Site icon Vistara News

PM Narendra Modi LIVE : ಕರ್ನಾಟಕ ಅಖಾಡಕ್ಕೆ ಮೋದಿ ಎಂಟ್ರಿ; ಕಲಬುರಗಿ ರಣಕಹಳೆಯ LIVE STREAMING ಇಲ್ಲಿ ನೋಡಿ

PM Narendram Modi live

ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ (Lok sabha Election 2024) 400 ಸ್ಥಾನಗಳ ಗುರಿ ಹೊತ್ತುಕೊಂಡಿರುವ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಕರ್ನಾಟಕದ ಚುನಾವಣಾ ಅಖಾಡಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಶುಕ್ರವಾರ ಮಧ್ಯಾಹ್ನ 2.00 ಗಂಟೆಗೆ ಕಲಬುರಗಿಯ ಡಿಎಆರ್‌ ಮೈದಾನಕ್ಕೆ ಬಂದಿಳಿದು ಬಳಿಕ ಸೆಮಿ ರೋಡ್‌ ಶೋನಲ್ಲಿ ಭಾಗವಹಿಸಿದರು.

ಕರ್ನಾಟಕದ ಚುನಾವಣಾ ಪ್ರಚಾರವನ್ನು (Modi Campaign in Karnataka) ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjuna Kharge) ಅವರ ನೆಲದಿಂದಲೇ ಆರಂಭಿಸಿರುವ ಅವರು ರೋಡ್‌ ಶೋ ಬಳಿಕ 2.15ಕ್ಕೆ ಕಲಬುರಗಿಯ ಎನ್‌.ವಿ. ಆಟದ ಮೈದಾನದಲ್ಲಿ (Kalaburagi Samavesha) ನಡೆಯುವ ಬೃಹತ್‌ ಸಮಾವೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಭಾಗವಹಿಸಲಿದ್ದಾರೆ.

2019ರಲ್ಲೂ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ತವರು ನೆಲವಾದ ಕಲಬುರಗಿಯಿಂದ ರಾಜ್ಯದ ಪ್ರಚಾರವನ್ನು ಆರಂಭಿಸಿದ್ದ ಅವರು ಈ ಬಾರಿಯೂ ಅದೇ ಹೆಜ್ಜೆ ಇಟ್ಟಿದ್ದಾರೆ. ಕಳೆದ ಬಾರಿ ಕಲಬುರಗಿಯಲ್ಲಿ ಅಭ್ಯರ್ಥಿಯಾಗಿದ್ದ ಖರ್ಗೆ ಅವರಿಗೂ ಮೋದಿ ಅಬ್ಬರದಲ್ಲಿ ಸೋಲಾಗಿತ್ತು.

ಕಳೆದ ಲೋಕಸಭಾ ಚುನಾವಣೆಯಲ್ಲಿ 25+1 ಸ್ಥಾನಗಳಲ್ಲಿ ಗೆದ್ದಿದ್ದ ಬಿಜೆಪಿ ಈ ಬಾರಿ ಎಲ್ಲ 28 ಸ್ಥಾನಗಳನ್ನು ಗೆಲ್ಲುವ ಟಾರ್ಗೆಟ್‌ ಇಟ್ಟುಕೊಂಡಿದೆ. 2019ರಂತೆಯೇ ಕಿತ್ತೂರು ಮತ್ತು ಕಲ್ಯಾಣ ಕರ್ನಾಟಕ ಸ್ವೀಪ್‌ ಮಾಡಲು ಪ್ಲಾನ್‌‌ ಮಾಡಲಾಗಿದ್ದು, ಅದಕ್ಕಾಗಿಯೇ ಕಲಬುರಗಿಯಲ್ಲಿ ಮೊದಲ ಸಮಾವೇಶ ಆಯೋಜನೆಯಾಗಿದೆ.

ಇದನ್ನೂ ಓದಿ : Narendra Modi: ಚುನಾವಣೆ ಘೋಷಣೆಗೆ ಮೊದಲೇ ದೇಶದ ಜನರಿಗೆ ಮೋದಿ ಪತ್ರ; ಏನಿದೆ?

ಡಿಎಆರ್ ಗ್ರೌಂಡ್, ಕೆಬಿಎನ್ ಸರ್ಕಲ್, ರೋಟರಿ ಕ್ಲಬ್ ಮಾರ್ಗವಾಗಿ ಎನ್ ವಿ ಮೈದಾನದ ವರೆಗೆ ಸುಮಾರು 2.5 ಕಿ.ಮೀ. ಉದ್ದದ ರೋಡ್‌ ಶೋ ಇದಾಗಿದ್ದು ಭಾರಿ ಸಂಖ್ಯೆಯಲ್ಲಿ ಅಭಿಮಾನಿಗಳು ಸೇರಿದ್ದಾರೆ. ಕಲಬುರಗಿಯ ಬಿರು ಬಿಸಿಲನ್ನೇ ಲೆಕ್ಕಿಸದೆ ಜನರು ನೆರೆದಿದ್ದರು.

ಮೋದಿ ಕಾರ್ಯಕ್ರಮಕ್ಕೆ ಬಿಗಿ ಬಂದೋಬಸ್ತ್‌

ಕಲಬುರಗಿಗೆ ಇಂದು ಪ್ರಧಾನಿ ನರೇಂದ್ರ ಮೋದಿ ಆಗಮನ ಹಿನ್ನೆಲೆಯಲ್ಲಿ ಕಲಬುರಗಿಯಲ್ಲಿ ಖಾಕಿ ಪಡೆ ಹೈ ಅಲರ್ಟ್ ಆಗಿದ್ದು, ನಗರದಾದ್ಯಂತ ಪೊಲೀಸ್ ಸರ್ಪಗಾವಲು ಇರಿಸಲಾಗಿದೆ. ರಾಮೇಶ್ವರಂ ಕೆಫೆ ಬಾಂಬ್ ಬ್ಲಾಸ್ಟ್ ಪ್ರಕರಣದ ಬಾಂಬರ್ ಕಲಬುರಗಿ ಗೆ ಬಂದು ಹೋಗಿರುವ ಶಂಕೆ ಹಿನ್ನೆಲೆಯಲ್ಲಿ ಮತ್ತಷ್ಟು ಅಲರ್ಟ್‌ ಘೋಷಿಸಲಾಗಿದೆ.

Exit mobile version