ಕಲಬುರಗಿ: ಕಲಬುರಗಿ ತಾಲೂಕಿನ (Kalaburagi news) ಸೀತನೂರ ಗ್ರಾಮದಲ್ಲಿ ಶಾಹೀನಾ ಬೇಗಂ (24) ಎಂಬ ಮಹಿಳೆಯ (Self Harming) ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಮೇಲ್ನೋಟಕ್ಕೆ ಇದೊಂದು ಆತ್ಮಹತ್ಯೆ (woman death by suicide) ಎಂದು ಕಂಡುಬಂದರೂ ಇದೊಂದು ಕೊಲೆ ಎಂದು ಆಕೆಯ ತಾಯಿಮನೆಯವರು (Its Murder not Suicide) ಆರೋಪಿಸಿದ್ದಾರೆ.
ಆಕೆಯ ಕೈಯ ನರಗಳನ್ನು ಕತ್ತರಿಸಲಾಗಿದ್ದು, ತಲೆಯ ಭಾಗದಲ್ಲಿ ಗಾಯಗಳಿವೆ. ಆಕೆಯ ಶವ ನೇಣು ಕುಣಿಕೆಯನ್ನು ನೇತಾಡುತ್ತಿದೆ. ಈ ಹಿನ್ನೆಲೆಯಲ್ಲಿ ಒಂದು ಆತ್ಮಹತ್ಯೆಯಲ್ಲ ಕೊಲೆ ಎನ್ನುವುದು ಮನೆಯವರ ಆರೋಪ.
ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲ್ಲೂಕಿನ ಗಂವಾರ ಗ್ರಾಮದ ಶಾಹೀನಾ ಬೇಗಂಳನ್ನು ಕಳೆದ ಮೂರು ವರ್ಷದ ಹಿಂದೆ ಸೀತನೂರು ಗ್ರಾಮದ ಖಾಜಾ ಹುಸೇನ್ ಜೊತೆ ಮದುವೆಯಾಗಿತ್ತು.
ಮದುವೆಯಾದ ಬಳಿಕ ಆತ ವರದಕ್ಷಿಣೆಗಾಗಿ ಪೀಡಿಸುತ್ತಿದ್ದ ಎನ್ನಲಾಗಿದೆ. ತವರು ಮನೆಯಿಂದ ಚಿನ್ನ ತರುವಂತೆ ನಿರಂತರವಾಗಿ ಕಿರುಕುಳ ಕೊಡುತ್ತಿದ್ದ ಗಂಡನ ಬಗ್ಗೆ ಶಾಹಿನಾ ಹೆತ್ತವರಿಗೆ ವಿಚಾರ ತಿಳಿಸಿದ್ದರೆನ್ನಲಾಗಿದೆ. ಆದಷ್ಟು ಸಹಿಸಿಕೊಂಡು ಇರು. ಚಿನ್ನದ ವ್ಯವಸ್ಥೆ ಮಾಡುವುದಾಗಿ ಹೇಳಿದ್ದರಂತೆ ಪೋಷಕರು.
ಭಾನುವಾರವೂ ಮನೆಯಲ್ಲಿ ಚಿನ್ನದ ವಿಷಯಕ್ಕೆ ಗಲಾಟೆ ಆಗಿದೆ ಎನ್ನಲಾಗಿದ್ದು, ಚಿನ್ನ ತರದ ಶಾಹಿನಾಳನ್ನು ಹೀನಾಮಾನವಾಗಿ ನಿಂದಿಸಿ ಹಲ್ಲೆ ಮಾಡಿದ್ದಾರೆ ಎನ್ನುವುದು ದೂರು.
ಚಿನ್ನ ತರದ ಕಾರಣಕ್ಕಾಗಿಯೇ ಆಕೆಯ ಕೈಗೆ ಬ್ಲೇಡಿನಿಂದ ಗೀರಿ ಕೊಲೆ ಮಾಡಲಾಗಿದೆ, ತಲೆಗೂ ಹೊಡೆಯಲಾಗಿದೆ. ಕೊನೆಗೆ ಆಕೆ ಮೃತಪಟ್ಟ ಬಳಿಕ ಆತ್ಮಹತ್ಯೆ ಎಂದು ಬಿಂಬಿಸಲು ನೇಣು ಬಿಗಿದುಕೊಂಡಂತೆ ಮಾಡಲಾಗಿದೆ ಎಂದು ಶಾಹೀನಾ ಕುಟುಂಬದಿದವರು ಅಳಿಯ ಖಾಜಾ ಹುಸೇನ್ ಕುಟುಂಬದ ಮೇಲೆ ಕೊಲೆ ಆರೋಪಿಸಿದ್ದಾರೆ.
ಇತ್ತ ಶಾಹೀನಾ ಬೇಗಂ ಸಾವಿನ ಬಳಿಕ ಪತಿ ಖಾಜಾ ಹುಸೇನ್ ಪರಾರಿಯಾಗಿದ್ದಾನೆ. ಹೀಗಾಗಿ ಇದೊಂದು ಕೊಲೆ ಇರಬಹುದು ಎಂಬ ಸಂಶಯಕ್ಕೆ ಇಂಬು ಸಿಕ್ಕಿದೆ. ಶಾಹಿನಾ ಮನೆಯವರು ಫರಹತಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಮಗಳ ಸಾವಿಗೆ ನ್ಯಾಯ ಕೊಡಿಸಬೇಕು, ದುಷ್ಟ ಗಂಡ ಮತ್ತು ಆತನ ಕುಟುಂಬಕ್ಕೆ ಶಿಕ್ಷೆ ವಿಧಿಸಬೇಕು ಎಂದು ಒತ್ತಾಯಿಸಿದ್ದಾರೆ.
ಇದನ್ನೂ ಓದಿ: