Site icon Vistara News

ಕನ್ನಡ ರಾಜ್ಯೋತ್ಸವ | ಸಾಧಕರ ಆಯ್ಕೆಗೆ ಸಲಹಾ ಸಮಿತಿ ರಚನೆ

kannada rajyotsava

ಬೆಂಗಳೂರು: ಪ್ರಸಕ್ತ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಕನ್ನಡ ನಾಡು ನುಡಿಗಾಗಿ ಸೇವೆ ಸಲ್ಲಿಸುತ್ತಿರುವ ಮಹನೀಯರನ್ನು ಆಯ್ಕೆ ಮಾಡಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಸಾಧಕರ ಆಯ್ಕೆಗೆ ಸಲಹಾ ಸಮಿತಿಯನ್ನು ರಚಿಸಿದೆ.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ.ಸುನಿಲ್‌ ಕುಮಾರ್‌ ಅಧ್ಯಕ್ಷತೆಯಲ್ಲಿ ಪ್ರಸಕ್ತ ಸಾಲಿನ ರಾಜ್ಯೋತ್ಸವ ಪ್ರಶಸ್ತಿಗೆ ನಾನಾ ಕ್ಷೇತ್ರಗಳ ಸಾಧಕರನ್ನು ಆಯ್ಕೆ ಮಾಡಲು 36 ಮಂದಿ ಸದಸ್ಯರನ್ನೊಳಗೊಂಡ ಸಮಿತಿಯನ್ನು ರಚಿಸಲಾಗಿದೆ. ವಿವಿಧ ಕ್ಷೇತ್ರದಲ್ಲಿ ತಮ್ಮದೇ ಛಾಪು ಮೂಡಿಸಿರುವವರನ್ನು ಸದಸ್ಯರನ್ನಾಗಿ ನೇಮಿಸಿಕೊಳ್ಳಲಾಗಿದೆ. ಈ ವರ್ಷ 67 ಸಾಧಕರನ್ನು ಗುರುತಿಸಿ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಲಾಗುತ್ತದೆ.

ಯಾರೆಲ್ಲ ಸಮಿತಿ ಸದಸ್ಯರು?‌

ವಿಜಯಲಕ್ಷ್ಮೀ ಬಾಳೇಕುಂದ್ರಿವೈದ್ಯೆ (ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸರ್ಕಾರದ ಕಾರ್ಯದರ್ಶಿ)
ಕೆ.ವೈ. ವೆಂಕಟೇಶ್‌ಕ್ರೀಡೆ
ಬಿ.ಕೆ ಮುರಳಿ- ಸೇನೆಬೆಂಗಳೂರಿನ ನಿವೃತ್ತ ಏರ್‌ವೇಸ್‌ ಮಾರ್ಷಲ್‌
ಮೋಹನ್‌ ಆಳ್ವಕಲೆ ಮತ್ತು ಸಂಸ್ಕೃತಿ
ಡಾ.ಮೀನಾ ಚಂದಾವರಕರ್‌ಶಿಕ್ಷಣ, ವಿಶ್ರಾಂತ ಕುಲಪತಿ
ಪಿ. ಶೇಷಾದ್ರಿಚಲನಚಿತ್ರ ನಿರ್ದೇಶಕ
ಡಾ.ನೀಲಗಿರಿ ತಳವಾರಜಾನಪದ
ಡಾ.ಬಾಬುರಾವ್‌ ಮುಡಬಿಆಡಳಿತ
ಸರಸ್ವತಿ ಚಿಮ್ಮಲಗಿಸಾಹಿತ್ಯ
ವಿದ್ವಾನ್‌ ಶ್ರೀನಾಥ್‌ಸಂಗೀತ/ನೃತ್ಯ
ಮಾ.ನಾಗರಾಜ್‌ವಿಜ್ಞಾನ-ತಂತ್ರಜ್ಞಾನ
ಡಾ ಆನಂದ್‌ ಹೊಸೂರುವೈದ್ಯ
ವಿಶ್ವೇಶ್ವರ ಸಜ್ಜನ್‌ಕೃಷಿ
ಎಚ್‌.ಎಸ್‌.ಗೋಪಿನಾಥ್‌ಕ್ರೀಡೆ
ಪ್ರಶಾಂತ್‌ ನಾತುಪತ್ರಿಕೋದ್ಯಮ
ಚಿತ್ರದುರ್ಗದ ಜಲೀಲ್‌ ಸಾಬ್‌ಸಾಮಾಜಿಕ ಕಾರ್ಯಕರ್ತ
ಕೆ.ಎಸ್‌.ಜಯಂತ್‌ಸಂಕೀರ್ಣ
ಕೆ.ಎನ್‌. ವನಜಾಶಿಕ್ಷಣ
ತಿಪ್ಪೇಸ್ವಾಮಿ ಹಡಪದ್‌ಜಾನಪದ
ಡಾ ಜಡೆಯೇಗೌಡಸಂಕೀರ್ಣ
ಪಿ.ಬಿ.ಹರಸೂರಕಲೆ
ಸ್ಮಶಾನ ನೌಕರರ ಅಧ್ಯಕ್ಷ ಸೌರಿರಾಜುಸಂಕೀರ್ಣ
ವಿಜಯಲಕ್ಷ್ಮೀ ಹಿರೇಮಠ್‌ಸಾಮಾಜಿಕ
ಕವಿತಾ ಕುಸಗಲ್‌ಸಾಹಿತ್ಯ
ಸಂದೇಶ್‌ ಜವಳಿರಂಗಭೂಮಿ
ಗ.ಭೈರಣ್ಣಕಲೆ
ರಾಘವೇಂದ್ರ ಭಟ್‌ಪತ್ರಿಕೋದ್ಯಮ
ಮುರುಳಿ ಕಡೇಕಾರ್‌ಕಲೆ
ಭಾಗ್ಯಲಕ್ಷ್ಮೀಸಾಹಿತ್ಯ

ಸಾಹಿತ್ಯ, ನಾಟಕ, ಲಲಿತಕಲಾ, ಅರೆಭಾಷೆ ಅಧ್ಯಕ್ಷರನ್ನು ಪದನಿಮಿತ್ತ ಸದಸ್ಯರನ್ನಾಗಿ ಹಾಗೂ ಸದಸ್ಯ ಕಾರ್ಯದರ್ಶಿಯಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕರು ಸಮಿತಿಯಲ್ಲಿದ್ದಾರೆ.

ಇದನ್ನೂ ಓದಿ | ವಿಧಾನಸೌಧದಲ್ಲಿ ʼಅಪ್ಪುʼಗೆ ಕರ್ನಾಟಕ ರತ್ನ ಪ್ರದಾನ: ಮೊದಲ ಬಾರಿ ಕಲಾಕ್ಷೇತ್ರದಿಂದ ಹೊರಗೆ ರಾಜ್ಯೋತ್ಸವ

Exit mobile version