Site icon Vistara News

ರಾಷ್ಟ್ರೋತ್ಥಾನ ಸಾಹಿತ್ಯಕ್ಕೆ ಪುಸ್ತಕ ಪ್ರಾಧಿಕಾರ ಬಹುಮಾನ, ಡಾ.ಆಳ್ವ, ಕಾಪಸೆ, ನಾ. ಸೋಮೇಶ್ವರಗೆ ಪ್ರಶಸ್ತಿ

ಬೆಂಗಳೂರು: ಕನ್ನಡ ಪುಸ್ತಕ ಪ್ರಾಧಿಕಾರದ 2021ನೇ ಸಾಲಿನ ವಾರ್ಷಿಕ ಪ್ರಶಸ್ತಿ-ಬಹುಮಾನಗಳು ಪ್ರಕಟವಾಗಿದೆ. ಪ್ರಾಧಿಕಾರದ ಅಧ್ಯಕ್ಷ ಡಾ. ಎಂ.ಎನ್. ನಂದೀಶ್ ಹಂಚೆ ಶನಿವಾರ ಪ್ರಕಟಿಸಿದರು. ಸ್ಥಾಯಿ ಸಮಿತಿ ಹಾಗೂ ಸರ್ವ ಸದಸ್ಯರ ಸಭೆಯಲ್ಲಿ ಈ ಪ್ರಶಸ್ತಿಗಳ ಬಗ್ಗೆ ವಿಸ್ತೃತ ಚರ್ಚೆ ನಡೆಸಿ ಸರ್ವಾನುಮತದಿಂದ ಪ್ರಶಸ್ತಿಗಳ ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದರು. ರಾಷ್ಟ್ರೋತ್ಥಾನ ಪ್ರಕಾಶನ ಸಂಸ್ಥೆಗೆ ಈ ಬಾರಿಯ ಅತ್ಯುತ್ತಮ ಪ್ರಕಾಶನ ಪ್ರಶಸ್ತಿ ಸಂದಿದೆ. ಡಾ. ಗುರುಲಿಂಗ ಕಾಪಸೆ, ಡಾ. ಮೋಹನ ಆಳ್ವ, ಡಾ. ನಾ. ಸೋಮೇಶ್ವರ ಅವರಿಗೂ ವರ್ಷದ ವಿಶೇಷ ಪ್ರಶಸ್ತಿ ಸಂದಿದೆ. ಜತೆಗೆ ಪುಸ್ತಕ ಸೊಗಸು, ಮುದ್ರಣ ಸೊಗಸು ಪ್ರಶಸ್ತಿಗಳನ್ನೂ ಘೋಷಿಸಲಾಗಿದೆ.

2021ನೇ ಸಾಲಿನ ವಿವಿಧ ವಾರ್ಷಿಕ ಪ್ರಶಸ್ತಿ ವಿಜೇತರ ಪಟ್ಟಿ

ಪ್ರಶಸ್ತಿ ವಿವರಪ್ರಶಸ್ತಿ ಮೊತ್ತಪ್ರಶಸ್ತಿ ವಿಜೇತರು
ಅತ್ಯುತ್ತಮ ಪ್ರಕಾಶನ ಪ್ರಶಸ್ತಿ₹1 ಲಕ್ಷರಾಷ್ಟ್ರೋತ್ಥಾನ ಸಾಹಿತ್ಯ, ಬೆಂಗಳೂರು
ಡಾ. ಎಂ. ಎಂ. ಕಲಬುರ್ಗಿ ಮಾನವಿಕ
ಅಧ್ಯಯನ ಪ್ರಶಸ್ತಿ
₹75 ಸಾವಿರಡಾ. ಗುರುಲಿಂಗ ಕಾಪಸೆ, ಧಾರವಾಡ
ಡಾ. ಜಿ.ಪಿ. ರಾಜರತ್ನಂ ಸಾಹಿತ್ಯ ಪರಿಚಾರಕ ಪ್ರಶಸ್ತಿ – ₹50 ಸಾವಿರಡಾ. ಮೋಹನ್ ಆಳ್ವ, ಮೂಡಬಿದರೆ
ಡಾ. ಅನುಪಮಾ ನಿರಂಜನ ವೈದ್ಯಕೀಯ
ಹಾಗೂ ವಿಜ್ಞಾನ ಸಾಹಿತ್ಯ ಪ್ರಶಸ್ತಿ
₹25 ಸಾವಿರಡಾ. ನಾ. ಸೋಮೇಶ್ವರ, ಬೆಂಗಳೂರು

