ಬೆಂಗಳೂರು: ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯಾಗಿರುವ ಕನ್ನಡ ಸಾಹಿತ್ಯ ಪರಿಷತ್‌ಗೆ (Kannada Sahitya Parishat) ಡಾ. ಪದ್ಮಿನಿ ನಾಗರಾಜು ಅವರನ್ನು ಗೌರವ ಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿದೆ. ಕನ್ನಡಪರ ಸಂಘಟಕರು, ಸಾಹಿತಿ ಹಾಗೂ ಪರಿಷತ್‌ನ ಹಿತೈಷಿಗಳೂ ಆದ ಡಾ. ಪದ್ಮಿನಿ ನಾಗರಾಜು ಅವರಿಗೆ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನಾಡೋಜ ಡಾ. ಮಹೇಶ ಜೋಶಿ ಅವರು ಮಹತ್ವದ ಜವಾಬ್ದಾರಿಯನ್ನು ನೀಡಿದ್ದಾರೆ.
ಕನ್ನಡ ಭಾಷೆ, ಸಾಹಿತ್ಯ, ಜಾನಪದ, ಕಲೆ ಹಾಗೂ ಸಂಸ್ಕೃತಿಯ ರಕ್ಷಣೆ, ಪ್ರಸಾರ ಮತ್ತು ಅಭಿವೃದ್ಧಿಯ ಮೂಲ ಧ್ಯೇಯೋದ್ದೇಶಗಳೊಂದಿಗೆ ಕನ್ನಡ-ಕನ್ನಡಿಗ-ಕರ್ನಾಟಕದ ಹಿತರಕ್ಷಣೆಗಾಗಿ ಶ್ರಮಿಸುತ್ತಿರುವ ಕನ್ನಡಿಗರ ಏಕೈಕ ಪ್ರಾತಿನಿಧಿಕ ಸಂಸ್ಥೆಯಾದ ಕನ್ನಡ ಸಾಹಿತ್ಯ ಪರಿಷತ್‌ನ ನಿಬಂಧನೆ ಸಂಖ್ಯೆ ೯(೨) ರ ಅಡಿಯಲ್ಲಿ ಗೌರವ ಕಾರ್ಯದರ್ಶಿಯಾಗಿ ಡಾ. ಪದ್ಮಿನಿ ನಾಗರಾಜು ಅವರನ್ನು ನೇಮಕ ಮಾಡಲಾಗಿದೆ. ಕನ್ನಡ ಸಾಹಿತ್ಯ ಪರಿಷತ್‌ನ ೧೦೮ ವರ್ಷಗಳ ಇತಿಹಾಸದಲ್ಲಿ ಡಾ. ಪದ್ಮಿನಿ ನಾಗರಾಜು ಅವರು ʻಮೂರನೇ ಮಹಿಳಾ ಗೌರವ ಕಾರ್ಯದರ್ಶಿ’ಯಾಗಿದ್ದಾರೆ. ಗುರುವಾರ ಡಾ. ಪದ್ಮಿನಿ ನಾಗರಾಜು ಅವರು ತಮ್ಮ ಜವಾಬ್ದಾರಿ ವಹಿಸಿಕೊಂಡಿದ್ದಾರೆ.
ಇದನ್ನೂ ಓದಿ | Modi In Karnataka : ಪರಿವರ್ತನೆಯ ಭಾಷಣ ಮಾಡಿದವರು ಜನರನ್ನು ಮತವಾಗಿ ಪರಿವರ್ತಿಸಿಕೊಂಡರು: ಸಿಎಂ ಬೊಮ್ಮಾಯಿ