Site icon Vistara News

Physical Abuse : ಸಂಜೆಯಾದರೆ ರೂಮಿಗೆ ಬಾ ಅಂತಾರೆ! ಕೇಂದ್ರೀಯ ವಿವಿಯ ವಿದ್ಯಾರ್ಥಿನಿಗೆ ಪಿಎಚ್‌ಡಿ ಗೈಡ್ ಮಾನಸಿಕ ಕಿರುಕುಳ

Physical Abuse

ಕಲಬುರಗಿ : ವಿದ್ಯಾಕಾಶಿಯಲ್ಲಿ ವಿದ್ಯಾರ್ಥಿನಿಯರಿಗೆ ಕಿರುಕುಳ ನೀಡಲಾಗುತ್ತಿದೆ ಎಂಬ ಗಂಭೀರ ಆರೋಪವೊಂದು ಕೇಳಿ ಬಂದಿದೆ. ಕೇಂದ್ರೀಯ ವಿವಿಯಲ್ಲಿ ವಿದ್ಯಾರ್ಥಿನಿಗೆ ಸಹಾಯಕ ಪ್ರಾಧ್ಯಾಪಕನಿಂದ ಮಾನಸಿಕ ಕಿರುಕುಳ (Physical Abuse) ನೀಡಲಾಗುತ್ತಿದೆ ಎನ್ನಲಾಗಿದೆ. ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಕಡಗಂಚಿಯಲ್ಲಿರುವ ಕೇಂದ್ರೀಯ ವಿವಿಯಲ್ಲಿ (Central University Of Karnataka) ಘಟನೆ ನಡೆದಿದೆ.

ಕೇಂದ್ರೀಯ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಸಹಾಯಕ ಪ್ರಾದ್ಯಾಪಕ ಪ್ರೊ. ವಿಜಯಕುಮಾರ್ ಎಂಬುವವರಿಂದ ವಿದ್ಯಾರ್ಥಿನಿಯರಿಗೆ ಮಾನಸಿಕ‌ ಕಿರುಕುಳ ನೀಡಲಾಗುತ್ತಿದೆ ಅಂತೆ. ಪಿ.ಎಚ್.ಡಿ ಗೈಡ್ ಆಗಿರುವ ಪ್ರೊ. ವಿಜಯಕುಮಾರ್‌, ಸಂಜೆ ಆಗುತ್ತಿದ್ದಂತೆ ವಿದ್ಯಾರ್ಥಿನಿಯರನ್ನು ಸಂಶೋಧನೆಗಾಗಿ ಕರೆಯುತ್ತಾರೆ.

ಸಂಜೆ ಹೊತ್ತಿಗೆ ಸಂಶೋಧನೆಗಾಗಿ ‌ತಮ್ಮ ಕೊಠಡಿಗೆ ಕರೆಯುತ್ತಿದ್ದರು ಎಂದು ಕನ್ನಡ ವಿಭಾಗದ ಸಂಶೋಧನಾ ವಿದ್ಯಾರ್ಥಿನಿ ಆರೋಪಿಸಿದ್ದಾರೆ. ಕಳೆದ ಎರಡು ವರ್ಷಗಳಿಂದ ಈತನ ಕಿರುಕುಳಕ್ಕೆ ಬೇಸತ್ತ ವಿದ್ಯಾರ್ಥಿನಿ ರಾಜ್ಯ ಮಹಿಳಾ ಆಯೋಗಕ್ಕೆ ದೂರು ನೀಡಿದ್ದಾರೆ. ಜತೆಗೆ ರಾಷ್ಟ್ರಪತಿಗಳಿಗೂ ಪತ್ರ ಬರೆದಿದ್ದು ಕ್ರಮವಹಿಸುವಂತೆ ಒತ್ತಾಯಿಸಿದ್ದಾರೆ.

