್ಣಗೌಡನನ್ನು ಮುಗಿಸಲು ಯತ್ನಿಸಿದ್ದು, ಅದು ವಿಫಲವಾಗಿತ್ತು. ಬಳಿಕ ಡಿ.7ರಂದು ಈರಣ್ಣ ಗೌಡನನ್ನು ಸಾಯಿ ಮಂದಿರದ ಗಂಗಾವಿಹಾರ ಅಪಾರ್ಟ್ಮೆಂಟ್ ಬಳಿ ಅಟ್ಟಾಡಿಸಿಕೊಂಡು ಹಂತಕರು ರಕ್ತದೊಕುಳಿ ಹರಿಸಿದರು.
ವಕೀಲ ಉಸಿರು ನಿಲ್ಲಿಸಿದ್ದರೂ ಹಂತಕರು ಬಿಡದೆ ಕೊಚ್ಚಿ ಪರಾರಿಯಾದರು. ಬಳಿಕ ಅಲ್ಲಿಂದ ನೇರವಾಗಿ ಆರೋಪಿ ನೀಲಕಂಠ ಮನೆ ಬಳಿ ಹೋಗಿದ್ದರು. ನೀಲಕಂಠ ಪತ್ನಿ ಸಿದ್ದಮ್ಮ ಬಳಿ ರಕ್ತದ ಕಲೆಯನ್ನು ತೋರಿಸಿ, ಕೊಲೆ ಮಾಡಿದ್ದಾಗಿ ಹೇಳಿ 50 ಸಾವಿರ ರೂ. ಹಣ ಪಡೆದಿದ್ದರು. ಇತ್ತ ನೀಲಕಂಠ ತಾನು ತಂದಿದ್ದ ಹೊಸ ಕಾರನ್ನು ಪೂಜೆ ಮಾಡಿಸಿಕೊಂಡು ಬರಲು ಗಾಣಗಾಪುರದ ದತ್ತಾತ್ರೇಯ ದೇವಸ್ಥಾನಕ್ಕೆ ಹೋಗಿದ್ದ. ಪೂಜೆ ಜತೆಗೆ ತನ್ನ ಆಸೆ ತಿರಿತು ಎಂದು ದೇವರಲ್ಲಿ ಹರಕೆ ಮುಟ್ಟಿಸಿದ್ದ. ಆದರೆ ಇದೀಗ ಪೊಲೀಸರು ಐದು ಮಂದಿಯನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ. ಜತೆಗೆ ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