ವಿಜಯಪುರ: ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ ಚಾಲನೆ ನೀಡುವಾಗ ಸ್ವಾಮೀಜಿಯೊಬ್ಬರು ಸುಮಾರು 5 ಕಿ.ಮೀ ಬಸ್ ಚಲಾಯಿಸಿರುವುದು ಜಿಲ್ಲೆಯ ಕೊಲ್ಹಾರ ಪಟ್ಟಣದಲ್ಲಿ ಭಾನುವಾರ ನಡೆದಿದೆ. ದಿಗಂಬರೇಶ್ವರ ಮಠದ ಕಲ್ಲಿನಾಥ ಸ್ವಾಮೀಜಿ, ಶಕ್ತಿ ಯೋಜನೆಗೆ (Free Bus Service) ಚಾಲನೆ ನೀಡಿದ ಬಳಿಕ ಸ್ವತಃ ಅವರೇ ಸುಮಾರು 5 ಕಿ.ಮೀ ಬಸ್ ಚಲಾಯಿಸಿದ್ದಾರೆ. ಅಧಿಕಾರಿಗಳ ಸಮ್ಮುಖದಲ್ಲೇ ಈ ಅಚಾತುರ್ಯ ಘಟನೆ ನಡೆದಿದೆ.
ಕೊಲ್ಹಾರದ ದಿಗಂಬರೇಶ್ವರ ಮಠದ ಶ್ರೀಗಳು ಬಸ್ ಚಲಾಯಿಸಿದಾಗ ಪ್ರಯಾಣಿಕರು ಆತಂಕಗೊಂಡಿದ್ದು ಕಂಡುಬಂತು. ನಿಯಮದಂತೆ ಚಾಲಕ ಬಿಟ್ಟು ಬೇರೆಯವರು ಸರ್ಕಾರಿ ಬಸ್ ಚಲಾಯಿಸುವಂತಿಲ್ಲ. ಅಧಿಕಾರಿಗಳ ಸಮ್ಮುಖದಲ್ಲೇ ಈ ಅಚಾತುರ್ಯ ನಡೆದಿರುವುದಕ್ಕೆ ಕೆಲ ಪ್ರಯಾಣಿಕರು ಅಸಮಾಧಾನ ಹೊರಹಾಕಿದ್ದಾರೆ.
ಇದನ್ನೂ ಓದಿ | Free Bus Service : ಗ್ಯಾರಂಟಿ ಯೋಜನೆಗೆ ವರ್ಷಕ್ಕೆ 59,000 ಕೋಟಿ ರೂ. ವೆಚ್ಚ: ಸಿಎಂ ಸಿದ್ದರಾಮಯ್ಯ
ಕೆಜಿಎಫ್‌ನಲ್ಲಿ ಶಾಸಕಿ ರೂಪಕಲಾ ಬಸ್ ಸವಾರಿ
ಕೋಲಾರ: ರಾಜ್ಯ ಸರ್ಕಾರದ ಮಹತ್ವಕಾಂಕ್ಷೆ ಯೋಜನೆ ಶಕ್ತಿ ಯೋಜನೆಗೆ ರಾಜ್ಯಾದ್ಯಂತ ಚಾಲನೆ ಸಿಕ್ಕಿದೆ. ಅದೇ ರೀತಿ ಕೆಜಿಎಫ್‌ನಲ್ಲಿ ಶಾಸಕಿ ರೂಪಕಲಾ ಸ್ವತಃ ಬಸ್ ಚಾಲನೆ ಮೂಲಕ ಯೋಜನೆಗೆ ನೀಡಿದ್ದು ಕಂಡುಬಂತು.
ಕೆಜಿಎಫ್‌ನ ರಾಬರ್ಟಸನ್ ಪೇಟೆಯ ಕುವೆಂಪು ಬಸ್ ನಿಲ್ದಾಣದಿಂದ ಸ್ವಲ್ಪ ದೂರು ಬಸ್ ಓಡಿಸಿ ನಾರಿಯರಿಗೆ ಉಚಿತ ಸೇವೆಗೆ ಶಾಸಕಿ ಸಾಕ್ಷಿಯಾದರು.
ಭಯದಿಂದಲೇ ಬಸ್ ಚಾಲನೆ ಮಾಡಿದ ಶಾಸಕಿ ಧೈರ್ಯಕ್ಕೆ ನಾಗರಿಕರು ಬೇರಗಾದರು. ಕೆಲವು ಕಡೆ ಬಸ್ ಖಾಸಗಿ ವಾಹನಗಳಿಗೆ ಡಿಕ್ಕಿ ಹೊಡೆಯುವಾಗ ಬೆಂಬಲಿಗರು ಕೂಗುವ ಮೂಲಕ ಅನಾಹುತ ತಪ್ಪಿಸಿದರು. ಪಟ್ಟು ಬಿಡದ ಶಾಸಕಿ ಮತ್ತೇ 200 ಮೀಟರ್ ವಾಹ ಓಡಿಸಿ ಸೈ ಎನಿಸಿಕೊಂಡರು.
ದಾವಣಗೆರೆಯಲ್ಲಿ ಎಸ್.ಎಸ್.ಮಲ್ಲಿಕಾರ್ಜುನ ಚಾಲನೆ
ವಿವಿಧೆಡೆ ಜನಪ್ರತಿನಿಧಿಗಳು ಬಸ್ ಓಡಿಸುವ ಮೂಲಕ ಶಕ್ತಿ ಯೋಜನೆಗೆ ಚಾಲನೆ ನೀಡಿ ಗಮನಸೆಳೆದಿದ್ದಾರೆ. ದಾವಣಗೆರೆಯಲ್ಲಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ, ತುಮಕೂರು ಜಿಲ್ಲೆಯ ಗುಬ್ಬಿಯಲ್ಲಿ ಶಾಸಕ ಎಸ್.ಆರ್.ಶ್ರೀನಿವಾಸ್ ಬಸ್ ಚಾಲನೆ ಮಾಡುವ ಮೂಲಕ ಗಮನ ಸೆಳೆದರು.