Site icon Vistara News

Drowned: ತುಂಗಾ ನದಿಯಲ್ಲಿ ಮುಳುಗಿ ಬಾಲಕ ಸಾವು

drowned in tunga river

ಶಿವಮೊಗ್ಗ: ಶಿವಮೊಗ್ಗದಲ್ಲಿ ತುಂಗಾ ನದಿಯ ನೀರಲ್ಲಿ ಮುಳುಗಿ ಬಾಲಕನೊಬ್ಬ ಸಾವಿಗೀಡಾಗಿದ್ದಾನೆ.

ತೀರ್ಥಹಳ್ಳಿ ತಾಲ್ಲೂಕಿನಲ್ಲಿ ಛತ್ರಕೇರಿಯಲ್ಲಿ ಈ ದುರ್ಘಟನೆ ನಡೆದಿದೆ. ಜಯಲಕ್ಷ್ಮೀ ಸಾಮಿಲ್ ಬಳಿ​ ನಿನ್ನೆ ಸಂಜೆ ತುಂಗಾ ನದಿಯ ನೀರಿನಲ್ಲಿ ಈಜಲು ಹೋಗಿದ್ದ ಅಶ್ವಥ್​ (16) ಮುಳುಗಿ ಮೃತಪಟ್ಟಿದ್ದಾನೆ. ತನ್ನ ಸ್ನೇಹಿತನ ಜೊತೆಗೆ ನೀರಿಗೆ ಇಳಿದಿದ್ದ ಅಶ್ವಥ್​ ಹೊರಬಂದಿಲ್ಲ. ಸ್ಥಳೀಯರ ನೆರವಿನಿಂದ ಶವ ಹೊರಕ್ಕೆ ತೆಗೆಯಲಾಗಿದೆ.

ಸಿಡಿಲು ಬಡಿದು ಸಾವು

ಕಲಬುರಗಿ: ಕಲಬುರಗಿ ಜಿಲ್ಲೆಯಾದ್ಯಂತ ಗುಡುಗು-ಸಿಡಿಲು/ಬಿರುಗಾಳಿ ಸಹಿತ ಮಳೆ ಸುರಿದಿದ್ದು, ಸಿಡಿಲು ಬಡಿದು ಒಬ್ಬ ಯುವಕ ಸ್ಥಳದಲ್ಲೆ ಸಾವಿಗೀಡಾಗಿದ್ದಾನೆ. ಆರು ಜನರಿಗೆ ಗಂಭೀರ ಗಾಯಗಳಾಗಿವೆ.

ಕಲಬುರಗಿ ಜಿಲ್ಲೆ ಚಿತ್ತಾಪುರ ತಾಲೂಕಿನ ದಿಗ್ಗಾಂವ ಗ್ರಾಮದ ಬಳಿ ಘಟನೆ ನಡೆದಿದೆ. ದಿಗ್ಗಾಂವ್ ಗ್ರಾಮದ ಭೀಮು ಪೂಜಾರಿ (18) ಸಿಡಿಲಿಗೆ ಬಲಿಯಾದ ಯುವಕ. ಕೋಡ್ಲಾ ಮತ್ತು ದಿಗ್ಗಾಂವ್ ಗ್ರಾಮದ ಮಧ್ಯೆ ಸಿಡಿಲು ಬಡಿದು ಆರು ಜನ ಗಂಭೀರ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಕಲಬುರಗಿ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ. ಸ್ಥಳಕ್ಕೆ ಪೊಲೀಸರು, ಕಂದಾಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿದ್ದಾರೆ. ಚಿತ್ತಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇಳಕಲ್‌ನಲ್ಲಿ ಸಿಡಿಲಿಗೆ ಮಹಿಳೆ ಸಾವು

ಬಾಗಲಕೋಟೆ: ಇಳಕಲ್‌ ಭಾಗದಲ್ಲಿ ಭಾರೀ ಗುಡುಗು, ಸಿಡಿಲು ಸಹಿತ ಮಳೆ ಸುರಿದಿದ್ದು, ಸಿಡಿಲು ಬಡಿದು ಓರ್ವ ಮಹಿಳೆ ಸಾವಿಗೀಡಾದ ಘಟನೆ ಬಣಕನಡೋಣಿ ಗ್ರಾಮದಲ್ಲಿ ನಡೆದಿದೆ. ವಿಜಯಲಕ್ಷ್ಮಿ ಹೆರಕಲ್ (36) ಮೃತ ದುರ್ದೈವಿ. ಮೃತರು ಬೂದಿಹಾಳ ಗ್ರಾಮ ಪಂಚಾಯತ್‌ನಲ್ಲಿ ವಾಟರ್ ವುಮನ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ಸಂಜೆ ಹೊಲಕ್ಕೆ ಹೋಗಿ ಮನೆಗೆ ವಾಪಸ್ ಬರುವ ಸಮಯದಲ್ಲಿ ಸಿಡಿಲು ಬಡಿದು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಇದನ್ನೂ ಓದಿ: Family dispute: ಆತ್ಮಹತ್ಯೆಗೆ ಯತ್ನಿಸಿದ ತಾಯಿ ಬಚಾವ್‌; ರಕ್ಷಿಸಲು ಕೆರೆಗೆ ಜಿಗಿದ ತಂದೆ, ಮಕ್ಕಳು ಸಾವು

Exit mobile version