ಕಲಬುರಗಿ : ಮರಳು ತುಂಬಿದ್ದ ಟಿಪ್ಪರ್ ಲಾರಿ ಪಲ್ಟಿಯಾಗಿ ಬಾಲಕ ಸೇರಿ ಇಬ್ಬರು ಮೃತಪಟ್ಟಿರುವ ಘಟನೆ ನಡೆದಿದೆ. ಟಿಪ್ಪರ್ ನಡಿ ಸಿಲುಕಿ ಬಾಲಕ ಸೇರಿ ಇಬ್ಬರು ಸಾವಿಗೀಡಾಗಿದ್ದಾರೆ. ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ವಾಡಿ ಪಟ್ಟಣದ ಕಲಕಂಬ್ ಬಡಾವಣೆಯಲ್ಲಿ ಘಟನೆ ನಡೆದಿದೆ. ಮುಕಂದ್ (12) ಮಹಮ್ಮದ್ ಸಲೀಂ(66) ಮೃತಪಟ್ಟಿದ್ದಾರೆ.
ಮೃತರು ವಾಡಿ ಪಟ್ಟಣದ ನಿವಾಸಿಗಳಾಗಿದ್ದಾರೆ. ಮನೆ ಕಟ್ಟುವ ಕೆಲಸಕ್ಕೆ ಟಿಪ್ಪರ್ನಲ್ಲಿ ಮರಳು ತರಲಾಗಿತ್ತು. ಮರಳು ಅನಲೋಡ್ ಮಾಡಲು ಹೋದಾಗ ನಡೆದ ಘಟನೆ ನಡೆದಿದೆ. ಚರಂಡಿ ಮೇಲೆ ಟೈರ್ ಹತ್ತುತ್ತಿದ್ದಂತೆ ಚರಂಡಿ ಕುಸಿಯಿತು.