ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ ನೀಡುವ ಡಾ. ಎಚ್.ವಿಶ್ವನಾಥ್ ಮತ್ತು ಇಂದಿರಾ ದತ್ತಿ ಪ್ರಶಸ್ತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಪುಸ್ತಕಗಳನ್ನು ಆಹ್ವಾನಿಸಲಾಗಿದೆ. ಈ ದತ್ತಿ ಪ್ರಶಸ್ತಿಯು ವಿಶೇಷ ದೃಷ್ಟಿಚೇತನ ಲೇಖಕರಿಗಾಗಿ ಮೀಸಲಿದ್ದು, ಫೆಬ್ರವರಿ ೨೮ರೊಳಗಾಗಿ ತಾವು ರಚಿಸಿದ ಕನಿಷ್ಠ ಒಂದು ಕೃತಿಯೊಂದಿಗೆ ತಮ್ಮ ಸ್ವವಿವರವನ್ನು ಕನ್ನಡ ಸಾಹಿತ್ಯ ಪರಿಷತ್ ಕೇಂದ್ರ ಕಚೇರಿಗೆ ತಲುಪಿಸಬೇಕು ಎಂದು ಕಸಾಪ (Kannada Sahitya Parishat) ಅಧ್ಯಕ್ಷ ನಾಡೋಜ ಡಾ. ಮಹೇಶ ಜೋಶಿ ತಿಳಿಸಿದ್ದಾರೆ.
ಡಾ. ಎಚ್.ವಿಶ್ವನಾಥ್ ಮತ್ತು ಇಂದಿರಾ ದತ್ತಿ ಪ್ರಶಸ್ತಿಯು ರಾಜ್ಯ ಮಟ್ಟದ ಪ್ರಶಸ್ತಿಯಾಗಿದ್ದು, ಪ್ರತಿ ವರ್ಷ ಕನ್ನಡ ಸಾಹಿತ್ಯ ಪರಿಷತ್ ವಿಶೇಷ ದೃಷ್ಟಿಚೇತನ ಲೇಖಕರಿಂದ ರಚಿಸಲ್ಪಟ್ಟ ಯಾವುದೇ ಪ್ರಕಾರದ ಸಾಹಿತ್ಯ ಕೃತಿಯನ್ನು ಈ ಪ್ರಶಸ್ತಿಗಾಗಿ ಪರಿಗಣಿಸಲಾಗುತ್ತದೆ. ಪ್ರಶಸ್ತಿಯು ೧೦ ಸಾವಿರ ರೂಪಾಯಿ ನಗದು ಹಾಗೂ ಸ್ಮರಣಿಕೆ ಹೊಂದಿದ್ದು, ಅರ್ಹ ವಿಶೇಷ ದೃಷ್ಟಿ ಚೇತನ ಲೇಖಕರು ಈ ವಿಳಾಸಕ್ಕೆ ಕೃತಿಯನ್ನು ಕಳುಹಿಸಲು ಕೋರಲಾಗಿದೆ. ವಿಳಾಸ: ಅಧ್ಯಕ್ಷರು, ಕನ್ನಡ ಸಾಹಿತ್ಯ ಪರಿಷತ್, ಪಂಪ ಮಹಾಕವಿ ರಸ್ತೆ, ಚಾಮರಾಜ ಪೇಟೆ, ಬೆಂಗಳೂರು-೫೬೦೦೧೮.
ಇದನ್ನೂ ಓದಿ | ಅರಣ್ಯ, ಪರಿಸರ ಇಲಾಖೆ ಅಧಿಕಾರಿಗಳಿಗೆ ನೂತನ ಕೋರ್ಸ್, ಮಹತ್ವದ ಒಡಂಬಡಿಕೆಗೆ ಸಹಿ