ಭಾನುವಾರ ಮತ್ತು ರಜಾದಿನದಲ್ಲೂ ಕೊಠಡಿಗೆ ಬರುವಂತೆ ಮಾನಸಿಕ ಕಿರುಕುಳ ನೀಡುತ್ತಿದ್ದಾರೆ. ಹೋಗದೆ ಇದ್ದರೆ ಶಿಷ್ಯವೇತನ ಅರ್ಜಿಗೆ ಸಹಿ ಹಾಕುತ್ತಿರಲಿಲ್ಲ ಎಂದು ಪತ್ರದಲ್ಲಿ ವಿದ್ಯಾರ್ಥಿನಿ ಉಲ್ಲೇಖಿಸಿದ್ದಾಳೆ. ಇನ್ನೂ ಅವಾಚ್ಯ ಶಬ್ಧಗಳಿಂದ ನಿಂದನೆ ಮಾಡುತ್ತಿದ್ದರು ಎಂದು ಮಹಿಳಾ‌ ಆಯೋಗಕ್ಕೆ ದೂರು ನೀಡಿದ್ದಾರೆ. ಜತೆಗೆ ಗರ್ಭಿಣಿ ಎಂಬುದು ತಿಳಿದರೂ ವಿನಾಕಾರಣ ಮಾರ್ಗದರ್ಶಕರಿಂದ ತೊಂದರೆ ಆಗುತ್ತಿದೆ. ಮಾರ್ಗದರ್ಶಕರನ್ನು ಬದಲಾವಣೆ ಮಾಡಿ, ಸಂಶೋಧನಾ ಅಧ್ಯಯನಕ್ಕೆ ಸಹಾಯ ಮಾಡುವಂತೆ ಮಹಿಳಾ ಆಯೋಗಕ್ಕೆ ವಿನಂತಿಸಿದ್ದಾರೆ.

ವಿಶ್ವವಿದ್ಯಾಲಯಕ್ಕೆ ಬಂದಾಗಿನಿಂದಲೂ ಉದ್ದೇಶಪೂರ್ವಕವಾಗಿ ಮಾನಸಿಕ ಹಿಂಸೆ ನೀಡುತ್ತಿದ್ದಾರೆ. ನನ್ನ ವೈಯಕ್ತಿಕ ವಿಷಯ ಮಾತಾಡಿ ನಿಂದಿಸುವುದು, ಹಣದ ಆಮಿಷ ತೋರಿಸುವುದು, ವಿವಿಗೆ ರಜಾದಿನಗಳಲ್ಲಿ ಮತ್ತು ಭಾನುವಾರವೂ ವಿಭಾಗಕ್ಕೆ ಬರಬೇಕೆಂದು ಹೇಳುವುದು. ಅವಾಚ್ಯ ಶಬ್ಧಗಳಿಂದ ಬೈಯುತ್ತಾರೆ ಎಂದು ವಿದ್ಯಾರ್ಥಿನಿ ಆರೋಪಿಸಿದ್ದಾರೆ.

ಇದನ್ನೂ ಓದಿ: Deep fake Scam : ಸೆಲೆಬ್ರಿಟಿಗಳ ಬಳಿಕ ಈಗ ಬೆಂಗಳೂರು ಶಾಲಾ ವಿದ್ಯಾರ್ಥಿನಿಯರಿಗೆ ಡೀಪ್‌ಫೇಕ್‌ ಕಾಟ; ನಗ್ನ ಫೋಟೋ ವೈರಲ್

ನೀಲಿಚಿತ್ರಗಳ ತಾರೆಗೆ ಹಣ ನೀಡಿದ ಪ್ರಕರಣ; ಅಮೆರಿಕದ ಮಾಜಿ ಅಧ್ಯಕ್ಷ ಟ್ರಂಪ್‌ ತಪ್ಪಿತಸ್ಥ ಎಂದ ಕೋರ್ಟ್‌

