ಚಿತ್ತಾಪುರ : ರಾಜ್ಯ ಸರ್ಕಾರ ಜಾರಿಗೊಳಿಸಿರುವ ಎಪಿಎಂಸಿ ಕಾಯ್ದೆ ರೈತರಿಗೆ ಮಾರಕವಾಗಿದೆ ಮತ್ತು ರದ್ದುಗೊಳಿಸಲು ಎಲ್ಲರೂ ಹೋರಾಟ ನಡೆಸಬೇಕಿದೆ ಎಂದು ಶಾಸಕ ಪ್ರಿಯಾಂಕ್ ಖರ್ಗೆ ಹೇಳಿದರು. ಚಿತ್ತಾಪುರ ಎಪಿಎಂಸಿ ಸಭಾಂಗಣದಲ್ಲಿ 2019-20 ನೇ ಸಾಲಿನ ವಾರ್ಷಿಕ ಕ್ರಿಯಾಯೋಜನೆಯಡಿ ₹28.91 ಲಕ್ಷ ವೆಚ್ಚದ ಆಡಳಿತ ಕಚೇರಿ ಸುತ್ತ ಕಾಂಪೌಂಡ್ ನಿರ್ಮಾಣ, ₹9.12 ಲಕ್ಷ ವೆಚ್ಚದಲ್ಲಿ 1 ಸಾವಿರ ಲೀಟರ್ ಸಾಮರ್ಥ್ಯದ ಶುದ್ಧ ಕುಡಿವ ನೀರಿನ ಘಟಕವನ್ನು ಉದ್ಘಾಟಿಸಿ ಮಾತನಾಡಿದರು.
ಕಾಯ್ದೆಯಲ್ಲಿ ಕಾಂಟ್ರ್ಯಾಕ್ಟ್ ಫಾರ್ಮಿಂಗ್‌ನಂತಹ ಅವೈಜ್ಞಾನಿಕ ಅಂಶಗಳಿದ್ದು, ಎಪಿಎಂಸಿ ಇಲ್ಲದಿದ್ದರೆ ರೈತರ ಬೆಳೆಗಳನ್ನು ಸಂಗ್ರಹಿಸಲಾಗದೆ ಹಾಳಾಗುವ ಆತಂಕವಿದೆ. ತಾಲೂಕಿನಲ್ಲಿ ರೈತ ಕಲ್ಯಾಣ ಭವನ ನಿರ್ಮಾಣಕ್ಕೆ ಪ್ರಯತ್ನ ಮಾಡಲಾಗುವುದು ಎಂದು ಭರವಸೆ ನೀಡಿದರು.
ಇದನ್ನೂ ಓದಿ | PSI Scam: ಹಗರಣ ನಡೆದ ಕಲಬುರಗಿ ಜಿಲ್ಲೆಗಿಂದು CM ಭೇಟಿ: ಇನ್ನೂ ಸಿಗದ ದಿವ್ಯಾ ಹಾಗರಗಿ
ಮುಗುಳನಾಗಾಂವ್‌ದ ಶ್ರೀ ಅಭಿನವ ಸಿದ್ದಲಿಂಗ ಶಿವಚಾರ್ಯರು ಮಾತನಾಡಿ, ಸರ್ಕಾರಗಳ ಬದಲಾದ ನೀತಿಗಳಿಂದಾಗಿ ರೈತ ಸಂಕಷ್ಟದಲ್ಲಿದ್ದಾನೆ. ವೈದ್ಯರು, ಶಿಕ್ಷಕರು ಇಲ್ಲದಿದಿದ್ದರೂ ನಡೆಯುತ್ತದೆ. ಆದರೆ ಅನ್ನದಾತ ಇರದಿದ್ದರೆ ನಾವೆಲ್ಲರೂ ಜೀವಂತ ಶವವಾಗಬೇಕಾಗುತ್ತದೆ ಎಂದರು.
ಎಪಿಎಂಸಿ ಅಧ್ಯಕ್ಷ ಸಿದ್ದುಗೌಡ ಅಫಜಲಪುರಕರ್ ಮಾತನಾಡಿ, ತಾಲೂಕು 6 ಉಪ ಮಾರುಕಟ್ಟೆಗಳನ್ನು ಹೊಂದಿದ್ದು, ವಾಡಿ, ಶಹಾಬಾದ್‌ನಲ್ಲಿ ಉಪ ಮಾರುಕಟ್ಟೆ ಇದೆ. ನಾಲವಾರದಲ್ಲೂ ಸ್ಥಾಪನೆಗೆ ಯೋಜನೆ ಹಾಕಿಕೊಳ್ಳಲಾಗಿದೆ. ಕಾಳಗಿಯಲ್ಲಿ 1 ಎಕರೆಯಲ್ಲಿ ಕಚೇರಿ ಕಟ್ಟಡ ಹಾಗೂ ಗೋಟೂರು ಮತ್ತು ಕಾಲಗಿ ಮಧ್ಯೆ 10 ಎಕರೆಯಲ್ಲಿ ಉಪಮಾರುಕಟ್ಟೆ ನಿರ್ಮಾನ ಮಾಡುವ ಉದ್ದೇಶವಿದೆ ಈ ಕುರಿತು ಜಿಲ್ಲಾಧಿಕಾರಿಗಳ ಅನುಮತಿ ನಂತರ ಸ್ಥಾಪನೆ ಮಾಡಲಾಗುವುದು ಎಂದರು.
ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಉಮಾಕಾಂತ್ ಹಳ್ಳೆ, ಎಪಿಎಂಸಿ ಕಾರ್ಯದರ್ಶಿ ಸವಿತಾ ಗೋಣಿ, ವರ್ತಕರ ಸಂಘದ ಅಧ್ಯಕ್ಷ ಅಣ್ಣಾರಾವ ಪಾಟೀಲ್, ಪುರಸಭೆ ಅಧ್ಯಕ್ಷ ಮಲ್ಲಿಕಾರ್ಜುನ ಕಾಳಗಿ, ಡಿಸಿ ಬ್ಯಾಂಕ್ ನಿರ್ದೇಶಕ ಬಸವರಾಜ್ ಪಾಟೀಲ್ ಹೇರೂರ, ಮುಂತಾದವರು ಇದ್ದರು.
ಇದನ್ನೂ ಓದಿ | ನನಗೆ ಗೃಹ ಸಚಿವನಾಗುವ ಶಕ್ತಿ ಇದೆ: ಕೃಷಿ ಸಚಿವ ಬಿ.ಸಿ. ಪಾಟೀಲ್ ಹೇಳಿಕೆ