2021ನೇ ಸಾಲಿನ ಕನ್ನಡ ಪುಸ್ತಕ ಸೊಗಸು ಹಾಗೂ ಮುದ್ರಣ ಸೊಗಸು ಬಹುಮಾನಗಳ ವಿವರ

ಬಹುಮಾನಕೃತಿಲೇಖಕರು/ಸಂಪಾದಕರುಪ್ರಕಾಶನ ಸಂಖ್ಯೆ
ಪುಸ್ತಕ ಸೊಗಸು
ಮೊದಲನೇ ಬಹುಮಾನ
ರೂ.25,000
ನಮ್ಮ ದೇಹದ ವಿಜ್ಞಾನಸಂ: ಡಾ. ಟಿ.ಆರ್.ಅನಂತರಾಮು,
ಡಾ. ನಾ. ಸೋಮೇಶ್ವರ
ನವಕರ್ನಾಟಕ ಪಬ್ಲಿಕೇಷನ್ಸ್ ಪ್ರೈವೆಟ್ ಲಿಮಿಟೆಡ್, ಬೆಂಗಳೂರು
ಪುಸ್ತಕ ಸೊಗಸು ಎರಡನೇ ಬಹುಮಾನ – ರೂ.20,000-00ಅಜ್ಜಿ ಮನೆ ಸವಿಸಂ: ಶ್ರೀಮತಿ ಉದ್ಯಾವರ ವಿಜಯಲಕ್ಷ್ಮಿ ಶೆಣೈವಿಶೇಷ ಪಬ್ಲಿಕೇಷನ್ಸ್, ಬೆಂಗಳೂರು
ಪುಸ್ತಕ ಸೊಗಸು ಮೂರನೇ ಬಹುಮಾನ – ರೂ.10,000ಮಹಾತ್ಮರ ಚರಿತಾಮೃತಲೇ: ಪ್ರಭುಚನ್ನಬಸವ ಸ್ವಾಮೀಜಿಶ್ರೀ ಗುರುಚನ್ನಬಸವೇಶ್ವರ ಗ್ರಂಥಮಾಲೆ, ಅಥಣಿ
ಮಕ್ಕಳ ಪುಸ್ತಕ ಸೊಗಸು ಬಹುಮಾನ – ರೂ.8,000ನೋಟ್ಬುಕ್ – ಮಕ್ಕಳ ಕಥೆಗಳುಲೇ: ಡಾ. ಕೆ. ಶಿವಲಿಂಗಪ್ಪ ಹಂದಿಹಾಳುಕವನ ಪ್ರಕಾಶನ, ಬಳ್ಳಾರಿ
ಮುಖಪುಟ ಚಿತ್ರ ವಿನ್ಯಾಸ ಬಹುಮಾನ – ರೂ.10,000ಅಲ್ಪಸಂಖ್ಯಾತರು ಮತ್ತು ಜಾತಿ ವ್ಯವಸ್ಥೆಲೇ: ಡಾ. ಮುಜಾಫರ್ ಅಸ್ಸಾದಿಬಹುಮಾನಿತ ಕಲಾವಿದರು:
ಶ್ರೀ ಜಿ. ಅರುಣ ಕುಮಾರ್
ಮುಖಪುಟ ಚಿತ್ರ ಕಲೆಯ ಬಹುಮಾನ – ರೂ.8,000ರೂಬಿಕ್ಸ್ ಕ್ಯೂಬ್ ಮತ್ತಿತರ ನಾಟಕಗಳು ಕ್ಲೀನ್ ಅಂಡ್ ಕ್ಲಿಯರ್ ಪಾಯಖಾನೆ ಮತ್ತು ಆಯಾಮಲೇ: ಬೇಲೂರು ರಘುನಂದನ್ಬಹುಮಾನಿತ ಕಲಾವಿದರು :
ಶ್ರೀ ಮಂಜುನಾಥ ವಿ.ಎಂ.
ಪುಸ್ತಕ ಮುದ್ರಣ ಸೊಗಸು ಬಹುಮಾನ – ರೂ.5,000ಸಿರಿ ಬೆಳಕುಲೇ: ಶಿ.ರಾ. ಹೂಗಾರಮುದ್ರಣಾಲಯ :
ತ್ವರಿತ ಮುದ್ರಣ ಆಫ್ಸೆಟ್ ಪ್ರಿಂಟರ್ಸ್, ಗದಗ

ಇದನ್ನೂ ಓದಿ: ಶಿರಸಿ ಹುಡುಗಿಗೆ ಒಲಿಯಿತು ಕೆನಡಾ ಲಿಟರೇಚರ್‌ ಪ್ರಶಸ್ತಿ

Exit mobile version