ವಾಷಿಂಗ್ಟನ್‌: ಮಹತ್ವದ ಬೆಳವಣಿಗೆಯೊಂದರಲ್ಲಿ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಅವರಿಗೆ ಭಾರೀ ಸಂಕಷ್ಟ ಎದುರಾಗಿದೆ. ನ್ಯಾಯಾರ್ಕ್‌ನ ನ್ಯಾಯಾಲಯ ಡೊನಾಲ್ಡ್ ಟ್ರಂಪ್ ಅವರು ʼಹಷ್‌ ಮನಿʼ (Hush Money) ಪ್ರಕರಣದಲ್ಲಿ ದೋಷಿ ಎಂದು ತೀರ್ಪು ನೀಡಿದೆ. ಇದರೊಂದಿಗೆ ನೀಲಿಚಿತ್ರಗಳ ತಾರೆ ಸ್ಟಾರ್ಮಿ ಡೇನಿಯಲ್ಸ್‌ (Stormy Daniels) ಜತೆ ಲೈಂಗಿಕ ಸಂಪರ್ಕ ಬೆಳೆಸಿ, ಆಕೆಯ ಬಾಯಿ ಮುಚ್ಚಿಸಲು ಹಣ ನೀಡಿದ ವಿಷಯಕ್ಕೆ ಸಂಬಂಧಿಸಿದಂತೆ ವಿಚಾರಣೆ ಎದುರಿಸಿದ 77 ವರ್ಷದ ಟ್ರಂಪ್‌ 34 ಆರೋಪಗಳಲ್ಲಿ ತಪ್ಪಿತಸ್ಥರೆಂದು ಸಾಬೀತಾಗಿದೆ. ಮತ್ತೊಮ್ಮೆ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸುತ್ತಿರುವ ಟ್ರಂಪ್‌ಗೆ ಇದು ಬಹು ದೊಡ್ಡ ಹಿನ್ನಡೆ ಎಂದೇ ವಿಶ್ಲೇಷಿಲಾಗುತ್ತಿದೆ. ನವೆಂಬರ್‌ನಲ್ಲಿ ಅಮೆರಿಕದಲ್ಲಿ ಅಧ್ಯಕ್ಷೀಯ ಚುನಾವಣೆ ನಡೆಯಲಿದೆ.

ಸುದ್ದಿಗಾರರೊಂದಿಗೆ ಮಾತನಾಡಿದ ಟ್ರಂಪ್‌, ತೀರ್ಪನ್ನು ʼಅವಮಾನʼ ಮತ್ತು ʼಮೋಸ” ಎಂದು ಕರೆದಿದ್ದಾರೆ. ನವೆಂಬರ್ 5ರಂದು ನಡೆಯಲಿರುವ ಅಧ್ಯಕ್ಷೀಯ ಚುನಾವಣೆಯಲ್ಲಿ ಮತದಾರರಿಂದ ʼನಿಜವಾದ ತೀರ್ಪುʼ ಹೊರ ಬರಲಿದೆ ಎಂದು ಹೇಳಿದ್ದಾರೆ. ಅದಾಗ್ಯೂ ಈ ಪ್ರಕರಣದಲ್ಲಿ ಟ್ರಂಪ್‌ ಜೈಲು ಸೇರುವ ಸಾಧ್ಯತೆ ಇಲ್ಲ ಎಂದು ಮೂಲಗಳು ತಿಳಿಸಿವೆ. ವ್ಯವಹಾರ ದಾಖಲೆಗಳನ್ನು ತಿರುಚಿದ್ದಕ್ಕಾಗಿ ಟ್ರಂಪ್‌ ಅವರಿಗೆ ಜುಲೈ 11ರಂದು ಶಿಕ್ಷೆಯ ಪ್ರಮಾಣ ಪ್ರಕಟಿಸಲಾಗುವುದು ಎಂದು ವಿಚಾರಣೆಯ ಅಧ್ಯಕ್ಷತೆ ವಹಿಸಿದ್ದ ನ್ಯಾಯಾಧೀಶರು ತಿಳಿಸಿದ್ದಾರೆ. 12 ಸದಸ್ಯರ ತೀರ್ಪುಗಾರರು ಎರಡು ದಿನಗಳಲ್ಲಿ 11 ಗಂಟೆಗಳಿಗೂ ಹೆಚ್ಚು ಕಾಲ ಚರ್ಚಿಸಿ ಗುರುವಾರ ಟ್ರಂಪ್‌ ದೋಷಿ ಎಂದು ಘೋಷಿಸಿದ್ದರು.

