Site icon Vistara News

Kalaburgi Police: ತಾವೇ ಗುಂಡು ಹಾರಿಸಿಕೊಂಡ್ರಾ ಕಾನ್ಸ್‌ಟೇಬಲ್?; ಚಿತ್ತಾಪುರ ತಹಸೀಲ್ದಾರ್‌ ಕಚೇರಿಯಲ್ಲಿ ಶವ ಪತ್ತೆ!

Chittapur Tahsildar Office

Chittapur Tahsildar Office

ಕಲಬುರಗಿ: ಚಿತ್ತಾಪುರ ತಹಸೀಲ್ದಾರ್‌ ಕಚೇರಿ ಟೆರೇಸ್ ಮೇಲೆ ಕಾನ್ಸ್‌ಟೇಬಲ್‌ವೊಬ್ಬರ ( police Constable) ಮೃತದೇಹವೊಂದು ಪತ್ತೆ ಆಗಿದೆ. ಕಾನ್ಸ್‌ಟೇಬಲ್‌ ಮಲ್ಲಿಕಾರ್ಜುನ್‌ ಎಂಬುವವರ ಹಣೆಗೆ ಗುಂಡೇಟು ಬಿದ್ದಿದ್ದು, ರಕ್ತದ ಮಡುವಿನಲ್ಲಿ ಬಿದ್ದಿದ್ದನ್ನು ಕಂಡು ಇತರೆ ಸಿಬ್ಬಂದಿ ಹೌರಹಾರಿದ್ದಾರೆ.

ಮೃತ ಕಾನ್ಸ್‌ಟೇಬಲ್‌ ಮಲ್ಲಿಕಾರ್ಜುನ್‌

ಕಾನ್ಸ್‌ಟೇಬಲ್‌ ಮಲ್ಲಿಕಾರ್ಜುನ್ ಅವರು ತಾವೇ 303 ರೈಫಲ್‌ನಿಂದ ಹಣೆಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಮೃತದೇಹದ ಪಕ್ಕದಲ್ಲಿ 303 ರೈಫಲ್ ಕೂಡ ಪತ್ತೆ ಆಗಿದೆ. ಕಾನ್ಸ್‌ಟೇಬಲ್‌ ಮಲ್ಲಿಕಾರ್ಜುನ್‌ ಅವರನ್ನು ವಿಧಾನಸಭಾ ಚುನಾವಣಾ ಹಿನ್ನೆಲೆ ಚುನಾವಣಾ ಕರ್ತವ್ಯಕ್ಕೆ ಹಾಕಲಾಗಿತ್ತು.

ಇದನ್ನೂ ಓದಿ: Car Accident: ಕುರಿ ಹಿಂಡಿಗೆ ಡಿಕ್ಕಿ ಹೊಡೆದ ಕಾರು; ಸ್ಥಳದಲ್ಲೇ 16 ಕುರಿಗಳ ಸಾವು, ರಸ್ತೆ ತಡೆದು ಗ್ರಾಮಸ್ಥರ ಪ್ರತಿಭಟನೆ

ಘಟನಾ ಸ್ಥಳಕ್ಕೆ ಕಲಬುರಗಿ ಎಸ್‌ಪಿ ಇಶಾ ಪಂಥ್ ದೌಡಾಯಿಸುತ್ತಿದ್ದು, ಮಲ್ಲಿಕಾರ್ಜುನ್‌ ಸಾವಿನ ಸುದ್ದಿ ಕೇಳಿ ಸಹ ಸಿಬ್ಬಂದಿ ಶಾಕ್‌ಗೆ ಒಳಗಾಗಿದ್ದಾರೆ.

Exit mobile version