ʼʼನಾನು ಮುಗ್ಧ ವ್ಯಕ್ತಿ, ಮತ್ತು ಯಾವುದೇ ತಪ್ಪು ಮಾಡಿಲ್ಲ. ನಾನು ನಮ್ಮ ದೇಶಕ್ಕಾಗಿ ಮತ್ತು ನಮ್ಮ ಸಂವಿಧಾನಕ್ಕಾಗಿ ಹೋರಾಡುತ್ತಿದ್ದೇನೆ. ಯಾವುದು ಸತ್ಯ, ಯಾವುದು ಸುಳ್ಳು ಎನ್ನುವುದು ಜನರಿಗೆ ಗೊತ್ತಿದೆ. ಹೀಗಾಗಿ ಅವರು ನನ್ನ ಕೈ ಬಿಡುವುದಿಲ್ಲʼʼ ಎಂದು ಟ್ರಂಪ್‌ ಹೇಳಿದ್ದಾರೆ.

ಏನಿದು ಪ್ರಕರಣ?

ಟ್ರಂಪ್‌ ಅವರು ನಟಿ ಸ್ಟ್ರಾಮಿ ಡೇನಿಯಲ್ಸ್‌ಗೆ ಹಣ ಪಾವತಿಸಿದ ಆರೋಪ ಎದುರಿಸುತ್ತಿದ್ದಾರೆ. ಇದಕ್ಕೆ ಸಂಬಂಧಿಸಿದ ಹಷ ಮನಿ ಪ್ರಕರಣ ದಾಖಲಾಗಿದೆ. ಗೋಪ್ಯತೆ ರಕ್ಷಿಸಲು ನೀಡುವ ಹಣಕ್ಕೆ ಹಷ್‌ ಮನಿ ಎಂದು ಕರೆಯಲಾಗುತ್ತದೆ. ಸ್ಟಾರ್ಮಿ ಡೇನಿಯಲ್ಸ್‌ ಜತೆಗೆ ಟ್ರಂಪ್‌ 2006ರಲ್ಲಿ ಲೈಂಗಿಕ ಸಂಬಂಧ ಹೊಂದಿದ್ದರು. 2011ರಲ್ಲಿ ಸ್ಟಾರ್ಮಿ ಈ ವಿಷಯವನ್ನು ಬಹಿರಂಗಪಡಿಸಿದ್ದರು.

2016ರಲ್ಲಿ ಟ್ರಂಪ್‌ ಚುನಾವಣಾ ಕಣಕ್ಕೆ ಇಳಿದ ವೇಳೆ ಲೈಂಗಿಕ ಸಂಪರ್ಕದ ವಿಷಯ ಬಹಿರಂಗ ಮಾಡದಂತೆ ತಮ್ಮ ವಕೀಲರ ಮೂಲಕ ಸ್ಟಾರ್ಮಿಗೆ 1 ಕೋಟಿ ರೂ. ಹಣ ನೀಡಿದ್ದರು. ಬಳಿಕ ಟ್ರಂಪ್‌ ಹಣ ನೀಡಿದ ವಿಷಯ ಬೆಳಕಿಗೆ ಬಂದು ಪ್ರಕರಣ ದಾಖಲಾಗಿತ್ತು. ಮೊದಲು ಹಣ ನೀಡಿದ ಆರೋಪವನ್ನು ನಿರಾಕರಿಸಿದ್ದ ಟ್ರಂಪ್‌ ಬಳಿಕ ಒಪ್ಪಿಕೊಂಡಿದ್ದರು. ಇದನ್ನು ಖಾಸಗಿ ವಹಿವಾಟು ಎಂದು ಕರೆದಿದ್ದರು. ಸದ್ಯ ಅವರ ಮುಂದಿನ ನಡೆ ಕುತೂಹಲ ಕೆರಳಿಸಿದೆ. ಚುನಾವಣಾ ಪ್ರಚಾರದ ವೇಳೆ ಎದುರಾಳಿಗಳು ಟ್ರಂಪ್‌ ವಿರುದ್ಧದ ವಿಚಾರದಲ್ಲಿ ವಾಗ್ದಾಳಿ ನಡೆಸುವ ಸಾಧ್ಯತೆ ಇದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version